ಸಿಎಂ ಬೊಮ್ಮಾಯಿ ಕೈ ಬಲಪಡಿಸಿ: ಬಿಜೆಪಿ ವರಿಷ್ಠ ಅಮಿತ್‌ ಶಾ ಬಹಿರಂಗ ಕರೆ

By Kannadaprabha News  |  First Published Feb 12, 2023, 4:30 AM IST

ಮುಖ್ಯ​ಮಂತ್ರಿ ಬಸ​ವ​ರಾಜ ಬೊಮ್ಮಾಯಿ ಕೈ ಬಲ​ಪ​ಡಿಸಿ, ಮುಂದಿನ ವಿಧಾ​ನ​ಸಭಾ ಚುನಾ​ವ​ಣೆ​ಯ​ಲ್ಲಿ ಬಿಜೆಪಿ ಗೆಲ್ಲಿಸಿ ಎಂದು ಬಹಿ​ರಂಗ​ವಾಗಿ ಕರೆ ನೀಡುವ ಮೂಲಕ ಮುಖ್ಯ​ಮಂತ್ರಿ ಬದ​ಲಾ​ವಣೆ ಪ್ರಸ್ತಾಪ ಪಕ್ಷದ ಮುಂದಿಲ್ಲ ಎಂಬ ಪರೋಕ್ಷ ಸಂದೇಶವನ್ನು ಕೇಂದ್ರ ಗೃಹ ಸಚಿವ ಅಮಿತ್‌ ಶಾ ರವಾನಿಸಿದ್ದಾರೆ. 


ಪುತ್ತೂರು (ಫೆ.12): ಮುಖ್ಯ​ಮಂತ್ರಿ ಬಸ​ವ​ರಾಜ ಬೊಮ್ಮಾಯಿ ಕೈ ಬಲ​ಪ​ಡಿಸಿ, ಮುಂದಿನ ವಿಧಾ​ನ​ಸಭಾ ಚುನಾ​ವ​ಣೆ​ಯ​ಲ್ಲಿ ಬಿಜೆಪಿ ಗೆಲ್ಲಿಸಿ ಎಂದು ಬಹಿ​ರಂಗ​ವಾಗಿ ಕರೆ ನೀಡುವ ಮೂಲಕ ಮುಖ್ಯ​ಮಂತ್ರಿ ಬದ​ಲಾ​ವಣೆ ಪ್ರಸ್ತಾಪ ಪಕ್ಷದ ಮುಂದಿಲ್ಲ ಎಂಬ ಪರೋಕ್ಷ ಸಂದೇಶವನ್ನು ಕೇಂದ್ರ ಗೃಹ ಸಚಿವ ಅಮಿತ್‌ ಶಾ ರವಾನಿಸಿದ್ದಾರೆ. ಅಲ್ಲದೆ, ಮಾಜಿ ಮುಖ್ಯ​ಮಂತ್ರಿ ಎಚ್‌.​ಡಿ.ಕುಮಾ​ರ​ಸ್ವಾಮಿ ಅವರ ಮೂಲಕ ಸೃಷ್ಟಿ​ಯಾ​ಗಿ​ರುವ, ಕಳೆದ ಕೆಲ ದಿನ​ಗ​ಳಿಂದ ರಾಜ್ಯ ಬಿಜೆ​ಪಿ​ಯ​ಲ್ಲಿ ಸಂಚ​ಲನ ಮೂಡಿ​ಸಿ​ರುವ ‘ಬ್ರಾಹ್ಮಣ ಸಿಎಂ’ ವದಂತಿಗೂ ತೆರೆ ಎಳೆಯುವ ಪ್ರಯತ್ನ ಮಾಡಿದ್ದಾರೆ ಎಂದು ಹೇಳಲಾಗುತ್ತಿದೆ.

