ಇದು ಬಹುತ್ವದ ದೇಶ, ಹಿಂದೂ ರಾಷ್ಟ್ರ ನಿರ್ಮಾಣ ಅಸಾಧ್ಯ, ನಿಮ್ಮ ಆಶೀರ್ವಾದದಿಂದ ಸಿಎಂ ಆಗಿದ್ದೇನೆ: ಸಿದ್ದರಾಮಯ್ಯ

ಬಹುತ್ವದಿಂದ ಕೂಡಿರುವ ಭಾರತವನ್ನು ಹಿಂದೂ ರಾಷ್ಟ್ರವಾಗಿ ಮಾಡಲು ಸಾಧ್ಯವಿಲ್ಲ ಎಂದು ಸಿಎಂ ಸಿದ್ದರಾಮಯ್ಯ ಅಸಮಾಧಾನ ವ್ಯಕ್ತಪಡಿಸಿದರು. 

This is a pluralistic country it is impossible to build a Hindu nation Says CM Siddaramaiah

ವರದಿ: ರವಿ.ಎಸ್ ಹಳ್ಳಿ, ಏಷ್ಯಾನೆಟ್ ಸುವರ್ಣ ನ್ಯೂಸ್ 

ಕೊಡಗು (ಜ.31): ಬಹುತ್ವದಿಂದ ಕೂಡಿರುವ ಭಾರತವನ್ನು ಹಿಂದೂ ರಾಷ್ಟ್ರವಾಗಿ ಮಾಡಲು ಸಾಧ್ಯವಿಲ್ಲ ಎಂದು ಸಿಎಂ ಸಿದ್ದರಾಮಯ್ಯ ಅಸಮಾಧಾನ ವ್ಯಕ್ತಪಡಿಸಿದರು. ಕೊಡಗು ಜಿಲ್ಲೆ ಮಡಿಕೇರಿ ತಾಲ್ಲೂಕಿನ ಭಾಗಮಂಡಲದಲ್ಲಿ ಮೇಲ್ಸೇತುವೆ ಉದ್ಘಾಟಿಸಿ ಬಳಿಕ ಅವರು ಮಾತನಾಡಿದರು. ಎಲ್ಲಾ ಜಾತಿ ಧರ್ಮಗಳ ಬಡವರಿಗೆ ಕಾಂಗ್ರೆಸ್ ಸರ್ಕಾರ ಆರ್ಥಿಕವಾಗಿ ಶಕ್ತಿ ತುಂಬುತ್ತಿದೆ. ಆದರೆ ಕೆಲವರು ಜಾತಿ ಜಾತಿಗಳ ನಡುವೆ, ಧರ್ಮ ಧರ್ಮಗಳ ನಡುವೆ ಒಡೆದಾಳುವ ನೀತಿ ಅನುಸರಿಸುತ್ತಿದ್ದಾರೆ. ಮನುಷ್ಯ ಮನುಷ್ಯನನ್ನು ಪ್ರೀತಿಸಬೇಕು ದ್ವೇಷಿಸಬಾರದು, ದ್ವೇಷಿಸಿದರೆ ಅದು ಸಂವಿಧಾನಕ್ಕೆ ವಿರೋಧ. ಸ್ವತಂತ್ರ, ಸಮಾನತೆ ಮತ್ತು ಭ್ರಾತೃತ್ವವನ್ನು ಬೆಳೆಸಬೇಕು. ಸಮಾಜವನ್ನು ಜೋಡಿಸುವ ಕೆಲಸವನ್ನು ಮಾಡಬೇಕು. ಸಮಾಜವನ್ನು ಒಡೆಯಬಾರದು ಎಂದು ಸಿದ್ದರಾಮಯ್ಯ ಹೇಳಿದರು. 

Latest Videos

ಕೆಲವರು ಇದು ಹಿಂದೂಗಳ ರಾಷ್ಟ್ರ ಎನ್ನುತ್ತಾರೆ, ಹಾಗಾದರೆ ಇದನ್ನು ಬಹುತ್ವದ ದೇಶ ಅಂತ ಹೇಗೆ ಹೇಳುವುದು. ಹಿಂದೂ ರಾಷ್ಟ್ರ ಮಾಡಲು ಸಾಧ್ಯವಿಲ್ಲ, ವಿಶ್ವ ಮಾನವನಾಗುವುದಕ್ಕೆ ಪ್ರಯತ್ನಿಸಬೇಕೇ ಹೊರತ್ತು, ಅಲ್ಪ ಮಾನವನಾಗುವುದಕ್ಕೆ ಪ್ರಯತ್ನಿಸಬಾರದು ಎಂದರು. ಮೂರು ನದಿಗಳು ಇಲ್ಲಿ ಸೇರುವುದರಿಂದ ತ್ರಿವೇಣಿ ಸಂಗಮ ಆಗಿದೆ. ಮೂರು ನದಿಗಳಿಂದ ನೀರು ಜಾಸ್ತಿಯಾಗಿ ಭಾಗಮಂಡಲ ಪ್ರವಾಹದಿಂದ ಮುಳುಗಡೆ ಆಗುತ್ತಿತ್ತು. ಇದನ್ನು ಮನಗಂಡು 2016 ರಲ್ಲಿ ನಾವೇ ಅನುದಾನ ನೀಡಿದ್ದೆವು. ಈಗ ಉದ್ಘಾಟನೆ ಆಗುತ್ತಿದೆ ಎಂದರು. ನಿಮ್ಮೆಲ್ಲರ ಆಶೀರ್ವಾದಿಂದ ನಾನು ಸಿಎಂ ಆಗಿದ್ದೇನೆ, ಕೊಡಗಿನ ಜನತೆಗೆ ನಾನು ಧನ್ಯವಾದ ಹೇಳುತ್ತೇನೆ. 

