ಏಯ್.. ಸುಮ್ನ್ ಕುಂದ್ರ.. ನೀನ್ ಗುಂಡ್ ಹಾಕ್ಕೊಬಂದ್ ನಮಗ ಗುಂಡ್ ಹಾರಿಸೋಂಗ್ ಮಾಡಬ್ಯಾಡ!

By Sathish Kumar KH  |  First Published May 1, 2023, 8:24 PM IST

ಏಯ್.. ಸುಮ್ನ್ ಕುಂದ್ರ.. ನೀನ್ ಗುಂಡ್ ಹಾಕ್ಕೊಬಂದ್ ನಮಗ ಗುಂಡ್ ಹಾರಿಸೋಂಗ್ ಮಾಡಬ್ಯಾಡ. ನಾನು ಹೇಳ್ತಿರೊ‌ ಗುಂಡೇ ಬ್ಯಾರೆ, ನೀನು ಹಾಕ್ಕೊಂಬಂದಿರೋ ಗುಂಡೇ ಬೇರೆ. 


ಹುಬ್ಬಳ್ಳಿ (ಮೇ 1): ಚುನಾವಣಾ ಪ್ರಚಾರ ಭಾಷಣದ ವೇಳೆ ಅಡ್ಡಿಯನ್ನುಂಟು ಮಾಡಿದ ಮದ್ಯವಸನಿಗೆ, ಏಯ್.. ಸುಮ್ನ್ ಕುಂದ್ರ.. ನೀನ್ ಗುಂಡ್ ಹಾಕ್ಕೊಬಂದ್ ನಮಗ ಗುಂಡ್ ಹಾರಿಸೋಂಗ್ ಮಾಡಬ್ಯಾಡ. ನಾನು ಹೇಳ್ತಿರೊ‌ ಗುಂಡೇ ಬ್ಯಾರೆ, ನೀನು ಹಾಕ್ಕೊಂಬಂದಿರೋ ಗುಂಡೇ ಬೇರೆ ಎಂದು ಶಾಸಕ ಬಸವನಗೌಡ ಪಾಟೀಲ್‌ ಯತ್ನಾಳ್‌ ಕಿಡಿಕಾರಿದರು.

ಗಡಿಯಲ್ಲಿ ಯೋಧರು ಇರೋದ್ರಿಂದ ನಾವೆಲ್ಲಾ ಇಲ್ಲಿ ಸುರಕ್ಷಿತವಾಗಿ ಇದ್ದೇವೆ. ಅವರು ವಿರೋಧಿ ಸೈನ್ಯದ ಮೇಲೆ‌ ಗುರಿ ಇಟ್ಟು ಕಾಯ್ತಿರೊದ್ರಿಂದ ನಾವು ಆರಾಮಾಗಿದ್ದೇವೆ ಎಂದು ಹೇಳಿದರು. ಆದರೆ, ಈ ವೇಳೆ ಮಧ್ಯಪ್ರವೇಶ ಮಾಡಿದ ಕುಡುಕ ಜೋರಾಗಿ ಮಾತನಾಡಲು ಆರಂಭಿಸಿದನು. ಇದರಿಂದ ಕೋಪಗೊಂಡ ಶಾಸಕ ಬಸವನಗೌಡ ಪಾಟೀಲ್‌ ಯತ್ನಾಳ್‌, ಏಯ್.. ಸುಮ್ನ್ ಕುಂದ್ರ.. ನೀನ್ ಗುಂಡ್ ಹಾಕ್ಕೊಬಂದ್ ನಮಗ ಗುಂಡ್ ಹಾರಿಸೋಂಗ್ ಮಾಡಬ್ಯಾಡ. ನಾನು ಹೇಳ್ತಿರೊ‌ ಗುಂಡೇ ಬ್ಯಾರೆ, ನೀನು ಹಾಕ್ಕೊಂಬಂದಿರೋ ಗುಂಡೇ ಬೇರೆ ಎಂದು ಹಾಸ್ಯ ಚಟಾಕಿ‌ ಹೇಳುವ ಮೂಲಕ ಕುಡುಕನ‌ ಬಾಯಿ ಮುಚ್ಚಿಸಿದರು. 

