ವಿಜಯಪುರ: ಕರ್ನಾಟಕಕ್ಕೆ ಮಾದರಿ, ಆದರ್ಶ ರಾಜಕಾರಣಿ ಜಿಗಜಿಣಗಿ..!

Published : Dec 25, 2022, 08:00 PM IST
ವಿಜಯಪುರ: ಕರ್ನಾಟಕಕ್ಕೆ ಮಾದರಿ, ಆದರ್ಶ ರಾಜಕಾರಣಿ ಜಿಗಜಿಣಗಿ..!

ಸಾರಾಂಶ

ಹುಟ್ಟಿ ಬೆಳೆದ ಗ್ರಾಮಕ್ಕೆ ಅನುದಾನದ ಹೊಳೆಯನ್ನೇ ಹರಿಸುವ ಮೂಲಕ ಹುಟ್ಟೂರಿನ ಋುಣ ತೀರಿಸಿದ ಅಭಿವೃದ್ಧಿಯ ಹರಿಕಾರ, ಅಜಾತಶತ್ರು, ಕೇಂದ್ರ ಮಾಜಿ ಸಚಿವರು, ಹಾಲಿ ಸಂಸದರಾದ ಸಂಸದ ರಮೇಶ ಜಿಗಜಿಣಗಿ ಅವರು ಅಪರೂಪದ ಆದರ್ಶ, ಮಾದರಿಯ ರಾಜಕಾರಣಿಯಾಗಿದ್ದಾರೆ.

ಖಾಜು ಸಿಂಗೆಗೋಳ

ಇಂಡಿ(ಡಿ.25): ಹುಟ್ಟೂರು ಮರೆತವರೇ ಹೆಚ್ಚು, ಅಂತವರ ಸಾಲಿಗೆ ಸೇರದೇ ಹುಟ್ಟಿ ಬೆಳೆದ ಗ್ರಾಮಕ್ಕೆ ಅನುದಾನದ ಹೊಳೆಯನ್ನೇ ಹರಿಸುವ ಮೂಲಕ ಹುಟ್ಟೂರಿನ ಋುಣ ತೀರಿಸಿದ ಅಭಿವೃದ್ಧಿಯ ಹರಿಕಾರ, ಅಜಾತಶತ್ರು, ಕೇಂದ್ರ ಮಾಜಿ ಸಚಿವರು, ಹಾಲಿ ಸಂಸದರಾದ ಸಂಸದ ರಮೇಶ ಜಿಗಜಿಣಗಿ ಅವರು ಅಪರೂಪದ ಆದರ್ಶ, ಮಾದರಿಯ ರಾಜಕಾರಣಿಯಾಗಿದ್ದಾರೆ. ಹುಟ್ಟಿಬೆಳೆದ ಗ್ರಾಮವಾದ ಅಥರ್ಗಾ ಗ್ರಾಮಕ್ಕೆ .109 ಕೋಟಿ ವೆಚ್ಚದಲ್ಲಿ ಮಂಜೂರು ಮಾಡಿಸಿ ಕಾಮಗಾರಿ ಪೂರ್ಣಗೊಳಿಸುವ ಮೂಲಕ ಕೆರೆಗಳಿಗೆ ನೀರು ತುಂಬಿಸಿ ಲೋಕಾರ್ಪಣೆ ಕಾರ್ಯಕ್ರಮಕ್ಕೆ ಆಗಮಿಸುತ್ತಿರುವ ಸಂಸದ ರಮೇಶ ಜಿಗಜಿಣಗಿ ಅವರಿಗೆ ಗ್ರಾಮಸ್ಥರು ಸೇರಿದಂತೆ ಜಿಲ್ಲೆಯ ಅಭಿಮಾನಿಗಳು, ಕಾರ್ಯಕರ್ತರು ಅದ್ಧೂರಿಯಾಗಿ ಸ್ವಾಗತಿಸುತ್ತಿದ್ದಾರೆ.

ಮುಳವಾಡ ಏತ ನೀರಾವರಿ ಹಂತ-3ರ ಅಡಿಯಲ್ಲಿ ಬರುವ ತಿಡಗುಂದಿ ಶಾಖಾ ಕಾಲುವೆಯ ಕಿಮೀ 56 ರಿಂದ 66 ವರೆಗಿನ ಕಾಮಗಾರಿಯ ಮೂಲಕ ರಾಜನಾಳ(ಅಥರ್ಗಾ), ತಡವಲಗಾ ಹಾಗೂ ಹಂಜಗಿ ಕೆರೆಗಳನ್ನು ತುಂಬಿಸುವ 100.49 ಕೋಟಿಗಳ ಯೋಜನೆ ಯಶಸ್ವಿಯಾಗಿದ್ದು, ಜಲಸಂಪನ್ಮೂಲ ಸಚಿವ ಗೋವಿಂದ ಕಾರಜೋಳ, ಸಂಸದ ರಮೇಶ ಜಿಗಜಿಣಗಿ, ಶಾಸಕ ಯಶವಂತರಾಯಗೌಡ ಪಾಟೀಲ ಅವರು ಡಿ.25 ರಂದು ಲೋಕಾರ್ಪಣೆ ಮಾಡಲಿದ್ದಾರೆ.
ಇಂಡಿ ತಾಲೂಕಿನ ಅಥರ್ಗಾ, ಮಿಂಚನಾಳ, ಲಿಂದಹಳ್ಳಿ, ನಿಂಬಾಳ ಕೆಡಿ, ಚವಡಿಹಾಳ ಸುತ್ತ-ಮುತ್ತಲಿನ ರಾಜನಾಳ, ತಡವಲಗಾ, ಹಂಜಗಿ ಕೆರೆಗಳಿಗೆ ಕೃಷ್ಣೆ ಆಗಮವಾಗಿದ್ದು, ಎಲ್ಲ ಕೆರೆಗಳು ಭರ್ತಿಯಾಗಿ ಉಳಿದ ಸಣ್ಣ ಪ್ರಮಾಣದ ಕೆರೆ, ಹಳ್ಳ, ಕೊಳ್ಳಗಳಿಗೆ ಹರಿದಿದ್ದು, ಗ್ರಾಮಗಳಿಗೆ ಅನುಕೂಲವಾಗಿದೆ. ಇಂಡಿ ತಾಲೂಕಿನ ರಾಜನಾಳ, ಅಥರ್ಗಾ, ಮಿಂಚನಾಳ, ಲಿಂಗದಹಳ್ಳಿ, ಗಣವಲಗಾ, ನಿಂಬಾಳ ಬಿ.ಕೆ, ತೆನ್ನಿಹಳ್ಳಿ,ಬೋಳೆಗಾಂವ, ಹಂಜಗಿ, ರೂಗಿ, ಇಂಡಿ, ಚಿಕ್ಕಬೇವನೂರ, ಚವಡಿಹಾಳ, ಬಬಲಾದ, ಚೋರಗಿ ಸೇರಿದಂತೆ 15 ಗ್ರಾಮಗಳು ಈ ಯೋಜನೆಯಿಂದ ನೀರಾವರಿಗೆ ಒಳಪಡುತ್ತವೆ.

