ರಾಜ್ಯ ಸರ್ಕಾರಕ್ಕೆ ಹಿಂದೂ ಚಟುವಟಿಕೆ, ಕಾರ್ಯಕರ್ತರೇ ಟಾರ್ಗೆಟ್‌: ಜೋಶಿ ಕಿಡಿ

By Kannadaprabha News  |  First Published Sep 24, 2023, 6:03 AM IST

ಕಾಂಗ್ರೆಸ್‌ ಸರ್ಕಾರ ಗಣಪತಿ ಮಹೋತ್ಸವ ಸೇರಿದಂತೆ ಹಿಂದೂ ಚಟುವಟಿಕೆಗಳನ್ನು ಗುರಿಯಾಗಿಸಿಕೊಂಡು ಹಿಂದೂ ಕಾರ್ಯಕರ್ತರ ಮೇಲೆ ದಬ್ಬಾಳಿಕೆ ಮಾಡುತ್ತಿದೆ ಎಂದು ಕೇಂದ್ರ ಸಚಿವ ಪ್ರಲ್ಹಾದ್‌ ಜೋಶಿ ಆರೋಪಿಸಿದರು


ಧಾರವಾಡ (ಸೆ.24): ಕಾಂಗ್ರೆಸ್‌ ಸರ್ಕಾರ ಗಣಪತಿ ಮಹೋತ್ಸವ ಸೇರಿದಂತೆ ಹಿಂದೂ ಚಟುವಟಿಕೆಗಳನ್ನು ಗುರಿಯಾಗಿಸಿಕೊಂಡು ಹಿಂದೂ ಕಾರ್ಯಕರ್ತರ ಮೇಲೆ ದಬ್ಬಾಳಿಕೆ ಮಾಡುತ್ತಿದೆ ಎಂದು ಕೇಂದ್ರ ಸಚಿವ ಪ್ರಲ್ಹಾದ್‌ ಜೋಶಿ ಆರೋಪಿಸಿದರು. ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹುಬ್ಬಳ್ಳಿಯ ಈದ್ಗಾ ಮೈದಾನದಲ್ಲಿ ಗಣೇಶ ಪ್ರತಿಷ್ಠಾಪನೆ ಸೇರಿದಂತೆ ಗಣೇಶೋತ್ಸವದಲ್ಲಿ ಹಿಂದೂಗಳಿಗೆ ರಾಜ್ಯ ಸರ್ಕಾರ ತುಂಬಾ ಅನ್ಯಾಯ ಮಾಡಿದೆ. ರಾಜ್ಯದ ಚುನಾವಣೆಯಲ್ಲಿ ಬಿಜೆಪಿ ಸೋತಿರಬಹುದು. ಆದರೆ, ಅನ್ಯಾಯದ ವಿರುದ್ಧದ ಹೋರಾಟದಲ್ಲಿ ನಾವು ಸಶಕ್ತರಾಗಿದ್ದೇವೆ ಎಂದರು.

ಗಣೇಶ ವಿಸರ್ಜನೆ ವೇಳೆ ಡಿಜೆ ಹಚ್ಚಿದ್ದಾರೆ ಎಂದು ವಿದ್ಯಾಗಿರಿ ಪೊಲೀಸ್‌ ಠಾಣೆ ವ್ಯಾಪ್ತಿಯ ಪ್ರದೀಪ ಎಂಬಾತನಿಗೆ ಪೊಲೀಸ್ ಅಧಿಕಾರಿ ಥಳಿಸಿದ್ದು ತಪ್ಪು. ಗಣೇಶ ಪ್ರತಿಷ್ಠಾಪನೆ ಹಾಗೂ ವಿಸರ್ಜನೆ ವೇಳೆ ಹಾಡು ಹಚ್ಚುವುದು ಸಾಮಾನ್ಯ. ಅದನ್ನೇ ನೆಪವಾಗಿಟ್ಟುಕೊಂಡು ಕಾಂಗ್ರೆಸ್‌ ಸರ್ಕಾರದ ಕುಮ್ಮಕ್ಕಿನಿಂದ ಹಿಂದೂ ಕಾರ್ಯಕರ್ತರ ಮೇಲೆ ಹೀಗೆ ಹಲ್ಲೆ ಮಾಡುವುದು ಸರಿಯಲ್ಲ ಎಂದರು. ಇಂತಹ ದುರ್ವರ್ತನೆ ಸಹಿಸೋದಿಲ್ಲ. ಕೂಡಲೇ ಈ ಕುರಿತು ಪೊಲೀಸ ಆಯುಕ್ತರಿಗೆ ದೂರು ನೀಡಿ ಪೊಲೀಸ್‌ ಅಧಿಕಾರಿ ಅಮಾನತು ಮಾಡಲು ಆಗ್ರಹಿಸಲಾಗುವುದು ಎಂದರು.