Tap to resize

Latest Videos

ಮೋದಿ ನಾಲಾಯಕ್! ಮಲ್ಲಿಕಾರ್ಜುನ ಖರ್ಗೆ ಬೆನ್ನಲ್ಲೇ ವಿವಾದ ಸೃಷ್ಟಿಸಿದ ಮಗನ ಹೇಳಿಕೆ!

ಜಮ್ಮು ಕಾಶ್ಮೀರದಲ್ಲಿ ಕಲ್ಲು ಹೊಡೆಯುವ ನಾಯಿಗಳೆಲ್ಲಾ ಗಪ್ ಆಗಿವೆ. ಪಾಕಿಸ್ತಾನದ ಪರ ಘೋಷಣೆ ಕೂಗ್ತಿದ್ದ ಹಂದಿಗಳೆಲ್ಲಾ ಸುಮ್ಮನಾಗಿವೆ. ಮೊದಲು ನಮ್ಮ ಸೈನಿಕರ ಮೇಲೆ ಕಲ್ಲೆಸೆಯುತ್ತಿದ್ದರು. 370 ಕಲಂ ವಾಪಸ್ ಪಡೆದ ನಂತರ ಎಲ್ಲರ ಸದ್ದಡಗಿದೆ. ದೇಶದ ಈ ಸ್ಥಿತಿಗೆ ಜವಹರಲಾಲ್ ನೆಹರೂ ಕಾರಣ. ನೆಹರೂ ಮಾಡಿದ ತಪ್ಪಿನಿಂದ ಭಾರತಕ್ಕೆ ಈ ಪರಿಸ್ಥಿತಿ ಬಂದಿದೆ. ಸ್ವಾರ್ಥಕ್ಕಾಗಿ ಕಾಶ್ಮೀರಕ್ಕೆ 370 ವಿಶೇಷ ಸ್ಥಾನಮಾನ‌ ಕಲ್ಪಿಸಿ ಕೊಟ್ಟರು. ಅರ್ಧ ಕಾಶ್ಮೀರ ಪಾಕಿಸ್ತಾನಕ್ಕೆ, ಮತ್ತರ್ಧ ಕಾಶ್ಮೀರ ಭಾರಕ್ಕೆ ಹೋಯಿತು ಎಂದು ಹೇಳಿದರು.

ಇನ್ನು ನಮ್ಮ ದೇಶದಲ್ಲಿ ವಲ್ಲಭಬಾಯಿ ಪಟೇಲ್ ಇಲ್ಲದೆ ಇದ್ದರೆ ಹೈದರಾಬಾದ್ ಮತ್ತೊಂದು ಪಾಕಿಸ್ತಾನ ಆಗ್ತಿತ್ತು. ಇದು ನಕಲಿ ಗಾಂಧಿಗಳ ಕಾಂಗ್ರೆಸ್. ಇಂದಿರಾಗಾಂಧಿ ವರ್ಜಿನಲ್ ಗಾಂಧಿಯೇ ಅಲ್ಲ. ಯಾವುದೋ ಖಾನ್ ಗಳ ಕಂಪನಿ. ಇಟಲಿ ಪ್ರೊಡಕ್ಟ್, ಖಾನ್ ಪ್ರೊಡಕ್ಟ್, ಎಲ್ಲವೂ ಮಿಕ್ಸ್ಡ್ ಪ್ರೊಡಕ್ಟ್ ಆಗಿದೆ. ಇವರೆಲ್ಲಾ ಬಂದು ದೇಶ ಹಾಳು ಮಾಡಿದರು ಎಂದು ಹೇಳುವ ಮೂಲಕ ಕಾಂಗ್ರೆಸ್ ನಾಯಕರ ವಿರುದ್ಧ ಶಾಸಕ ಬಸವನಗೌಡ ಪಾಟೀಲ್‌  ಯತ್ನಾಳ ವಾಗ್ದಾಳಿ ನಡೆಸಿದರು.