ಪುತ್ತೂರು ತೆಂಕಿಲ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲಾ ಆವರಣದಲ್ಲಿ ಕ್ಯಾಂಪ್ಕೊ ಸುವರ್ಣ ಮಹೋತ್ಸವದ ಸಂಭ್ರಮಾಚರಣೆ ಕಾರ್ಯಕ್ರಮವನ್ನು ಶನಿ​ವಾರ ಉದ್ಘಾಟಿಸಿ ಮಾತನಾಡಿದ ಅವರು ಬೊಮ್ಮಾಯಿ ನೇತೃ​ತ್ವದ ರಾಜ್ಯ ಸರ್ಕಾ​ರದ ಸಾಧನೆ ಕುರಿತು ಮೆಚ್ಚುಗೆ ವ್ಯಕ್ತ​ಪ​ಡಿ​ಸಿ​ದ​ರು. ಸುಮಾರು 20 ನಿಮಿಷಗಳ ತಮ್ಮ ಭಾಷಣದುದ್ದಕ್ಕೂ ಅಮಿತ್‌ ಶಾ ಅವರು ರಾಜ್ಯ​ದಲ್ಲಿ ಬೊಮ್ಮಾಯಿ ಅವರ ಕೈಬಲಪಡಿಸುವಂತೆ ಪದೇ ಪದೇ ಮನವಿ ಮಾಡಿ​ದ​ರು. ಕಾಂಗ್ರೆಸ್‌ ಕರ್ನಾಟಕವನ್ನು ಎಟಿಎಂ ಮಾಡಲು ಹೊರಟಿದೆ. ರಾಜ್ಯದ ಅಭಿವೃದ್ಧಿ ಬಿಜೆಪಿಯಿಂದ ಮಾತ್ರ ಸಾಧ್ಯ ಎಂದ​ರು.

Tap to resize

Latest Videos

ಸೊಪ್ಪಿನಬೆಟ್ಟಕಾನು ಸಮಸ್ಯೆಗೆ ತಿಂಗಳೊಳಗೆ ಪರಿ​ಹಾ​ರ: ಸಚಿವ ಅಶ್ವತ್ಥ ನಾರಾಯಣ

ಕುಚ್ಚ​ಲಕ್ಕಿ ವಿತ​ರಣೆ, ನಾರಾ​ಯ​ಣ​ಗುರು ಶಾಲೆ ಸೇರಿ​ದಂತೆ ರಾಜ್ಯ ಸರ್ಕಾ​ರದ ಕಾರ್ಯ​ಕ್ರ​ಮ​ಗಳ ಪಟ್ಟಿಮಾಡಿ​, ಮೆಚ್ಚುಗೆ ವ್ಯಕ್ತ​ಪ​ಡಿ​ಸಿ​ದ​ರು. ಮಾಜಿ ಮುಖ್ಯ​ಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರ ನೇತೃತ್ವದಲ್ಲಿ ರಾಜ್ಯದಲ್ಲಿ ರೈತರು ಅಭಿವೃದ್ಧಿ ಕಂಡಿದ್ದಾರೆ. ಅಲ್ಲದೆ ಹಾಲಿ ಮುಖ್ಯ​ಮಂತ್ರಿ ಬೊಮ್ಮಾಯಿ ಕೂಡ ರಾಜ್ಯಕ್ಕೆ ಸಾಕಷ್ಟುಉತ್ತಮ ಕೆಲಸಗಳನ್ನು ಮಾಡುತ್ತಿದ್ದಾರೆ. ಮುಂದಿನ ಚುನಾವಣೆಯಲ್ಲಿ ಅವರ ಕೈ ಬಲಪಡಿಸಬೇಕು. ಈ ಮೂಲಕ ಮೋದಿ ಅವರ ಅಭಿವೃದ್ಧಿ ಕಲ್ಪನೆಯನ್ನು ಸಾಕಾರಗೊಳಿಸಬೇಕು ಎಂದು ಹೇಳಿದರು.

ಟಿಪ್ಪು ವರ್ಸಸ್‌ ರಾಣಿ ಅಬ್ಬ​ಕ್ಕ: ಜೆಡಿ​ಎ​ಸ್‌ಗೆ ಮತ ಹಾಕಿ​ದರೆ ಕಾಂಗ್ರೆ​ಸ್‌ಗೆ ಮತ​ಹಾ​ಕಿ​ದಂತೆ ಎಂದು ಅಭಿ​ಪ್ರಾ​ಯ​ಪಟ್ಟಅಮಿತ್‌ ಶಾ, ಎರಡೂ ಪಕ್ಷ​ಗ​ಳಿಂದ ರಾಜ್ಯದ ಅಭಿ​ವೃದ್ಧಿ ಸಾಧ್ಯ​ವಿಲ್ಲ ಎಂದು ಆರೋ​ಪಿ​ಸಿ​ದರು. ಟಿಪ್ಪು ಸುಲ್ತಾ​ನ್‌ನನ್ನು ಬೆಂಬ​ಲಿ​ಸುವ ಕಾಂಗ್ರೆಸ್‌ ಮತ್ತು ಜೆಡಿಎಸ್‌ಗೆ ಮತ ನೀಡುತ್ತೀರಾ ಅಥವಾ ಶೌರ್ಯಕ್ಕೆ ಹೆಸರಾಗಿರುವ ತುಳು​ನಾ​ಡಿನ ವೀರ ರಾಣಿ ಅಬ್ಬಕ್ಕರನ್ನು ನಂಬುವ ಬಿಜೆಪಿಗೆ ಓಟು ಹಾಕುತ್ತೀ​ರಾ ಎಂಬುದನ್ನು ನೀವೇ ತೀರ್ಮಾನಿಸಿ. ಮೋದಿ ನೇತೃ​ತ್ವದ ರಾಷ್ಟ್ರ ಭಕ್ತರ ಬಿಜೆಪಿ ಸರ್ಕಾರ ಅಧಿ​ಕಾ​ರಕ್ಕೆ ಬರ​ಬೇಕೋ ಅಥವಾ ಭ್ರಷ್ಟಚಾರ​ದಲ್ಲಿ ಮುಳು​ಗಿ​ರು​ವ ಹಾಗೂ ಕರ್ನಾ​ಟ​ಕ​ವನ್ನು ತನ್ನ ಎಟಿಎಂ ಆಗಿ ನೋಡುವ ಗಾಂಧಿ ಪರಿವಾರದ ಕಾಂಗ್ರೆಸ್‌ ಅಧಿ​ಕಾ​ರಕ್ಕೆ ಬರ​ಬೇಕೋ ಎಂದು ನೀವೇ ನಿರ್ಧ​ರಿಸಿ ಎಂದ​ರು.

