
ಕೊಪ್ಪಳ (ಮೇ.6): ಕಲ್ಯಾಣ ಕರ್ನಾಟಕ ಪ್ರಗತಿ ಪಕ್ಷದಿಂದ ಗಂಗಾವತಿಯಲ್ಲಿ ಭರ್ಜರಿ ಚುನಾವಣೆ ಪ್ರಚಾರ ನಡೆಸಿದ್ದು ತಂದೆ ಗಾಲಿ ಜನರ್ದಾನರೆಡ್ಡಿಗೆ ಪುತ್ರಿ ಬ್ರಹ್ಮೀಣಿ ಸಾಥ್ ನೀಡಿದ್ದಾರೆ.
ಇಂದು ಗಂಗಾವತಿಯಲ್ಲಿ ನಡೆದ ಕೆಆರ್‌ಪಿಪಿ ಸಮಾವೇಶ(KRPP Convention)ದಲ್ಲಿ ಮಾತನಾಡಿದ ರೆಡ್ಡಿ ಪುತ್ರಿ ಬ್ರಹ್ಮೀಣಿ(Brahmjini), ನನ್ನ ತಂದೆಯ ಮೇಲಿನ ಪ್ರೀತಿಗೆ ನಾನು ಪ್ರಚಾರಕ್ಕೆ ಬಂದಿದ್ದೇನೆ. ನನ್ನ ತಂದೆಯ ಜತೆಗೆ ಯಾರೂ ಹಿಂದುಮುಂದು ಇಲ್ಲ. ಅಂಜನಾದ್ರಿಯ ಮತದಾರ ಪ್ರಭುಗಳೇ ತಂದೆಯ ಜತೆಗೆ ಇದ್ದಾರೆ ಎಂದರು.
ಗಂಗಾವತಿಯಲ್ಲಿ ಜನಾರ್ದನ ರೆಡ್ಡಿ ಭರ್ಜರಿ ಪ್ರಚಾರ: ಪತ್ನಿ, ಪುತ್ರಿ ಬ್ರಹ್ಮಿಣಿ ಜತೆ ರೋಡ್ ಶೋ
ರಾಜಕೀಯ ಎನ್ನುವುದು ಚದುರಂಗದಾಟ ಇದ್ದಂತೆ. ಇಲ್ಲಿ ಪ್ರೀತಿ ವಿಶ್ವಾಸ ಅಷ್ಟೇ ಇರುವುದಿಲ್ಲ. ಮೋಸ, ವಂಚನೆ ನಡೆಯುತ್ತಿರುತ್ತದೆ. ಆದರೆ ಎಲ್ಲವನ್ನೂನಿಭಾಯಿಸುವ ಗುಂಡಿಗೆ ನಮ್ಮದಾಗಿರಬೇಕು. ಆ ಗುಂಡಿಗೆ ನಮ್ಮ ತಂದೆಯವರಿಗೆ ಇದೆ. ನನ್ನ ತಂದೆಗೆ ಶಕ್ತಿ ತುಂಬುತ್ತಿರುವ ಗಂಗಾವತಿ ಜನತೆಗೆ ನಾನು ತೆಲೆಬಾಗಿ ನಮಸ್ಕರಿಸುತ್ತೇನೆ ಎಂದರು.
ನಮ್ಮವರೇ ನನ್ನ ತಂದೆಯವರನ್ನು ಒಬ್ಬಂಟಿಯನ್ನಾಗಿ ಮಾಡಿದರು. ಆದರೇನಂತೆ ಕ್ಷೇತ್ರದ ಮತದಾರರು ನಮ್ಮ ಜತೆಗೆ ಇದ್ದಾರೆ. ನಮ್ಮೊಂದಿಗೆ ಹನುಮ ಭಕ್ತರಿದ್ದಾರೆ. ನಮಗೆ ಯಾರ ಭಯವೂ ಇಲ್ಲ. ನೀವೆಲ್ಲ ಒಗ್ಗಟ್ಟಾಗಿ ಜನಾರ್ಧನರೆಡ್ಡಿ ಅವರನ್ನ ಗೆಲ್ಲಿಸಬೇಕು ಎಂದರು ಇದೇ ವೇಳೆ ತಾನೇ ಉರಿದು ಮನೆಗೆ ದೀಪ ಕೊಡುವ ನಂದಾದೀಪ ಎಂದು ತಂದೆಯ ಬಗ್ಗೆ ಬ್ರಹ್ಮೀಣಿ ಹಾಡಿ ಹೊಗಳಿದರು.
ಆಡಿಸಿ, ನೋಡು, ಬೀಳಿಸಿ ನೋಡು ತಲೆಯ ಬಾಗದು.. ಅಣ್ಣಾವ್ರ ಹಾಡು ಹೇಳುವ ಮೂಲಕ ಜನಾರ್ದನರೆಡ್ಡಿ(Janardanareddy) ವಿರುದ್ಧ ಎಷ್ಟೇ ಕುತಂತ್ರ ನಡೆಸಿದರೂ ಈ ಚುನಾವಣೆಯಲ್ಲಿ ಸಿಡಿದೆದ್ದು ನಿಲ್ಲುತ್ತಾರೆ ಎಂದು ಸೂಚ್ಯವಾಗಿ ಹೇಳಿದ ಪುತ್ರಿ ಬ್ರಹ್ಮೀಣಿ
ಗ್ರೌಂಡ್ ರಿಪೋರ್ಟ್ | ನಮ್ಮ ಬಗ್ಗೆ ‘ಕಳಂಕಿತ’ ಇಮೇಜ್ ಕಾಂಗ್ರೆಸ್’ನ ಸೃಷ್ಟಿ: ಸೋಮಶೇಖರ್ ರೆಡ್ಡಿ
ಸ್ಥಳೀಯ ಶಾಸಕರ ಆಡಳಿತಕ್ಕೆ ಜನರು ರೋಸಿ ಹೋಗಿದ್ದು.ಈ ಕಾರಣಕ್ಕೆ ಹೊಸ ಪಕ್ಷ ಮತ್ತು ಉತ್ತಮ ಅಭಿವೃದ್ಧಿ ಮಾಡುವ ವ್ಯಕ್ತಿಯನ್ನು ಚುನಾಯಿಸುವ ಬಗ್ಗೆ ಮತದಾರರು ನಿರ್ಧರಿಸಿದ್ದರಿಂದ ಗಾಲಿ ಜನಾರ್ದನ ರೆಡ್ಡಿ ಅವರ ಆಯ್ಕೆ ಸುಲಭ.
ಮನೋಹರಗೌಡ, ಕೆಆರ್‌ಪಿಪಿ ಜಿಲ್ಲಾಧ್ಯಕ್ಷ
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.