ಕಳೆದ 2019ರಲ್ಲಿ ಕಾಂಗ್ರೆಸ್, ಜೆಡಿಎಸ್ ಹೊಂದಾಣಿಕೆಯಲ್ಲಿ ಚುನಾವಣೆ ಎದುರಿಸಿದರು ಕಾಂಗ್ರೆಸ್ ಕಥೆ ಏನಾಯಿತು ಅದೇ ಕಥೆ ಬಿಜೆಪಿಗೆ ಆಗಲಿದೆ ಎಂದ ವಿಶ್ವನಾಥ್
ಗುಂಡ್ಲುಪೇಟೆ(ಜ.28): ಕಾಂತರಾಜು ವರದಿ ಒಂದು ಜಾತಿಗೆ ಸೇರಿದ್ದಲ್ಲ, ಎಲ್ಲಾ ಜಾತಿಯ ಶೋಷಿತರ ಸಮೀಕ್ಷೆಯ ವರದಿಯನ್ನು ಹೊಂದಿದೆ. ರಾಜ್ಯ ಸರ್ಕಾರ ಇದನ್ನು ಯಾಕೆ ಸ್ವೀಕರಿಸುತ್ತಿಲ್ಲ ಎಂಬುದು ಅರ್ಥವಾಗುತ್ತಿಲ್ಲ ಎಂದು ಮಾಜಿ ಸಚಿವ ಎಚ್. ವಿಶ್ವನಾಥ್ ಅಸಮಾಧಾನ ವ್ಯಕ್ತಪಡಿಸಿದರು.
ನಗರದಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ನಾವು ಕಾಂತರಾಜ ವರದಿಯನ್ನು ಜಾರಿ ಮಾಡಿ ಎಂದು ಕೇಳುತ್ತಿಲ್ಲ, ಮೊದಲು ವರದಿಯನ್ನು ಸ್ವೀಕರಿಸಿ ನಂತರ ಸಾರ್ವಜನಿಕರ ಚರ್ಚೆಗೆ ಬಿಡಿ, ಅದು ಎಲ್ಲಾ ಜಾತಿ ಜನಾಂಗಗಳ ಆರ್ಥಿಕ ಸಾಮಾಜಿಕ ಶೈಕ್ಷಣಿಕ ಸಮೀಕ್ಷೆ ಎಂದರು.
undefined
ಸಂವಿಧಾನ ಎಲ್ಲರಿಗೂ ಮೂಲಭೂತ ಹಕ್ಕು ನೀಡಿದೆ: ಸಚಿವ ಕೆ.ವೆಂಕಟೇಶ್
ಕಾಂಗ್ರೆಸ್ಸಿಗಾದ ಕಥೆ ಬಿಜೆಪಿಗೆ ಆಗಲಿದೆ:
ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಜೆಡಿಎಸ್ ಹೊಂದಾಣಿಕೆ ಕುರಿತ ಪ್ರಶ್ನೆಗೆ ಉತ್ತರಿಸಿದ ವಿಶ್ವನಾಥ್ ಕಳೆದ 2019ರಲ್ಲಿ ಕಾಂಗ್ರೆಸ್, ಜೆಡಿಎಸ್ ಹೊಂದಾಣಿಕೆಯಲ್ಲಿ ಚುನಾವಣೆ ಎದುರಿಸಿದರು ಕಾಂಗ್ರೆಸ್ ಕಥೆ ಏನಾಯಿತು ಅದೇ ಕಥೆ ಬಿಜೆಪಿಗೆ ಆಗಲಿದೆ ಎಂದರು.