
ಇರಲಿ ಬಿಡಿ. ಆ ವಿಷಯ ಅಲ್ಲಿಗೇ ಇರಲಿ. ಆದರೆ ಇದೀಗ ಜೋಸೆಫ್ ವಿಜಯ್ ಅವರ ಘೋಷಣೆಯೊಂದು ಕರ್ನಾಟಕ ರಾಜ್ಯದಲ್ಲಿ ಭಾರಿ ಸದ್ದು ಮಾಡುತ್ತಿದೆ. ತಾಕತ್ತು ಇದ್ದರೆ ಇದನ್ನು ಕರ್ನಾಟಕ ರಾಜ್ಯ ಸರ್ಕಾರ ಮಾಡಲು ಸಾಧ್ಯನಾ ಎಂದು ನೆಟ್ಟಿಗರು ಪ್ರಶ್ನಿಸುತ್ತಿದ್ದಾರೆ. ತಮಿಳುನಾಡಿನಲ್ಲಿ ಜೋಸೆಫ್ ವಿಜಯ್ ಸರ್ಕಾರ ಅಧಿಕಾರಕ್ಕೆ ಬಂದಾಗ, ಖುಷಿಪಟ್ಟ ಕಾಂಗ್ರೆಸ್ ಸರ್ಕಾರ, ಅವರ ಈ ಒಂದೇ ಒಂದು ಘೋಷಣೆಯನ್ನು ಕರ್ನಾಟಕದಲ್ಲಿ ಜಾರಿಗೊಳಿಸಿದ್ರೆ ಪ್ರತಿಯೊಬ್ಬರೂ ಪಕ್ಕಾ ಕೋಟ್ಯಧಿಪತಿ ಆಗ್ತಾರೆ. ಯಾವುದೇ ಗ್ಯಾರೆಂಟಿಗಳೂ ಬೇಡ. ಸರ್ಕಾರ ಈಗ ಕೊಟ್ಟಿರೋ ಎಲ್ಲಾ ಗ್ಯಾರೆಂಟಿಗಳನ್ನೂ ರದ್ದು ಮಾಡಿದ್ರೂ ಪರವಾಗಿಲ್ಲ, ಜನರೆಲ್ಲಾ ಕೋಟ್ಯಧಿಪತಿಯಾಗುವುದೇ ದೊಡ್ಡ ಗ್ಯಾರೆಂಟಿ ಎಂದು ಸೋಷಿಯಲ್ ಮೀಡಿಯಾದಲ್ಲಿ ಭಾರಿ ಸದ್ದು ಮಾಡಲಾಗುತ್ತಿದೆ.
ಅಷ್ಟಕ್ಕೂ ಅಂಥದ್ದೇನು ಘೋಷಣೆ ಮಾಡಿದ್ದಾರೆ ಗೊತ್ತಾ? ತಮಿಳುನಾಡು ಸರ್ಕಾರಿ ಇಲಾಖೆಗಳಲ್ಲಿನ ಭ್ರಷ್ಟಾಚಾರ ಮತ್ತು ಅಕ್ರಮಗಳನ್ನು ತೊಡೆದು ಹಾಕುವ ನಿಟ್ಟಿನಲ್ಲಿ ಸಿಎಂ ವಿಜಯ್ ಅವರು ಹೊಸದೊಂದು ಯೋಜನೆ ಜಾರಿಗೆ ಮುಂದಾಗಿದ್ದಾರೆ. ಅದೇ ಭ್ರಷ್ಟಾಚಾರಿಗಳಿಗೆ ಪಾಠ ಕಲಿಸುವುದು. ಭ್ರಷ್ಟರ ಸುಳಿವು ನೀಡುವ ಸಾರ್ವಜನಿಕರಿಗೆ 1 ಲಕ್ಷ ರೂ. ಭರ್ಜರಿ ಬಹುಮಾನ ನೀಡುವುದಾಗಿ ಮುಖ್ಯಮಂತ್ರಿ ವಿಜಯ್ ಘೋಷಿಸಿದ್ದಾರೆ.
