ಲೂಟಿಕೋರ ಸರ್ಕಾರಕ್ಕೆ ಕೇಂದ್ರದತ್ತ ಬೊಟ್ಟು ಮಾಡುವುದೇ ಕೆಲಸ: ಕೇಂದ್ರ ಸಚಿವ ಭಗವಂತ ಖೂಬಾ

By Kannadaprabha News  |  First Published May 30, 2024, 7:09 PM IST

ರಾಜ್ಯದಲ್ಲಿ ಅಧಿಕಾರಕ್ಕೆ ಬಂದಿರುವ ಲೂಟಿಕೋರ ಹಾಗೂ ಹೇಡಿ ಸರ್ಕಾರ ಬೀಜೋತ್ಪನಗಳನ್ನು ಸೇರಿ ಅನೇಕ ವಿಷಯಗಳಿಗೆ ಕೇಂದ್ರದತ್ತ ಬೊಟ್ಟು ಮಾಡುವುದೊಂದೆ ಇವರ ಕೆಲಸ ಆಗಿದೆ ಎಂದು ಕೇಂದ್ರ ಸಚಿವ ಭಗವಂತ ಖೂಬಾ ಕಿಡಿಕಾರಿದ್ದಾರೆ. 


ಬೀದರ್‌ (ಮೇ.30): ರಾಜ್ಯದಲ್ಲಿ ಅಧಿಕಾರಕ್ಕೆ ಬಂದಿರುವ ಲೂಟಿಕೋರ ಹಾಗೂ ಹೇಡಿ ಸರ್ಕಾರ ಬೀಜೋತ್ಪನಗಳನ್ನು ಸೇರಿ ಅನೇಕ ವಿಷಯಗಳಿಗೆ ಕೇಂದ್ರದತ್ತ ಬೊಟ್ಟು ಮಾಡುವುದೊಂದೆ ಇವರ ಕೆಲಸ ಆಗಿದೆ ಎಂದು ಕೇಂದ್ರ ಸಚಿವ ಭಗವಂತ ಖೂಬಾ ಕಿಡಿಕಾರಿದ್ದಾರೆ. ಶಾಂತಿ ತೋಟ ಎಂದು ಹೇಳಿದ್ದ ಸಿದ್ದರಾಮಯ್ಯ ಅವರು ಅಶಾಂತಿ ಹುಟ್ಟುಹಾಕಿದ್ದಾರೆ. ಸರ್ಕಾರದ ಕೆಟ್ಟ ನೀತಿ, ಕೆವಲ ಓಲೈಕೆ ರಾಜಕಾರಣ ಮಾಡುತಿದ್ದು, ಎಸ್ಸಿ, ಎಸ್ಟಿ ಹಾಗೂ ಒಬಿಸಿ ಬಿಟ್ಟು ಅಲ್ಪಸಂಖ್ಯಾತರ ರಕ್ಷಣೆಗೆ ಅನೇಕ ಬಿಲ್‌ಗಳನ್ನು ತೆಡೆಯಲು ಮೇಲ್ಮನೆಯಲ್ಲಿ ಬಿಜೆಪಿ ಬಹುಮತ ಅಗತ್ಯವಾಗಿದೆ. ಹೀಗಾಗಿ ಈಶಾನ್ಯ ಕ್ಷೇತ್ರದ ಅಭ್ಯರ್ಥಿ ಅಮರನಾಥ ಪಾಟೀಲ್‌ಗೆ ಮತ ನೀಡುವ ಮೂಲಕ ಗೆಲ್ಲಿಸಿ ತನ್ನಿ ಎಂದು ಅವರು ಬುಧವಾರ ಮಾತನಾಡಿದರು. ಕಳೆದ 10 ವರ್ಷಗಳಿಂದ ಮೋದಿ ಸರ್ಕಾರ ಭೇದಭಾವ, ತಾರತಮ್ಯ ಮಾಡಿದ ಉದಾಹರಣೆಗಳೇ ಇಲ್ಲ. ರಾಜ್ಯದ ಜನ ವಿರೋಧಿ ಸರ್ಕಾರಕ್ಕೆ ಲೋಕಸಭೆ ಚುನಾವಣೆಯಲ್ಲಿ ಜನತಕ್ಕ ಪಾಠ ಕಲಿಸಿದ್ದಾರೆ ಎಂದರು.

