2 ದಿನ ಕಾದು ನೋಡಿ, ನನಗೇ ಟಿಕೆಟ್‌: ಜಗದೀಶ್‌ ಶೆಟ್ಟರ್‌

By Kannadaprabha News  |  First Published Apr 14, 2023, 11:22 AM IST

ನಮ್ಮ ಪಕ್ಷದ ನಾಯಕರು ದೆಹಲಿಗೆ ಕರೆದಿದ್ದರು. ಹಾಗಾಗಿ ದೆಹಲಿಗೆ ಹೋಗಿದ್ದೆ. ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಅವರನ್ನು ಭೇಟಿ ಮಾಡಿದ್ದೇನೆ. ಸದ್ಯದ ಪರಿಸ್ಥಿತಿಯನ್ನು ಅವರಿಗೆ ವಿವರಿಸಿದ್ದೇನೆ. ಜಗದೀಶ್‌ ಶೆಟ್ಟರ್‌ ಕೇವಲ ಒಂದು ಭಾಗಕ್ಕೆ ಮಾತ್ರ ಸೀಮಿತ ಆಗಿಲ್ಲ. ಕಿತ್ತೂರು ಕರ್ನಾಟಕದ ಎಲ್ಲ ಭಾಗಕ್ಕೆ ಶೆಟ್ಟರ್‌ ಅವಶ್ಯಕತೆ ಇದೆ ಎನ್ನುವುದನ್ನು ನಾಯಕರಿಗೆ ಮನವರಿಕೆ ಮಾಡಿಕೊಟ್ಟಿದ್ದೇನೆ: ಜಗದೀಶ್‌ ಶೆಟ್ಟರ್‌


ಬೆಂಗಳೂರು/ಹುಬ್ಬಳ್ಳಿ(ಏ.14):  ಎರಡು ದಿನ ಕಾದು ನೋಡಿ. ನನಗೇ ಟಿಕೆಟ್‌ ಸಿಗಲಿದೆ ಎಂದು ಮಾಜಿ ಮುಖ್ಯಮಂತ್ರಿ ಜಗದೀಶ್‌ ಶೆಟ್ಟರ್‌ ಮಾರ್ಮಿಕವಾಗಿ ಹೇಳಿದ್ದಾರೆ. ದೆಹಲಿಯಲ್ಲಿ ಪಕ್ಷದ ವರಿಷ್ಠರನ್ನು ಭೇಟಿ ಮಾಡಿ ವಾಪಸಾದ ಬಳಿಕ ಗುರುವಾರ ಶೆಟ್ಟರ್‌ ಅವರು ಮಾಜಿ ಮುಖ್ಯಮಂತ್ರಿ ಹಾಗೂ ಪಕ್ಷದ ಸಂಸದೀಯ ಮಂಡಳಿ ಸದಸ್ಯ ಬಿ.ಎಸ್‌.ಯಡಿಯೂರಪ್ಪ ಅವರನ್ನು ಭೇಟಿ ಮಾಡಿ ಚರ್ಚಿಸಿದರು.

ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಮ್ಮ ಪಕ್ಷದ ನಾಯಕರು ದೆಹಲಿಗೆ ಕರೆದಿದ್ದರು. ಹಾಗಾಗಿ ದೆಹಲಿಗೆ ಹೋಗಿದ್ದೆ. ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಅವರನ್ನು ಭೇಟಿ ಮಾಡಿದ್ದೇನೆ. ಸದ್ಯದ ಪರಿಸ್ಥಿತಿಯನ್ನು ಅವರಿಗೆ ವಿವರಿಸಿದ್ದೇನೆ. ಜಗದೀಶ್‌ ಶೆಟ್ಟರ್‌ ಕೇವಲ ಒಂದು ಭಾಗಕ್ಕೆ ಮಾತ್ರ ಸೀಮಿತ ಆಗಿಲ್ಲ. ಕಿತ್ತೂರು ಕರ್ನಾಟಕದ ಎಲ್ಲ ಭಾಗಕ್ಕೆ ಶೆಟ್ಟರ್‌ ಅವಶ್ಯಕತೆ ಇದೆ ಎನ್ನುವುದನ್ನು ನಾಯಕರಿಗೆ ಮನವರಿಕೆ ಮಾಡಿಕೊಟ್ಟಿದ್ದೇನೆ. ದೆಹಲಿಯ ಸಭೆ ಬಗ್ಗೆ ಯಡಿಯೂರಪ್ಪ ಅವರಿಗೆ ತಿಳಿಸಬೇಕಿತ್ತು, ಹಾಗಾಗಿ ಬಂದಿದ್ದೇನೆ. ಎಲ್ಲವೂ ಒಳ್ಳೆಯದಾಗುವ ವಿಶ್ವಾಸ ಇದೆ ಎಂದರು.

