ನಕ್ಸಲರಿಗಿಂತ ಸಿಟಿ ರವಿಯೇ ಡೇಂಜರ್: ಎಸ್‌ ಎಲ್ ಭೋಜೇಗೌಡ

By Ravi Janekal  |  First Published May 31, 2023, 10:12 PM IST

ನಕ್ಸಲ್ ರಿಗಿಂತ ಸಿ.ಟಿ ರವಿಯೇ ಡೇಜರ್ ಎಂದು ವಿಧಾನಪರಿಷತ್ ಸದಸ್ಯ ಎಸ್ ಎಲ್ ಭೋಜೇಗೌಡ ಕಿಡಿಕಾರಿದ್ದಾರೆ. 


ವರದಿ : ಆಲ್ದೂರು ಕಿರಣ್ ಏಷ್ಯಾನೆಟ್  ಸುವರ್ಣ ನ್ಯೂಸ್ ಚಿಕ್ಕಮಗಳೂರು

ಚಿಕ್ಕಮಗಳೂರು (ಮೇ.31) : ನಕ್ಸಲ್ ರಿಗಿಂತ ಸಿ.ಟಿ ರವಿಯೇ ಡೇಜರ್ ಎಂದು ವಿಧಾನಪರಿಷತ್ ಸದಸ್ಯ ಎಸ್ ಎಲ್ ಭೋಜೇಗೌಡ ಕಿಡಿಕಾರಿದ್ದಾರೆ. ಚಿಕ್ಕಮಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತಾಡಿದ ಅವರು ಸಿ.ಟಿ.ರವಿ(CT Ravi)ಯ ಅರ್ಬನ್ ನಕ್ಸಲ್(Urban Naxal)ಹೇಳಿಕೆಗೆ ನಕ್ಸಲರಿಗಿಂತ ಸಿ.ಟಿ.ರವಿಯೇ ಡೇಂಜರ್ ಎಂದು ಖಾರವಾಗಿ ಪ್ರತಿಕ್ರಿಯಿಸಿದರು.

Tap to resize

Latest Videos

undefined

ಸಂವಿಧಾನ ಬದಲಾವಣೆ, ರಾಷ್ಟ್ರಧ್ವಜ ಇಳಿಸಿ ಭಗವಧ್ವಜ, ಹಿಂದೂ ರಾಷ್ಟ್ರದ ಹೇಳಿಕೆಗಳು ನಕ್ಸಲರಿಗಿಂತ ಡೇಂಜರಸ್ ಪದಗಳಾಗಿವೆ ಎಂದರು. ಒಂದು ಜಾತಿ, ಒಂದು ಧರ್ಮ ಇಟ್ಟುಕೊಂಡು ದೇಶವನ್ನು ರಕ್ಷಣೆ ಮಾಡೋಕಾಗುತ್ತಾ, ಸಿ.ಟಿ.ರವಿ ನಾಲಿಗೆ ಹರಿಬಿಟ್ಟ ಪರಿಣಾಮ ಈಗಾಗಲೇ ಉತ್ತರ ಕೊಟ್ಟಿದ್ದಾರೆ ಎಂದರು. ಪರೋಕ್ಷವಾಗಿ ಚುನಾವಣೆಯಲ್ಲಿ ಸೋಲು ಕಂಡಿರುವ ಬಗ್ಗೆ ಕುಟುಕಿದರು. ಇದೇ ವೇಳೆ ಚಿಕ್ಕಮಗಳೂರು ಕ್ಷೇತ್ರ(Chikkamagaluru constituency)ಕ್ಕೆ ಮಾತ್ರ ಕಾಂಗ್ರೆಸ್ ಜೊತೆಗೆ ಹೊಂದಣಿಕೆ ಇತ್ತು, ನಾನು ಜೆಡಿಎಸ್ ಪಕ್ಷದಿಂದಲೇ   ಶಿಕ್ಷಣ ಕ್ಷೇತ್ರದ ಅಭ್ಯರ್ಥಿಯಾಗಿ ಕಣಕ್ಕಿಳಿಯುತ್ತೇನೆ, ನಾನು ಕಾಂಗ್ರೆಸ್ ಸೇರ್ಪಡೆ ಬರೀ  ವದಂತಿ ಅಷ್ಟೇ ಎಂದು ಸ್ಪಷ್ಟಪಡಿಸಿದರು.

ಸಿದ್ದರಾಮಯ್ಯ ಸಿಎಂ ಆಗ್ತಿದ್ದಂತೆ ಅರ್ಬನ್ ನಕ್ಸಲ್ ಚಟುವಟಿಕೆ ಆರಂಭ: ಸಿಟಿ ರವಿ

ಪಠ್ಯ ಪುಸ್ತಕ ವಿಚಾರದಲ್ಲಿ ರಾಜಕೀಯ ಹಸ್ತಾಕ್ಷೇಪ ಮಾಡಬಾರದು : 

