ಜಾರಕಿಹೊಳಿ ಸಾಹೇಬ್ರು ದೊಡ್ಡ ವ್ಯಕ್ತಿಯಾಗಿದ್ದು, ಆಯ್ಕೆಯಾದ ನಂತರ ಜನರ ಕೈಗೆ ಸಿಗುವುದು ವಿರಳ. ಯಮಕನಮರಡಿ ಕ್ಷೇತ್ರದ ಅಭಿವೃದ್ಧಿಯಾಗಬೇಕಾದರೇ, ಕೇಂದ್ರ ಹಾಗೂ ರಾಜ್ಯ ಸರ್ಕಾರದ ಎಲ್ಲ ಯೋಜನೆಗಳು ಸಿಗಬೇಕಾದರೇ, ಒಬ್ಬ ಸಾಮಾನ್ಯ ಕಾರ್ಯಕರ್ತನಾದ ಬಸವರಾಜ ಹುಂದ್ರಿಯವರನ್ನು ಆಯ್ಕೆ ಮಾಡಬೇಕು ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿದರು.
ಯಮಕನಮರಡಿ (ಮೇ.8) : ಜಾರಕಿಹೊಳಿ ಸಾಹೇಬ್ರು ದೊಡ್ಡ ವ್ಯಕ್ತಿಯಾಗಿದ್ದು, ಆಯ್ಕೆಯಾದ ನಂತರ ಜನರ ಕೈಗೆ ಸಿಗುವುದು ವಿರಳ. ಯಮಕನಮರಡಿ ಕ್ಷೇತ್ರದ ಅಭಿವೃದ್ಧಿಯಾಗಬೇಕಾದರೇ, ಕೇಂದ್ರ ಹಾಗೂ ರಾಜ್ಯ ಸರ್ಕಾರದ ಎಲ್ಲ ಯೋಜನೆಗಳು ಸಿಗಬೇಕಾದರೇ, ಒಬ್ಬ ಸಾಮಾನ್ಯ ಕಾರ್ಯಕರ್ತನಾದ ಬಸವರಾಜ ಹುಂದ್ರಿಯವರನ್ನು ಆಯ್ಕೆ ಮಾಡಬೇಕು ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿದರು.
ಯಮಕನಮರಡಿ(Yamakanamaradi constituency)ಯ ಸಿಇಎಸ್ ಮೈದಾನದಲ್ಲಿ ಶನಿವಾರ ನಡೆದ ಯಮಕನಮರಡಿ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಬಸವರಾಜ ಹುಂದ್ರಿ(Basavaraj Kundri bjp candidate) ಪರ ಮತಯಾಚನೆ ಸಭೆಯನ್ನುದ್ದೇಶಿಸಿ ಮಾತನಾಡಿದ ಅವರು, ಬಸವರಾಜ ಹುಂದ್ರಿ ಅವರು ಹಗಲಿರುಳು ನಿಮ್ಮ ಸೇವೆಗೆ ಸಿದ್ಧರಿದ್ದಾರೆ. ಕ್ಷೇತ್ರದಲ್ಲಿ ಯಾರೂ ಭಯಪಡುವ ಅಗತ್ಯವಿಲ್ಲ. ಯಮಕನಮರಡಿ ಕ್ಷೇತ್ರದಲ್ಲಿ ಪ್ರತಿ ಮನೆಗೆ ಶೌಚಾಲಯ ಸೇರಿದಂತೆ ವಿವಿಧ ಯೋಜನೆಗಳು ಜಾರಿಯಾಗುವಲ್ಲಿ ವಿಫಲವಾಗಿದ್ದು, ಮುಂಬರುವ ದಿನಗಳಲ್ಲಿ ಡಬಲ್ ಎಂಜಿನ್ ಸರ್ಕಾರದ ಸಹಯೋಗದಲ್ಲಿ ಬಸವರಾಜ ಹುಂದ್ರಿ ಈ ಯೋಜನೆಗಳನ್ನು ನಿಮ್ಮ ಮನೆ ಬಾಗಿಲಿಗೆ ತಲುಪ್ಪಿಸುವ ವ್ಯವಸ್ಥೆ ಮಾಡುವಲ್ಲಿ ಸಂಶಯವಿಲ್ಲ ಎಂದರು.
