ಉತ್ತರ ಕರ್ನಾಟಕ ಭಾಗದಲ್ಲಿ ಬಿಜೆಪಿಗೆ ಅತಿ ಹೆಚ್ಚು ಸ್ಥಾನ: ಸಂಸದ ತೇಜಸ್ವಿ ಸೂರ್ಯ

By Govindaraj S  |  First Published Jan 14, 2023, 11:59 PM IST

ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಯುವ ಜನತೆ ಮಹತ್ವದ ಪಾತ್ರ ವಹಿಸಲಿದ್ದಾರೆ. ಯುವಕರಿಗೆ ಹೆಚ್ಚು ಅವಕಾಶ ಕಲ್ಪಿಸುವ ಬಿಜೆಪಿ ಉತ್ತರ ಕರ್ನಾಟಕ ಭಾಗದ ಹೆಚ್ಚಿನ ಸಂಖ್ಯೆಯ ವಿಧಾನಸಭಾ ಕ್ಷೇತ್ರಗಳಲ್ಲಿ ಗೆಲುವು ಸಾಧಿಸಲಿದೆ ಎಂದು ಸಂಸದ ತೇಜಸ್ವಿ ಸೂರ್ಯ ವಿಶ್ವಾಸ ವ್ಯಕ್ತಪಡಿಸಿದರು. 


ಹುಬ್ಬಳ್ಳಿ (ಜ.14): ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಯುವ ಜನತೆ ಮಹತ್ವದ ಪಾತ್ರ ವಹಿಸಲಿದ್ದಾರೆ. ಯುವಕರಿಗೆ ಹೆಚ್ಚು ಅವಕಾಶ ಕಲ್ಪಿಸುವ ಬಿಜೆಪಿ ಉತ್ತರ ಕರ್ನಾಟಕ ಭಾಗದ ಹೆಚ್ಚಿನ ಸಂಖ್ಯೆಯ ವಿಧಾನಸಭಾ ಕ್ಷೇತ್ರಗಳಲ್ಲಿ ಗೆಲುವು ಸಾಧಿಸಲಿದೆ ಎಂದು ಸಂಸದ ಹಾಗೂ ಬಿಜೆಪಿ ಯುವ ಮೋರ್ಚಾ ರಾಷ್ಟ್ರೀಯ ಅಧ್ಯಕ್ಷ ತೇಜಸ್ವಿ ಸೂರ್ಯ ವಿಶ್ವಾಸ ವ್ಯಕ್ತಪಡಿಸಿದರು. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಧಾರವಾಡದಲ್ಲಿ ಯುವಜನೋತ್ಸವ ಕಾರ್ಯಕ್ರಮ ವಿಜೃಂಭಣೆಯಿಂದ ನಡೆಯುತ್ತಿದೆ. ಈಗಾಗಲೇ ಪ್ರಧಾನಿ ನರೇಂದ್ರ ಮೋದಿ ಅವರು ಕಾರ್ಯಕ್ರಮಕ್ಕೆ ಚಾಲನೆ ನೀಡುವ ಮೂಲಕ ದೇಶಕ್ಕೆ ಮತ್ತು ಯುವ ಸಮುದಾಯಕ್ಕೆ ಮಹತ್ವದ ಸಂದೇಶ ನೀಡಿದ್ದಾರೆ ಎಂದರು.

ನರೇಂದ್ರ ಮೋದಿ ಹುಬ್ಬಳ್ಳಿಗೆ ಬಂದು ಹೊಸ ಸಂಚಲನ ಹುಟ್ಟು ಹಾಕಿದ್ದಾರೆ. ಬರುವ ಚುನಾವಣೆಯಲ್ಲಿ ಉತ್ತರ ಕರ್ನಾಟಕ ಭಾಗದಲ್ಲಿ ನೂರಕ್ಕೆ ನೂರರಷ್ಟು ಬಿಜೆಪಿ ಅತಿ ಹೆಚ್ಚು ಸ್ಥಾನ ಗೆಲ್ಲಲಿದೆ. ಒಬ್ಬ ಸಾಮಾನ್ಯ ವ್ಯಕ್ತಿ ರಾಜಕೀಯದಲ್ಲಿ ಅವಕಾಶ ಪಡೆಯಲು ಬಿಜೆಪಿಯಲ್ಲಿ ಮಾತ್ರ ಸಾಧ್ಯ. ಸಂಘಟನಾತ್ಮಕ ಹಾಗೂ ವ್ಯಕ್ತಿ ವಿಕಸನಕ್ಕೆ ಪೂರಕವಾಗಿ ಬಿಜೆಪಿಯಲ್ಲಿ ಯುವಕರಿಗೆ ಹೆಚ್ಚು ಮಾನ್ಯತೆ ನೀಡಲಾಗುತ್ತದೆ. ಉಳಿದ ಪಕ್ಷದಲ್ಲಿ ಇಂತಹ ಅವಕಾಶಗಳು ಸಿಗುವುದಿಲ್ಲ ಯುವಕರು ರಾಜಕೀಯವಾಗಿ ಮುಂದೆ ಬರಲು ಬಿಜೆಪಿ ಸೂಕ್ತ ಅವಕಾಶ ಕಲ್ಪಿಸುತ್ತಿದೆ ಎಂದರು.

