Assembly election: ಜನಾರ್ಧನರೆಡ್ಡಿಯನ್ನು ನಡುನೀರಲ್ಲಿ ಕೈಬಿಟ್ಟ ಶ್ರೀರಾಮುಲು: ಸಿದ್ದಾಂತವೇ ಮುಳುವಾಯ್ತಾ?

By Sathish Kumar KHFirst Published Dec 25, 2022, 3:56 PM IST
Highlights

ಬಿಜೆಪಿ ರಾಷ್ಟ್ರೀಯ ಪಕ್ಷವಾಗಿದ್ದು, ಇದಕ್ಕೆ ಹಿನ್ನಲೆ ಮತ್ತು ಸಿದ್ಧಾಂತ ಇದೆ. ಆದರೆ ಜನಾರ್ಧನ ರೆಡ್ಡಿ ಅವರ ಸಿದ್ಧಾಂತ ಬೇರೆ ಇದ್ದಾಗ ಹೇಗೆ ಮನವೊಲಿಸುವುದಕ್ಕೆ ಆಗುತ್ತದೆ? ಪರೋಕ್ಷವಾಗಿ ಮನವೊಲಿಸೋ ಕೆಲಸ ಮುಗಿದಿದೆ. ಜನಾರ್ಧನ ರೆಡ್ಡಿ ಅವರು ಒಳ್ಳೆಯದನ್ನೇ ಯೋಚನೆ ಮಾಡಿ ನಿರ್ಧಾರ ತೆಗೆದುಕೊಂಡಿರುತ್ತಾರೆ.

ಬಳ್ಳಾರಿ (ಡಿ.25):  ಬಿಜೆಪಿ ರಾಷ್ಟ್ರೀಯ ಪಕ್ಷ, ಪಕ್ಷಕ್ಕೆ ಹಿನ್ನಲೆ ಮತ್ತು ಸಿದ್ಧಾಂತ ಇದೆ. ಆದರೆ ಜನಾರ್ಧನ ರೆಡ್ಡಿ ಅವರ ಸಿದ್ಧಾಂತ ಬೇರೆ ಇದ್ದಾಗ ಹೇಗೆ ಮನವೊಲಿಸುವುದಕ್ಕೆ ಆಗುತ್ತದೆ? ಪರೋಕ್ಷವಾಗಿ ಮನವೊಲಿಸೋ ಕೆಲಸ ಮುಗಿದಿದೆ. ಜನಾರ್ಧನ ರೆಡ್ಡಿ ಅವರು ಒಳ್ಳೆಯದನ್ನೇ ಯೋಚನೆ ಮಾಡಿ ನಿರ್ಧಾರ ತೆಗೆದುಕೊಂಡಿರುತ್ತಾರೆ ಎಂದು ಸಾರಿಗೆ ಬಿ. ಶ್ರೀರಾಮುಲು ತಿಳಿಸಿದ್ದಾರೆ.

ರಾಜ್ಯ ರಾಜಕಾರಣದಲ್ಲಿ ಮಾಜಿ ಸಚಿವ ಜನಾರ್ಧನ ರೆಡ್ಡಿ ಅವರು ಹೊಸ ಇನ್ನಿಂಗ್ಸ್ ಆರಂಭಿಸಿ ಹೊಸ ಪಕ್ಷ ಘೋಷಣೆ ಮಾಡಿದ ನಂತರ ಮೊದಲ ಬಾರಿಗೆ ಪ್ರತಿಕ್ರಿಯೆ ನೀಡಿದ ಶ್ರೀರಾಮುಲು, ಜನಾರ್ದನ ರೆಡ್ಡಿ ಬುದ್ಧಿವಂತರು ಮತ್ತು ಎಲ್ಲವನ್ನೂ ತಿಳಿದವರು. ಅನುಭವ ಇದ್ದ ವ್ಯಕ್ತಿ ಇದ್ದಾರೆ.  ನಾನ್ನ ಪ್ರಾಣ ಸ್ನೇಹಿತನಾಗಿ ಜನಾರ್ದನ ರೆಡ್ಡಿ ಬಿಜೆಪಿ‌ಗೆ ದೊಡ್ಡ ಶಕ್ತಿಯಾಗಿದ್ದರು. ಜನಾರ್ದನ ರೆಡ್ಡಿಗೂ ಕೂಡ ಪಕ್ಷವು  ಶಕ್ತಿಯಾಗಿ ನಿಂತಿತ್ತು. ಅವರು ವೈಯಕ್ತಿಕವಾಗಿ‌ ಪಕ್ಷ ಮಾಡಿದ್ದಾರೆ. ಬಿಜೆಪಿ ಪಕ್ಷ ಅವರನ್ನು ಯಾವತ್ತು ಬಿಟ್ಟು ಕೊಟ್ಟಿಲ್ಲ. ಅವರು ಕೂಡ ಪಕ್ಷವನ್ನು ಯಾವತ್ತು ಬಿಟ್ಟು ಕೊಟ್ಟಿರಲಿಲ್ಲ ಎಂದು ಹೇಳಿದರು.