Tap to resize

Latest Videos

Party Rounds: ಬಿಜೆಪಿಗೆ ಬಂಡಾಯದ ಬೇಗುದಿ, ಶೆಟ್ಟರ್‌ಗೆ ಸಿಗುತ್ತಾ ಟಿಕೆಟ್‌ ಹಾದಿ!

ಪುತ್ರನಿಗೆ ಟಿಕೆಟ್‌ ಸಿಗಬಹುದೇ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ಬೇರೆಯವರಿಗೆ ಟಿಕೆಟ್‌ ಕೊಡಿ ಎಂದು ನಾನು ಹೇಳಿಲ್ಲ. ನನ್ನ ಮಗನ ಹೆಸರೂ ಪ್ರಸ್ತಾಪ ಮಾಡಿಲ್ಲ. ಎರಡು ದಿನ ಕಾಯಿರಿ. ನನಗೇ ಟಿಕೆಟ್‌ ಸಿಗಲಿದೆ. ಯಡಿಯೂರಪ್ಪ ಕೂಡ ಶೆಟ್ಟರ್‌ಗೆ ಟಿಕೆಟ್‌ ನೀಡಬೇಕು ಎಂದಿದ್ದಾರೆ. ಜಗದೀಶ್‌ ಶೆಟ್ಟರ್‌ಗೆ ಟಿಕೆಟ್‌ ಸಿಗದೆ ಹೋದರೆ ಉತ್ತರ ಕರ್ನಾಟಕ ಕ್ಷೇತ್ರಗಳ ಮೇಲೆ ಪ್ರಭಾವ ಬೀರುತ್ತೆ ಎನ್ನುವುದನ್ನು ಅವರು ವರಿಷ್ಠರ ಗಮನಕ್ಕೆ ತಂದಿದ್ದಾರೆ. ಇದು ಕೇವಲ ಜಗದೀಶ್‌ ಶೆಟ್ಟರ್‌ ಪ್ರಶ್ನೆ ಅಲ್ಲ. ಉತ್ತರ ಕರ್ನಾಟಕದಲ್ಲಿ ಕ್ಷೇತ್ರಗಳ ಮೇಲೆ ಪ್ರಭಾವ ಬೀರತ್ತೆ ಎನ್ನುವುದನ್ನು ಗಮನಕ್ಕೆ ತಂದಿದ್ದಾರೆ ಎಂದು ಹೇಳಿದರು.

ಕರ್ನಾಟಕದಲ್ಲಿ ಒಂದೇ ಹಂತದಲ್ಲಿ ಮೇ 10ರಂದು ಮತದಾನ ನಡೆಯಲಿದ್ದು, ಮೇ 13ಕ್ಕೆ ಮತ ಎಣಿಕೆ ನಡೆಯಲಿದೆ. ಏಪ್ರಿಲ್ 13ಕ್ಕೆ ಚುನಾವಣೆ ಅಧಿಸೂಚನೆ ಹೊರಡಿಸಲಿದ್ದು, ಏಪ್ರಿಲ್ 13ರಿಂದ ನಾಮಪತ್ರ ಸಲ್ಲಿಕೆ ಆರಂಭವಾಗಲಿದೆ. ನಾಮಪತ್ರ ಹಿಂಪಡೆಯಲು ಏಪ್ರಿಲ್ 24 ಕಡೆಯ ದಿನಾಂಕ.

click me!