Latest Videos

undefined

ಈ ವರ್ಷದಿಂದ 9, 11ನೇ ಕ್ಲಾಸಿಗೂ ಇನ್ನು ಪಬ್ಲಿಕ್‌ ಪರೀಕ್ಷೆ: ಶಿಕ್ಷಣ ಇಲಾಖೆಯಿಂದ ಆದೇಶ

ಮುತಾಲಿಕ್‌ ಗಡಿಪಾರಿಗೆ ದೂರು ಸರಿಯಲ್ಲ: ಶ್ರೀರಾಮ ಸೇನೆಯ ರಾಷ್ಟ್ರೀಯ ಅಧ್ಯಕ್ಷ ಪ್ರಮೋದ ಮುತಾಲಿಕ್‌ ಗಡಿಪಾರಿಗೆ ಒತ್ತಾಯಿಸಿ ದೂರು ಸಲ್ಲಿಸಿರುವುದು ಸರಿಯಲ್ಲ ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಹೇಳಿದರು. ಸುದ್ದಿಗಾರರೊಂದಿಗೆ ಮಾತನಾಡುತ್ತ ಪ್ರಮೋದ್ ಮುತಾಲಿಕ್ ವಿರುದ್ಧದ ಪ್ರಕರಣ ಕುರಿತ ಪ್ರಶ್ನೆಗೆ ಉತ್ತರಿಸಿದ ಅವರು, ಮುತಾಲಿಕ್ ಏನು ಭಾಷಣ ಮಾಡಿದ್ದಾರೆ ಎಂಬುದು ನನಗೆ ಮಾಹಿತಿ ಇಲ್ಲ. ಅವರ ಮೇಲೆ ಪ್ರಕರಣ ದಾಖಲಿಸಿದ್ದಾರೆ ಎಂಬುದೂ ಗೊತ್ತಿಲ್ಲ. ಆದರೆ, ಒಮ್ಮೆಲೇ ಮುತಾಲಿಕ್ ಗಡಿಪಾರು ಮಾಡಬೇಕೆಂಬುದು ಸರಿಯಲ್ಲ. ಮುತಾಲಿಕ್ ಗಿಂತ ಪ್ರಚೋದನಕಾರಿಯಾಗಿ ಬೇರೆ ಬೇರೆ ಸಮುದಾಯದವರು ಮಾತನಾಡಿದ್ದಾರೆ. ಅಂಥವರ ಮೇಲೆ ಕೈಗೊಳ್ಳಲಾಗದ ಕ್ರಮ ಮುತಾಲಿಕ್ ವಿರುದ್ಧ ಏಕೆ? ಅವರ ವಿರುದ್ಧದ ಪ್ರಕರಣವನ್ನು ನಾವು ಒಪ್ಪುವುದಿಲ್ಲ ಎಂದರು.

