ಕಾಂಗ್ರೆಸ್ ಶಾಸಕನಿಂದ ಕುಕ್ಕರ್ ಪಾಲಿಟಿಕ್ಸ್: ಐದು ವರ್ಷದ ಅಭಿವೃದ್ಧಿ ಕೆಲಸ ಎಲ್ಲಿ ಅಂತಾ ಕೇಳ್ತಿರೋ ಮತದಾರರು

By Ravi JanekalFirst Published Mar 9, 2023, 11:58 AM IST
Highlights

ಮತದಾರರಿಗೆ ಕುಕ್ಕರ್ ವಿತರಣೆ ಮಾಡ್ತಿರುವ ಕಾಂಗ್ರೆಸ್ ಶಾಸಕ ಟಿಡಿ ರಾಜೇಗೌಡ.  ಶೃಂಗೇರಿ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಅಭಿವೃದ್ಧಿ ಕಾರ್ಯದಿಂದ ಮತ ಕೇಳುವ ಬದಲು ಕುಕ್ಕರ್ ನೀಡಿ ಮತ ಕೇಳುತ್ತಿರುವ ಹಾಲಿ ಕಾಂಗ್ರೆಸ್ ಶಾಸಕರ ವಿರುದ್ಧ ಮತದಾರರು ಸಾಮಾಜಿಕ ಜಾಲ ತಾಣದಲ್ಲಿ ಲೇವಡಿ ಮಾಡಿದ್ದಾರೆ.

ವರದಿ : ಆಲ್ದೂರು ಕಿರಣ್ ಏಷ್ಯಾನೆಟ್ ಸುವರ್ಣ ನ್ಯೂಸ್ ಚಿಕ್ಕಮಗಳೂರು 

ಚಿಕ್ಕಮಗಳೂರು (ಮಾ.9): ವಿಧಾನಸಭಾ ಚುನಾವಣೆಗೆ ಇನ್ನು ಕೆಲ ತಿಂಗಳು ಮಾತ್ರ ಬಾಕಿ ಉಳಿದಿವೆ. ಈಗಾಗಲೇ ಹಾಲಿ ಶಾಸಕರು ತಮ್ಮ ತಮ್ಮ ಕ್ಷೇತ್ರಗಳಲ್ಲಿ ಮತದಾರರನ್ನು ಸೆಳೆಯುಲು ಕಸರತ್ತು ನಡೆಸುತ್ತಿದ್ದಾರೆ. ಇದರ ಮುಂದುವರಿದ ಭಾಗವಾಗಿ ಮಲೆನಾಡಿನ ಭಾಗವಾದ ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಶಾಸಕ ಟಿ ಡಿ ರಾಜೇಗೌಡ ರ ಪರವಾಗಿ ಕಾಂಗ್ರೆಸ್ ಕಾರ್ಯಕತರು ಮತದಾರರರನ್ನು ಸೆಳೆಯುಲು ಮನೆ‌ ಮನೆಗೆ ಕುಕ್ಕರ್ ಹಂಚಿಕೆ ಮಾಡುತ್ತಿದ್ದಾರೆ.

ಯಾದಗಿರಿ: ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿ ಡಾ.ಭೀಮಣ್ಣ ಮೇಟಿಯಿಂದ ಗಿಫ್ಟ್ ಪಾಲಿಟಿಕ್ಸ್!

ಶಾಸಕ ಟಿ ಡಿ ರಾಜೇಗೌಡ(MLA TD Rajegowda) ಭಾವಚಿತ್ರವುಳ್ಳ ಕುಕ್ಕರ್(Coocker)ವಿತರಣೆ 

ಶೃಂಗೇರಿ ವಿಧಾನಸಭಾ ಕ್ಷೇತ್ರ(Shringeri Assembly constituency)ದ ವ್ಯಾಪ್ತಿಯಲ್ಲಿ ಅಭಿವೃದ್ಧಿ ಕಾರ್ಯದಿಂದ ಮತ ಕೇಳುವ ಬದಲು ಕುಕ್ಕರ್ ನೀಡಿ ಮತ ಕೇಳುತ್ತಿರುವ ಹಾಲಿ ಕಾಂಗ್ರೆಸ್(Congress) ಶಾಸಕರ ವಿರುದ್ಧ ಮತದಾರರು ಸಾಮಾಜಿಕ ಜಾಲ ತಾಣ(Social media)ದಲ್ಲಿ ಲೇವಡಿ ಮಾಡಿದ್ದಾರೆ.