ಬಿಜೆಪಿ, ಜೆಡಿಎಸ್‌ ಷಡ್ಯಂತ್ರ ನಡೆಯೋಲ್ಲ: ಪಿ.ಎಂ.ನರೇಂದ್ರಸ್ವಾಮಿ

ಪಿಎ​ಫ್‌ಐ ಬ್ಯಾನ್‌ ಮಾಡಿ​ತ್ತು: ಕಾಂಗ್ರೆಸ್‌ ಸರ್ಕಾರ ಪಾಪ್ಯುಲರ್‌ ಫ್ರಂಟ್‌ ಆಫ್‌ ಇಂಡಿಯಾದ 1,700 ಮತಾಂಧರ ಮೇಲಿದ್ದ ಪ್ರಕರಣಗಳನ್ನು ಮುಚ್ಚಿ ಬಿಡುಗಡೆ ಮಾಡಿತ್ತು. ಆದರೆ, ಮೋದಿ ನೇತೃತ್ವದ ಕೇಂದ್ರ ಸರ್ಕಾರ ಈ ಸಂಘಟನೆಯನ್ನೇ ಮಟ್ಟಹಾಕಿದರು. ನಕ್ಸಲಿಂ ಅನ್ನು ಮಟ್ಟ​ಹಾ​ಕಿ​ತು. ಕರ್ನಾಟಕವನ್ನು ಸುರಕ್ಷಿತವಾಗಿಡಲು ಮೋದಿ ಮತ್ತು ಬಿಜೆಪಿ ಸರ್ಕಾರ​ದಿಂದ ಮಾತ್ರ ಸಾಧ್ಯ ಎಂದ ಅವರು, ಕಾಶ್ಮೀರದಲ್ಲಿ 370 ವಿಧಿಯನ್ನು ರದ್ದುಗೊಳಿಸಿದಾಗ ಕಾಂಗ್ರೆಸ್‌, ಜೆಡಿಎಸ್‌ ವಿರೋಧ ವ್ಯಕ್ತಪಡಿಸಿದ್ದವು. ರಕ್ತದ ಓಕುಳಿ ಹರಿಯಬಹುದು ಎಂದು ಹೇಳಿದ್ದರು. ಆದರೆ, ಮೋದಿ ಸರ್ಕಾರ ಯಾವುದೇ ರೀತಿ ತೊಂದರೆಯಾಗದಂತೆ 370ನೇ ವಿಧಿ ತೆಗೆದು ಹಾಕಿತು ಎಂದು ಅವರು ಹೇಳಿದರು. ನೆರೆಯ ಕೇರಳ ಏನೆಂಬುದು ನಿಮಗೆಲ್ಲರಿಗೂ ಗೊತ್ತು. ಹೀಗಾ​ಗಿ ಕರ್ನಾಟಕದ ಸುರಕ್ಷೆ ಬಿಜೆಪಿಯಿಂದ ಮಾತ್ರ ಸಾಧ್ಯ. ಹೀಗಾಗಿ ರಾಜ್ಯ​ದಲ್ಲಿ ಮರಳಿ ಬಿಜೆಪಿ ಅಧಿಕಾರಕ್ಕೆ ತರಲು ಶ್ರಮಿಸಿ ಎಂದು ಶಾ ಹೇಳಿದರು.

click me!