ಶಾಲೆಗಳು ಆರಂಭವಾಗಿದ್ದು, ಸರ್ಕಾರ ಕೂಡಲೇ ಪಠ್ಯಪುಸ್ತಕಗಳನ್ನು ಕೊಡಬೇಕು, ಸರ್ಕಾರಗಳ ನಡುವೆ ಯಾವುದೇ ಭಿನ್ನಾಭಿಪ್ರಾಯ ಇರಬಹುದು. ಆದರೆ, ಪಠ್ಯ ಪುಸ್ತಕ ವಿಚಾರದಲ್ಲಿ ರಾಜಕೀಯ ಹಸ್ತಾಕ್ಷೇಪ ಮಾಡಬಾರದು, ಮೂಗು ತೂರಿಸುವ ಕೆಲಸ ಮಾಡಬಾರದು ಎಂದು ಹೇಳಿದರು.ಶ್ರೀ ನಾರಾಯಣ ಗುರುಗಳು ಆದರ್ಶ ವ್ಯಕ್ತಿ. ಅವರನ್ನು ಕುರಿತು ಪಠ್ಯಪುಸ್ತಕದಲ್ಲಿ ಅಳವಡಿಸಲಾಗಿತ್ತು, ಹಿಂದಿನ ಸರ್ಕಾರ ಪಠ್ಯಪುಸ್ತಕದಿಂದ ಪಾಠವನ್ನು ಕೈ ಬಿಟ್ಟಿತು. ಗಣ ರಾಜ್ಯೋತ್ಸವ ಸಂದರ್ಭದಲ್ಲಿ ನಾರಾಯಣಗುರುಗಳ ಸ್ತಬ್ಧ ಚಿತ್ರವನ್ನು ಸಹ ಕೈಬಿಡಲಾಯಿತು. ಈ ಬಗ್ಗೆ ಮಾತನಾಡಲು ನಿಮ್ಮ ಧ್ವನಿ ಎಲ್ಲಿಗೆ ಹೋಗಿತ್ತು ಎಂದು ಸಿ.ಟಿ.ರವಿ ಅವರಿಗೆ ಪ್ರಶ್ನಿಸಿದರು.

 ಪಠ್ಯಪುಸ್ತಕ ವಿಚಾರದಲ್ಲಿ ಶಾಸಕರುಗಳಿಗೆ ಏನು ಕೆಲಸ? ಪಠ್ಯ ಪುಸ್ತಕಗಳನ್ನು ಯಾರು ತಯಾರು ಮಾಡುತ್ತಾರೆ, ಯಾರು ಪರಿಪಕ್ವವಾಗಿದ್ದಾರೆ ಅವರಿಗೆ ಬಿಟ್ಟ ವಿಚಾರವಾಗಿದೆ.  

ಮಾಜಿ ಶಾಸಕ ಸಿ.ಟಿ ರವಿ ಗೆ ಸವಾಲ್ : 

ಚಿಕ್ಕಮಗಳೂರು ವಿಧಾನಸಭಾ ಕ್ಷೇತ್ರದಲ್ಲಿ ಯಾವ ಯಾವ ಪ್ರದೇಶದಲ್ಲಿ ಕಾಮಗಾರಿ ನಡೆಯುತ್ತಿದೆ, ನೀವು ಯಾವ ಕಾಮಗಾರಿಗೆ ಹಣ ತಂದಿದ್ದಿರಾ, ಯಾವ ಕಾಮಗಾರಿಗಳನ್ನು ಸರ್ಕಾರ ನಿಲ್ಲಿಸಿದೆ. ಈ ಎಲ್ಲಾ ವಿವರಗಳನ್ನು ಒಳಗೊಂಡ ಶ್ವೇತಪತ್ರವನ್ನು ಹೊರಡಿಸಬೇಕೆಂದು ಮಾಜಿ ಶಾಸಕ ಸಿ.ಟಿ. ರವಿಗೆ ಸವಾಲ್ ಹಾಕಿದರು. ಕ್ಷೇತ್ರದ ಅಭಿವೃದ್ಧಿಗೆ ಪ್ರಾಮಾಣಿಕವಾಗಿ ನೀವು ಹಣ ತಂದಿದ್ದರೆ, ಅಂತಹ ಕಾಮಗಾರಿಗಳು ಸರ್ಕಾರ ನಿಲ್ಲಿಸಿದ್ದರೆ, ನಾವು ನಿಮ್ಮೊಂದಿಗೆ ನಿಲ್ಲುತ್ತೇವೆ. ಕಾರ್ಯಕರ್ತರನ್ನು ಮುಂದಿಟ್ಟು  ಪ್ರತಿಭಟನೆ ಮಾಡುವುದಲ್ಲ ಎಂದು ತಿರುಗೇಟು ನೀಡಿದರು. 

 

ಸಿ.ಟಿ. ರವಿ ವಿರುದ್ಧ ಕಾಂಗ್ರೆಸ್‌ ಪರ ಪ್ರಚಾರ ಆರಂಭಿಸಿದ ಜೆಡಿಎಎಸ್‌ ನಾಯಕ ಭೋಜೇಗೌಡ

ನೀವು, ಚುನಾವಣೆಯಲ್ಲಿ ಸೋತಿದ್ದು, ಅಭಿವೃದ್ಧಿಯಲ್ಲಿ ಭ್ರಷ್ಟಚಾರ ಹಾಗೂ ಸ್ವಜನಪಕ್ಷಪಾತದ ಕಾರಣಕ್ಕಾಗಿ, ಯಾವ ಕ್ಷೇತ್ರದಲ್ಲಿ ಎಷ್ಟು ಹಣ ಹಾಕಲಾಗಿದೆ. ತೋರಿಸಿ, ನಾವು ಸ್ಥಳಕ್ಕೆ ಬರುತ್ತೇವೆ ಎಂದು ಸವಾಲ್ ಹಾಕಿದ ಅವರು, ಬಸವನಹಳ್ಳಿ ಕೆರೆ ಅಭಿವೃದ್ಧಿ ಹಾಗೂ ನಿಯಮ ಉಲ್ಲಂಘನೆ ಮಾಡಿ ನಗರಸಭೆಯಲ್ಲಿ ನಡೆಯುತ್ತಿರುವ ಕೆಲಸಗಳನ್ನು ತಡೆಯಬಹುದಾಗಿತ್ತಲ್ಲಾ, ಈ ಕಾರಣಕ್ಕಾಗಿ ಜನರು ನಿಮ್ಮನ್ನು ಸೋಲಿಸಿದ್ದಾರೆ ಎಂದರು.

click me!