ಜನಾರ್ದನ ರೆಡ್ಡಿಯನ್ನು ಪಕ್ಷದಲ್ಲೇ ಉಳಿಸಿಕೊಳ್ಳಲು ಯತ್ನ: ಸಚಿವ ಶ್ರೀರಾಮುಲು

ಪಕ್ಷದ ಸಿದ್ಧಾಂತ ಬೇರೆಯಾಗಿದೆ: ಇನ್ನು ಬಿಜೆಪಿ ರಾಷ್ಟ್ರೀಯ ಪಕ್ಷವಾಗಿದ್ದು, ಇಲ್ಲಿ ತನ್ನದೇ ಆದ ಸಿದ್ದಾಂತಗಳು ಇವೆ. ಆದರೆ, ಈ ಸಿದ್ಧಾಂತಕ್ಕೂ ರೆಡ್ಡಿ ಅವರ ಸಿದ್ಧಾಂತಕ್ಕೂ ತಾಳೆ ಆಗುತ್ತಿಲ್ಲ. ಆದರೆ ಜನಾರ್ಧನ ರೆಡ್ಡಿ ಅವರ ಸಿದ್ಧಾಂತ ಬೇರೆ ಇದ್ದಾಗ ಹೇಗೆ ಮನವೊಲಿಸುವುದಕ್ಕೆ ಆಗುತ್ತದೆ? ಪರೋಕ್ಷವಾಗಿ ಮನವೊಲಿಸೋ ಕೆಲಸ ಮುಗಿದಿದೆ. ನಾನು ಪಕ್ಷದ ಶಿಸ್ತಿನ ಸಿಪಾಯಿ ನಾನು. ಕಾಲ ಬಂದಾಗ ಎಲ್ಲವುದಕ್ಕೂ ಉತ್ತರ ಕೊಡುತ್ತೇನೆ. ಹೊಸ ಪಕ್ಷ ಒಳೆಯದು, ಕೆಟ್ಟದು ಎಂದು ಅನಾಲಿಸಿಸ್ ಮಾಡುವುದಿಲ್ಲ. ಇ ಬಗ್ಗೆ ಡಿಬೆಟ್ ಮಾಡಲು ನನಗೆ ಇಷ್ಟವಿಲ್ಲ ಎಂದು ತಿಳಿಸಿದರು.

ಬಿಜೆಪಿ ಮೇಲೆ ಪ್ರಭಾವ ಬೀರುವುದಿಲ್ಲ: ರೆಡ್ಡಿ ಒಳ್ಳೆಯದನ್ನೇ ಯೋಚನೆ ಮಾಡಿ ನಿರ್ಧಾರ ತೆಗೆದುಕೊಂಡಿರುತ್ತಾರೆ. ಹೊಸ ಪಕ್ಷದಿಂದ ನಮ್ಮ ಪಕ್ಷದ ಮೇಲೆ ಯಾವುದೇ ಪ್ರಭಾವ ಬೀಳುವುದಿಲ್ಲ. ರಾಜಕಾರಣ ಮತ್ತು ಸ್ನೇಹ ಬೇರೆ ಇದೆ. ಸ್ನೇಹಿತರಾಗಿ ನಾವು ಮುಂದುವರೆಯತ್ತೇವೆ. ರೆಡ್ಡಿಯವರೊಂದಿಗೆ ನಮ್ಮ ಎಲ್ಲಾ ನಾಯಕರು, ಎಲ್ಲಾ ಸಂದರ್ಭದಲ್ಲಿ ನಿಂತಿದ್ದರು. ಆದರೆ ಅವರೀಗ ಪಕ್ಷ ಮಾಡಿದ್ದಾರೆ ಈ ಬಗ್ಗೆ ಹೆಚ್ಚೇನು ಹೇಳಲಾಗದು. ಕಾರ್ಯಕರ್ತರು ಬಿಜೆಪಿಯಲ್ಲಿಯೇ ಇದ್ದು ಕೆಲಸ ಮಾಡುತ್ತಾರೆ ಎಂದು ತಿಳಿಸಿದರು.

