ಐಟಿ ಇಡಿ ದಾಳಿಗೆ ಹೆದರಿ ಜಗದೀಶ ಶೆಟ್ಟರ್ ಬಿಜೆಪಿಗೆ ಸೇರಿದ್ರಾ? ವಿನಯ್ ಕುಲಕರ್ಣಿ ಸಹೋದರ ವಿಜಯ್ ಕುಲಕರ್ಣಿ ಹೇಳಿದ್ದೇನು?

By Ravi Janekal  |  First Published Jan 28, 2024, 1:31 PM IST

ಜಗದೀಶ ಶೆಟ್ಟರ್ ಇಡಿ ಐಟಿ ದಾಳಿಗೆ ಹೆದರಿ ಬಿಜೆಪಿಗೆ ಮರುಸೇರ್ಪಡೆಯಾಗಿದ್ದಾರೆ. ಅವರು ಬಿಜೆಪಿಗೆ ಹೋಗಿರೋದ್ರಿಂದ ನಮಗೇನೂ ಸಮಸ್ಯೆ ಆಗೊಲ್ಲ. ಯಾಕೆಂದ್ರೆ ಅವರು ವಿಧಾನಸಭಾ ಚುನಾವಣೆಯಲ್ಲೇ ಅತಿ ಹೆಚ್ಚು ಅಂತರಗಳಿಂದ ಸೋತಿದ್ರು ಎಂದು ವಿನಯ್ ಕುಲಕರ್ಣಿ ಸಹೋದರ ವಿಜಯ ಕುಲಕರ್ಣಿ ಟೀಕಿಸಿದರು.


ಹುಬ್ಬಳ್ಳಿ (ಜ.28): ಜಗದೀಶ ಶೆಟ್ಟರ್ ಇಡಿ ಐಟಿ ದಾಳಿಗೆ ಹೆದರಿ ಬಿಜೆಪಿಗೆ ಮರುಸೇರ್ಪಡೆಯಾಗಿದ್ದಾರೆ. ಅವರು ಬಿಜೆಪಿಗೆ ಹೋಗಿರೋದ್ರಿಂದ ನಮಗೇನೂ ಸಮಸ್ಯೆ ಆಗೊಲ್ಲ. ಯಾಕೆಂದ್ರೆ ಅವರು ವಿಧಾನಸಭಾ ಚುನಾವಣೆಯಲ್ಲೇ ಅತಿ ಹೆಚ್ಚು ಅಂತರಗಳಿಂದ ಸೋತಿದ್ರು ಎಂದು ವಿನಯ್ ಕುಲಕರ್ಣಿ ಸಹೋದರ ವಿಜಯ ಕುಲಕರ್ಣಿ ಟೀಕಿಸಿದರು.

ಕಳೆದ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಯಿಂದ ಟಿಕೆಟ್ ಸಿಗದ್ದಕ್ಕೆ ಮುನಿಸಿಕೊಂಡು ಕಾಂಗ್ರೆಸ್ ಸೇರ್ಪಡೆಯಾಗಿದ್ದ ಜಗದೀಶ ಶೆಟ್ಟರ್ ಇದೀಗ ಒಂಬತ್ತು ತಿಂಗಳಲ್ಲೇ ಮತ್ತೆ ಬಿಜೆಪಿಗೆ ಸೇರ್ಪಡೆಯಾಗಿರೋ ಬಗ್ಗೆ ಮಾಧ್ಯಮಗಳ ಪ್ರಶ್ನೆಗೆ ಪ್ರತಿಕ್ರಿಯಿಸಿದ ವಿಜಯ ಕುಲಕರ್ಣಿ. ಅವರಿಗೆ ಬಿಜೆಪಿಯಲ್ಲಿ ಗೌರವ ಸಿಗಲಿಲ್ಲ. ಕಾಂಗ್ರೆಸ್ ಕರೆತಂದು ಅವರಿಗೆ ಗೌರವಿಸಿದೆವು. ಚುನಾವಣೆಯಲ್ಲಿ ಹೀನಾಯವಾಗಿ ಸೋತರು ಅವರನ್ನು ವಿಧಾನಪರಿಷತ್‌ ಸ್ಥಾನ ಕೊಟ್ಟೆವು. ಇನ್ನೇನು ಮಾಡಬೇಕು. ಎಲ್ಲ ಅನುಭವಿಸಿ ಇದೀಗ ಬಿಜೆಪಿಗೆ ಹೋಗಿದ್ದಾರೆ. ಇದು ಹಿರಿಯರಿಗೆ ಶೋಭೆ ತರುವ ಕೆಲಸ ಅಲ್ಲ ಎಂದು ಕಿಡಿಕಾರಿದರು.

Tap to resize

Latest Videos

ನೀತಿಗೆಟ್ಟ ರಾಜಕಾರಣಕ್ಕೆ ಜಗದೀಶ ಶೆಟ್ಟರ್ ಉದಹಾರಣೆ; ಬಿಜೆಪಿ ಮರುಸೇರ್ಪಡೆಯಾಗಿದ್ದಕ್ಕೆ ವೀರಶೈವ ಮುಖಂಡರು ಆಕ್ರೋಶ

ವೀರಶೈವ ಮುಖಂಡರ ಆಗ್ರಹ:

ಜಗದೀಶ ಶೆಟ್ಟರ್ ಕಾಂಗ್ರೆಸ್ ತೊರೆದು ಮತ್ತೆ ಬಿಜೆಪಿ ಸೇರಿರುವ ಹಿನ್ನೆಲೆ ಅವರಿಗೆ ಕೊಟ್ಟಿದ್ದ ವಿಧಾನಪರಿಷತ್ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಆ ಸ್ಥಾನವನ್ನು ತಮ್ಮ ಸಮುದಾಯಕ್ಕೆ ನೀಡಬೇಕು. ಲೋಕಸಭಾ ಚುನಾವಣೆಗೂ ನಮ್ಮ ಸಮುದಾಯಕ್ಕೆ ಟಿಕೆಟ್ ಕೊಡಬೇಕು. ನಿಗಮ ಮಂಡಳಿಯನ್ನು ಹಿರಿಯ ಪಕ್ಷದ ಕಾರ್ಯಕರ್ತರಿಗೆ ನೀಡಬೇಕು. ಮುಂದೆ ಕಾಂಗ್ರೆಸ್ ಪಕ್ಷಕ್ಕೆ ಒಳ್ಳೆ ಭವಿಷ್ಯ ಇದೆ. ಮೋಹನ ಲಿಂಬಿಕಾಯಿ ಸೇರಿದಂತೆ ಇತರೆ ಕಾಂಗ್ರೆಸ್ ಮುಖಂಡರ ಆಗ್ರಹಿಸಿದ್ದಾರೆ

ಜಗದೀಶ್ ಶೆಟ್ಟರ್ ಮರುಸೇರ್ಪಡೆಯಾದ ಬೆನ್ನಲ್ಲೇ ಲಕ್ಷ್ಮಣ್ ಸವದಿ ಬೆನ್ನುಬಿದ್ದ ಬಿಜೆಪಿ!

click me!