ವಾಲ್ಮೀಕಿ ನಿಗಮದ ಹಣವನ್ನು ತೆಲಂಗಾಣ ಚುನಾವಣೆಗೆ ಫಂಡಿಂಗ್‌ ಮಾಡಲಾಗಿದೆ; ಮಾಜಿ ಸಿಎಂ ಬೊಮ್ಮಾಯಿ ಆರೋಪ

By Sathish Kumar KHFirst Published May 30, 2024, 9:18 PM IST
Highlights

ವಾಲ್ಮೀಕಿ ನಿಗಮದ ಹಣವನ್ನು 14 ಬೇನಾಮಿ ಖಾತೆಗಳ ಚುನಾವಣೆ ಸಂದರ್ಭದಲ್ಲಿ ತೆಲಂಗಾಣ ಸಹಕಾರಿ ಸಂಘಕ್ಕೆ ವರ್ಗಾಯಿಸಲಾಗಿದೆ ಎಂದು ಮಾಜಿ ಸಿಎಂ ಬಸವರಾಜ್ ಬೊಮ್ಮಾಯಿ ಆರೋಪಿಸಿದ್ದಾರೆ.

ಗದಗ (ಮೇ 30): ಭ್ರಷ್ಟಾಚಾರ ಪ್ರೋತ್ಸಾಹಿಸುವ, ಭ್ರಷ್ಟಾರದಲ್ಲಿ ಮುಳುಗಿರುವ ಸರ್ಕಾರ ರಾಜ್ಯದಲ್ಲಿದೆ. ಇಡೀ ಕ್ಯಾಬಿನೆಟ್ ಭ್ರಷ್ಟಾಚಾರದಲ್ಲಿ ಮುಳುಗಿರುವುದರಿಂದ ಸಚಿವರ ರಾಜೀನಾಮೆ ಕೇಳುವ ನೈತಿಕತೆಯನ್ನು ಸಿಎಂ ಕಳೆದುಕೊಂಡಿದ್ದಾರೆ. ವಾಲ್ಮೀಕಿ ನಿಗಮದ ಹಣವನ್ನು 14 ಬೇನಾಮಿ ಖಾತೆಗಳ ಚುನಾವಣೆ ಸಂದರ್ಭದಲ್ಲಿ ತೆಲಂಗಾಣ ಸಹಕಾರಿ ಸಂಘಕ್ಕೆ ವರ್ಗಾಯಿಸಲಾಗಿದೆ ಎಂದು ಮಾಜಿ ಸಿಎಂ ಬಸವರಾಜ್ ಬೊಮ್ಮಾಯಿ ಆರೋಪಿಸಿದ್ದಾರೆ.

ಗದಗನಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಎಸ್ ಸಿ ಎಸ್ ಟಿ‌ ಉದ್ಧಾರ ಮಾಡುತ್ತೇವೆ ಅಂತಾ ಕಾಂಗ್ರೆಸ್ ಹೇಳಿಕೊಳ್ಳುತ್ತದೆ. ವಾಲ್ಮೀಕಿ ನಿಗಮದಲ್ಲಿ ಕೊಟ್ಟ ಹಣ, ಎಸ್ ಟಿ ಜನಾಂಗಕ್ಕೆ ಉಪಯೋಗ ಆಗಬೇಕಿತ್ತು. ಆ ಹಣವನ್ನ ಲೂಟಿ ಮಾಡಿದ್ದಾರೆ. ಅದು ಹೇಗೆ ಬೇನಾಮಿ ಅಕೌಂಟ್ ಗಳ ಮೂಲಕ ಹಣ ವರ್ಗಾವಣೆಯಾಗಿದೆ. 14 ಅಕೌಂಟ್ ಗಳ ಮೂಲಕ ಬೇರೆ ಬೇರೆಕಡೆ ಹಣ ಹೋಗಿದೆ. ಚುನಾವಣೆ ಸಂದರ್ಭದಲ್ಲಿ ತೆಲಂಗಾಣ ಸಹಕಾರಿ ಸಂಘಕ್ಕೆ ಹೋಗಿದೆ. ಸಚಿವರು ಮೌಖಿಕ ಆದೇಶ ಕೊಟ್ಟಿಲ್ಲ ಅಂತಾ ಹೇಳುತ್ತಾರೆ. ನನ್ನ ಸಹಿ ನಕಲು ಆಗಿದೆ ಅಂತ ಎಂಡಿ ಹೇಳುತ್ತಾರೆ. ಇದರಲ್ಲಿ ಮೇಲಿನವರ ಶಾಮಿಲಾಗದೇ ಹಗರಣ ನಡೆಯಲು ಸಾಧ್ಯವಿಲ್ಲ. 94 ಕೋಟಿ ರೂಪಾಯಿ ಮೇಲಿನ ಆಶೀರ್ವಾದ ಇಲ್ಲದೆ ದೋಚಲು ಸಾಧ್ಯವಿಲ್ಲ. ಈಗಾಗಲೇ ಮಂತ್ರಿಗಳು ರಾಜೀನಾಮೆ ಕೊಡಬೇಕಿತ್ತು. ಈಶ್ವರಪ್ಪ ಅವರ ವಿಷಯ ಬಂದಾಗ, ಡಿಸಿಎಂ ಡಿಕೆ ಶಿವಕುಮಾರ್, ಸಿಎಂ ಸಿದ್ದರಾಮಯ್ಯ ಕೂಗಿದ್ದೇ ಕೂಗಿದ್ದು  ಈಗ ನಿಮ್ಮ ನೈತಿಕಥೆ ಎಲ್ಲಿದೆ ಎಂದು ಪ್ರಶ್ನಿಸಿದರು.

Latest Videos

ವಾಲ್ಮೀಕಿ ನಿಗಮದ ಅಧಿಕಾರಿ ಡೆತ್‌ನೋಟ್‌ನಲ್ಲಿ 2 ಬಾರಿ ಸಚಿವರ ಹೆಸರು ಉಲ್ಲೇಖ; ಬಸವರಾಜ ಬೊಮ್ಮಾಯಿ

ರಾಜ್ಯ ಸರ್ಕಾರ ಈ ಹಗರಣವನ್ನು ಸಿಐಡಿಗೆ ತನಿಖೆಗೆ ಕೊಟ್ಟಿದ್ದಾರೆ. ಯಾವ ಹಾಲಿ ಸಚಿವರ ವಿರುದ್ಧ ಸಿಐಡಿ ತನಿಖೆ ಮಾಡಲು‌ ಸಾಧ್ಯ. ಇದರಿಂದ ಮುಕ್ತ ತನಿಖೆ ನಡೆಯಲ್ಲ. ಹಣ ವಾಪಾಸ್ ಬರುವುದಿಲ್ಲ. ಪ್ರಕರಣದ ತನಿಖೆಯನ್ನ ಸಿಬಿಐಗೆ ಕೊಡಬೇಕು. ರಾಷ್ಟ್ರೀಕೃತ ಬ್ಯಾಂಕಿನಲ್ಲಿ 10 ಕೋಟಿ ಗಿಂತ ಹೆಚ್ಚು ಹಣ ಅವ್ಯವಹಾರವಾಗಿದ್ದರೆ ಸಿಬಿಐಗೆ ಕೊಡಬೇಕೆಂದಿದೆ. ರಾಜ್ಯ ಅಷ್ಟೆ ಅಲ್ಲ.. ಬ್ಯಾಂಕ್ ಭಾಗಿಯಾಗಿರುವುದರಿಂದ ಸಿಬಿಐಗೆ ಕೊಡಬೇಕು ಎಂದು ಬಸವರಾಜ ಬೊಮ್ಮಾಯಿ ಆಗ್ರಹಿಸಿದರು.