ರಾಜ್ಯದ ಭ್ರಷ್ಟಾಚಾರ ನಿಗ್ರಹ ದಳವನ್ನು ಸಂಪೂರ್ಣವಾಗಿ ಮೇಲ್ದರ್ಜೆಗೇರಿಸಲಾಗುತ್ತಿದ್ದು, ಆ ಇಲಾಖೆಗೆ ಯಾವುದೇ ಒತ್ತಡವಿಲ್ಲದೆ ಕಾರ್ಯನಿರ್ವಹಿಸುವ 'ಸಂಪೂರ್ಣ ಅಧಿಕಾರ' ನೀಡಲಾಗುತ್ತಿದೆ ಎಂದು ಮುಖ್ಯಮಂತ್ರಿ ವಿಜಯ್ ತಿಳಿಸಿದ್ದಾರೆ. ಸರ್ಕಾರಿ ಅಧಿಕಾರಿಗಳು ಯಾವುದೇ ರೀತಿಯ ಲಂಚ ಅಥವಾ ಆರ್ಥಿಕ ಲಾಭಕ್ಕಾಗಿ ಸಾರ್ವಜನಿಕರನ್ನು ಪೀಡಿಸಿದರೆ, ವಿಳಂಬವಿಲ್ಲದೆ ಈ ಇಲಾಖೆಗೆ ದೂರು ನೀಡಬಹುದು ಎಂದಿರುವ ವಿಜಯ್, ಸರ್ಕಾರಿ ಅಧಿಕಾರಿಗಳು ಕೇವಲ ಒಂದು ಸಾವಿರ ರೂಪಾಯಿ ಲಂಚ ಕೇಳಿದ್ದರೂ ಸಾರ್ವಜನಿಕರು ಹೆದರದೆ ಭ್ರಷ್ಟಾಚಾರ ನಿಗ್ರಹ ದಳಕ್ಕೆ ದೂರು ನೀಡಬಹುದು. ಇದಕ್ಕೆ ವಿಡಿಯೋ ಸಾಕ್ಷಿ ಬೇಕು ಅಷ್ಟೇ ಎಂದಿದ್ದಾರೆ.
ಕರ್ನಾಟಕದಲ್ಲಿ ಯಾವ ಮಟ್ಟದಿಂದ ಯಾವ ಮಟ್ಟದವರೆಗೆ ಭ್ರಷ್ಟಾಚಾರ ನಡೆಯುತ್ತಿದೆ ಎನ್ನುವುದು ಅದರ ಸಂತ್ರಸ್ತರಿಗೇ ತಿಳಿದ ವಿಷಯವಾಗಿದೆ. ಕೆಲವೊಂದು ಇಲಾಖೆಗಳಲ್ಲಂತೂ ಅಸಹ್ಯ ಪಡುವಷ್ಟರ ಮಟ್ಟಿಗೆ ಭ್ರಷ್ಟಾಚಾರ ತಾಂಡವವಾಡುತ್ತಿದೆ ಎನ್ನುವುದು ಯಾರಿಗೂ ತಿಳಿಯದ ಸತ್ಯವೇನಲ್ಲ. ಆದರೆ ಬೆಕ್ಕಿಗೆ ಗಂಟೆ ಕಟ್ಟಲು ಹೆದರುವವರೇ ಎಲ್ಲಾ. ದನಿ ಎತ್ತುವ ಜನರು ದೂರು ಕೊಡುವುದಾದರೂ ಎಲ್ಲಿಗೆ, ನ್ಯಾಯ ಸಿಗತ್ತಾ ನ್ಯಾಯ ಕೊಡಲು ಹೋದರೆ ಅಲ್ಲಿಯೂ ದಕ್ಷ ಅಧಿಕಾರಿಗಳ ಜೊತೆ ಲಂಚಕೋರರೂ ಇದ್ದಾರಲ್ಲ ಎನ್ನುವ ಗಂಭೀರ ಆರೋಪಗಳು ಸೋಷಿಯಲ್ ಮೀಡಿಯಾದಲ್ಲಿ ಜನ ಮಾಡುತ್ತಲೇ ಇರುತ್ತಾರೆ. ಆದರೆ ನಮ್ಮ ಸರ್ಕಾರಕ್ಕೆ ಇಂಥದ್ದೊಂದು ಘೋಷಣೆ ಮಾಡುವ ತಾಕತ್ತು ಬಂದರೆ, ಬಹುಮಾನದ ಹಣ ಪಡೆದೇ ಪ್ರತಿಯೊಬ್ಬರೂ ಕೋಟ್ಯಧಿಪತಿ ಆಗ್ತಾರೆ ಎಂದು ಚರ್ಚೆ ಶುರುವಾಗಿದೆ. ಅಲ್ಲಿಗೆ ಲಂಚಾವತಾರದಿಂದ ಎಷ್ಟು ಮಂದಿ ನೊಂದಿದ್ದಾರೆ ಎನ್ನುವುದು ಇದರಿಂದ ತಿಳಿಯುತ್ತದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.