ಜೆಡಿಎಸ್ ಎಲ್ಲಿದೆ? ಬಿಜೆಪಿ ಸ್ಪೋಕ್ಸ್ ಪರ್ಸನ್ ಆದ ಕುಮಾರಸ್ವಾಮಿ: ಡಿ.ಕೆ.ಶಿವಕುಮಾರ್

By Govindaraj S  |  First Published Mar 4, 2024, 11:59 PM IST

ಜೆಡಿಎಸ್ ಎಲ್ಲಿದೆ? ಜೆಡಿಎಸ್ ಪರವಾಗಿ ಕುಮಾರಸ್ವಾಮಿ ಏನಾದರೂ ಮಾತಾಡ್ತಾ ಇದ್ದಾರಾ..? ಕುಮಾರಸ್ವಾಮಿ ಮಾತಾಡ್ತಾ ಇರೋದು ಬಿಜೆಪಿ ಪರವಾಗಿ. ಬಿಜೆಪಿ ಸ್ಪೋಕ್ಸ್ ಪರ್ಸನ್ ಆಗಿ ಕುಮಾರಸ್ವಾಮಿ ಅವರನ್ನು ನೇಮಿಸಿಕೊಂಡಿದ್ದಾರೆ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ವ್ಯಂಗ್ಯವಾಡಿದರು.


ಚನ್ನಪಟ್ಟಣ (ಮಾ.04): ಜೆಡಿಎಸ್ ಎಲ್ಲಿದೆ? ಜೆಡಿಎಸ್ ಪರವಾಗಿ ಕುಮಾರಸ್ವಾಮಿ ಏನಾದರೂ ಮಾತಾಡ್ತಾ ಇದ್ದಾರಾ..? ಕುಮಾರಸ್ವಾಮಿ ಮಾತಾಡ್ತಾ ಇರೋದು ಬಿಜೆಪಿ ಪರವಾಗಿ. ಬಿಜೆಪಿ ಸ್ಪೋಕ್ಸ್ ಪರ್ಸನ್ ಆಗಿ ಕುಮಾರಸ್ವಾಮಿ ಅವರನ್ನು ನೇಮಿಸಿಕೊಂಡಿದ್ದಾರೆ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ವ್ಯಂಗ್ಯವಾಡಿದರು. ಗ್ಯಾರಂಟಿ ಫಲಾನುಭವಿಗಳ ಸಮಾವೇಶದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಎಂದಾದರೂ ಒಂದು ದಿನ ಜೆಡಿಎಸ್ ಪರ ಕುಮಾರಸ್ವಾಮಿ ಮಾತನಾಡಿರುವ ಘಟನೆ ಇದೆಯಾ. ನಮ್ಮನ್ನು ಬೈಯಿರಿ ಬೇಕಾದ್ರೆ, ನೂರು ಬೈಯ್ಯಿರಿ ನಮಗೇನ್ ಬೇಜಾರಿಲ್ಲ. ಜೆಡಿಎಸ್ ಕೈ ಬಲಪಡಿಸಿ ಅಂತ ಏನಾದರೂ ಹೇಳಿದ್ದಾರಾ, ಜೆಡಿಎಸ್ ಹೋಯ್ತು..ತೆನೇನಾ ಬಿಸಾಕಿ ಬಿಟ್ಟು ಹೋಯ್ತು .. ಮುಗುದೋಯ್ತ ಎಂದು ಮಾರ್ಮಿಕವಾಗಿ ನುಡಿದರು.

ಮೋದಿ ಪ್ರಧಾನಿಯಾದರೇ ದೇಶ ಬಿಡ್ತೇವೆಂದರು: ನಮ್ ಗೌಡರು ಮೋದಿ ಪ್ರಧಾನಿ ಆದರೆ ದೇಶ ಬಿಟ್ಟೋಗ್ತೀನಿ ಅಂದರು. ಮೋದಿ ಹೇಳಿದ್ರು, ನಮ್ಮ ಮನೆಯಲ್ಲಿ ಜಾಗ ಕೊಡ್ತೀನಿ ಅಂದ್ರು, ನಿಜಾನಾ ಸುಳ್ಳಾ..? ಅವರ ಪಾರ್ಟಿ ಏನಾಗುತ್ತೆ ಅಂತ ಕುಮಾರಸ್ವಾಮಿ ಯೋಚನೆ ಮಾಡಬೇಕು. ಪಾಪ ನಮ್ಮ ಗೌಡರು ಕಷ್ಟಪಟ್ಟು ಕಟ್ಟಿದ ಪಕ್ಷಕ್ಕೆ ಎಂತಾ ಪರಿಸ್ಥಿತಿ ಬಂತಲ್ಲ ಅಂತ ನನಗೂ ನೋವಿದೆ. ನಾವು ಜೆಡಿಎಸ್‌ನವರೇ ಜಗಳ ಆಡ್ತಿದ್ವಿ, ಬಿಜೆಪಿಯವರೇನು ಜಗಳ ಆಡ್ತಾ ಇರಲಿಲ್ಲ ಎಂದರು. ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದಲ್ಲಿ ಯಾರನ್ನಾದರೂ ನಿಲ್ಲಿಸಲಿ, ಯಾವ ಡಾಕ್ಟರರನ್ನು ಬೇಕಾದರೂ ನಿಲ್ಲಿಸಲಿ. 