ವಿಮಾನ ನಿಲ್ದಾಣ ಕಾಮಗಾರಿ ಮಾರ್ಚ್‌ಗೆ ಪೂರ್ಣ; ಸಂಸದ ರಮೇಶ ಜಿಗಜಿಣಗಿ

ತವರು ಗ್ರಾಮದ ಋುಣ ತೀರಿಸಿದ ಹಲವು ಯೋಜನೆಗಳು

ಸಂಸದ ರಮೇಶ ಜಿಗಜಿಣಗಿ ಅವರ ಕಾಳಜಿಯಿಂದ ಇಂಡಿ ತಾಲೂಕು ಸೇರಿದಂತೆ ಜಿಲ್ಲೆಯಲ್ಲಿ ಅಭಿವೃದ್ಧಿ ಪರ್ವ ಆರಂಭವಾಗಿದೆ. ಸಂಸದ ರಮೇಶ ಜಿಗಜಿಣಗಿ ಅವರು ಪ್ರಚಾರ ಪ್ರೀಯತೆಯಲ್ಲಿ ಹಿಂದೆ ಇದ್ದರು. ಅಭಿವೃದ್ಧಿಯಲ್ಲಿ ಮುಂದಿದ್ದಾರೆ. ಸದಾ ಜಿಲ್ಲೆಯ ಅಭಿವೃದ್ಧಿಯ ಕನಸನ್ನು ಹೊತ್ತುಕೊಂಡು ಕೇಂದ್ರ, ರಾಜ್ಯ ಸರ್ಕಾರದಿಂದ ವಿವಿಧ ಯೋಜನೆಗಳನ್ನು ತರುವುದರ ಮೂಲಕ ಜಿಲ್ಲೆಯಲ್ಲಿ ಅಭಿವೃದ್ಧಿ ಪರ್ವ ಆರಂಭಿಸಿದ್ದಾರೆ. ಹುಟ್ಟಿಬೆಳೆದ ತವರು ಗ್ರಾಮದ ಕನ್ನಡ ಶಾಲೆ ದುರಸ್ತಿಗೆ .1 ಕೋಟಿ, ಗ್ರಾಮದಲ್ಲಿ ಕುಲಂಕಾರೇಶ್ವರ ಮಂಗಲ ಕಾರ್ಯಾಲಯ ನಿರ್ಮಾಣಕ್ಕೆ .1 ಕೋಟಿ ಹಾಗೂ ಗ್ರಾಮದಲ್ಲಿ ಸಿಸಿ ರಸ್ತೆ ನಿರ್ಮಾಣಕ್ಕೆ .1.50 ಕೋಟಿ ಅನುದಾನ ನೀಡಿ ಅಭಿವೃದ್ಧಿ ಪಡಿಸಿದಿದ್ದಾರೆ. ಇಂಡಿ-ಅವರಾಧ-ಸದಾಶಿವಗಡ ರಾಷ್ಟ್ರೀಯ ಹೆದ್ದಾರಿ ನಿರ್ಮಾಣಕ್ಕೆ .960 ಕೋಟಿ, ಶಿರಾಡೋಣ, ಲಿಂಗಸೂರು ರಸ್ತೆ ನಿರ್ಮಾಣಕ್ಕೆ .45 ಕೋಟಿ ಮಂಜೂರು ಮಾಡಿಸಿದ್ದು ಟೆಂಡರ್‌ ಹಂತದಲ್ಲಿ ಇದೆ.

