ಗದಗ: ಶಾಸಕರ ಎದುರೇ ಕಾರ್ಯಕರ್ತನಿಗೆ ಕ್ಲಾಸ್ ತೆಗೆದುಕೊಂಡ ಗ್ರಾಮಸ್ಥರು!

By Ravi Janekal  |  First Published Mar 9, 2023, 12:38 PM IST

ಜಿಲ್ಲೆಯ ಲಕ್ಷ್ಮೇಶ್ವರ ತಾಲೂಕಿನ ರಾಮಗೇರಿಯಲ್ಲಿ ರೈತ ಸಂಪರ್ಕ ರಸ್ತೆ ಕಾಮಗಾರಿ ಭೂಮಿ ಪೂಜೆ ವೇಳೆ ಶಾಸಕರ ಬೆಂಬಲಿಗನ್ನ ಗ್ರಾಮಸ್ಥರು ಕ್ಲಾಸ್ ತೆಗೆದುಕೊಂಡ ಘಟನೆ ನಡೆಯಿತು.


ಗದಗ (ಮಾ.9) : ಜಿಲ್ಲೆಯ ಲಕ್ಷ್ಮೇಶ್ವರ ತಾಲೂಕಿನ ರಾಮಗೇರಿಯಲ್ಲಿ ರೈತ ಸಂಪರ್ಕ ರಸ್ತೆ ಕಾಮಗಾರಿ ಭೂಮಿ ಪೂಜೆ ವೇಳೆ ಶಾಸಕರ ಬೆಂಬಲಿಗನ್ನ ಗ್ರಾಮಸ್ಥರು ಕ್ಲಾಸ್ ತೆಗೆದುಕೊಂಡರು.

ರಾಮಗೇರಿ(Ramageri)ಯಿಂದ ಬಸಾಪುರ ಗ್ರಾಮ(Basapur village)ದ ಮಧ್ಯೆ ರೈತ ಸಂಪರ್ಕ ರಸ್ತೆ ನಿರ್ಮಿಸುವ ಉದ್ದೇಶದಿಂದ ಶಾಸಕರು ಭೂಮಿ ಪೂಜೆ ನೆರವೇರಿಸಿದ್ರು‌. ಅಂದಾಜು 1 ಕೋಟಿ ರೂಪಾಯಿ ವೆಚ್ಚದಲ್ಲಿ ಸುಮಾರು 5 ಕಿಲೋ ಮೀಟರ್ ರಸ್ತೆ ನಿರ್ಮಿಸುವ ಯೋಜನೆಗೆ ಶಾಸಕ ರಾಮಪ್ಪ ಲಮಾಣಿ(MLA Ramappa Lamani) ಚಾಲನೆ ನೀಡಿದರು.

Tap to resize

Latest Videos

undefined

 

ಗದಗ: ಪಿಯು ಪರೀಕ್ಷೆಗೆ ಪ್ರಯಾಣಿಸಬೇಕಿದೆ 40 ಕಿಮೀ ದೂರ!

ಕಾಮಗಾರಿ ಭೂಮಿ ಪೂಜೆ ನೆರವೇರಿಸಿದ ನಂತ್ರ, ಗ್ರಾಮಸ್ಥರು ಶಾಸಕರನ್ನ ಭೇಟಿಯಾಗಿ ರಸ್ತೆ ಮಧ್ಯೆ ಕೆಲ ಕಿರಿ ಸೇತುವೆ ನಿರ್ಮಿಸಲು ಮನವಿ ಮಾಡಿದರು. ರಾಮಗೇರಿ ಹೊರವಲಯದಲ್ಲಿ ಮಳೆಗಾಲದ ಸಂದರ್ಭ ಅತಿ ಹೆಚ್ಚು ನೀರಿನ ಹರಿವು ಇರುತ್ತದೇ ಆ ಪ್ರದೇಶದಲ್ಲಿ ಕಿರು ಸೇತುವೆ ನಿರ್ಮಿಸಿ ಅಂತಾ ಪಟ್ಟು ಹಿಡಿದ್ರು.. ಸೇತುವೆ ನಿರ್ಮಿಸದಿದ್ರೆ ಕಾಮಗಾರಿ ಮಾಡ್ಬೇಡಿ ಎಂದು ವಾದ ಮಾಡಿದ ಘಟನೆ ನಡೆಯಿತು.

 ಈ ವೇಳೆ ಮಧ್ಯ ಪ್ರವೇಶಿಸಿದ್ದ ಶಾಸಕರ ಬೆಂಬಲಿಗ ಗಂಗಾಧರ ಮೆಣಸಿನಕಾಯಿ, ಗ್ರಾಮಸ್ಥರನ್ನ ಸುಮ್ಮನಿರಿಸಲು ಮುಂದಾದ್ರು. ಇದ್ರಿಂದ ರೊಚ್ಚಿಗೆದ್ದ ಗ್ರಾಮಸ್ಥರು, ಶಾಸಕರ ಬಳಿ ಕೇಳೋ ಹಕ್ಕಿದೆ. ನೀವ್ಯಾಕೆ ಮಧ್ಯ ಪ್ರವೇಶ ಮಾಡ್ತೀರಿ ಅಂತಾ ಗಲಾಟೆ ಮಾಡಿದ್ರು.. ಕೆಲ ಸಮಯದ ನಂತ್ರ ಪರಿಸ್ಥಿತಿಯನ್ನ ತಿಳಿಗೊಳಸಿದ ಬಳಿಕ ಅಲ್ಲಿಂದ ಕಾಲ್ಕಿತ್ತ ಶಾಸಕರು. ಒಟ್ಟಿನಲ್ಲಿ ಮತದಾರರೀಗ ಜಾಗೃತರಾಗಿದ್ದಾರೆ. ಅಭಿವೃದ್ಧಿ ಕೆಲಸ ಬಿಟ್ಟು ಮೈಮರೆತಿದ್ದ ಜನಪ್ರತಿನಿಧಿಗಳು ಈಗ ಚುನಾವಣೆ ಸಮೀಪಿಸಿದ್ದರಿಂದ ಗ್ರಾಮಗಳಿಗೆ ಭೇಟಿ ನೀಡಿ ಅಭಿವೃದ್ಧಿ ಮಾತಾಡುತ್ತಿದ್ದಾರೆ. ಆದರೆ ಇವರು ಚುನಾವಣೆಗಾಗಿ ಮಾಡುವ ನಾಟಕ ಎಂದು ಮತದಾರರು ನೇರವಾಗಿ ಹೇಳುತ್ತಿದ್ದಾರೆ. 

 

ಚಾಮುಂಡಿಬೆಟ್ಟ ಸೇರಿ 4 ಕಡೆ ಕಾಳ್ಗಿಚ್ಚು: ಅಪಾರ ಪ್ರಮಾಣದ ಅರಣ್ಯ ಪ್ರದೇಶ ಬೆಂಕಿಗೆ ಆಹುತಿ

click me!