ನನ್ನ ಟಿಕೆಟ್‌ ಕೊಡೋದು ಸಿಎಂ ಬೊಮ್ಮಾಯಿ ಕೈಯಲ್ಲಿಲ್ಲ: ಶಾಸಕ ಯತ್ನಾಳ

By Govindaraj S  |  First Published Jan 15, 2023, 1:00 AM IST

ಎಲ್ಲರನ್ನೂ ಎಲ್ಲಾ ಕಾಲದಲ್ಲಿ ಮೋಸ ಮಾಡಲು ಸಾಧ್ಯವಿಲ್ಲ. ನನ್ನ ಟಿಕೆಟ್‌ ಕೊಡೋದು ನಿಮ್ಮ ಕೈಯಲ್ಲಿಲ್ಲ ಬೊಮ್ಮಾಯಿಯವರೇ, ಟಿಕೆಟ್‌ ಕೊಡುವವರು ಮೇಲಿದ್ದಾರೆ. ನೀವು ವಿಧಾನಸೌಧದಲ್ಲಿ ಇರುತ್ತೀರೋ ಗೊತ್ತಿಲ್ಲ, ನಾನು ಇರುತ್ತೇನೆ. ಹೀಗೆಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ವಿರುದ್ಧವೇ ಆಕ್ರೋಶ ಹೊರಹಾಕಿದವರು ವಿಜಯಪುರ ಶಾಸಕ ಬಸನಗೌಡ ಪಾಟೀಲ ಯತ್ನಾಳ.


ಶಿಗ್ಗಾಂವಿ (ಜ.15): ಎಲ್ಲರನ್ನೂ ಎಲ್ಲಾ ಕಾಲದಲ್ಲಿ ಮೋಸ ಮಾಡಲು ಸಾಧ್ಯವಿಲ್ಲ. ನನ್ನ ಟಿಕೆಟ್‌ ಕೊಡೋದು ನಿಮ್ಮ ಕೈಯಲ್ಲಿಲ್ಲ ಬೊಮ್ಮಾಯಿಯವರೇ, ಟಿಕೆಟ್‌ ಕೊಡುವವರು ಮೇಲಿದ್ದಾರೆ. ನೀವು ವಿಧಾನಸೌಧದಲ್ಲಿ ಇರುತ್ತೀರೋ ಗೊತ್ತಿಲ್ಲ, ನಾನು ಇರುತ್ತೇನೆ. ಹೀಗೆಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ವಿರುದ್ಧವೇ ಆಕ್ರೋಶ ಹೊರಹಾಕಿದವರು ವಿಜಯಪುರ ಶಾಸಕ ಬಸನಗೌಡ ಪಾಟೀಲ ಯತ್ನಾಳ. ಪಂಚಮಸಾಲಿ ಮೀಸಲಾತಿ ಹೋರಾಟದಲ್ಲಿ ಮಾತನಾಡಿದ ಅವರು, ಎರಡು ವರ್ಷಗಳಿಂದ 2ಎ ಮೀಸಲಾತಿಗಾಗಿ ಹೋರಾಟ ಮಾಡುತ್ತಿದ್ದೇವೆ. ಯಡಿಯೂರಪ್ಪ ಅವರಂತೆ ಬೊಮ್ಮಾಯಿ ಸುಳ್ಳು ಹೇಳುವುದಿಲ್ಲ ಎಂದುಕೊಂಡಿದ್ದೆವು. 