ಮುಳವಾಡ ಏತ ನೀರಾವರಿ ಹಂತ-3ರ ಅಡಿಯಲ್ಲಿ ಬರುವ ತಿಡಗುಂದಿ ಶಾಖಾ ಕಾಲುವೆಯ ಕಿಮೀ 48 ರಿಂದ 65.58 ರ ಪೈಪ್‌ಲೈನ್‌ ಜಾಲದಿಂದ ರಾಜನಾಳ(ಅಥರ್ಗಾ), ತಡವಲಗಾ ಹಾಗೂ ಹಂಜಗಿ ಕೆರೆ ತುಂಬುವ ಕಾಮಗಾರಿಯ ಲೋಕಾರ್ಪಣೆ ಮತ್ತು ಭಾಗಿನ ಅರ್ಪಣೆ ಸಮಾರಂಭಕ್ಕೆ ಆಗಮಿಸುತ್ತಿರುವ ಗ್ರಾಮದ ನೆಚ್ಚಿನ ಕುವರ, ಅಜಾತಶತ್ರು, ಮುತ್ಸದ್ಧಿ ರಾಜಕಾರಣಿ, ಜಿಲ್ಲೆಯ ಹೆಮ್ಮಯ ಸಂಸದರಾದ ರಮೇಶ ಜಿಗಜಿಣಗಿ, ಸಚಿವರಾದ ಗೋವಿಂದ ಕಾರಜೋಳ, ಶಾಸಕರಾದ ಯಶವಂತರಾಯಗೌಡ ಪಾಟೀಲ ಅವರಿಗೆ ಹಾರ್ದಿಕ ಸ್ವಾಗತ ಕೊರುತ್ತೇನೆ.

