ಕರ್ನಾಟಕದಲ್ಲಿ ಬಿಜೆಪಿ ಸರ್ಕಾರ ಮತ್ತೊಮ್ಮೆ ಅಧಿಕಾರಕ್ಕೆ ಬಂದಿದ್ದೆಯಾದಲ್ಲಿ ನಾವು ಉತ್ತರಪ್ರದೇಶದ ಯೋಗಿ ಮಾದರಿಯಲ್ಲಿ ಸರ್ಕಾರ ಕೊಡುತ್ತೇವೆ. ಗೂಂಡಾಗಿರಿ ಮಾಡೋದು, ಹಿಂದುಗಳ ಮೇಲೆ ಹಲ್ಲೆ ಮಡೋದನ್ನ ಡೈರೆಕ್ಟ್ ಬುಲ್ಡೋಜರ್ ಮತ್ತು ಎನ್ಕೌಂಟರ್ ಮುಖಾಂತರ ಉತ್ತರಿಸ್ತೇವೆ ಎಂದು ಬಿಜೆಪಿ ಸ್ಟಾರ್ ಪ್ರಚಾರಕ, ಶಾಸಕ ಬಸವನಗೌಡ ಪಾಟೀಲ್ ಯತ್ನಾಳ್ ಭವಿಷ್ಯ ನುಡಿದರು.
ಬೀದರ್ (ಮೇ.07): ಕರ್ನಾಟಕದಲ್ಲಿ ಬಿಜೆಪಿ ಸರ್ಕಾರ ಮತ್ತೊಮ್ಮೆ ಅಧಿಕಾರಕ್ಕೆ ಬಂದಿದ್ದೆಯಾದಲ್ಲಿ ನಾವು ಉತ್ತರಪ್ರದೇಶದ ಯೋಗಿ ಮಾದರಿಯಲ್ಲಿ ಸರ್ಕಾರ ಕೊಡುತ್ತೇವೆ. ಗೂಂಡಾಗಿರಿ ಮಾಡೋದು, ಹಿಂದುಗಳ ಮೇಲೆ ಹಲ್ಲೆ ಮಡೋದನ್ನ ಡೈರೆಕ್ಟ್ ಬುಲ್ಡೋಜರ್ ಮತ್ತು ಎನ್ಕೌಂಟರ್ ಮುಖಾಂತರ ಉತ್ತರಿಸ್ತೇವೆ ಎಂದು ಬಿಜೆಪಿ ಸ್ಟಾರ್ ಪ್ರಚಾರಕ, ಶಾಸಕ ಬಸವನಗೌಡ ಪಾಟೀಲ್ ಯತ್ನಾಳ್ ಭವಿಷ್ಯ ನುಡಿದರು. ಅವರು ನಗರದ ಗಾಂಧಿಗಂಜ್ನಲ್ಲಿ ಬಿಜೆಪಿ ಅಭ್ಯರ್ಥಿ ಈಶ್ವರಸಿಂಗ್ ಠಾಕೂರ್ ಪರವಾಗಿ ಆಯೋಜಿಸಿದ್ದ ಪ್ರಚಾರ ಸಭೆಯಲ್ಲಿ ಮಾತನಾಡಿ, ಹಿಂದೂಗಳ ವಿರುದ್ಧ ಅಕ್ರಮಣ ಸಹಿಸೋಲ್ಲ. ಗೂಂಡಾಗಿರಿ ನಡೆಯಲು ಬಿಡೋಲ್ಲ ಹೀಗಾಗಿ ಶೇ.90ರಷ್ಟುಹಿಂದೂಗಳು ಮತದಾನ ಮಾಡುವ ಮೂಲಕ ಬಿಜೆಪಿ ಅಭ್ಯರ್ಥಿಯನ್ನು ಆಯ್ಕೆ ಮಾಡಿ ಸರ್ಕಾರ ರಚಿಸಲು ಸಹಕರಿಸಿ ಎಂದು ಕರೆ ನೀಡಿದರು.
ಬಜರಂಗದಳ ನಿಷೇಧ ಮಾಡುವ ಮಾತನಾಡುವ ಕಾಂಗ್ರೆಸ್ಗೆ ಪಾಠ ಕಲಿಸಿ: ಕಾಂಗ್ರೆಸ್ ಚುನಾವಣೆ ಪ್ರಣಾಳಿಕೆ ಘೋಷಣೆಯಾದ ಒಂದು ತಾಸಿನೊಳಗೆ ಡಿ.ಕೆ ಶಿವಕುಮಾರ ಅವರ ಹೆಲಿಕ್ಯಾಪ್ಟರ್ ಗಾಳಿಯಲ್ಲಿ ಅಪಘಾತ ಕಂಡಿತು. ಮರುದಿನ ಬೆಂಕಿ ಅವಘಡ ಸಂಭವಿಸಿತು. ಇನ್ನು ಜಲ ಅವಘಡ ಬಾಕಿಯಿದೆ ಎಂದರು.