Tap to resize

Latest Videos

ಜನರ ಸಮಸ್ಯೆಗೆ ಸ್ಪಂದಿಸಿ ಉತ್ತಮ ಆಡಳಿತ ನೀಡಿರುವೆ: ಕೇಂದ್ರ ಸಚಿವ ಭಗವಂತ ಖೂಬಾ

ನಮಗೆ ಮಂಜುನಾಥ್ ಅವರ ಬಗ್ಗೆ, ಕುಮಾರಸ್ವಾಮಿ ಅವರ ಮೇಲೆ, ಅವರ ಧರ್ಮಪತ್ನಿ ಬಗ್ಗೆ, ಗೌಡರ ಬಗ್ಗೇನೂ ಗೌರವ ಇದೆ ಎಂದರು. ಯೋಗೇಶ್ವರ್ ಸಿನಿಮಾ ಒಳ್ಳೇ ತೆಗೆದವರೇ. ಅವರು ಒಳ್ಳೆಯ ಆರ್ಟಿಸ್ಟ್, ಡೈರೆಕ್ಟರ್, ಪ್ರೊಡ್ಯೂಸರ್, ಇಬ್ರೂ ಮ್ಯಾಚ್ ಆಗವ್ರೆ, ಒಳ್ಳೆದಾಗಲಿ ಎಂದು ಹೇಳಿದರು. ಬೆಂ.ಗ್ರಾ. ಕ್ಷೇತ್ರದ ಮೈತ್ರಿ ಅಭ್ಯರ್ಥಿ ವಿಚಾರಕ್ಕೆ ಪ್ರತಿಕ್ರಿಯಿದ ಶಿವಕುಮಾರ್‌, ಸುರೇಶ್ ಇಲ್ಲಿ ಸಂಸದರಲ್ಲ, ಅವರೊಬ್ಬ ಗ್ರಾಪಂ ಸದಸ್ಯ. ಪ್ರತಿಯೊಂದು ಪಂಚಾಯತಿಗೆ ಭೇಟಿ ಮಾಡಿದ್ದಾರೆ. ಇಲ್ಲಿ ಕುಮಾರಸ್ವಾಮಿ ಇದ್ರು, ದೇವೇಗೌಡ್ರು ಇದ್ರು, ಈ ರೀತಿ ಯಾರನ್ನಾದರೂ ನೋಡಿದ್ದೀರಾ? ಪಂಚಾಯತಿಯಿಂದ ಪಾರ್ಲಿಮೆಂಟ್‌ವರೆಗೂ ಜನರ ಸಮಸ್ಯೆ ಕೇಳುತ್ತಿದ್ದಾರೆ. ಆಗ ಬಿಜೆಪಿಯವರೂ ನಿಂತಿರಲಿಲ್ಲ ಕುಮಾರಸ್ವಾಮಿಯವರ ಧರ್ಮಪತ್ನಿಗೆ ಬೆಂಬಲ ನೀಡಿದ್ರು. ಅಶೋಕ್ ಅವರೂ ಒಟ್ಟಿಗೆ ಪ್ರಚಾರ ಮಾಡಿದರು. ಆದರೂ 1.32 ಲಕ್ಷ ಅಂತರದಲ್ಲಿ ಸುರೇಶ್ ಗೆದ್ದಿದ್ದರು ಎಂದರು.

ಭಾರತದ ಮೂಲನಿವಾಸಿಗಳು ಆತಂಕದಲ್ಲಿದ್ದಾರೆ: ಸಚಿವ ಮಹದೇವಪ್ಪ

ಇವತ್ತೂ ಅದೇ ಸಂದರ್ಭ, ಇವತ್ತೂ ತಾಯಂದಿರು ದೊಡ್ಡ ಶಕ್ತಿ ಕೊಡ್ತಿದ್ದಾರೆ. ಸಾವಿರಾರು ಜೆಡಿಎಸ್, ಬಿಜೆಪಿ ಕಾರ್ಯಕರ್ತರು ನಮ್ಮ ಸಂಪರ್ಕದಲ್ಲಿದ್ದಾರೆ. ಯಾರನ್ನೇ ಅಭ್ಯರ್ಥಿ ಮಾಡಿಕೊಳ್ಳಲಿ ನಮಗೆ ಅದು ವಿಚಾರನೇ ಇಲ್ಲ. ಯಾರೂ ಕೂಡ ಸುರೇಶ್‌ಗೆ ಮ್ಯಾಚ್ ಮಾಡೋದಕ್ಕೆ ಸಾಧ್ಯನೇ ಇಲ್ಲ. ಪಾರ್ಟಿ ಮೇಲೆ ನಿಲ್ಲಿಸಬಹುದೆ ಹೊರತು ವ್ಯಕ್ತಿ ಮೇಲೆ ನಿಲ್ಲಿಸೋಕೆ ಸಾಧ್ಯ ಇಲ್ಲ ಎಂದರು. ಆಪರೇಷನ್ ಹಸ್ತ ಪ್ರಶ್ನೆಗೆ ಪ್ರತಿಕ್ರಿಯಿಸಿ, ನಾನು ಪ್ರತಿ ಕುಟುಂಬಕ್ಕೂ, ಮನೆಗೂ ಕೈ ಹಾಕ್ತಾ ಇದೀನಿ. ಪ್ರತಿ ಮನೆಯ ಹೃದಯಕ್ಕೂ ಕೈ ಹಾಕ್ತಾ ಇದೀನಿ. ಬಿಜೆಪಿ ಮತದಾರರಿಗೂ ಕೈ ಹಾಕ್ತಾ ಇದೀನಿ. ಅವರೆಲ್ಲಾ ನಮ್ಮ ಹೃದಯದ ಒಳಗಡೆ ಬರಬೇಕು. ನಮ್ಮ ಕೈ ಬಲಪಡಿಸಬೇಕು, ಅವರ ಕೈಗೆ ನಾವು ಶಕ್ತಿ ಕೊಡಬೇಕು ಎಂದರು.

click me!