ಕ್ವಾಂಯ್ಕ್ ಅಂದ್ರೆ ಎನ್ ಕೌಂಟರ್:  ಬಿಜೆಪಿ ಅಧಿಕಾರಕ್ಕೆ ಬಂದರೆ ಉತ್ತರ ಪ್ರದೇಶ ಮಾದರಿಯ ಸರ್ಕಾರ ರಾಜ್ಯದಲ್ಲಿ ಜಾರಿಗೊಳಿಸಲಾಗುತ್ತದೆ. ಕ್ವಾಂಯ್ಕ್ ಅಂದ್ರೆ ಎನ್ ಕೌಂಟರ್, ಭಾರತದ ವಿರುದ್ಧ ಮಾತಾಡಿದ್ರೆ ಢಂ ಢಂ, ರೋಡ್ ಮೇಲೆಯೇ ಡಿಷ್ಕ್ಯಾಂ.. ಮುಂದೆ ರಾಜ್ಯದಲ್ಲಿಯೂ ಇದೇ ವ್ಯವಸ್ಥೆ ಜಾರಿಗೆ ಬರುತ್ತದೆ. ಬಿಜೆಪಿ ಅಧಿಕಾರಕ್ಕೆ ಬಂದ್ರೆ ಯುಪಿ ಯ ಯೋಗಿ ಮಾದರಿ ಜಾರಿಗೆ ಬರಲಿದೆ. ಯುಪಿ ಯಲ್ಲಿ ಇಬ್ಬರು ಅಣ್ಣತಮ್ಮಂದಿರ ಎನ್ ಕೌಂಟರ್ ಆಯ್ತು. ಹೀಗಾಗಿ ಕೆಲವರು ಜೈಲಿನಿಂದ ಹೊರಗೆ ಬರೋಕು ಹೆದ್ರಿತಿದಾರೆ. ಯುಪಿ ಯಲ್ಲಿ ವಾಹನಗಳು ಪಲ್ಟಿಯಾಗುತ್ತಲೆ ಇರುತ್ತವೆ. ರೌಡಿಗಳ ಹರಣವಾಗುತ್ತಲೇ ಇರುತ್ತದೆ. ಹಂಗೆ ಕರ್ನಾಟಕದಲ್ಲಿ ಯಾರಾದ್ರೂ ಹಾರಾಡಿದ್ರೆ ಎನ್ ಕೌಂಟರ್ ಖಚಿತ. ಹಿಂದೂಗಳ ಬಗ್ಗೆ, ದೇಶದ ಬಗ್ಗೆ ಮಾತಾಡಿದ್ರೆ ಢಂ ಢಂ ಖಚಿತವೆಂದು ಹೇಳಿದರು.

ಬೆಳಗಾವಿ ಯುವಕನ ಬರ್ಬರ ಕೊಲೆ: ಚಿತ್ರನಟ ಸುದೀಪ್‌ ರೋಡ್‌ ಶೋ ರದ್ದು

ಟಿಪ್ಪು ಸುಲ್ತಾನ್‌ ಹರಾಮ್‌ ಕೋರ್‌: ಮೈಸೂರು ಸಂಸ್ಥಾನದ ಅಧಿಕಾರ ಕಿತ್ತುಕೊಂಡಿದ್ದ ಟಿಪ್ಪು ಸುಲ್ತಾನ ಹರಾಂ ಕೋರ್ ಆಗಿದ್ದಾನೆ. ಯಾವ ಟಿಪ್ಪು ಸುಲ್ತಾನ ಅದಾನಲ್ರೀ ಅವ ಲಕ್ಷಾಂತರ ಹಿಂದೂಗಳನ್ನ ಕೊಂದಿದ್ದಾನೆ. ನಮ್ಮ ಸರ್ಕಾರ ಬಂದ್ರೆ ಅವನ ಫೋಟೋ ತಗೆದು ಸಂಗೊಳ್ಳಿ ರಾಯಣ್ಣ, ಬಾಬಾ ಸಾಹೇಬ್ ಅಂಬೇಡ್ಕರ್ ಫೋಟೋ ಹಾಕ್ತೀವಿ ಎಂದು ಶಾಸಕ ಬಸವನಗೌಡ ಪಾಟೀಲ್‌ ಯತ್ನಾಳ್‌ ಹೇಳಿದರು.

click me!