ಕಾಂಗ್ರೆಸ್‌ ತಂದ ಯೋಜನೆ ಬಿಜೆಪಿ ಬಂದ್‌ ಮಾಡುತ್ತಿದೆ: ಯು.ಟಿ.ಖಾದರ್‌

By Kannadaprabha NewsFirst Published Feb 12, 2023, 2:40 AM IST
Highlights

ಕಾಂಗ್ರೆಸ್‌ ಸರ್ಕಾರ ಜಾರಿಗೆ ತಂದಿದ್ದ ಹಲವು ಯೋಜನೆಗಳನ್ನು ಬಿಜೆಪಿ ಬಂದ್‌ ಮಾಡಲು ಮುಂದಾಗಿದೆ ಎಂದು ಮಾಜಿ ಸಚಿವ ಯು.ಟಿ.ಖಾದರ್‌ ದೂರಿದರು. ಪಟ್ಟಣದ ತಾಲೂಕು ಕ್ರೀಡಾಂಗಣದಲ್ಲಿ ನಡೆದ ಪ್ರಜಾಧ್ವನಿ ಸಮಾವೇಶದಲ್ಲಿ ಮಾತನಾಡಿದ ಅವರು, ಜನರು ಹಸಿದು ಮಲಗ ಬಾರದು ಎಂದು ಇಂದಿರಾ ಕ್ಯಾಂಟೀನ್‌ ತೆರೆಯಲಾಗಿತ್ತು. 

ಮದ್ದೂರು (ಫೆ.12): ಕಾಂಗ್ರೆಸ್‌ ಸರ್ಕಾರ ಜಾರಿಗೆ ತಂದಿದ್ದ ಹಲವು ಯೋಜನೆಗಳನ್ನು ಬಿಜೆಪಿ ಬಂದ್‌ ಮಾಡಲು ಮುಂದಾಗಿದೆ ಎಂದು ಮಾಜಿ ಸಚಿವ ಯು.ಟಿ.ಖಾದರ್‌ ದೂರಿದರು. ಪಟ್ಟಣದ ತಾಲೂಕು ಕ್ರೀಡಾಂಗಣದಲ್ಲಿ ನಡೆದ ಪ್ರಜಾಧ್ವನಿ ಸಮಾವೇಶದಲ್ಲಿ ಮಾತನಾಡಿದ ಅವರು, ಜನರು ಹಸಿದು ಮಲಗ ಬಾರದು ಎಂದು ಇಂದಿರಾ ಕ್ಯಾಂಟೀನ್‌ ತೆರೆಯಲಾಗಿತ್ತು. ಕೂಲಿ ಕಾರ್ಮಿಕರು 10 ರು. ಕೊಟ್ಟು ಊಟ ಮಾಡುತ್ತಿದ್ದರು. ಇದೀಗ ಇಂದಿರಾ ಕ್ಯಾಂಟೀನ್‌ ಮುಚ್ಚಲಾಗುತ್ತಿದೆ ಎಂದು ಕಿಡಿಕಾರಿದರು. ಬಡವರಿಗೆ ನೀಡುವ ಹಕ್ಕಿಯನ್ನು ಕಡಿಮೆ ಮಾಡಲಾಗಿದೆ. ಇದೇ ರೀತಿ ಕಾಂಗ್ರೆಸ್‌ ನೀಡಿದ ಯೋಜನೆಗಳನ್ನು ಬಂದ್‌ ಮಾಡಲು ಬಿಜೆಪಿ ಮುಂದಾಗಿದೆ ಎಂದು ಆರೋಪಿಸಿದರು. ಇದೇ ವೇಳೆ ಕಾಂಗ್ರೆಸ್‌ ಸಮಾವೇಶವನ್ನು ಮಹಿಳಾ ಮತದಾರರಿಂದ ವೇದಿಕೆಗೆ ಕರೆದು ಜ್ಯೋತಿ ಬೆಳಗಿಸಿ ಉದ್ಘಾಟಿಸಿದ್ದು ಗಮನ ಸೆಳೆಯಿತು.