ತುಷ್ಟೀಕರಣ ಕೈಬಿಡಲಿ: ಈದ್ಗಾ ಮೈದಾನದಲ್ಲಿ ಗಣೇಶೋತ್ಸವ ವಿಚಾರಕ್ಕೆ ಉತ್ತರಿಸಿದ ಜೋಶಿ, ಬಿಜೆಪಿ ನ್ಯಾಯಯುತ ಹೋರಾಟ ಮಾಡಿ ಗಣೇಶೋತ್ಸವ ಮಾಡಿದೆ. ಬಿಜೆಪಿ ಶಾಸಕರು ಪಾಲಿಕೆಯಲ್ಲಿ ಹೋರಾಟಕ್ಕೆ ಇಳಿಯದಿದ್ದರೆ ಅನುಮತಿ ಸಿಗುತ್ತಿರಲಿಲ್ಲ. ಈದ್ಗಾ ಮೈದಾನ ಯಾರದೋ ಆಸ್ತಿಯಲ್ಲ. ಈದ್ಗಾ ಮೈದಾನದಲ್ಲಿ ಸಾರ್ವಜನಿಕ ಕಾರ್ಯಕ್ರಮ ಕೈಗೊಳ್ಳಲು ಮನವಿ ಸಲ್ಲಿಸುತ್ತಾರೆಯೋ ಅವರೆಲ್ಲರಿಗೂ ಪಾಲಿಕೆ ನೀಡಲಿ. ಯಾರನ್ನೂ ತುಷ್ಟೀಕರಣ ಮಾಡಲು ಈ ನಿರ್ಬಂಧ ಮಾಡುವುದು ಸರಿಯಲ್ಲ. ಈ ವಿಷಯದಲ್ಲಿ ಅಂಜುಮನ್ ಸಂಸ್ಥೆಯವರು ಅನಗತ್ಯವಾಗಿ ಗೊಂದಲ ಸೃಷ್ಟಿಸುವುದು ಸರಿಯಲ್ಲ. ಅವರು ಏನು ಬೇಕಾದರೂ ಹೋರಾಟ ಮಾಡಲಿ, ಕಾನೂನು ನಮ್ಮ ಪರವಾಗಿದೆ. ಮುಂದೆಯೂ ನಾವು ಇಲ್ಲಿ ಗಣೇಶನನ್ನು ಕೂಡ್ರಿಸುತ್ತೇವೆ ಎಂದರು.

ಕಾವೇರಿ ವಿಚಾರದಲ್ಲಿ ನಾನು ಅಧಿವೇಶನದಲ್ಲೇ ಕಣ್ಣೀರು ಹಾಕಿದ್ದೆ: ಎಚ್‌.ಡಿ.ದೇವೇಗೌಡ

ಸೀಜ್ ಮಾಡಲಿ ನೋಡೋಣ: ಗಣೇಶ ವಿಸರ್ಜನೆ ವೇಳೆ ಹಲವಾರು ನಿಬಂಧನೆಗಳ ವಿಚಾರಕ್ಕೆ ಮಾತನಾಡಿ, ಕಾಂಗ್ರೆಸ್ ಸರ್ಕಾರ ಬಂದ ನಂತರ ಅನಗತ್ಯ ನಿಯಮ ಹೇರುತ್ತಿದೆ. ಡಿಜೆಗೆ ಅವಕಾಶ ನೀಡಲ್ಲ, ಇಂತಿಷ್ಟು ಸಮಯದಲ್ಲಿ ವಿಸರ್ಜನೆ ಮಾಡಬೇಕು ಅಂದರೆ ನಡೆಯುವುದಿಲ್ಲ. ಅಧಿಕಾರಿಗಳು ಈ ರೀತಿ ಮಾಡಿದರೆ ನಾವು ಹೋರಾಟಕ್ಕೆ ಇಳಿಯಬೇಕಾಗುತ್ತದೆ. ಡಿಜೆ ಹಚ್ಚಿದವರ ವಿರುದ್ಧ ಅಧಿಕಾರಿಗಳು ಕಠಿಣ ಕ್ರಮ ಕೈಗೊಳ್ಳಲಿ, ಡಿಜೆ ಸೀಜ್‌ ಮಾಡಲಿ ನಾನು ನೋಡುತ್ತೇನೆ ಎಂದು ಎಚ್ಚರಿಸಿದರು.

click me!