ಇಬ್ಬರೂ ಸುಳ್ಳು ಹೇಳಿದ್ದಾರೆ. ಇಬ್ಬರೂ ಚುನಾವಣೆಗೆ ಹೇಗೆ ಸಂಚಾರ ಮಾಡುತ್ತೀರಿ ನೋಡೋಣ. 150 ಕ್ಷೇತ್ರಗಳಲ್ಲಿ ಗೆಲ್ಲುತ್ತೇವೆ ಎನ್ನುತ್ತಾರೆ, ಗೆಲ್ಲಿ ನೋಡೋಣ. ಸುಳ್ಳು ಹೇಳಿ ಯಡಿಯೂರಪ್ಪ ಅಧಿಕಾರ ಕಳೆದುಕೊಂಡರು. ನೀವೂ ಕಳೆದುಕೊಳ್ಳುತ್ತೀರಿ. ಸಿಎಂ ವಿಶೇಷ ವಿಮಾನದಲ್ಲಿ ಓಡಾಡಿದ್ದು ಬಿಟ್ಟರೆ ಏನೂ ಮಾಡಿಲ್ಲ. ಇತಿಹಾಸದಲ್ಲಿ ಸ್ಪೆಶಲ್‌ ವಿಮಾನದಲ್ಲಿ ಓಡಾಡಿದ ಮುಖ್ಯಮಂತ್ರಿ ಯಾರೂ ಇಲ್ಲ ಎಂದು ವಾಗ್ದಾಳಿ ನಡೆಸಿದರು. ಯತ್ನಾಳಗೆ ಟಿಕೆಟ್‌ ಕೊಡಿಸಲ್ಲ, ಅವನನ್ನು ಸೋಲಿಸುತ್ತೇವೆ ಎಂದು ಮಂತ್ರಿಯೊಬ್ಬ ಹೇಳಿದ್ದಾನೆ. ನಿನ್ನಂತೆ ಚಿಲ್ಲರೆ ಕೆಲಸ ಮಾಡಲ್ಲ. ಧಮ್‌ ಇದ್ದರೆ ಅಖಾಡಕ್ಕೆ ಬರಲಿ, ಬೊಮ್ಮಾಯಿಯವರೇ ಇನ್ನು ಮುಂದೆ ನಾವು ನಿಮ್ಮ ಬಳಿ ಬರುವುದಿಲ್ಲ. 2ಡಿ, 2ಸಿ ಯಾವುದೂ ಇಲ್ಲ. 

Tap to resize

Latest Videos

undefined

ಚಿತ್ರದುರ್ಗ ಜಿಲ್ಲೆಯ 6 ಕ್ಷೇತ್ರಗಳನ್ನು ಗೆಲ್ಲೋಣ: ಶಾಸಕ ತಿಪ್ಪಾರೆಡ್ಡಿ

ಬರೀ ಸಿಡಿಗಳೇ ಇದ್ದಾವೆ. ಸಿಡಿ ಬಾಬಾಗಳು ಇದ್ದಾರೆ. ಅಂಥವರನ್ನೇ ಬೊಮ್ಮಾಯಿ ಕರೆದುಕೊಂಡು ಅಡ್ಡಾಡುತ್ತಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಸಂಪುಟ ಸಭೆಯಲ್ಲಿ ಠರಾವು ಇಲ್ಲ, ಕ್ಯಾಬಿನೆಟ್‌ ನಿರ್ಣಯ ತೋರಿಸಿ. ಸ್ವಾಮೀಜಿ ಹೆಚ್ಚು ಮಾತನಾಡಿದರೆ ಸಾಕು, ನಿಮ್ಮ ಗುರುಗಳದ್ದು ಸಿಡಿ ಇದೆ ಅಂದರು. ಸಿಡಿ ಅಂತ ಹೇಳಿದರೆ ಹೆದರಬೇಡಿ ಎಂದು ನಾನು ಅಂದಿದ್ದೆ. ಇವರದ್ದು ಸಿಡಿ ಫ್ಯಾಕ್ಟರಿಯೇ ಇದೆ. ತಾಯಿ ಆಣೆ ಮಾಡಿದ್ದೇನೆ ಎಂದು ಬೊಮ್ಮಾಯಿ ಹೇಳಿದಾಗಲೇ ಸಂಶಯ ಬಂದಿತ್ತು. ಅಂದು ಏನಾದರೂ ಸುವರ್ಣಸೌಧಕ್ಕೆ ಮುತ್ತಿಗೆ ಹಾಕಿದ್ರೆ ನೀವು ಯಾರೂ ಹೊರಗೆ ಬರುತ್ತಿರಲಿಲ್ಲ. ಮತ್ತೊಂದು ನರಗುಂದ ಬಂಡಾಯ ಆಗುತ್ತಿತ್ತು. ನೀವು ರಾಜೀನಾಮೆ ಕೊಡಬೇಕಾಗುತ್ತಿತ್ತು ಎಂದು ಹೇಳಿದರು.

