ಚುನಾವಣೆಗೂ ಮುನ್ನ ಸಿದ್ದರಾಮಯ್ಯ ಅವರೇ ಭಾಷಣದಲ್ಲಿ 200 ಯೂನಿಟ್ ವಿದ್ಯುತ್ ನಿನಗೂ ಫ್ರೀ ನನಗೂ ಫ್ರೀ, ಎಲ್ಲರಿಗೂ ಫ್ರೀ ಎಂಬ ಮಾತನ್ನಾಡಿದ್ದರು. ಕಾಂಗ್ರೆಸ್‌ನ 5 ಗ್ಯಾರಂಟಿಗಳನ್ನು ನೋಡಿಯೆ ಮತದಾರರು ಕಾಂಗ್ರೆಸ್‌ಗೆ ಮತ ಹಾಕಿ ಆಯ್ಕೆ ಮಾಡಿದ್ದಾರೆ. ಆದರೆ ಈಗ ಇಲ್ಲ ಸಲ್ಲದ ಷರತ್ತು ಹಾಕಿ ಮುಗ್ಧ ಜನರನ್ನು ಮೋಸ ಮಾಡುವ ರಣತಂತ್ರ ರೂಪಿಸಿ ಅಧಿಕಾರ ನಡೆಸುವುದು ಸರಿಯಲ್ಲ: ಭಗವಂತ ಖೂಬಾ
ಬೀದರ್(ಮೇ.31): ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಗ್ಯಾರಂಟಿ ಯೋಜನೆಯಡಿ ಪ್ರತಿ ಮನೆಯೊಡತಿಗೆ ಪ್ರತಿ ತಿಂಗಳು 2000 ರು. ನೀಡುವ ಗೃಹಲಕ್ಷ್ಮಿ ಯೋಜನೆಯಡಿ ಅತ್ತೆಗೆ ಅಥವಾ ಸೊಸೆಗೆ ಎಂಬ ತಗಾದೆಯಿಂದ ಎಲ್ಲ ಮನೆಗಳಲ್ಲಿ ಜಗಳ ಆರಂಭವಾಗುತ್ತದೆ. ಇದಕ್ಕಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅತ್ತೆ, ಸೊಸೆಯ ಕೌನ್ಸ್‌ಲಿಂಗ್‌ಗಾಗಿ ಪ್ರತ್ಯೇಕ ಖಾತೆ ಆರಂಭಿಸಲಿ ಎಂದು ಕೇಂದ್ರ ಸಚಿವ, ಸಂಸದ ಭಗವಂತ ಖೂಬಾ ನುಡಿದರು.
ಬೀದರ್‌ನ ಬಿಜೆಪಿ ಕಚೇರಿಯಲ್ಲಿ ಮಂಗಳವಾರ ಮಾತನಾಡಿದ ಅವರು, ಚುನಾವಣೆ ಸಂದರ್ಭದಲ್ಲಿ ಎಲ್ಲ 5 ಗ್ಯಾರಂಟಿಗಳಿಗೆ ಯಾವುದೇ ಷರತ್ತು ಇರಲಿಲ್ಲ. ಆದರೆ, ಈಗ ಅಧಿಕಾರಕ್ಕೆ ಬಂದ ಮೇಲೆ ಅತ್ತೆಗೆ ಅಥವಾ ಸೊಸೆಗೆ ಎಂಬ ಮಾತಾಡುತ್ತಿದ್ದಾರೆ. ಸದ್ಯ ಈಗಾಗಲೇ ಅನೇಕ ಮನೆಗಳಲ್ಲಿ ಅತ್ತೆ, ಸೊಸೆಯರ ಜಗಳಗಳು ನಡೆಯುತ್ತಿವೆ. ಅಂಥಹದರಲ್ಲಿ ಈ ಯೋಜನೆ ಮತ್ತಷ್ಟು ಜಟಿಲ ಸಮಸ್ಯೆ ಉಲ್ಭಣ ಮಾಡುವಂತಿದೆ. ಆದ್ದರಿಂದ ಈ ಸಮಸ್ಯೆ ಪರಿಹಾರಕ್ಕಾಗಿ ಇನ್ನೊಂದು ಪ್ರತ್ಯೇಕ ಖಾತೆ ಆರಂಭಿಸುವುದೆ ಸೂಕ್ತ ಎಂದು ಲೇವಡಿ ಮಾಡಿದರು.
undefined
ಬೀದರ್ ನಗರಸಭೆ ಅಕ್ರಮ: ಮಳಿಗೆಗಳ ಬಾಡಿಗೆಯಲ್ಲಿ ಗೋಲ್ಮಾಲ್!