Assembly election:ಬಿಜೆಪಿಯ ಕುತಂತ್ರ ಬಯಲಿಗೆಳೆಯುತ್ತೇನೆ: ಹೊಸ ಪಕ್ಷ ಘೋಷಣೆ ಬೆನ್ನಲ್ಲೇ ಬಾಂಬ್‌ ಹಾಕಿದ ರೆಡ್ಡಿ

ಬಿಜೆಪಿಯಲ್ಲಿ ಉಳಿಸಿಕೊಳ್ಳುವ ಪ್ರಯತ್ನ- ಮಾಧುಸ್ವಾಮಿ: ಜನಾರ್ಧನರೆಡ್ಡಿ ಹೊಸ ಪಕ್ಷ ಘೋಷಣೆ ಮಾಡ್ತಾರೆ ಅಂತಾ ಒಂದು ವಾರದಿಂದ ಸುದ್ದಿಯಲ್ಲಿತ್ತು. ಆದರೆ, ಹೊಸ ಪಕ್ಷ ಮಾಡಿದ್ದಾರೆ ಅಂತಾ ತಾವು ಹೇಳ್ತಾ ಇದ್ದೀರಿ. ಇದರಿಂದ ನನಗೆ ಆಶ್ಚರ್ಯ ಆಗಿದೆ. ಅವರನ್ನ ಪಕ್ಷದಲ್ಲಿ ಉಳಿಸಿಕೊಳ್ಳುವ ಪ್ರಯತ್ನ ಮಾಡ್ತೀವಿ. ಯಾಕಂದ್ರೆ ರಾಜಕಾರಣದಲ್ಲಿ, ಯಾವುದೇ ರಾಜ್ಯದಲ್ಲಿ ಎರಡು ಮೂರು ಪಕ್ಷ ಮೀರಿ ಬೇರೆ ಪಕ್ಷಗಳು ಅಷ್ಟೊಂದು ಸ್ವಾಭಾವಿಕವಾಗಿ ಬೆಳವಣಿಗೆಯನ್ನ ಕಾಣ್ತಾ ಇಲ್ಲ. ಅದು ಯಾವ ಉದ್ದೇಶಕ್ಕೆ ಅವ್ರು ಇನ್ನೊಂದು ಪಕ್ಷ ಮಾಡಲಿಕ್ಕೆ ಹೊರಟರೋ ನಮಗೆ ಗೊತ್ತಿಲ್ಲ. ಜನಾರ್ಧನರೆಡ್ಡಿ ನಮಗೆ ಒಳ್ಳೆಯ ಸ್ನೇಹಿತರು ಆಗಿದ್ದಾರೆ. ನಾವು ಅವರೊಂದಿಗೆ ಕುಳಿತುಕೊಂಡು ಮಾತನಾಡಿ ಹೊಸ ಪಕ್ಷ ಸ್ಥಾಪನೆಯ ಬಗ್ಗೆ ಮಾತನಾಡಿ ಕಾರಣವನ್ನು ಲೇಖುತ್ತೇವೆ. ಅವರ ಆಶಯ ಏನಿದೆ ಅಂತಾ ಗೊತ್ತಿಲ್ಲ. ಆದರೆ, ಇದು ನಮ್ಮ ದೃಷ್ಟಿಯಲ್ಲಿ ಒಳ್ಳೆಯ ಬೆಳವಣಿಗೆ ಅಲ್ಲ. ಪಕ್ಷ ಸ್ಥಾಪನೆ ಬಗ್ಗೆ ನಂಗೆ ಗೊತ್ತಿಲ್ಲ, ಇವತ್ತು ಹೇಳಿದಿರಿ, ನಾಳೆಯಿಂದ ಪ್ರಯತ್ನ ಮಾಡಿ ಅವರನ್ನ ಪಕ್ಷದಲ್ಲಿ ಉಳಿಸಿಕೊಳ್ಳುವ ಪ್ರಯತ್ನ ಮಾಡ್ತೀವಿ ಎಂದು ಕಾನೂನು ಸಚಿವ ಮಾಧುಸ್ವಾಮಿ ತಿಳಿಸಿದರು.