ಪ್ರಕಾಶ ಕುಲಪ್ಪ ಹಿಟ್ನಳ್ಳಿ, ಪ್ರಥಮ ದರ್ಜೆ ಗುತ್ತಿಗೆದಾರರು ಅಥರ್ಗಾ.
ಸಿದ್ದೇಶ್ವರ ಇನ್‌ಪ್ರಾಸ್ಟೋನ್‌ ಕರ್ಸರ್‌ ಹಡಲಸಂಗ.
ಅಧ್ಯಕ್ಷರು, ಶ್ರೀ ಶಿವಶಕ್ತಿ ಸೌಹಾರ್ದ ಸಹಕಾರಿ ಇಂಡಿ.
ಅಧ್ಯಕ್ಷರು, ಕೃಷರ್‌ ಅಸೊಸಿಯೇಷನ್‌ ಇಂಡಿ-ಚಡಚಣ.
ಅನುದಾನ ಪರ್ವ
ವಿಜಯಪುರ ಜಿಲ್ಲೆಯ ಇಂಡಿ ತಾಲೂಕಿನ 76 ಹಳ್ಳಿಗಳಿಗೆ ಸಾಮೂಹಿಕ ಕುಡಿಯುವ ನೀರು ಸರಬರಾಜು ಯೋಜನೆಗೆ .110 ಕೋಟಿ ಮಂಜೂರು.
ಇಂಡಿ ತಾಲೂಕಿಗೆ ಕೃಷಿ ವಿಜ್ಞಾನ ಕೇಂದ್ರ ಸ್ಥಾಪನೆ.
ಆಸ್ಟೊ್ರೕ ಹಾಕಿ ಅಂಡರ್‌ ಕ್ಯಾನೋ ಇಂಡಿಯಾ ಪ್ರೋಗ್ರಾಂ .5 ಕೋಟಿ ಹಣ ಮಂಜೂರು. ಸದ್ಯಕ್ಕೆ .2 ಕೋಟಿ ಸೈನಿಕ್‌ ಸ್ಕೂಲ್‌ಗೆ ಹಣ ಬಿಡುಗಡೆಯಾಗಿದೆ.
ಐಕುನಿಕ್‌ ಟೆಂಪಲ್‌ ರಾಘವೇಂದ್ರ ಟೆಂಪಲ್‌ ಮಂತ್ರಾಲಯದಲ್ಲಿ ಸ್ವಚ್ಛತಾ ಅಭಿಯಾನವನ್ನು ವಿಜಯಪುರ ಬ್ರಾಹ್ಮಣ ಸಮಾಜದವರ ಕೋರಿಕೆ ಮೇರೆಗೆ ಕೈಗೊಳ್ಳಲಾಗಿದೆ.
ವಿಜಯಪುರ ಜಿಲ್ಲೆಗೆ ಅಮೃತ ಯೋಜನೆಯ ಅಡಿಯಲ್ಲಿ 110 ಕೋಟಿ ಮಂಜೂರು.
ಸ್ಕೀಮ್‌ ಆಫ್‌ ಗ್ರ್ಯಾಂಟ್‌-ಎನ್‌-ಏಡ್‌ ಟು ವಾಲಂಟರಿ ಆರ್ಗನೈಜೇಶನ್‌ ವರ್ಕಿಂಗ್‌ ಫಾರ್‌ ಎಸ್‌.ಸಿ.ಸ್ಕೀಮನಡಿ ಸಿದ್ದಾರ್ಥ ರೆಸಿಡೆನ್ಸಿಯಲ್‌ ಪ್ರೈಮರಿ ಸ್ಕೂಲ್‌ ಕಲಕೇರಿ (ಸಿಂದಗಿ ತಾಲೂಕ)ಗೆ 2016-17ನೇ ಸಾಲಿನಲ್ಲಿ 12,65,328 ಮಂಜೂರು. 
ಸ್ಕೀಮ್‌ ಆಫ್‌ ಗ್ರ್ಯಾಂಟ್‌-ಎನ್‌-ಏಡ್‌ ಟು ವಾಲಂಟರಿ ಆರ್ಗನೈಜೇಶನ್‌ ವರ್ಕಿಂಗ್‌ ಫಾರ್‌ ಎಸ್‌.ಸಿ. ಸ್ಕೀಮನಡಿ ಸೋಮದೇವರಹಟ್ಟಿ ತಾಂಡಾ ನಂ.1 ವಿಜಯಪುರ ತಿಕೋಟಾ ರಸ್ತೆಗೆ 2017-18ನೇ ಸಾಲಿನಲ್ಲಿ .27,15,120 ಲಕ್ಷ ಮಂಜೂರು.
ವಿಜಯಪುರ ಜಿಲ್ಲೆಯಲ್ಲಿ ಆನ್‌ಗೋಯಿಂಗ್‌ ಎನ್‌ಎಚ್‌ ಯೋಜನೆಗೆ .350.44 ಕೋಟಿ ಹಣ ಮಂಜೂರು.
ವಿಜಯಪುರ ಜಿಲ್ಲೆಯಲ್ಲಿ ಇನ್‌ ಪ್ರಿನ್ಸಿಪಲ್‌ ಡಿಕ್ಲೇರ್ಡ್‌ ಎನ್‌ಎಚ್‌ ಯೋಜನೆಗೆ .3372 ಕೋಟಿ ಹಣ ಮಂಜೂರು.
ವಿಜಯಪುರ ಜಿಲ್ಲೆಯಲ್ಲಿ ವರ್ಕ್ಸ್ ಅಂಡರ್‌ ಸಿಆರ್‌ಎಫ್‌ ರಸ್ತೆ + ಬ್ರಿಜ್ಜಿಸ್‌ . 199 ಕೋಟಿ ಹಣ ಮಂಜೂರು.
ಸೊಲ್ಲಾಪುರ-ವಿಜಯಪುರ ಸಕ್ಷೆನ್‌ ಆಫ್‌ ಎನ್‌ಎಚ್‌-13ಗೆ .1576.79 ಕೋಟಿ ಹಣ ಮಂಜೂರು.
ನಗರಾಭಿವೃದ್ಧಿಗಾಗಿ ಕೇಂದ್ರ ಸರ್ಕಾರದಿಂದ 14ನೇ ಹಣಕಾಸು ಯೋಜನೆಯಡಿ 1161 ಕಾಮಗಾರಿಗಳ ನಿರ್ಮಾಣಕ್ಕಾಗಿ .73 ಕೋಟಿ ಅನುದಾನ ಬಿಡುಗಡೆ.
ನಗರ ಪ್ರದೇಶದ ಕುಟುಂಬಗಳಿಗೆ ವಾಜಪೇಯಿ ಮತ್ತು ಪ್ರಧಾನಮಂತ್ರಿ ಆವಾಸ್‌ ನಗರ ವಸತಿ 3,720 ಮನೆಗಳ ಹಂಚಿಕೆಗೆ ಅನುದಾನ ಬಿಡುಗಡೆ.
ಡಾ.ಬಿ.ಆರ್‌.ಅಂಬೇಡ್ಕರ್‌ ಮತ್ತು ಪ್ರಧಾನ ಮಂತ್ರಿ ಆವಾಸ್‌ ನಗರ ವಸತಿ ಯೋಜನೆಮನೆಗಳ ಹಂಚಿಕೆಗೆ ಸರ್ಕಾರದಿಂದ ಅನುದಾನ ಬಿಡುಗಡೆ.
ಗ್ರಾಮೀಣ ಪ್ರದೇಶದ ಅಭಿವೃದ್ಧಿಗಾಗಿ 13ನೇ ಹಣಕಾಸು ಯೋಜನೆಯಡಿ .7.59 ಕೋಟಿ ಅನುದಾನ.
ಇಂದಿರಾ ಆವಾಸ್‌ ಯೋಜನೆ ಹಾಗು ಪ್ರಧಾನ ಮಂತ್ರಿ ಆವಾಸ್‌ ಗ್ರಾಮೀಣ ವಸತಿ ಯೋಜನೆಯಡಿ . 94.89 ಕೋಟಿ ಬಿಡುಗಡೆ.
ಪ್ರಧಾನಮಂತ್ರಿ ಗ್ರಾಮ ಸಡಕ್‌ ಯೋಜನೆಯಡಿ ಗ್ರಾಮೀಣ ರಸ್ತೆ ಅಭಿವೃದ್ಧಿಗಾಗಿ .43.63 ಕೋಟಿ ಅನುದಾನ ಬಿಡುಗಡೆ.
ರಾಷ್ಟ್ರೀಯ ಗ್ರಾಮೀಣ ಕುಡಿಯುವ ನೀರು ಯೋಜನೆಡಿ .76 ಕೋಟಿ ಬಿಡುಗಡೆ.
ಎನ್‌.ಆರ್‌.ಎಲ್‌.ಎಂ ಯೋಜನೆಯಡಿ (ನ್ಯಾಷನಲ್‌ ರೂರಲ್‌ ಲೈವ್ಲಿಹುಡ್‌ ಮಿಷನ್‌) .90 ಲಕ್ಷ ಬಿಡುಗಡೆ.
ರೈತರ ಕಲ್ಯಾಣಕ್ಕಾಗಿ ಕೃಷಿ ಇಲಾಖೆಗೆ .2.24 ಕೋಟಿ ಬಿಡುಗಡೆ.
ಸ್ಥಗಿತಗೊಂಡಿದ್ದ ವಿಜಯಪುರ ವಿಮಾನ ನಿಲ್ದಾಣ ಸ್ಥಾಪನೆಗೆ ಕ್ರಮಕೈಗೊಳ್ಳಲಾಗುತ್ತಿದೆ.
ಗೋಳಗುಮ್ಮಟ ಸೌಂದರೀಕರಣಕ್ಕೆ .4.34 ಕೋಟಿ ಮಂಜೂರು.
ವಿಕಲಚೇತನರಿಗೆ ತಪಾಸಣೆ ಕೈಗೊಂಡು .40 ಲಕ್ಷ ವೆಚ್ಚದ ಸಾಧನ ಸಲಕರಣೆಗಳನ್ನು ವಿತರಣೆ.
ಸುಮಾರು 200 ಕಿಮೀ ದೂರದ ಹುಬ್ಬಳ್ಳಿಗೆ ಜಿಲ್ಲೆಯ ಜನತೆ ಪಾಸ್‌ಪೋರ್ಚ್‌ಗಾಗಿ 2-3 ಸಲ ಅಲೆದಾಡಬೇಕಿತ್ತು. ಜನರಿಗೆ ಆಗುತ್ತಿರುವ ಈ ತೊಂದರೆ ತಪ್ಪಿಸಲು ಪಾಸ್‌ಪೋರ್ಚ್‌ ಸೇವಾ
ಕೇಂದ್ರ ವಿಜಯಪುರದಲ್ಲಿಯೇ ಸ್ಥಾಪಿಸಿ ಜಿಲ್ಲೆಯ ಜನತೆಗೆ ಅನುಕೂಲ ಕಲ್ಪಿಸಿದ್ದಾರೆ.
ಅಲಿಯಾಬಾದ ಹತ್ತಿರ ಗೂಡ್ಸ್‌ ಶೆಡ್‌ ನಿರ್ಮಾಣಕ್ಕೆ ಹಣ ಮಂಜೂರು.
ವಿಜಯಪುರ ನಗರ ರೇಲ್ವೆ ನಿಲ್ದಾಣ ನವೀಕರಣಕ್ಕೆ .18 ಕೋಟಿ ಮಂಜೂರು.
ಕೇಂದ್ರ ಮಾಜಿ ಸಚಿವ ರಮೇಶ ಜಿಗಜಿಣಗಿ
ಹೆಸರು: ರಮೇಶ ಚಂದಪ್ಪ ಜಿಗಜಿಣಗಿ
ಜನನ: ಜೂ.26, 1952
ಜನ್ಮ ಸ್ಥಳ: ಅಥರ್ಗಾ (ಇಂಡಿ ತಾಲೂಕು)
ವಿದ್ಯಾರ್ಹತೆ: ಬಿಎ (ಕರ್ನಾಟಕ ವಿಶ್ವವಿದ್ಯಾಲಯ ಧಾರವಾಡ)