ಚುನಾವಣೆಗೂ ಮುನ್ನ ಸಿದ್ದರಾಮಯ್ಯ ಅವರೇ ಭಾಷಣದಲ್ಲಿ 200 ಯೂನಿಟ್ ವಿದ್ಯುತ್ ನಿನಗೂ ಫ್ರೀ ನನಗೂ ಫ್ರೀ, ಎಲ್ಲರಿಗೂ ಫ್ರೀ ಎಂಬ ಮಾತನ್ನಾಡಿದ್ದರು. ಕಾಂಗ್ರೆಸ್‌ನ 5 ಗ್ಯಾರಂಟಿಗಳನ್ನು ನೋಡಿಯೆ ಮತದಾರರು ಕಾಂಗ್ರೆಸ್‌ಗೆ ಮತ ಹಾಕಿ ಆಯ್ಕೆ ಮಾಡಿದ್ದಾರೆ. ಆದರೆ ಈಗ ಇಲ್ಲ ಸಲ್ಲದ ಷರತ್ತು ಹಾಕಿ ಮುಗ್ಧ ಜನರನ್ನು ಮೋಸ ಮಾಡುವ ರಣತಂತ್ರ ರೂಪಿಸಿ ಅಧಿಕಾರ ನಡೆಸುವುದು ಸರಿಯಲ್ಲ ಎಂದರು.
ರಾಜ್ಯದ ಜನರು ಕರೆಂಟ್ ಬಿಲ್ ಕಟ್ಟಬಾರದು, ಮಹಿಳೆಯರು ಬಸ್‌ಗಳಲ್ಲಿ ಟಿಕೆಟ್ ಪಡೆಯಬಾರದು, ಪದವೀಧರರು ಸರ್ಕಾರಕ್ಕೆ ಬಿಸಿ ಮುಟ್ಟಿಸಬೇಕು ಎಂದು ಭಗವಂತ ಖೂಬಾ ಕರೆ ನೀಡಿದರು.
ಬೀದರ್-ಬೆಂಗಳೂರು ವಿಮಾನ ಸೇವೆ ಸಮಯ ಬದಲಾವಣೆ
ಮೋದಿ ಕಂಡರೆ ವಿರೋಧಿಗಳಿಗೆ ಜೀರ್ಣಿಸಲು ಆಗಲ್ಲ:
ನೂತನ ಸಂಸದ ಭವನ ಕಟ್ಟಡದ ಉದ್ಘಾಟನೆಯಲ್ಲಿ ರಾಷ್ಟ್ರಪತಿಗಳಿಗೆ ಆಹ್ವಾನ ನೀಡಿಲ್ಲ ಎಂದು ವಿರೋಧ ಪಕ್ಷದವರು ಆರೋಪ ಮಾಡಿದ್ದಾರೆ ಎಂಬ ಪ್ರಶ್ನೆಗೆ ಉತ್ತರಿಸಿದ ಸಂಸದರು, ಸ್ವತಃ ರಾಷ್ಟ್ರಪತಿಗಳಿಗೆ ಆಹ್ವಾನ ನೀಡಲಾಗಿತ್ತು. ಅವರೆ ಖುದ್ದು ಸಂತಸ ವ್ಯಕ್ತಪಡಿಸಿದ್ದಾರೆ. ನರೇಂದ್ರ ಮೋದಿ ಅವರನ್ನು ಕಂಡರೆ ವಿರೋಧಿಗಳಿಗೆ ಜೀರ್ಣಿಸಲು ಆಗುವುದಿಲ್ಲ ಎಂದರು.
ಸುದ್ದಿಗೋಷ್ಠಿಯಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ಶಿವಾನಂದ ಮಂಠಾಳಕರ್, ಶಾಸಕ ಡಾ. ಶೈಲೇಂದ್ರ ಬೆಲ್ದಾಳೆ, ವಿಧಾನ ಪರಿಷತ್ ಸದಸ್ಯ ರಘುನಾಥರಾವ ಮಲ್ಕಾಪೂರೆ, ಮಾಜಿ ಬುಡಾ ಅಧ್ಯಕ್ಷ ಬಾಬು ವಾಲಿ, ವಿಜಯಕುಮಾರ ಪಾಟೀಲ್ ಗಾದಗಿ, ಬಸವರಾಜ ಜೋಜನಾ, ಸಂಗಮೇಶ ನಾಸಿಗರ ಇದ್ದರು.