ಕಾಂಗ್ರೆಸ್ ಪಿಎಫ್‌ಐ ಏಜೆಂಟ್, ಸವದಿ ಪಕ್ಷದ್ರೋಹಕ್ಕೆ ತಕ್ಕ ಪಾಠ ಕಲಿಸಿ: ಕೇಂದ್ರ ಸಚಿವ ಅಮಿತ್ ಶಾ ಗುಡುಗು
ಕಾಂಗ್ರೆಸ್ ಪಕ್ಷವು ಇಷ್ಟುವರ್ಷ ದೇಶದಲ್ಲಿ ಆಡಳಿತ ನಡೆಸಿದರೂ ಕೂಡಾ ಆದಿವಾಸಿ ಜನಾಂಗದ ಅಭಿವೃದ್ಧಿಗೆ ಶ್ರಮಿಸಿಲ್ಲ. ನರೇಂದ್ರ ಮೋದಿ ಪ್ರಧಾನಿಯಾದ ನಂತರ ಆದಿವಾಸಿ ಜನಾಂಗದ ಅಭಿವೃದ್ಧಿಗಾಗಿ ಹಲವಾರು ಜನಪ್ರಿಯ ಯೋಜನೆಗಳನ್ನು ನೀಡಿದ್ದಲ್ಲದೇ ಆ ಜನಾಂಗದ ದ್ರೌಪದಿ ಮುರ್ಮು ಅವರನ್ನು ರಾಷ್ಟ್ರಪತಿಗಳನ್ನಾಗಿ ಮಾಡಿದ್ದು ಶ್ರೇಷ್ಠವೇ ಸರಿ. ಪರಿಶಿಷ್ಟಜಾತಿ ಜನಾಂಗದ ಕಲ್ಯಾಣಕ್ಕಾಗಿ ಡಬ್ಬಲ್ ಎಂಜಿನ್ ಸರ್ಕಾರವೂ ವಿಶೇಷ ಅನುದಾನ ನೀಡಿ ಅವರ ಅಭಿವೃದ್ಧಿ ಮಾಡಿದೆ. ಮುಸ್ಲಿಂ ಧರ್ಮಾಧಾರಿತ ಮೀಸಲಾತಿ ನೀಡಲು ಅವಕಾಶವಿಲ್ಲ. ಪರಿಶಿಷ್ಟರಿಗಿದ್ದ ಶೇ.3 ಮೀಸಲಾತಿಯನ್ನು ಶೇ.7ಕ್ಕೆರಿಸಲಾಗಿದೆ. ಕಾಂಗ್ರೆಸ್ ಸರ್ಕಾರದಲ್ಲಿ ರಾಮನನ್ನು ಕತ್ತಲಲ್ಲಿಟ್ಟಿದ್ದರು. ಬಿಜೆಪಿ ಬಂದ ನಂತರ ರಾಮ ಮಂದಿರದ ಶಿಲಾನ್ಯಾಸ ನೆರವೇರಿಸಿದೆ. ಉತ್ತರ ಕರ್ನಾಟಕದಲ್ಲಿ ಕೃಷಿ ಮತ್ತಿತರ ಯೋಜನೆಗಳಿಗಾಗಿ ಸಾಕಷ್ಟುಅನುದಾನ ನೀಡಲಾಗಿದೆ. ಕಬ್ಬಿಗೆ ಹೆಚ್ಚಿನ ದರ ಘೋಷಿಸಲಾಗಿದೆ. ದೇಶದ ಸುರಕ್ಷತೆಗಾಗಿ ಬಿಜೆಪಿ ಸರ್ಕಾರವೇ ಅಗತ್ಯವಾಗಿದೆ ಎಂದರು.
ಬಸವರಜ ಹುಂದ್ರಿ ಮಾತನಾಡಿ, ಕ್ಷೇತ್ರದಲ್ಲಿನ ದಬ್ಬಾಳಿಕೆಯನ್ನು ಕಿತ್ತೊಗೆದು ಕ್ಷೇತ್ರದಲ್ಲಿನ ನೀರಾವರಿ ಸೌಲಭ್ಯಗಳಿಗೆ ಆದ್ಯತೆ ನೀಡುವುದರೊಂದಿಗೆ ಕೃಷಿ ಯೋಜನೆಗಳನ್ನು ಕ್ಷೇತ್ರಕ್ಕೆ ತರಲು ನನ್ನನ್ನು ಆಯ್ಕೆ ಮಾಡಿ ನಾನು ಕೇವಲ ಸೇವಕ ಎಂದರು.
