ಪಾಕಿಸ್ತಾನ ಪರ ಘೋಷಣೆ ಹಾಕಿದವರಿಗೆ ಗುಂಡೇಟು ಹೊಡೆಯಬೇಕು. ಈ ವಿಚಾರದಲ್ಲಿ ಸರ್ಕಾರ ಹಿಂದೆ ಸರಿಯುವ ಪ್ರಶ್ನೆ ಇಲ್ಲ ಎಂದು ಕಾಂಗ್ರೆಸ್ ಶಾಸಕ ಬೇಳೂರು ಗೋಪಾಲಕೃಷ್ಣ ಹೇಳಿದರು.
ಶಿವಮೊಗ್ಗ (ಮಾ.05): ಪಾಕಿಸ್ತಾನ ಪರ ಘೋಷಣೆ ಹಾಕಿದವರಿಗೆ ಗುಂಡೇಟು ಹೊಡೆಯಬೇಕು. ಈ ವಿಚಾರದಲ್ಲಿ ಸರ್ಕಾರ ಹಿಂದೆ ಸರಿಯುವ ಪ್ರಶ್ನೆ ಇಲ್ಲ ಎಂದು ಕಾಂಗ್ರೆಸ್ ಶಾಸಕ ಬೇಳೂರು ಗೋಪಾಲಕೃಷ್ಣ ಹೇಳಿದರು. ಸುದ್ದಿಗಾರರೊಂದಿಗೆ ಅವರು ಮಾತನಾಡಿ, ಈ ದೇಶ ಭಾರತೀಯರದು. ಯಾವನೋ ಬಂದು ವಿಧಾನಸೌಧದಲ್ಲಿ ಪಾಕಿಸ್ತಾನ ಜಿಂದಾಬಾದ್ ಅಂತ ಕೂಗಿದರೆ ಸಹಿಸಲು ಆಗುವುದಿಲ್ಲ. ಸರ್ಕಾರ ಗಮನಿಸಿ ಆದಷ್ಟು ಬೇಗ ತನಿಖೆ ಆಗಬೇಕು. ಅಂತಹ ವ್ಯಕ್ತಿಗಳಿಗೆ ಕಾನೂನು ರೀತಿಯಲ್ಲಿ ಶಿಕ್ಷೆ ತರಬೇಕು. ಈ ರೀತಿ ಘೋಷಣೆದವರಿಗೆ ನೇಣು ಇಲ್ಲ, ಗುಂಡು ಹಾರಿಸುವ ಕಾನೂನು ತರಬೇಕು ಎಂದು ಹರಿಹಾಯ್ದರು.
ಸರ್ಕಾರಕ್ಕೆ ಕೆಟ್ಟ ಹೆಸರು ತರುವಂತಹ ಯಾವುದೇ ವ್ಯಕ್ತಿಯನ್ನು ಬಿಡಲ್ಲ. ಇದು ಸಿಲ್ಲಿ ಘಟನೆ ಅಲ್ಲ, ಶರಣ ಪ್ರಕಾಶ್ ಪಾಟೀಲ್ ಹೀಗೆ ಹೇಳೋದು ತಪ್ಪು. ಎನ್ಐಎ ಅವರಿಗಾದರೂ ಈ ಪ್ರಕರಣ ನೀಡಿ, ಆರೋಪಿಗಳನ್ನು ಕಂಡುಹಿಡಿಯಬೇಕು. ಯಾವನೇ ಆದ್ರೂ ಗಲ್ಲು ಶಿಕ್ಷೆ ನೀಡಬೇಕು ಎಂದರು. ಈಗ ಬಾಂಬ್ ಸ್ಫೋಟ ಎಂದು ಬೊಬ್ಬೆ ಹೊಡೆಯುವ ಬಿಜೆಪಿಯವರು ಸಂಸತ್ತಿನಲ್ಲಿ ಪಾಸ್ ಕೊಟ್ಟವರದ್ದು ಏನ್ ಮಾಡಿದ್ರೂ? ಅವಾಗ್ ಇವರು ದನ ಕಾಯುತ್ತಿದ್ದರಾ? ಅವರದ್ದು ಮುಚ್ಚಿಕೊಳ್ಳುತ್ತಾರೆ, ನಮ್ಮದನ್ನ ಮಾತ್ರ ಹೇಳುತ್ತಾರೆ. ಶೆಟ್ಟರ್ ಘರ್ ವಾಪ್ಸಿ ಆಗಿದ್ದಾರೆ. ನಮ್ಮ ಪಕ್ಷಕ್ಕೆ ಇನ್ನೂ ಜನ ಬರುವವರಿದ್ದಾರೆ. ಯಾರ್ಯಾರು ಬರುತ್ತಾರೆ ಎಂಬುದನ್ನು ಕಾದುನೋಡಿ ಎಂದು ಕುಟುಕಿದರು.
