ರಾಹುಲ್ ಗಾಂಧಿ ಬಹಳ ಕಡೆ ಓಡಾಡಬೇಕು; ಅವರು ಓಡಾಡಿದಷ್ಟು ಬಿಜೆಪಿಗೆ ಲಾಭ: ಪ್ರಲ್ಹಾದ್ ಜೋಶಿ

By BK AshwinFirst Published Dec 25, 2022, 3:01 PM IST
Highlights

ನಾನು ಆನ್ ರೆಕಾರ್ಡ್ ಹೇಳ್ತೀನಿ, ಯಾರು ವಿಧಾನಸೌಧದಲ್ಲಿ ಭಾಷಣ ಮಾಡಿದಾರೋ ಅವರೇ ನಮಗೆ ಮಸೀದಿ ತಗೆಯೋಕೆ ಹೇಳಿದಾರೆ. ನಾವು ವಿರೋಧ ಮಾಡ್ತೀವಿ, ನೀವು ರಾತ್ರೋ ರಾತ್ರೀ ತಗೀರಿ ಎಂದು ಕಾಂಗ್ರೆಸ್ ನಾಯಕರೇ ನಮಗೆ ಹೇಳಿದ್ದಾರೆ ಎಂದು ಪ್ರಲ್ಹಾದ್‌ ಜೋಶಿ ಆರೋಪಿಸಿದ್ದಾರೆ. 

ಇವತ್ತು ಪ್ರಧಾನಿ ಮೋದಿ ಮನ್ ಕೀ ಬಾತ್‌ನಲ್ಲಿ  ಕರ್ನಾಟಕದ ಎರಡು ಘಟನೆಗಳನ್ನು ಉಲ್ಲೇಖ ಮಾಡಿರೋದು ಸಂತೋಷವಾಗಿದೆ. ಗದಗ ಹಾಗೂ ಶಿವಮೊಗ್ಗ ಘಟನೆ ಉಲ್ಲೇಖವಾಗಿರೋದು ಸಂತೋಷವಾಗಿದೆ ಎಂದು ಹುಬ್ಬಳ್ಳಿಯಲ್ಲಿ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಹೇಳಿದ್ದಾರೆ. ಇನ್ನು, ದೇಶದ  80 ಕೋಟಿ ಜನರಿಗೆ ಉಚಿತವಾಗಿ ಆಹಾರ ಕೊಡೋ ತೀರ್ಮಾನ ಮಾಡಲಾಗಿದೆ. MSP ಯಲ್ಲಿ ನಾವು ಕೊಬ್ಬರಿಗೆ ಬೆಂಬಲ ಬೆಲೆ ಘೋಷಣೆ ಮಾಡಿದ್ದೇವೆ. ಒಟ್ಟಾರೆ ಪ್ರಮುಖ ಮೂರು ವಿಷಯ ಒಳಗೊಂಡು ನಮ್ಮ ಸರ್ಕಾರ ಮಹತ್ವದ ತೀರ್ಮಾನ ‌ಮಾಡಿದೆ ಎಂದೂ ಕೆಂದ್ರ ಸಚಿವ ಪ್ರಲ್ಹಾದ್ ಜೋಶಿ ಹೇಳಿದ್ದಾರೆ. 

ಇನ್ನೊಂದೆಡೆ, ಕಾಂಗ್ರೆಸ್‌ನ ಭಾರತ್‌ ಜೋಡೋ ಯಾತ್ರೆಗೆ ಕೇಂದ್ರ ಸರ್ಕಾರ ಅಡ್ಡಿಪಡಿಸುತ್ತಿದೆ ಎಂಬ ಆರೋಪದ ಬಗ್ಗೆ ಮಾತನಾಡಿದ ಕೇಂದ್ರ ಸಚಿವರು, ನಾವು ಅವರಿಗೆ ಯಾತ್ರೆ ಸ್ಟಾಪ್‌ ಮಾಡಿ ಅಂತಾ ಹೇಳಿಲ್ಲ, ಕೋವಿಡ್ ನಿಯಮ ಪಾಲಿಸಿ ಎಂದು ಹೇಳಿದ್ದೇವೆ ಎಂದು ಸ್ಪಷ್ಟನೆ ನೀಡಿದ್ದಾರೆ. ಹಾಗೂ, ಭಾರತ್‌ ಜೋಡೋ ಯಾತ್ರೆ ಬಗ್ಗೆ ವ್ಯಂಗ್ಯವಾಡಿದ ಪ್ರಹ್ಲಾದ್‌ ಜೋಶಿ, ನಮ್ಮ ಬಲವಾದ ಆಸೆ ರಾಹುಲ್ ಗಾಂಧಿ ಬಹಳ ಕಡೆ ಓಡಾಡಬೇಕು. ಅವರು ಓಡಾಡಿದಷ್ಟು ಬಿಜೆಪಿಗೆ ಲಾಭ, ದಯಮಾಡಿ ಅವರು ಓಡಾಡಲಿ. ಆದರೆ, ಕೋವಿಡ್‌ ನಿಯಮ ಪಾಲಿಸಿ ಓಡಾಡಲಿ ಎಂದು ಹೇಳಿದ್ದಾರೆ. 