ಕಾರ್ಯ ನಿರ್ವಹಿಸಿದ ಹುದ್ದೆಗಳು: 

1978ರಲ್ಲಿ ಇಂಡಿ ತಾಲೂಕು ಅಭಿವೃದ್ಧಿ ಮಂಡಳಿ ಸದಸ್ಯ, 1980ರಲ್ಲಿ ಇಂಡಿ ತಾಲೂಕು ಭೂ ನ್ಯಾಯ ಮಂಡಳಿ ಸದಸ್ಯ, 1983ರಲ್ಲಿ ಬಳ್ಳೊಳ್ಳಿ ಮೀಸಲು ವಿಧಾನಸಭೆ ಕ್ಷೇತ್ರದಿಂದ ಜನತಾ ಪಕ್ಷದಿಂದ ಶಾಸಕರಾಗಿ ಆಯ್ಕೆಯಾಗಿ ಮೊದಲ ಬಾರಿಗೆ ವಿಧಾನಸಭೆ ಪ್ರವೇಶ. 1985ರಲ್ಲಿ ಜನತಾ ಪಕ್ಷದಿಂದ 2 ಬಾರಿ ಶಾಸಕರಾಗಿ ಆಯ್ಕೆ.

1994ರಲ್ಲಿ ಜನತಾದಳದಿಂದ 3ನೇ ಬಾರಿಗೆ ಶಾಸಕರಾಗಿ ಆಯ್ಕೆ. ರಾಮಕೃಷ್ಣ ಹೆಗಡೆ, ಎಸ್‌.ಆರ್‌.ಬೊಮ್ಮಾಯಿ, ಎಚ್‌.ಡಿ.ದೇವೇಗೌಡ, ಜೆ.ಎಚ್‌.ಪಟೇಲ ಸರ್ಕಾರದಲ್ಲಿ ಗೃಹ ಖಾತೆ, ಅಬಕಾರಿ, ಗಣಿ ಮತ್ತು ಭೂ ವಿಜ್ಞಾನ, ಕಂದಾಯ, ಸಮಾಜ ಕಲ್ಯಾಣ ಸಚಿವರಾಗಿ ಕಾರ್ಯ ನಿರ್ವಹಿಸಿದ್ದಾರೆ.

1999ರಿಂದ ಚಿಕ್ಕೋಡಿ ಮೀಸಲು ಕ್ಷೇತ್ರದಿಂದ ಲೋಕಶಕ್ತಿಯಿಂದ ಸಂಸದರಾಗಿ 2 ಬಾರಿ ಆಯ್ಕೆ. 2004ರಲ್ಲಿ ಚಿಕ್ಕೋಡಿ ಕ್ಷೇತ್ರದಿಂದಲೇ ಬಿಜೆಪಿ ಸಂಸದರಾಗಿ ಆಯ್ಕೆ. ಚಿಕ್ಕೋಡಿಯಿಂದ ಹ್ಯಾಟ್ರಿಕ್‌ ಸಾಧನೆ. 2009 ಹಾಗೂ 2014ರಲ್ಲಿ ವಿಜಯಪುರ ಮೀಸಲು ಕ್ಷೇತ್ರದಿಂದ ಬಿಜೆಪಿ ಸಂಸದರಾಗಿ ಆಯ್ಕೆ. ಪ್ರಧಾನ ಮಂತ್ರಿ ನರೇಂದ್ರ ಮೋದಿ ಸಚಿವ ಸಂಪುಟದಲ್ಲಿ ಕುಡಿಯುವ ನೀರು ಮತ್ತು ನೈರ್ಮಲ್ಯ ಖಾತೆ ರಾಜ್ಯ ಸಚಿವರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಸಮಾಜಸೇವೆ: ಸಂವಿಧಾನ ಶಿಲ್ಪಿ ಡಾ.ಬಿ.ಆರ್‌.ಅಂಬೇಡ್ಕರ್‌ ಮೆಮೋರಿಯಲ್‌ ಶಾಲೆಯ ಅಧ್ಯಕ್ಷ, ಧಾರವಾಡದ ಹುರಕಡ್ಲಿ ಅಜ್ಜ ಏಜ್ಯುಕೇಶನ್‌ ಸೊಸೈಟಿ ಉಪಾಧ್ಯಕ್ಷ, ಡಾ.ಬಾಬು ಜಗಜೀವನರಾಂ ಟ್ರಸ್ಟ್‌ (ಬೆಂಗಳೂರು)ನ ಟ್ರಸ್ಟಿ, ಹಂಪಿ ಹೆರಿಟೇಜ್‌ ವೈನರಿ ಸ್ಥಾಪನೆ, ಕಲಬುರಗಿಯ ಪುಲ್ಲರ್‌ ಅರ್ಥ ಪ್ರೈ. ಲಿಮಿಟೆಡ್‌ನ ನಿರ್ದೇಶಕ, ಬಯೋ ಫರ್ಟಿಲೈಜರ್ಸ್‌ ಯುನಿಟ್‌ನ ನಿರ್ದೇಶಕ, ದಿಲ್ಲಿಯ ಎಸ್‌.ನಿಜಲಿಂಗಪ್ಪ ಮೆಮೋರಿಯಲ್‌ ಟ್ರಸ್ಟ್‌ನ ಟ್ರಸ್ಟಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ.