ಕೊಡಗಿನ ಎರಡು ಸ್ಥಾನಗಳನ್ನು ಗೆಲ್ಲಿಸಿಕೊಟ್ಟಿದ್ದೀರಿ, ಕೊಡಗು ಎಂದರೆ ಬಿಜೆಪಿ ಅಂತ ಅನ್ವರ್ಥನಾಮವಾಗಿತ್ತು. ಆದ್ದರಿಂದ ಕೊಡಗಿನ ಮಹಾಜನತೆಗೆ ಅನಂತ ಧನ್ಯವಾದ ಎಂದು ಹೇಳಿದರು. ಕಾಂಗ್ರೆಸ್ ಎಂದರೆ ನುಡಿದಂತೆ ನಡೆಯುವ ಪಕ್ಷ. ಚುನಾವಣೆ ಸಂದರ್ಭ ಮಾತು ಕೊಟ್ಟಂತೆ ಚಾಚೂ ತಪ್ಪದೆ ನಡೆದಿದ್ದೇವೆ. 2013 ರಲ್ಲೂ ಅಂದು 165 ಭರವಸೆ ಕೊಟ್ಟಿದ್ದೆವು, ಸರ್ಕಾರ ಬಂದ ಬಳಿಕ ಅದರಲ್ಲಿ 158 ಭರವಸೆಗಳನ್ನು ಈಡೇರಿಸಿದೆವು. ಆದರೆ ಬಿಜೆಪಿ ನೂರಾರು ಭರವಸೆ ಕೊಟ್ಟು ಒಂದು ಕೆಲಸವನ್ನು ಈಡೇರಿಸಿಲ್ಲ. ಈಗಲೂ ನಾವು 1 ವರ್ಷ 8 ತಿಂಗಳಲ್ಲಿ ನಾವು ಗ್ಯಾರಂಟಿ ಯೋಜನೆಗಳನ್ನು ಈಡೇರಿಸಿದ್ದೇವೆ. ನಾವು ನೇರವಾಗಿ ಫಲಾನುಭವಿಗಳ ಖಾತೆಗೆ ತಲುಪಿಸುತ್ತಿದ್ದೇವೆ. ಮಧ್ಯವರ್ತಿಗಳ ಹಾವಳಿ ತಪ್ಪಿಸಿದ್ದೇವೆ ಎಂದರು. 

ರಾಜ್ಯದಲ್ಲಿ ಮೈಕ್ರೋ ಫೈನಾನ್ಸ್ ಕಿರುಕುಳಕ್ಕೆ ಕೇಂದ್ರ ಸರ್ಕಾರದ ಆರ್ಥಿಕ ನೀತಿಗಳೇ ಹೊಣೆ: ಎ.ಎಸ್.ಪೊನ್ನಣ್ಣ

ಪೊನ್ನಣ್ಣ ಮತ್ತು ಮಂತರ್ ಗೌಡ ಅವರು ಕೇಳುವ ಎಲ್ಲವನ್ನು ಕೊಡಗಿಗೆ ಕೊಡುತ್ತೇವೆ. ಅವರು ಹೇಳುವ ಎಲ್ಲಾ ಕೆಲಸಗಳನ್ನು ನಮ್ಮ ಸರ್ಕಾರ ಮಾಡಲಿದೆ. ಜಿಲ್ಲೆಯಲ್ಲಿ ಸಿ ಮತ್ತು ಡಿ ದರ್ಜೆ ಭೂಮಿಯನ್ನು ಅರಣ್ಯಕ್ಕೆ ಬಿಟ್ಟುಕೊಡಲಾಗುವುದು ಎಂಬ ಚರ್ಚೆ ಇದೆ. ಆದರೆ ಇದರ ಬಗ್ಗೆ ರೈತರಿಗೆ ಆತಂಕ ಬೇಡ. ಅದಕ್ಕೆ ಸಮಿತಿ ಮಾಡಿ ಪರಿಶೀಲನೆ ಮಾಡುತ್ತೇವೆ. ಬಳಿಕ ಅದನ್ನು ನಾವು ಇಂಪ್ಲಿಮೆಂಟ್ ಮಾಡುತ್ತೇವೆ ಎಂದರು. ಇನ್ನು ಮೈಕ್ರೋ ಫೈನಾನ್ಸ್ ಕಂಪೆನಿಗಳ ಸಾಲದ ಬಗ್ಗೆ ಜನರಿಗೆ ಆತಂಕ ಬೇಡ. ಅಮಾನವೀಯವಾಗಿ ವರ್ತಿಸುವ ಕಂಪೆನಿಗಳಿಗೆ ಸರ್ಕಾರ ಕಡಿವಾಣ ಹಾಕಲಿದೆ ಎಂದು ಕೊಡಗಿನ ಭಾಗಮಂಡಲದಲ್ಲಿ ಸಿಎಂ ಸಿದ್ದರಾಮಯ್ಯ ಹೇಳಿದರು.

vuukle one pixel image
click me!
vuukle one pixel image vuukle one pixel image