ಇದನ್ನು ಓದಿ: Dharwad News 30 ಗಂಟೆ ಕಾರ್ಯಾಚರಣೆ- ದರ್ಗಾ ತೆರವು ಪೂರ್ಣ

ಕೋವಿಡ್ ನೆಪದಲ್ಲಿ ಅವಧಿಪೂರ್ಣ ಚುನಾವಣೆ ಊಹಾಪೋಹ..!
ಇನ್ನು, ಕೋವಿಡ್ ನೆಪದಲ್ಲಿ ಅವಧಿಪೂರ್ಣ ಚುನಾವಣೆ ಉಹಾಪೋಹ ಎಂದೂ ಹುಬ್ಬಳ್ಳಿಯಲ್ಲಿ ಕೇಂದ್ರ ಸಚಿವ ಪ್ರಲ್ಹಾದ್‌ ಜೋಶಿ ಹೇಳಿದ್ದಾರೆ. ಹಾಗೂ, ಮಹಾದಾಯಿ ವಿಚಾರದಲ್ಲಿ ಫೇಲಾಗಿದ್ದು ಕಾಂಗ್ರೆಸ್, ಎಚ್ ಕೆ ಪಾಟೀಲ್ ಎಂದೂ ಜೋಶಿ ತರಾಟೆಗೆ ತೆಗೆದುಕೊಂಡಿದ್ದು, ಕೇಂದ್ರ,ರಾಜ್ಯದಲ್ಲಿ ಇವರದೇ ಸರ್ಕಾರ ಇತ್ತು ಯಾಕೆ ಮಾಡಲಿಲ್ಲ ಎಂದು ಪ್ರಶ್ನೆ ಮಾಡಿದ್ದಾರೆ. ಅಲ್ಲದೆ, ನಮ್ಮ ಸರ್ಕಾರದ ಮೇಲೆ ಸಂಪೂರ್ಣ ವಿಶ್ವಾಸ ಇದ್ದು,  DPR ಕ್ಲಿಯರ್ ಆಗತ್ತೆ. ಅದು ಗೊತ್ತಾಗಿ ಕ್ರೇಡಿಟ್ ತಗೋಳೋಕೆ ಕಾಂಗ್ರೆಸ್ ಸಮಾವೇಶ ಮಾಡುತ್ತಿದೆ ಎಂದೂ ಪ್ರಲ್ಹಾದ್‌ ಜೋಶಿ ಟೀಕೆ ಮಾಡಿದ್ದಾರೆ. 

ಸಿದ್ದರಾಮಯ್ಯ ವಿರುದ್ಧ ಜೋಶಿ ವಾಗ್ದಾಳಿ
ಈ ಮಧ್ಯೆ, ಬೈರಿದೇವರಕೊಪ್ಪ ದರ್ಗಾ ತೆರವು ವಿಚಾರವಾಗಿ ರಾಜಕೀಯ ಷಡ್ಯಂತ್ರ ಇದೆ ಎಂಬುದು ಬಹಳ ಹಾಸ್ಯಾಸ್ಪದ. ಯಾರ್ಯಾರು ವಿಧಾನಸೌಧದಲ್ಲಿ ಉದ್ದುದ್ದ ಭಾಷಣ ಮಾಡಿದಾರೆ ಅವರಿಗೆ ಹೇಳ್ತೀನಿ, BRTS ಡಿಸೈನ್ ಫಿಕ್ಸ್ ಆಗಿದ್ದು ಸಿದ್ದರಾಮಯ್ಯ ಕಾಲದಲ್ಲಿ. ಅಲ್ಲದೆ, ನಾನು ಸಿದ್ದರಾಮಯ್ಯರನ್ನ ಕೇಳ್ತೀನಿ, 13 ದೇವಸ್ಥಾನ ತಗೆದಾಗ ನಿಮಗೆ ಏನ್ ಆಗಿತ್ತು ಎಂದು ಸಿದ್ದರಾಮಯ್ಯ ವಿರುದ್ದ ಪ್ರಲ್ಹಾದ್‌ ಜೋಶಿ ವಾಗ್ದಾಳಿ ನಡೆಸಿದ್ದಾರೆ.