ಆಡು ಮುಟ್ಟದ ಸೊಪ್ಪಿಲ್ಲ, ಜಿಗಜಿಣಗಿ ಮಾಡದ ಕೆಲಸವಿಲ್ಲ

ಕೇಂದ್ರ ಮಾಜಿ ಸಚಿವ ರಮೇಶ ಜಿಗಜಿಣಗಿ ಸಾಧನೆಯ ಒಂದು ದೊಡ್ಡ ಮೈಲುಗಲ್ಲು. ಆಡು ಮುಟ್ಟದ ಗಿಡವಿಲ್ಲ. ಸರ್‌ ಎಂ.ವಿಶ್ವೇಶ್ವರಯ್ಯನವರು ಮಾಡದ ಕೆಲಸವಿಲ್ಲ ಎಂಬ ನಾಣ್ಣುಡಿ ಹಾಗೆಯೇ ಆಡು ಮುಟ್ಟದ ಗಿಡ, ಕೇಂದ್ರ ಸಚಿವ ರಮೇಶ ಜಿಗಜಿಣಗಿ ಮಾಡದ ಕೆಲಸವಿಲ್ಲ ಎನ್ನುವಷ್ಟರ ಮಟ್ಟಿಗೆ ಸಚಿವ ಜಿಗಜಿಣಗಿ ಲೆಕ್ಕವಿಡದಷ್ಟುಕೆಲಸ ಮಾಡಿದ್ದಾರೆ. ಈ ಹಿಂದೆ ಯಾವುದೇ ಸಂಸದರು ಮಾಡದೆ ಇರುವಷ್ಟಅಭಿವೃದ್ಧಿ ಕೈಗೊಂಡಿದ್ದಾರೆ. ಜಿಗಜಿಣಗಿ ಜಿಲ್ಲೆಯಲ್ಲಿ ಅಭಿವೃದ್ಧಿ ಕ್ಷೇತ್ರದಲ್ಲಿ ಈಗ ನಂಬರ್‌ ಒನ್‌ ಆಗಿದ್ದಾರೆ.

ಕೊಲ್ಹಾರ ತಾಲೂಕಿನ ಕೂಡಗಿಯಲ್ಲಿ 4 ಸಾವಿರ ಮೆಗಾವ್ಯಾಟ್‌ ಉಷ್ಣ ವಿದ್ಯುತ್‌ ಸ್ಥಾವರ ಸ್ಥಾಪನೆ, .110 ಕೋಟಿ ವೆಚ್ಚದಲ್ಲಿ ಇಂಡಿ ತಾಲೂಕಿನ 76 ಹಳ್ಳಿಗಳಿಗೆ ಸಾಮೂಹಿಕ ನೀರು ಪೂರೈಕೆ ಯೋಜನೆ ಅನುಷ್ಠಾನ, 5 ರೈಲ್ವೆ ಮೇಲ್ಸೇತುವೆ ನಿರ್ಮಾಣ ಕಾಮಗಾರಿ, ವಿಜಯಪುರ-ಸೊಲ್ಲಾಪುರ ಚತುಷ್ಫಥ ನಿರ್ಮಾಣಕ್ಕೆ ಚಾಲನೆ, ರಾಷ್ಟ್ರೀಯ ಹೆದ್ದಾರಿಗಳ ಅಭಿವೃದ್ಧಿ, ವಿದ್ಯುತ್‌ ಜಾಲ ಸುಧಾರಣೆ.