ಲೋಕಸಭಾ ಸದಸ್ಯರ್ಯಾರು ರಾಜ್ಯ ರಾಜಕಾರಣಕ್ಕೆ ಬರಲ್ಲ: ಸಂಸದ ಡಿ.ಕೆ.ಸುರೇಶ್‌ ಸೇರಿದಂತೆ ಈಗಾಗಲೇ ಲೋಕಸಭಾ ಸದಸ್ಯರಾಗಿರುವ ಯಾರು ಕೂಡ ರಾಜ್ಯ ರಾಜಕಾರಣಕ್ಕೆ ಬರುತ್ತಿಲ್ಲ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಶನಿವಾರ ಹೇಳಿದರು. ಪಟ್ಟಣದ ಕ್ರೀಡಾಂಗಣದಲ್ಲಿ ಕೆಪಿಸಿಸಿಯಿಂದ ನಡೆದ ಪ್ರಜಾಧನಿ ವೇದಿಕೆ ಕಾರ್ಯಕ್ರಮದ ನಂತರ ಸುದ್ದಿಗಾರರೊಂದಿಗೆ ಮಾತನಾಡಿ, ಈಗಾಗಲೇ ಡಿ.ಕೆ.ಸುರೇಶ್‌ ಲೋಕಸಭಾ ಸದಸ್ಯರಾಗಿರುವುದರಿಂದ ಅವರನ್ನು ಮುಂದಿನ ವಿಧಾನಸಭಾ ಚುನಾವಣೆಗೆ ಕಣಕ್ಕಿಳಿಸುವ ಅವಕಾಶಗಳಿಲ್ಲ. ನನ್ನನ್ನು ಹೊರತುಪಡಿಸಿ ಡಿ.ಕೆ. ಸುರೇಶ್‌ ಮತ್ತು ನಮ್ಮ ಕುಟುಂಬದ ಯಾರೂ ರಾಜ್ಯ ರಾಜಕಾರಣಕ್ಕೆ ಎಂಟ್ರಿಯಾಗುವುದಿಲ್ಲ ಎಂದು ಸ್ಪಷ್ಟಪಡಿಸಿದರು.

Latest Videos

ಬಿಜೆಪಿ, ಜೆಡಿಎಸ್‌ ಕಾಲದ ಸಾಕ್ಷಿ ಗುಡ್ಡೆಗಳೇನು: ಡಿಕೆಶಿ ಪ್ರಶ್ನೆ

ರಾಮನಗರದಲ್ಲಿ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರನ್ನು ಕಟ್ಟಿಹಾಕುವ ಅವಶ್ಯಕತೆ ನಮಗಿಲ್ಲ. ರಾಜಕಾರಣ ಮಾಡಬೇಕು. ಆದರೆ, ಅವರನ್ನು ಯಾಕೆ ಕಟ್ಟಿಹಾಕಬೇಕು. ಕುಮಾರಸ್ವಾಮಿಯವರ ಪಂಚರತ್ನ ಯಾತ್ರೆಯನ್ನು ನಾವು ಕಟ್ಟಿಹಾಕಲಿಲ್ಲ ಎಂದರು. ಕಾಂಗ್ರೆಸ್‌ ನಡೆಸಿದ ಮೇಕೆದಾಟು ಯೋಜನೆ ತಡೆಹಿಡಿಯಲು ಬಿಜೆಪಿ ನಡೆಸಿದ ಕುತಂತ್ರ ಫಲಿಸಲಿಲ್ಲ. ಈ ದೇಶಕ್ಕೆ ಪ್ರಾಣ ನೀಡಿದ ದೊಡ್ಡ ಇತಿಹಾಸವಿರುವ ಕಾಂಗ್ರೆಸ್‌ ಪಕ್ಷದ ನಾಯಕ ರಾಹುಲ್‌ ಗಾಂಧಿ ಹಮ್ಮಿಕೊಂಡಿದ್ದ ಭಾರತ್‌ ಜೋಡೋ ಯಾತ್ರೆಯನ್ನು ತಡೆಯಲು ಸಹ ಬಿಜೆಪಿ ನಡೆಸಿದ ಪ್ರಯತ್ನ ವ್ಯರ್ಥವಾಯಿತು ಎಂದು ವ್ಯಂಗ್ಯವಾಡಿದರು.

ಎಚ್‌.ಡಿ.ಕುಮಾರಸ್ವಾಮಿಯಿಂದ ಜಾತಿಗಳ ನಡುವೆ ವಿಷಬೀಜ: ಸಚಿವ ಶ್ರೀರಾಮುಲು

ಕಾವೇರಿ ಜಲಾನಯನ ಪ್ರದೇಶದ ಜನರಿಗೆ ನೀರಿನ ನ್ಯಾಯ ಒದಗಿಸುವ ಉದ್ದೇಶದಿಂದ ಕಾಂಗ್ರೆಸ್‌ ಮೇಕೆದಾಟು ಯೋಜನೆ ಅನುಷ್ಠಾನಕ್ಕೆ ಪಾದಯಾತ್ರೆ ನಡೆಸಿದೆಯೇ ಹೊರತು ಇದರಿಂದ ಬೇರೆ ದುರುದ್ದೇಶ ನಮ್ಮಲ್ಲಿಲ್ಲ ಎಂದು ಸ್ಪಷ್ಟಪಡಿಸಿದರು. ನಾನೂ ಸೇರಿದಂತೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ವಿಪಕ್ಷ ನಾಯಕ ಸಿದ್ದರಾಮಯ್ಯ ಅವರುಗಳ ನಾಯಕತ್ವದಲ್ಲಿ ಚುನಾವಣೆ ನಡೆಸುತ್ತಿದ್ದೇವೆ. ನಮ್ಮ ಈ ಮೂವರ ಮುಖ ನೋಡಿಕೊಂಡು ರಾಜ್ಯದ ಜನರು ಚುನಾವಣೆಯಲ್ಲಿ ಆಶೀರ್ವಾದ ಮಾಡಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

click me!