ಜನಾರ್ಧನ ರೆಡ್ಡಿ ಭ್ರಮಾಲೋಕದಲ್ಲಿದ್ದಾರೆ-ರೇಣುಕಾಚಾರ್ಯ:  ಹೊನ್ನಾಳಿಯಲ್ಲಿ ಸಿಎಂ ರಾಜಕೀಯ ಕಾರ್ಯದರ್ಶಿ ಎಂ ಪಿ ರೇಣುಕಾಚಾರ್ಯ ಮಾತನಾಡಿ, ಜನಾರ್ಧನ ರೆಡ್ಡಿ ಹೊಸ ಪಕ್ಷ ಘೋಷಣೆಯ ಬಗ್ಗೆ ಅವರೇ ಆತ್ಮವಲೋಕನ ಮಾಡಿಕೊಳ್ಳಬೇಕು. ಇದರಿಂದ ಅವರ ವರ್ಚಸಿಗ್ಗೆ ದಕ್ಕೆ ಬರುತ್ತದೆ. ಬಿಜೆಪಿ ಜನಾರ್ಧನ ರೆಡ್ಡಿ ಅವರಿಗೆ ಎಲ್ಲವನ್ನೂ ನೀಡಿದೆ. ಕಾಂಗ್ರೆಸ್  ಸರ್ಕಾರ ರೆಡ್ಡಿಯನ್ನು ಬಂಧಿಸಿದೆ. ಆಗ ಬಿಜೆಪಿ ಸರ್ಕಾರ ಇರಲಿಲ್ಲ. ಕರುಣಾಕರರೆಡ್ಡಿ, ಸೋಮಶೇಖರ್ ರೆಡ್ಡಿಗೆ ಎಲ್ಲವನ್ನು ನೀಡಿರುವುದು ಕೂಡ ನಮ್ಮ ಬಿಜೆಪಿ ಪಕ್ಷವಾಗಿದೆ ಎಂದು ರೇಣುಕಾಚಾರ್ಯ ತಿಳಿಸಿದರು.

Assembly election: ಜನಾರ್ಧನರೆಡ್ಡಿ ಹೊಸ ಪಕ್ಷದ ನಿರ್ಧಾರ ವಾಪಸ್‌ ಪಡೆಯಲಿ: ಸಚಿವ ಸುಧಾಕರ್ ಮನವಿ

ಬ್ಲಾಕ್ ಮೇಲ್ ರಾಜಕಾರಣ ನಡೆಯೋಲ್ಲ: ಜನಾರ್ಧನ ರೆಡ್ಡಿಯವರು ಭ್ರಮಾಲೋಕದಲ್ಲಿದ್ದಾರೆ. ಇವತ್ತು ಬಿಜೆಪಿ ಕರ್ನಾಟಕದಲ್ಲಿ ಸಧೃಡವಾಗಿದೆ ಮತ್ತೆ ಹೆಚ್ಚು ಸೀಟು ಗೆದ್ದು ಅಧಿಕಾರಕ್ಕೆ ಬಂದೇಬರುತ್ತದೆ. ಜನಾರ್ಧನ ರೆಡ್ಡಿ ವಿನಾಃ ಕಾರಣ ಪಾರ್ಟಿ ಕಟ್ಟಿದರೆ ಯಾರು ಬಗ್ಗುವುದಿಲ್ಲ. ಕೇಂದ್ರದ ವರಿಷ್ಠರ ನಿರ್ಧಾರದಂತೆ ಸಿದ್ಧತೆಗಳು ನಡೆದಿವೆ. ಇಂತಹ ನೂರು ಜನ ಪಾರ್ಟಿ ಕಟ್ಟಿದರು ಬಿಜೆಪಿಗೆ ಏನು ಆಗೋಲ್ಲ. ಇಂತಹ ಬ್ಲಾಕ್ ಮೇಲ್ ರಾಜಕಾರಣ ನಡೆಯೋಲ್ಲ ಎಂದು ಟಾಂಗ್ ನೀಡಿದ ಮುಖ್ಯಮಂತ್ರಿಗಳ ಆಪ್ತ ಕಾರ್ಯದರ್ಶಿ ಎಂ.ಪಿ. ರೇಣುಕಾಚಾರ್ಯ ತಿಳಿಸಿದರು.

click me!