ಮಾಜಿ ಸಚಿವ ಜಿಗಜಿಣಗಿ ಅವರ ಸಾಧನೆಗಳು ಜಿಲ್ಲೆಯ ಇತಿಹಾಸದಲ್ಲಿ ಒಂದು ದೊಡ್ಡ ಮೈಲುಗಲ್ಲು ಎನ್ನಲೇಬೇಕು. ಕೂಡಗಿಯಲ್ಲಿ 4 ಸಾವಿರ ಮೆಗಾವ್ಯಾಟ್‌ ಉಷ್ಣ ವಿದ್ಯುತ್‌ ಸ್ಥಾವರ ಸ್ಥಾಪನೆಗೆ ಅಗತ್ಯವಿರುವ ಕಲ್ಲಿದ್ದಲು ತರಲು ಸಾವಿರಾರು ಕೋಟಿ ವೆಚ್ಚದಲ್ಲಿ ಜೋಡಿ ರೈಲು ಮಾರ್ಗ ನಿರ್ಮಿಸಲು ಎನ್‌ಟಿಪಿಸಿ ಮುಂದಾಯಿತು. ಆಗ ಜಿಗಜಿಣಗಿ ಅವರು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರನ್ನು ಒಪ್ಪಿಸಿ ಹುಟಗಿ- ಕೂಡಗಿ- ಗದಗಜೋಡಿಮಾರ್ಗಕ್ಕೆ ಎನ್‌ಟಿಪಿಸಿ ತನ್ನ ಪಾಲಿನ ಹಣವನ್ನು ಕೊಡಿಸುವಂತೆ ಮಾಡಿದರು. ಬಾಕಿ ಹಣವನ್ನು ಕೇಂದ್ರ ಸರ್ಕಾರದಿಂದ ಬಿಡುಗಡೆ ಮಾಡಿಸಿದರು. ಅದರ ಫಲವಾಗಿ ಒಟ್ಟು .1615 ಕೋಟಿ ಯೋಜನೆ ಕಾಮಗಾರಿಗೆ ಚಾಲನೆ ನೀಡಿದ ಕೀರ್ತಿ ರಮೇಶ ಜಿಗಜಿಣಗಿಗೆ ಸಲ್ಲುತ್ತದೆ.

ವಿಜಯಪುರ- ಸೊಲ್ಲಾಪುರ ರಾಷ್ಟ್ರೀಯ ಹೆದ್ದಾರಿಯಲ್ಲಿ ವಾಹನ ದಟ್ಟನೆಯಿಂದ ಪದೇ ಪದೇ ಅಪಘಾತಗಳಾಗುವುದನ್ನು ಅರಿತ ಸಚಿವ ಜಿಗಜಿಣಗಿ ಅವರು ಚತುಷ್ಪಥ ರಸ್ತೆ ಮಂಜೂರು ಮಾಡಿಸಿ 110 ಕಿಮೀ ಕಾಮಗಾರಿಗೆ ಚಾಲನೆ ನೀಡಿದ್ದಾರೆ. 30 ತಿಂಗಳಲ್ಲಿ ಮುಗಿಯಬೇಕಿದ್ದ ಕಾಮಗಾರಿಯನ್ನು 24 ತಿಂಗಳಲ್ಲಿಯೇ ಮುಗಿಸುವ ನಿಟ್ಟಿನಲ್ಲಿ ಗುತ್ತಿಗೆದಾರರಿಗೆ ಹುರಿದುಂಬಿಸಿ ಕೆಲಸ ತೆಗೆದುಕೊಳ್ಳುತ್ತಿದ್ದಾರೆ. ಈಗ ವಿಜಯಪುರ- ಸೊಲ್ಲಾಪುರ ಚತುಷ್ಪಥ ರಸ್ತೆ ಕಾಮಗಾರಿ ಭರದಿಂದ ಸಾಗಿದೆ. ಈ ರಸ್ತೆ ಪೂರ್ಣಗೊಂಡರೆ ಬೆಂಗಳೂರು-ಪುಣೆ ರಾಷ್ಟ್ರೀಯ ಹೆದ್ದಾರಿ-4ಕ್ಕಿಂತ 80 ಕಿಮೀ ಅಂತರ ಕಡಮೆಯಾಗಲಿದೆ. ಈ ಚತುಷ್ಪಥ ರಸ್ತೆ

ಉತ್ತರ ಹಾಗೂ ದಕ್ಷಿಣ ಭಾರತದ ಸಂಪರ್ಕ ಕೊಂಡಿಯಾಗಲಿದೆ. ವಿಜಯಪುರ- ಹುಬ್ಬಳ್ಳಿ-218ರಾಷ್ಟ್ರೀಯಹೆದ್ದಾರಿ, ವಿಜಯಪುರ- ಸಂಕೇಶ್ವರ ರಾಷ್ಟ್ರೀಯ ಹೆದ್ದಾರಿ, ವಿಜಯಪುರ- ಹುಮನಾಬಾದ ರಾಷ್ಟ್ರೀಯ ಹೆದ್ದಾರಿ ಹಾಗೂ ಇಂಡಿ-ಅಫಜಪುರ ಹೆದ್ದಾರಿಗಳಿಗೆ ಮಂಜೂರು ಮಾಡಿಸಿದ ಶ್ರೇಯಸ್ಸು ರಮೇಶ ಜಿಗಜಿಣಗಿ ಅವರಿಗೆ ಸೇರುತ್ತದೆ.