ಶೃಂಗೇರಿ ಶಾಸಕ ಹಾಗೂ ಜಿಲ್ಲೆಯ ಏಕೈಕ ಕಾಂಗ್ರೆಸ್ ಶಾಸಕ ಟಿ.ಡಿ.ರಾಜೇಗೌಡ ಕ್ಷೇತ್ರದಾದ್ಯಂತ ಕುಕ್ಕರ್ ರಾಜಕೀಯ(Cooker politics) ಆರಂಭಿಸಿದ್ದಾರೆ. ಕ್ಷೇತ್ರದಾದ್ಯಂತ ಸುಮಾರು ಒಂದು ಲಕ್ಷಕ್ಕೂ ಅಧಿಕ ಕುಕ್ಕರ್ ವಿತರಣೆ ಮಾಡಿದ್ದು, ಜನಸಾಮಾನ್ಯರು ಈಗ ಕುಕ್ಕರ್ ನೀಡಿ ಮತ ಕೇಳುವುದಾದರೆ ಕಳೆದ ಐದು ವರ್ಷದಿಂದ ಮಾಡಿದ್ದೇನು ಎಂದು ಪ್ರಶ್ನಿಸಿದ್ದಾರೆ.

 ಚಿಕ್ಕಮಗಳೂರಲ್ಲಿ(Chikkamagaluru) ಮೂರು ತಾಲೂಕು ಸೇರಿ ಶೃಂಗೇರಿ ವಿಧಾನಸಭಾ ಕ್ಷೇತ್ರವಾಗಿದೆ. ಎನ್.ಆರ್.ಪುರ, ಕೊಪ್ಪ ಹಾಗೂ ಶೃಂಗೇರಿ ವಿಧಾನಸಭಾ ಕ್ಷೇತ್ರವಾಗಿದೆ. ಶಾರದಾಂಬೆ ನೆಲೆಬೀಡು ಶೃಂಗೇರಿ ತಾಲೂಕಿನ ಬೇಗಾರು ಗ್ರಾಮ(Begaru village)ದಲ್ಲಿ ರಮೇಶ್ ಎಂಬ ಕಾರ್ಯಕರ್ತರ ಮೂಲಕ ಮನೆ-ಮನೆಗೆ ಕುಕ್ಕರ್ ಕೊಡಿಸಿ ಫೋಟೋ ಹೊಡೆಸಿಕೊಂಡಿದ್ದಾರೆ. 

ಮತದಾರರನ್ನು ಸೆಳೆಯಲು 'ತ್ರಿ' ಪಕ್ಷಗಳು ಪ್ಲಾನ್: ರಾಜ್ಯದಲ್ಲಿ ಶುರುವಾಯ್ತು ಗಿಫ್ಟ್ ಪಾಲಿಟಿಕ್ಸ್

ಕುಕ್ಕರ್ ಕೊಡ್ತಿರೋದನ್ನ ಕಂಡು ಶೃಂಗೇರಿ ಜನ ಶಾಸಕರಿಗೆ ನೀವು ಐದು ವರ್ಷ ಮಾಡಿದ್ದೇನು ಎಂದು ಪ್ರಶ್ನಿಸಿದ್ದಾರೆ. ಮೂರು ತಾಲೂಕಿನಲ್ಲೂ ಕಳೆದ ಎರಡ್ಮೂರು ವರ್ಷಗಳಿಂದ ಭಾರೀ ಮಳೆಗೆ ಜನ ಮನೆ-ಮಠ ಕಳೆದುಕೊಂಡಿದ್ದಾರೆ. ಹಲವರಿಗೆ ಇನ್ನೂ ಸೂಕ್ತ ರೀತಿಯಲ್ಲಿ ಪರಿಹಾರ ಬಂದಿಲ್ಲ. ಮಳೆಯಿಂದಾದ ಮೂಲಭೂತ ಸೌಲಭ್ಯಗಳು ಇಂದಿಗೂ ದುರಸ್ಥಿಯಾಗಿಲ್ಲ.  ಆದರೆ ಈಗ ಚುನಾವಣೆ ಬಂತು ಅಂತ ಮತ್ತೆ ಕುಕ್ಕರ್ ಆಮೀಷದ ಮೂಲಕ ಮತ ಕೇಳುತ್ತಿದ್ದಾರೆ ಎಂದು ಜನ ಶಾಸಕರ ವಿರುದ್ಧ ಅಸಮಾಧಾನ ಹೊರಹಾಕಿದ್ದಾರೆ.

click me!