undefined
ಜೆಡಿಎಸ್ ಎಲ್ಲಿದೆ? ಬಿಜೆಪಿ ಸ್ಪೋಕ್ಸ್ ಪರ್ಸನ್ ಆದ ಕುಮಾರಸ್ವಾಮಿ: ಡಿ.ಕೆ.ಶಿವಕುಮಾರ್
ವರಿಷ್ಠರು ಲೋಕಸಭೆಗೆ ನಿಲ್ಲಬೇಡ ಎಂದಿದ್ದಾರೆ: ನಾನು ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಆಕಾಂಕ್ಷಿಯಲ್ಲ. ಜಿಲ್ಲಾ ಉಸ್ತುವಾರಿ ಸಚಿವರ ನೇತೃತ್ವದಲ್ಲಿ ಆಯ್ಕೆ ಮಾಡಿದ ಯಾರೇ ಅಭ್ಯರ್ಥಿಯಾದರೂ, ಅವರ ಗೆಲುವಿಗಾಗಿ ನಾವೆಲ್ಲರೂ ಸೇರಿ ಪ್ರಯತ್ನ ಮಾಡುತ್ತೇವೆ ಎಂದು ಶಾಸಕ ಬೇಳೂರು ಗೋಪಾಲಕೃಷ್ಣ ಹೇಳಿದರು. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಲೋಕಸಭೆಗೆ ನನಗೆ ನಿಲ್ಲಬೇಡ ಎಂದು ವರಿಷ್ಠರು ಹೇಳಿದ್ದಾರೆ. ಶಾಸಕನಾಗಿ ಇದ್ದೀಯಾ, ಶಾಸಕನಾಗಿ ಇರು ಅಂದಿದ್ದಾರೆ. ನಾನು ನಿಲ್ಲಲ್ಲ, ಶಾಸಕನಾಗಿ ಇರುತ್ತೇನೆ ಎಂದರು. ನನಗೆ ಪಕ್ಷ ನಿಗಮ ಮಂಡಳಿ ಸ್ಥಾನಮಾನ ನೀಡಿ, ಗೌರವಿಸಿದೆ. ಪ್ರೀತಿಯಿಂದ ಜನ ಆಶೀರ್ವದ ಮಾಡಿದ್ದಾರೆ. ಪಕ್ಷ ನೀಡಿದ ಕೆಲಸವನ್ನು ಅಚ್ಚುಕಟ್ಟಾಗಿ ನಿಭಾಯಿಸುತ್ತೇನೆ. ನನಗೆ ನೀಡಿದ ನಿಗಮದ ಅಭಿವೃದ್ಧಿಗೆ ಶಕ್ತಿ ಮೀರಿ ಪ್ರಯತ್ನಿಸುತ್ತೇನೆ ಎಂದು ತಿಳಿಸಿದರು.
ಡಿಕೆಸು ಹೇಳಿಕೆ ವೈಭವೀಕರಣ ಬೇಡ: ಡಿ.ಕೆ.ಸುರೇಶ್ ಹೇಳಿಕೆ ಅವರ ವೈಯಕ್ತಿಕ. ಆ ಹೇಳಿಕೆಗೆ ನನ್ನ ಸಹಮತವಿಲ್ಲ. ಅದೇ ಹೇಳಿಕೆಯನ್ನು ವೈಭವೀಕರಿಸುವುದು ಬೇಡ. ಬಿಜೆಪಿಯವರು ಅನಾವಶ್ಯಕವಾಗಿ ಇದನ್ನು ರಾಜಕೀಯಕ್ಕೆ ಬಳಸಿಕೊಳ್ಳುತ್ತಿದ್ದಾರೆ. ಬಿಜೆಪಿಯ ಸಂಸದ ಅನಂತ್‍ಕುಮಾರ್ ಹೆಗಡೆ ಸಂವಿಧಾನವನ್ನು ಬದಲಿಸುವ ಮಾತನ್ನಾಡಿದ್ದರು. ಶಾಸಕ ಯತ್ನಾಳ್ ಪಕ್ಷದ ನಾಯಕರ ಮೇಲೆ ₹40 ಸಾವಿರ ಕೋಟಿಯ ಭ್ರಷ್ಟಾಚಾರ ಆರೋಪ ಮಾಡಿದ್ದರು. ಬಿಜೆಪಿ ಅವರಿಬ್ಬರನ್ನು ಪಕ್ಷದಿಂದ ಹೊರಕ್ಕೆ ಹಾಕಿಲ್ಲ ಏಕೆ? ಅವರಿಗೇನಾದರೂ ನೈತಿಕತೆ ಇದ್ದರೆ ಮೊದಲು ಪಕ್ಷದಿಂದ ಅವರಿಬ್ಬರನ್ನು ಉಚ್ಛಾಟಿಸಲಿ ಎಂದು ಕಿಡಿಕಾರಿದರು.
ದಾವಣಗೆರೆ ಲೋಕಸಭಾ ಕ್ಷೇತ್ರ ಗೆದ್ದೇ ಗೆಲ್ತೇವೆ: ಕೋಟ ಶ್ರೀನಿವಾಸ ಪೂಜಾರಿ
ಪಕ್ಷದ ಶಿಸ್ತಿನ ಸಿಪಾಯಿ: ಖರ್ಗೆಯವರು ಬಾಯಿತಪ್ಪಿ ರಾಜ್ಯ ಸಭೆಯಲ್ಲಿ ಬಿಜೆಪಿಗೆ 400 ಸ್ಥಾನ ಎಂದು ಹೇಳಿದ್ದಾರೆ. ಅದನ್ನು ದೊಡ್ಡದು ಮಾಡುವುದು ಬೇಡ. ಪ್ರಜಾಪ್ರಭುತ್ವದಲ್ಲಿ ಯಾರೂ ಬೇಕಾದರು ಮುಖ್ಯಮಂತ್ರಿ ಆಗಬಹುದು. ನಾನು ಕೂಡ ಆಗಲು ಅವಕಾಶವಿದೆ. 20 ತಿಂಗಳು ಮಾತ್ರ ಒಬ್ಬರಿಗೆ ಮಂತ್ರಿಗಿರಿ ಕೊಡಬೇಕು ಎಂಬ ಯಾವುದೇ ಹೇಳಿಕೆಯನ್ನು ನಾನು ಸಮರ್ಥಿಸುವುದಿಲ್ಲ. ಪಕ್ಷದ ಶಿಸ್ತಿನ ಶಿಫಾಯಿ. ನನಗೆ ಯಾವುದೇ ಅಸಮಧಾನವಿಲ್ಲ ಎಂದರು.