ಈ ಪ್ರಕರಣದಲ್ಲಿ ಬೇರೆ ಬೇರೆ ರಾಜ್ಯದ ಪಾತ್ರ ಇದೆ.14 ಅಕೌಂಟ್ ಹಿಡಿದು ವಿಚಾರಿಸಿದರೆ ಎಲ್ಲ ಗೊತ್ತಾಗುತ್ತದೆ. ನೇರವಾಗಿ ಈ ಹಣ ಲೋಕಸಭಾ ಚುನಾವಣೆ ಫಡಿಂಗಾಗಿ ಹೋಗಿದೆ. ಮುಕ್ತವಾದ ತನಿಖೆಯಾಗಬೇಕಾದಲ್ಲಿ ಸಿಬಿಐಗೆ ಕೊಡಿ, ಮಂತ್ರಿಗಳ ರಾಜೀನಾಮೆ ಕೊಡಲಿ. ಈಶ್ವರಪ್ಪ ಕೇಸ್ ಬೇರೆ ಈ ಕೇಸ್ ಬೇರೆ ಅಂತ ಗೃಹ ಸಚಿವರು ಹೇಳುತ್ತಾರೆ. ಈಶ್ವರಪ್ಪ ಅವರ ಕೇಸ್ ಗಿಂತನೂ ಗಂಭೀರವಾದ ಕೇಸ್ ಇದು ಯಾವ ಅಭಿವೃದ್ಧಿ ನಿಗಮದಲ್ಲಿ ಅವ್ಯವಹಾರ ಆಗಿದೆ ಆ ಅಕೌಂಟೆಂಟ್ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಆ ಘಟನೆ‌ ನಡೆದಿಲ್ಲವಾಗಿದ್ದರೆ ಕೇಸ್ ಹೊರಗಡೆ ಬರುತ್ತಿರಲಿಲ್ಲ.ಯಾವ ದುಡ್ಡು ಎಲ್ಲಿ ಹೋಗಿದೆ ಅಂತಾ ಕ್ಲೀಯರ್ ಆಗಿ ಬರೆದಿದಾರೆ. ಡೆತ್ ನೋಟ್ ಬಹಳ ಗಂಭೀರ ವಿಚಾರ. ಈಶ್ವರಪ್ಪ ವಿಚಾರದಲ್ಲಿ ಡೆತ್ ನೋಟ್ ಇರಲಿಲ್ಲ.  ಆದರೂ, ನೈತಿಕ ಹೊಣೆ ಹೊತ್ತು ಈಶ್ವರಪ್ಪ ರಾಜೀನಾಮೆ ಕೊಟ್ಟಿದ್ದರು ಎಂದು ಹೇಳಿದರು.

ಬಿಎಂಟಿಸಿ ಎಲೆಕ್ಟ್ರಿಕ್ ಬಸ್‌ಗಳಿಗೆ ಮಲೆಯಾಳಿ ಚಾಲಕರು; ಕನ್ನಡಿಗರಿಗೆ ಕೈಕೊಟ್ಟ ಸರ್ಕಾರ

ಎಸ್ಸಿ ಎಸ್ಟಿ ಮೀಸಲಾತಿ ಹೆಚ್ಚಳದಲ್ಲೂ ಕಾಂಗ್ರೆಸ್ ಯಾವುದೇ ಧಿಟ್ಟ ಕ್ರಮ  ತೆಗೆದುಕೊಂಡಿಲ್ಲ. ನಾನು ಮುಖ್ಯಮಂತ್ರಿ ಇದ್ದಾಗ ಆ ಕ್ರಮ ತೆಗೆದುಕೊಂಡಿದ್ದೆ. ಎಸ್ ಟಿಪಿ, ಟಿಎಸ್ ಪಿ ಅಡಿ ಪರಿಶಿಷ್ಟರಿಗೆ ಇಟ್ಟ ಹಣವನ್ನ ಗ್ಯಾರಂಟಿಗೆ ಡೈವರ್ಟ್ ಮಾಡಲಾಗಿದೆ. ಕಳೆದ ವರ್ಷ 11 ಸಾವಿರ ಕೋಟಿ, ಈ ವರ್ಷ 13 ಸಾವಿರ ಕೋಟಿ ಡೈವರ್ಟ್ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.

click me!