ವೇದಿಕೆಯಲ್ಲಿ ರಾಜ್ಯಸಭಾ ಸದಸ್ಯರಾದ ಈರಣ್ಣ ಕಡಾಡಿ, ಸಂಸದ ಅಣ್ಣಾಸಾಹೇಬ್ ಜೊಲ್ಲೆ, ವಿಧಾನಸಭಾ ಮಾಜಿ ಸದಸ್ಯ ಮಹಾಂತೇಶ ಕವಟಗಿಮಠ, ಚಿಕ್ಕೋಡಿ ಜಿಲ್ಲಾ ಬಿಜೆಪಿ ಅಧ್ಯಕ್ಷ ಡಾ.ರಾಜೇಶ ನೇರ್ಲಿ, ಹುಕ್ಕೇರಿ ಗ್ರಾಮೀಣ ವಿದ್ಯುತ್ ಸಂಘದ ಅಧ್ಯಕ್ಷ ಕಲಗೌಡ ಪಾಟೀಲ, ಮುಖಂಡರಾದ ರವಿಂದ್ರ ಹಂಜಿ, ಶಶಿಕಾಂತ ಪಾಟೀಲ, ಅವಿನಾಶ ಪಾಟೀಲ, ಶಂಕರರಾವ್ ಬಾಂದುರ್ಗೆ, ಅಶೋಕ ಚಂದಪ್ಪಗೋಳ, ಶ್ರೀಶೈಲ ಯಮಕನಮರಡಿ, ಅಪ್ಪಯ್ಯ ಜಾಜರಿ, ಸುಹಾಸ ಜೋಷಿ, ಆರ್.ಎಸ್. ಮುತಾಲಿಕ, ಸಂಗೀತಾ ಮಸೂತಿ, ಶಶಿಕಾಂತ ಮಠಪತಿ, ಈರಣ್ಣ ಗುರವ್ವ ಮುಂತಾದವರು ಹಾಗೂ ಸಂಘ ಪರಿವಾರದವರು ಅಪಾರ ಸಂಖ್ಯೆಯ ಬಿಜೆಪಿ ಕಾರ್ಯಕರ್ತರು ಉಪಸ್ಥಿತರಿದ್ದರು.
ಜನರತ್ತ ಕೈ ಬೀಸಿ ಹುಂದ್ರಿ ಅಪ್ಪಿಕೊಂಡ ಅಮಿತ್ ಶಾ!
ಸಭೆಯ ಮಧ್ಯದಲ್ಲೇ ಬಿಜೆಪಿ ಅಭ್ಯರ್ಥಿ ಬಸವರಾಜ ಹುಂದ್ರಿಯನ್ನು ನೋಡುತ್ತ ನಗೆ ಬೀರುತ್ತ ಜನರತ್ತಾ ಹುಂದ್ರಿಯವರ ಕೈ ಮೇಲೆತ್ತಿ ಜನರಿಗೆ ಮತಗಳನ್ನು ನೀಡುವಂತೆ ಹುಮ್ಮಸ್ಸು ತುಂಬುತ್ತಿದ್ದ ದೃಶ್ಯ ಸಭೆಯ ಮುಕ್ತಾಯದವರೆಗೂ ಕಂಡೂ ಬಂತು.
ಮಣಿಪುರದಲ್ಲಿ ಕಂಡಲ್ಲಿ ಗುಂಡು ಆದೇಶ: ಕೇಂದ್ರ ಗೃಹ ಸಚಿವ ಅಮಿತ್ ಶಾ ರಾಜ್ಯ ಪ್ರಚಾರ ದಿಢೀರ್ ರದ್ದು!
ಬಸವಣ್ಣವರ ಜನ್ಮ ಭೂಮಿಯಾದ ನಾಡಿನ ವಚನಗಳು ಈಡಿ ಜಗತ್ತಿಗೆ ಕಲ್ಯಾಣದ ದಾರಿ ತೋರಿಸಿ ಕೊಟ್ಟಿದ್ದಾರೆ. ಕಾಂಗ್ರೆಸ್ ಪಕ್ಷದವರು ಪ್ರಣಾಳಿಕೆಯಲ್ಲಿ ಬಜರಂಗ ದಳ ನಿಷೇಧಿಸುವುದಾಗಿ ಘೋಷಿಸಿದ್ದು ಖಂಡನೀಯ. ಈ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದವರಿಗೆ ಮತದಾರರು ತಕ್ಕ ಪಾಠ ಕಲಿಸಲಿದ್ದಾರೆ.
ಅಮಿತ್ ಶಾ, ಕೇಂದ್ರ ಗೃಹ ಸಚಿವರು.