ಇದನ್ನೂ ಓದಿ: Hubballi: ಪೊಲೀಸ್ ಬಿಗಿ ಭದ್ರತೆಯಲ್ಲಿ ಬೈರಿದೇವರಕೊಪ್ಪ ದರ್ಗಾ ತೆರವು ಕಾರ್ಯಾಚರಣೆ ಆರಂಭ

ಇನ್ನು, ತುಷ್ಟೀಕರಣ ನೀತಿಯಿಂದ ಕಾಂಗ್ರೆಸ್ ವಿರೋಧ ಪಕ್ಷ ಆಗೋ ಯೋಗ್ಯತೆಯನ್ನು ಕಳೆದುಕೊಂಡಿದೆ. ದೇವಸ್ಥಾನ ತಗೆದಾಗ ನೀವ್ಯಾಕೆ ವಿಧಾನಸೌಧದಲ್ಲಿ ಪ್ರಸ್ತಾಪ ಮಾಡಲಿಲ್ಲ.
ಈವಾಗ ಯಾಕೆ ನೆನಪಾಯ್ತು. ನಾನು ಮುಸ್ಲಿಂರಿಗೆ ಹೇಳ್ತೀನಿ, ನಾವೆಲ್ಲ ಅಣ್ಣ ತಮ್ಮಂದಿರು, ನಿಮಗೆ ಇವರು ಮಿಸ್ ಗೈಡ್ ಮಾಡ್ತೀದಾರೆ ಎಂದೂ ಕೇಂದ್ರ ಸಚಿವರು ಹೇಳಿದ್ದಾರೆ.

ಹಾಗೂ, ನಾನು ಆನ್ ರೆಕಾರ್ಡ್ ಹೇಳ್ತೀನಿ, ಯಾರು ವಿಧಾನಸೌಧದಲ್ಲಿ ಭಾಷಣ ಮಾಡಿದಾರೋ ಅವರೇ ನಮಗೆ ಮಸೀದಿ ತಗೆಯೋಕೆ ಹೇಳಿದಾರೆ. ನಾವು ವಿರೋಧ ಮಾಡ್ತೀವಿ, ನೀವು ರಾತ್ರೋ ರಾತ್ರೀ ತಗೀರಿ ಎಂದು ಕಾಂಗ್ರೆಸ್ ನಾಯಕರೇ ನಮಗೆ ಹೇಳಿದ್ದಾರೆ. ಇದು ಕಾಂಗ್ರೆಸ್ ಇಬ್ಬಗೆಯ ನೀತಿ. ಅವರು ಸುಮ್ಮನೆ ಇದ್ರೆ ನಾನೇನೂ ಹೇಳ್ತಿರಲಿಲ್ಲ. ನಮಗೆ ಅಭಿವೃದ್ಧಿ ಆಗಬೇಕು ಅಂತಾ ಹೇಳಿ, ದರ್ಗಾ ತೆರವು ಮಾಡೋಕೆ ಕಾಂಗ್ರೆಸ್‌ನವರೇ ಹೇಳಿದ್ದಾರೆ. ಇಂತಹ ಜನರಿಂದ ದೇಶ ಉದ್ದಾರ ಆಗಲ್ಲ ಎಂದೂ ಕೇಂದ್ರ ಸಚಿವ ಪ್ರಲ್ಹಾದ್‌ ಜೋಶಿ ಹೇಳಿದ್ದಾರೆ.

ಇನ್ನೊಂದೆಡೆ, ನಾನು ದರ್ಗಾ ತೆರವು ಮಾಡಿ ಅಂತಾ ಹೇಳಿದ್ದೇನೆ. ಏಕೆಂದರೆ, ಅದು ಅಪಘಾತದ ಸ್ಥಳ ಆಗಿತ್ತು. ನನಗೇನು ಹೆದರಿಕೆ ಇಲ್ಲ. ದರ್ಗಾ ತೆರವು ಮಾಡಬೇಕು ಅನ್ನೋದು ನನ್ನ ಅಭಿಪ್ರಾಯ ಇತ್ತು. ದೇವಸ್ಥಾನ ತೆರವು‌ ಮಾಡೋವಾಗ ಜನ ನನ್ನ ಹತ್ರ ಬಂದಿದ್ರು, ನಾನು ಅವರನ್ನು ಮನವೊಲಿಸಿದೆ. ಆದ್ರೆ ಕಾಂಗ್ರೆಸ್‌ನವರು ನಮ್ಮ‌ ಹತ್ರ ದರ್ಗಾ ತೆರವು ಮಾಡಿ ಅಂತಾರೆ, ಅವರ ಹತ್ರ ಹೋಗಿ ವಿರೋಧ ಮಾಡಿ ಅಂತಾರೆ, ಇದು ಕಾಂಗ್ರೆಸ್ ಡಬಲ್ ಸ್ಟ್ಯಾಂಡರ್ಡ್ ಎಂದೂ ಹುಬ್ಬಳ್ಳಿಯಲ್ಲಿ ಕೇಂದ್ರ ಸಚಿವ ಪ್ರಲ್ಹಾದ್‌ ಜೋಶಿ ಟೀಕೆ ಮಾಡಿದ್ದಾರೆ. 

click me!