ಸಿ.ಟಿ.ರವಿ ರಾಜಕೀಯ ಜೀವನ ಈ ಎಲೆಕ್ಷನ್‌ನಲ್ಲಿ ಅಂತ್ಯ: ಸಿದ್ದರಾಮಯ್ಯ
ಕಾಂಗ್ರೆಸ್ನವರಿಗೆ ದೇಶ ಬೇಕಾಗಿಲ್ಲ ಮುಸ್ಲಿಂಮರ ಮತಗಳು ಮಾತ್ರ ಬೇಕು: ಕಾಂಗ್ರೆಸ್ಗೆ ಓಟು ಹಾಕಿದರೆ ಆತ್ಮಹತ್ಯೆ ಮಾಡಿಕೊಂಡಂತೆ ಎಂದು ಡಾ. ಬಾಬಾ ಸಾಹೇಬ್ ಅಂಬೇಡ್ಕರ್ 1950ರಲ್ಲಿಯೇ ಸ್ಪಷ್ಟಪಡಿಸಿದ್ದು ಅದನ್ನು ಸ್ಮರಿಸಿಕೊಳ್ಳಿ. ಅಲ್ಲದೆ ಕಾಂಗ್ರೆಸ್ನವರಿಗೆ ದೇಶ ಬೇಕಾಗಿಲ್ಲ ಮುಸ್ಲಿಂಮರ ಓಟು ಮಾತ್ರ ಬೇಕು ಎಂದು ನುಡಿದರು. ಕಾಂಗ್ರೆಸ್ ಪ್ರಣಾಳಿಕೆಯಲ್ಲಿ ಮುಸ್ಲಿಂ ಓಲೈಕೆಯೇ ಪ್ರಮುಖವಾಗಿದೆ ಅವರ ಪ್ರಣಾಳಿಕೆಯಲ್ಲಿಯೂ ಮಸೀದಿಗಳಿಗೆ ಸಂಪೂರ್ಣ ವಿದ್ಯುತ್, ಮುಸ್ಲಿಂ ವಿದ್ಯಾರ್ಥಿಗಳಿಗೆ 20ಲಕ್ಷ ರು. ಅನುದಾನ, ಮುಸ್ಲಿಂಮರಿಗೆ ವಸತಿ ಶಾಲೆ, ಇಮಾಮರಿಗೆ ಮಾಶಾಸನ ಮತ್ತಿತರವನ್ನು ಘೋಷಿಸಿದೆ ಎಂದರು.
ರಾಜಧಾನಿ ಗೆಲ್ಲಲು ಬಿಜೆಪಿ, ಕಾಂಗ್ರೆಸ್ ಜಿದ್ದಾಜಿದ್ದಿ ಕದನ: ಬೆಂಗಳೂರಿನ 3 ಕಡೆ ಜೆಡಿಎಸ್‌ನಿಂದ ಪೈಪೋಟಿ
ಲಿಂಗಾಯತರನ್ನು ಸೋಲಿಸಿ ಎಂದಿರುವ ರಹೀಮ್ ವಿರುದ್ಧ ಸ್ವಾಭಿಮಾನದ ಶಕ್ತಿ ತೋರಿಸಿ: ಬೀದರ್ನಲ್ಲಿ ಬದಲಾವಣೆ ಆಗಬೇಕು. ನಾವೆಲ್ಲ ಒಂದಾಗಬೇಕು. ಪಕ್ಷಾತೀತವಾಗಿ ಲಿಂಗಾಯತರನ್ನು ಸೋಲಿಸಿ ಎಂದು ಕರೆ ನೀಡಿರುವ ರಹೀಮ್ಖಾನ್ ವಿರುದ್ಧ ಸ್ವಾಭಿಮಾನ ತೋರಿಸಿ ಲಿಂಗಾಯತರು ಸೇರಿದಂತೆ ಎಲ್ಲರೂ ಸೇರಿಸಿ ಸೋಲಿಸಲು ಮುಂದಾಗಿ ಎಂದು ಕರೆ ನೀಡಿದರು. ಇದು ಹಿಂದು ಕ್ಷೇತ್ರವಾಗಬೇಕಾದರೆ ಎಲ್ಲರೂ ಒಂದಾಗಬೇಕು. ಅಂದು ಎಲ್ಲ ಹಿಂದೂಗಳು ಅಂಗಡಿ ಮುಂಗಟ್ಟುಗಳನ್ನು ಬಂದ್ ಮಾಡಿ, ಎಲ್ಲರೂ ಒಂದಾದಲ್ಲಿ ಈಶ್ವರಸಿಂಗ್ ಠಾಕೂರ್ ಕನಿಷ್ಟ 10 ಸಾವಿರ ಮತಗಳಿಂದ ಜಯಗಳಿಸುತ್ತಾರೆ ಆಗ ಬೀದರ್ನಲ್ಲಿ ಸದಾ ಭಗವಾ ಧ್ವಜ ಹಾರಾಡುತ್ತೆ ಎಂದು ಬಸವನಗೌಡ ಪಾಟೀಲ್ ಯತ್ನಾಳ್ ಕರೆ ನೀಡಿದರು. ಇನ್ನು ಕರ್ನಾಟಕದಲ್ಲಿ ಒಂದೇ ಹಂತದಲ್ಲಿ ಮೇ 10ರಂದು ಮತದಾನ ನಡೆಯಲಿದ್ದು, ಮೇ 13ಕ್ಕೆ ಮತ ಎಣಿಕೆ ನಡೆಯಲಿದೆ. ಏಪ್ರಿಲ್ 13ಕ್ಕೆ ಚುನಾವಣೆ ಅಧಿಸೂಚನೆ ಹೊರಡಿಸಲಾಗಿತ್ತು.