ಒಂದು ವರ್ಷದಿಂದ ದುರಾಡಳಿತ ಸರ್ಕಾರ: ರಾಜ್ಯದಲ್ಲಿ ಕಳೆದ ಒಂದು ವರ್ಷದಿಂದ ಕೇವಲ ದುರಾಡಳಿತ ನಡೆಯುತ್ತಿದೆ, ಒಂದೆ ಒಂದು ಅಭಿವೃದ್ಧಿ ಕೆಲಸ ಪ್ರಾರಂಭವಾಗಿಲ್ಲ. ಎಸ್ಸಿ, ಎಸ್ಟಿ ವರ್ಗದ ಅನುದಾನವನ್ನು ಬೇರೆ ಕೆಲಸಗಳಿಗೆ ಉಪಯೋಗಿಸಿ ಅನ್ಯಾಯ ಮಾಡಲಾಗುತ್ತಿದೆ ಎಂದು ಕೇಂದ್ರ ಸಚಿವ ಭಗವಂತ ಖೂಬಾ ಆರೋಪಿಸಿದರು. ಅವರು ನಗರದ ಅಪ್ಪಾ ಇಂಜಿನಿಯರಿಂಗ್ ಕಾಲೇಜು, ಗುರುನಾನಕ ಇಂಜಿನಿಯರಿಂಗ್ ಕಾಲೇಜು ಮತ್ತು ಪಶು ವೈದ್ಯಕೀಯ ಕಾಲೇಜು ಕಮಠಾಣಗೆ ಭೇಟಿ ನೀಡಿ, ಪದವೀಧರ ಮತದಾರರಲ್ಲಿ, ಈಶಾನ್ಯ ಪದವೀಧರ ಮತಕ್ಷೇತ್ರದ ಅಭ್ಯರ್ಥಿ ಅಮರನಾಥ ಪಾಟೀಲ್ ಪರವಾಗಿ ಮತಯಾಚಿಸಿದರು. 

Tap to resize

Latest Videos

ಧರ್ಮಾಧಾರಿತ ಕಾನುನುಗಳನ್ನು ತಂದು ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದವರ ಮೀಸಲಾತಿಗೆ ಧಕ್ಕೆ ತರುವ ಪ್ರಯತ್ನ ಮಾಡಲಾಗುತ್ತಿದೆ ಮತ್ತು ಎಲ್ಲರಿಗೂ ಅನ್ಯಾಯ ಮಾಡಲು ಕಾಂಗ್ರೆಸ್ ಪಕ್ಷ ಪ್ರಯತ್ನಿಸುತ್ತಿದೆ ಎಂದರು. ಆದರೆ ಕಾಂಗ್ರೆಸ್ ಪಕ್ಷಕ್ಕೆ ವಿಧಾನಪರಿಷತನಲ್ಲಿ ಇಂತಹ ಕಾನುನುಗಳು ಜಾರಿಗೆ ತರಲು ಅಗತ್ಯ ಬೆಂಬಲ ಸಿಗುತ್ತಿಲ್ಲಾ, ಪದವೀಧರರಾದ ತಾವುಗಳು ಇದನ್ನು ಅರಿತು, ಇಂಥಹ ತಪ್ಪು ಆಗದೆ ಇರಲು ನಮ್ಮ ಅಭ್ಯರ್ಥಿಗೆ ಬೆಂಬಲಿಸಬೇಕೆಂದು ಮನವಿ ಮಾಡಿಕೊಂಡರು. ಅಮರನಾಥ ಪಾಟೀಲ್‌ರು ಸೌಮ್ಯ ಸ್ವಭಾವದ ವ್ಯಕ್ತಿ, ಜೊತೆಗೆ ಈ ಹಿಂದೆ ವಿಧಾನಪರಿಷತ್‌ ಸದಸ್ಯರಾಗಿ ಕೆಲಸ ಮಾಡಿರುವ ಅನುಭವವಿದೆ. 

ನನಗೆ ರಾಷ್ಟ್ರಭಕ್ತರ ಬಳಗ ಬೆಂಬಲ ನೀಡಿದೆ: ಬಿಜೆಪಿ ಬಂಡಾಯ ಅಭ್ಯರ್ಥಿ ರಘುಪತಿ ಭಟ್

ಇವರು ವಿಧಾನಪರಿಷತ್‌ ಸದಸ್ಯರಾಗಿದ್ದಾಗ ಸದನದಲ್ಲಿ ಈ ಭಾಗದ ಪರವಾಗಿ ಧ್ವನಿ ಎತ್ತಿರುವ ಉದಾಹರಣೆಗಳಿವೆ. ಆದ್ದರಿಂದ ಈ ಬಾರಿ ಬಿಜೆಪಿ ಅಭ್ಯರ್ಥಿ ಅಮರನಾಥ ಪಾಟೀಲ್‌ರ ಕ್ರಮ ಸಂಖ್ಯೆ 1ಕ್ಕೆ ಪ್ರಥಮ ಪ್ರಾಶ್ಯಸ್ತದ ಹೆಚ್ಚಿನ ಮತಗಳು ನೀಡಿ ಗೆಲ್ಲಿಸಬೇಕೆಂದು ವಿನಂತಿಸಿಕೊಂಡರು. ಈ ವೇಳೆ ಬಿಜೆಪಿ ಮುಖಂಡರಾದ ಬಾಬುವಾಲಿ, ರೇವಣಸಿದ್ದಪ್ಪ ಜಲಾದೆ, ಶಶಿಧರ ಹೊಸಳ್ಳಿ, ಸುರೇಶ ಮಾಶೆಟ್ಟಿ, ಶಕುಂತಲಾ ಬೆಲ್ದಾಳೆ, ಶಿವಕುಮಾರ ನಿಡೊದಾ, ಗುರುನಾಥ ರಾಜಗೀರಾ, ಸಚ್ಚಿದಾನಂದ ಚಿದ್ರೆ ಮುಂತಾದವರು ಉಪಸ್ಥಿತರಿದ್ದರು.

click me!