Tap to resize

Latest Videos

ಪ್ರಕ​ರ​ಣ​ಗ​ಳಿಗೆ ಹೆದ​ರದೆ ಹೋರಾಟ ಮುಂದು​ವ​ರೆ​ಸಿ​ದ್ದೇವೆ: ಡಿ.ಕೆ.​ಶಿ​ವ​ಕು​ಮಾರ್‌

ದೇಶದ ಜನಸಂಖ್ಯೆಯಲ್ಲಿ ಯುವಕರ ಪಾತ್ರ ಮಹತ್ವದ್ದು, ಕರ್ನಾಟಕದಲ್ಲಿ ಯುವಕರೇ ಹೆಚ್ಚಿದ್ದಾರೆ. ಈಗಾಗಲೇ ಪ್ರತಿಕ್ಷೇತ್ರದಿಂದ 4-5 ಸಾವಿರ ಹೊಸ ಮತದಾರರು ಸೇರ್ಪಡೆ ಆಗಿದ್ದಾರೆ. ಯುವಕರ ಬೇಡಿಕೆಗಳನ್ನು ಕೇಳುವ ಜತೆ ಅದಕ್ಕೆ ಸರ್ಕಾರವೂ ಪೂರಕವಾಗಿ ಯೋಜನೆ ರೂಪಿಸಿವೆ. ಅಲ್ಲದೇ, ಸರ್ಕಾರ ರೂಪಿಸಿದ ಯೋಜನೆಗಳನ್ನು ಯುವಕರಿಗೆ ತಲುಪಿಸುವ ಕಾರ್ಯವನ್ನು ಬಿಜೆಪಿ ಯುವ ಮೋರ್ಚಾ ಅಚ್ಚುಕಟ್ಟಾಗಿ ಮಾಡುತ್ತಿದೆ ಎಂದು ತಿಳಿಸಿದರು. ಬಿಜೆಪಿ ಮೂಲ ಸಿದ್ಧಾಂತ ಅಂತ್ಯೋದಯ. ಯಾರು ಅತ್ಯಂತ ಕಡುಬಡವರು ಇದ್ದಾರೋ ಅವರಿಗೆ ನ್ಯಾಯ ಒದಗಿಸುವ ಧ್ಯೇಯವನ್ನು ಪಕ್ಷ ಹೊಂದಿದೆ. 

Chikkaballapur: ಕಾಂಗ್ರೆಸ್‌ ಪಕ್ಷವು ದರೋಡೆಕೋರರ ಕೂಟ: ಸಚಿವ ಅಶೋಕ್‌

ಯಾವುದೇ ಜಾತಿ ಭೇದ ಅನುಸರಿಸದೇ ಎಲ್ಲರಿಗೂ ಬಿಜೆಪಿ ಯೋಜನೆಗಳನ್ನು ತಲುಪಿಸುವ ಕೆಲಸ ಮಾಡುತ್ತಿದೆ. ಆ ಮೂಲಕ ಪಕ್ಷದ ಸಿದ್ಧಾಂತದ ಅನುಸಾರ ಸರ್ವರಿಗೂ ಸಮಬಾಳು ಸಮ ಪಾಲು ಒದಗಿಸುತ್ತಿದೆ ಎಂದರು. ಯುವ ಮೋರ್ಚಾದ ಕಾರ್ಯಕರ್ತರೊಂದಿಗೆ ಸಂವಾದ ಕಾರ್ಯಕ್ರಮ ಕೂಡಾ ಮಾಡಿದ್ದು, ಬಹಳ ಉತ್ಸಾಹದಿಂದ ನಮ್ಮ ಕಾರ್ಯಕರ್ತರು ಚುನಾವಣೆ ಎದುರು ನೋಡುತ್ತಿದ್ದಾರೆ. ಪ್ರಧಾನಿ ನರೇಂದ್ರ ಮೋದಿ, ಸಿಎಂ ಬಸವರಾಜ ಬೊಮ್ಮಾಯಿ ನೇತೃತ್ವದ ಬಿಜೆಪಿ ಸರ್ಕಾರ ಸಾಕಷ್ಟುಅಭಿವೃದ್ಧಿ ಯೋಜನೆಗಳು ಜಾರಿಗೆ ತಂದಿದೆ. ಅವುಗಳನ್ನು ಜನರ ಮನೆ-ಮನೆಗೆ ಮುಟ್ಟಿಸುವ ಕೆಲಸವನ್ನು ನಿರಂತರವಾಗಿ ನಮ್ಮ ಯುವ ಪಡೆ ಮಾಡುತ್ತಿದೆ ಎಂದರು.

click me!