ಕರ್ನಾಟಕದಲ್ಲಿ ದಲಿತ ಸಿಎಂ ಹೋರಾಟ ನಿಲ್ಲದು: ಬಿಜೆಪಿ ಸಂಸದ ಜಿಗಜಿಣಗಿ

5 ರೈಲ್ವೆ ಮೇಲ್ಸೇತುವೆ ನಿರ್ಮಾಣ

ರೈಲ್ವೆ ಕ್ರಾಸಿಂಗ್‌ನಲ್ಲಿ ಅಪಘಾತ ತಡೆಯಲು ಜಿಲ್ಲೆಯ 5 ಕಡೆ ರಮೇಶ ಜಿಗಜಿಣಗಿ ಅವರು ರೇಲ್ವೆ ಮೇಲ್ಸೇತುವೆ ಮಂಜೂರಾತಿ ಮಾಡಿಸಿದ್ದಾರೆ. ಈಗಾಗಲೇ ಕೆಲವು ಕಾಮಗಾರಿಗಳು ಪ್ರಗತಿ ಹಂತದಲ್ಲಿವೆ. ಇನ್ನು ಕೆಲವು ಆರಂಭದ ಹಂತದಲ್ಲಿವೆ. ಇಂಡಿ ಪಟ್ಟಣದ ರೈಲ್ವೆ ನಿಲ್ದಾಣದ ಬಳಿ ರೇಲ್ವೆ ಮೇಲ್ಸೇತುವೆ ಪೂರ್ಣಗೊಳಿಸಿ ಲೋಕಾರ್ಪಣೆ ಮಾಡಲಾಗಿದೆ. ವಿಜಯಪುರದ ಇಬ್ರಾಹಿಂಪುರ ಗೇಟ್‌ ಬಳಿ .26.41 ಕೋಟಿ ವೆಚ್ಚದಲ್ಲಿ ರೈಲ್ವೆ ಮೇಲ್ಸೇತುವೆ ಮಂಜೂರು ಮಾಡಿಸಲಾಗಿದೆ. ಈ ಕಾಮಗಾರಿ ಚಾಲನೆಗೆ ಕ್ರಮ ಕೈಗೊಳ್ಳಲಾಗಿದೆ. ವಿಜಯಪುರದ ವಜ್ರ ಹನುಮಾನ ಗೇಟ್‌ ಬಳಿ ರೈಲ್ವೆ ಮೇಲ್ಸೇತುವೆ ಕಾಮಗಾರಿ ಮುಗಿಯುವ ಹಂತದಲಿದೆ. ವಿಜಯಪುರ ತಾಲೂಕಿನ ಹೊನಗನಹಳ್ಳಿ ಬಳಿ .58 ಕೋಟಿ ವೆಚ್ಚದ ರೇಲ್ವೆ ಮೇಲ್ಸೇತುವೆ ಮಂಜೂರಾತಿ ದೊರಕಿದೆ. ಕಾಮಗಾರಿ ಆರಂಭದ ಹಂತದಲ್ಲಿದೆ. ಇಂಡಿ ತಾಲೂಕಿನ ಮಿಂಚನಾಳ ಬಳಿ .20.64 ಕೋಟಿ ವೆಚ್ಚದ ರೇಲ್ವೆ ಮೇಲ್ಸೇತುವೆಗೆ ಮಂಜೂರಾತಿ ದೊರೆತಿದೆ. ಶೀಘ್ರದಲ್ಲಿಯೇ ಕಾಮಗಾರಿ ಆರಂಭವಾಗಲಿದೆ.

ವಿಮಾನ ನಿಲ್ದಾಣ ಸ್ಥಾಪನೆಗೆ ಕ್ರಮ

ಕೇಂದ್ರ ಮಾಜಿ ಸಚಿವ ರಮೇಶ ಜಿಗಜಿಣಗಿ ಅವರು ವಿಜಯಪುರದಲ್ಲಿ ವಿಮಾನ ನಿಲ್ದಾಣ ಸ್ಥಾಪನೆಗೆ ಸತತ ಪ್ರಯತ್ನಿಸುತ್ತಿದ್ದಾರೆ. ಕಲಬುರಗಿ ಮಾದರಿಯಲ್ಲಿ ವಿಮಾನ ನಿಲ್ದಾಣ ಪ್ರಾಧಿಕಾರಕ್ಕೆ ವಿಜಯಪುರ ವಿಮಾನ ನಿಲ್ದಾಣ ಕಾಮಗಾರಿ ಹಸ್ತಾಂತರಿಸಿ ಕ್ರಮ ಕೈಗೊಳ್ಳುವಂತೆ ಸರ್ಕಾರಕ್ಕೆ ಜಿಗಜಿಣಗಿ ಪತ್ರಬರೆದಿದ್ದಾರೆ. ಈ ಕಾಮಗಾರಿಗೆ ರಾಜ್ಯ ಸರ್ಕಾರ ತನ್ನ ಪಾಲಿನ ಅನುದಾನ ಬಿಡುಗಡೆ ಮಾಡಿಲ್ಲ. ಹೀಗಾಗಿ ಈ ಯೋಜನೆ ನನೆಗುದಿಗೆ ಬಿದ್ದಿದೆ. ರನ್‌ವೇ ಕಾಮಗಾರಿಗಾದರೂ ಹಣ ಕೊಡಿ. ಉಡಾನ್‌ ಯೋಜನೆಯಲ್ಲಿ ವಿಜಯಪುರದಲ್ಲಿ ವಿಮಾನ ನಿಲ್ದಾಣಕ್ಕೆ ಶ್ರಮಿಸುತ್ತೇನೆ ಎಂದು ಜಿಗಜಿಣಗಿ ಪತ್ರ ಬರೆದರೂ ರಾಜ್ಯ ಸರ್ಕಾರ ಇದಕ್ಕೆ ಕಿಂಚಿತ್ತೂ ಸ್ಪಂದಿಸಿಲ್ಲ. ಆದರೂ ಈ ನಿಟ್ಟಿನಲ್ಲಿ ಪ್ರಯತ್ನ ಮುಂದುವರೆದಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

25000 ಕೋಟಿ ದಲಿತರ ಹಣ ಗ್ಯಾರಂಟಿಗೆ ಬಳಕೆ: ಸಚಿವ ಎಚ್‌.ಸಿ.ಮಹದೇವಪ್ಪ
Karnataka News Live: ಪ್ರೀತಿಯಿಂದ ಊಟಕ್ಕೆ ಕರೀತಾರೆ ಬೇಡ ಅನ್ನೋಕಾಗುತ್ತಾ: DCM ಡಿಕೆ ಶಿವಕುಮಾರ್