ಮಾಜಿ ಶಾಸಕ ವಿಜಯಾನಂದ ಕಾಶಪ್ಪನವರ ಮಾತನಾಡಿ, ಇದು 6 ಸಲ ಸುಳ್ಳು ಹೇಳಿದ ಸರ್ಕಾರ. ನಮ್ಮನ್ನು ಕರೆಯುವುದು, ತಿಂಡಿ ತಿನ್ನಿಸುವುದು, ಮೀಸಲಾತಿ ಬೇಗ ಕೊಡಿಸುತ್ತೇನೆ ಎಂದು ಸುಳ್ಳು ಹೇಳಿದರು. ಸದನದಲ್ಲಿ ಮೀಸಲಾತಿ ಕೊಡುತ್ತೇನೆ ಎಂದು ಮಾತು ಕೊಟ್ಟು ಯಡಿಯೂರಪ್ಪ ಮೋಸ ಮಾಡಿದರು. ಸ್ವಾಮೀಜಿ ಶಾಪದಿಂದಲೇ ಯಡಿಯೂರಪ್ಪ ಅಧಿಕಾರ ಕಳೆದುಕೊಂಡರು. ಬೊಮ್ಮಾಯಿಯವರೇ ನಿಮಗೂ ಕುರ್ಚಿ ಶಾಶ್ವತವಲ್ಲ. ಈ ಕ್ಷೇತ್ರದಿಂದ ನಿಮ್ಮನ್ನು ಕಳುಹಿಸದೇ ನಾವು ಬಿಡಲ್ಲ. ಇಂದಿನ ಹೋರಾಟಕ್ಕೆ ಬರದಂತೆ ಬೊಮ್ಮಾಯಿ ಜನರಿಗೆ ಬೆದರಿಕೆ ಹಾಕಿದ್ದಾರೆ. ಸರ್ಕಾರಕ್ಕೆ ನ್ಯಾಯಾಲಯ ಛೀಮಾರಿ ಹಾಕಿದೆ. ಮಾತೆತ್ತಿದರೆ ಬೊಮ್ಮಾಯಿ ಸುಳ್ಳು ಹೇಳುತ್ತಿದ್ದಾರೆ. ಅವರು ಮೀಸಲಾತಿ ಕೊಡುವ ವಿಚಾರದಲ್ಲಿಲ್ಲ. 

ಸ್ಪೀಕರ್‌ ಕಾಗೇರಿ ಅಭಿನಂದನಾ ಸಮಾರಂಭಕ್ಕೆ ಶಿರಸಿಯಲ್ಲಿ ಸಿದ್ಧತೆ: ಬಿಜೆಪಿಗೆ ತಟ್ಟುತ್ತಾ ಕಪ್ಪುಪಟ್ಟಿ ಪ್ರದರ್ಶನ?

ಮೀಸಲಾತಿ ಕೊಡದಿದ್ದರೆ ಇವರನ್ನು ಮನೆಗೆ ಕಳುಹಿಸಲು ರೆಡಿಯಾಗೋಣ. ಅಲ್ಲಿ ಹರ ಜಾತ್ರೆ ಮಾಡುತ್ತಿದ್ದಾರೆ. ಜಾತ್ರೆ ಮಾಡುವ ಅವಶ್ಯಕತೆಯಿಲ್ಲ. ನಮಗೆ ಮೀಸಲಾತಿ ಬೇಕು ಎಂದು ಹೇಳಿದರು. ಮಾಜಿ ಸಚಿವ ವಿನಯ ಕುಲಕರ್ಣಿ ಮಾತನಾಡಿ, ವಿಧಾನಸೌಧ ಮುತ್ತಿಗೆ ಹಾಕಲು ಯತ್ನಿಸಿದಾಗ ತಾಯಿ ಮೇಲೆ ಪ್ರಮಾಣ ಮಾಡಿದರು. ಸಿಎಂ ಮಾತಿನ ಮೇಲೆ ವಿಶ್ವಾಸವಿಟ್ಟು ಸಮಾಜಕ್ಕೆ ಮನವಿ ಮಾಡಿದ್ದೆವು. ಯಾವುದೇ ಸಮಾಜಕ್ಕೆ ಮೀಸಲಾತಿ ಕೊಡಲು ನಮ್ಮ ವಿರೋಧವಿಲ್ಲ. ಬೊಮ್ಮಾಯಿ ಶಾಸಕರಾಗಿರುವುದು ನಮ್ಮ ಸಮಾಜದಿಂದ. ಮೀಸಲಾತಿ ನಿರ್ಣಯ ಮಾಡದಿದ್ದರೆ ನಮ್ಮ ಹೋರಾಟ ನಿಲ್ಲಲ್ಲ ಎಂದು ಎಚ್ಚರಿಸಿದರು.

click me!