
ಬೆಂಗಳೂರು(ಏ.14): ಕಾಂಗ್ರೆಸ್ ಟಿಕೆಟ್ ಬಯಸಿ ನಿರಾಶರಾಗಿ ಚಿಕ್ಕಪೇಟೆ ವಿಧಾನಸಭಾ ಕ್ಷೇತ್ರದಿಂದ ಪಕ್ಷೇತರ ಅಭ್ಯರ್ಥಿಯಾಗಿ ಗುರುವಾರ ನಾಮಪತ್ರ ಸಲ್ಲಿಸಿರುವ ಯೂಸುಫ್ ಶರೀಫ್ ಅಲಿಯಾಸ್ ಕೆಜಿಎಫ್ ಬಾಬು ಅವರ ಪತ್ನಿ ಶಾಜಿಯಾ ತರನ್ನಮ್ ತಮ್ಮ ಬಳಿ ಒಟ್ಟಾರೆ 1622.11 ಕೋಟಿ ರು. ಮೌಲ್ಯದ ಆಸ್ತಿ ಇರುವುದಾಗಿ ಘೋಷಿಸಿದ್ದಾರೆ.
ಈ ಪೈಕಿ ತರನ್ನಮ್ ತಮ್ಮ ಬಳಿ 50 ಸಾವಿರ ರು. ನಗದು, 38.58 ಲಕ್ಷ ರು ಮೌಲ್ಯದ ಚಿನ್ನ, ವಜ್ರಾಭರಣ ಸೇರಿದಂತೆ ಒಟ್ಟು 40.59 ಲಕ್ಷ ರು. ಮೌಲ್ಯದ ಚರಾಸ್ತಿ ಇದೆ. ಇದನ್ನು ಬಿಟ್ಟರೆ ಉಳಿದ 1621.71 ಕೋಟಿ ರು.ಗಳಷ್ಟು ಮೌಲ್ಯದ ಆಸ್ತಿಯು ತಮ್ಮ ಪತಿಯ ಹೆಸರಲ್ಲಿರುವುದಾಗಿ ಹೇಳಿದ್ದಾರೆ.
Chikkamagaluru: ಮೊದಲ ದಿನವೇ 5 ನಾಮಪತ್ರ ಸ್ವೀಕಾರ: ಬಿಜೆಪಿಯಿಂದ ಇಬ್ಬರು, ಪ್ರಜಾಕೀಯದಿಂದ ಒಬ್ಬರು ನಾಮಪತ್ರ ಸಲ್ಲಿಕೆ
ಇನ್ನು ಬಾಬು ಅವರ ಬಳಿ ಕೈಯಲ್ಲಿ 2.10 ಲಕ್ಷ ರು. ನಗದು, 16 ಬ್ಯಾಂಕುಗಳಲ್ಲಿ 88 ಲಕ್ಷ ರು. ಹಣ, ವಿವಿಧ ಸಂಸ್ಥೆ, ವ್ಯಕ್ತಿಗಳಿಗೆ 46.90 ಕೋಟಿ ರು. ಸಾಲ ನೀಡಿಕೆ, 18 ಕೋಟಿ ರು.ಗಳಿಗೂ ಹೆಚ್ಚು ಹೂಡಿಕೆ, 91.08 ಲಕ್ಷ ರು. ಮೌಲ್ಯದ 1518 ಗ್ರಾಂ ಚಿನ್ನ ಮತ್ತು ವಜ್ರದ ಆಭರಣ ಸೇರಿದಂತೆ 83.56 ಕೋಟಿ ರು.ಮೌಲ್ಯದ ಚರಾಸ್ತಿ ಹೊಂದಿದ್ದಾರೆ. ಅಲ್ಲದೆ, ಆನೇಕಲ್, ಬೆಂಗಳೂರು ಉತ್ತರ ತಾಲ್ಲೂಕು ವ್ಯಾಪ್ತಿಯಲ್ಲಿ 24 ಕಡೆ 1474.46 ಕೋಟಿ ರು. ಮೌಲ್ಯದ ಕೃಷಿಯೇತರ ಜಮೀನು, ಮೂರು ಕಡೆ 52.53 ಕೋಟಿ ರು. ಮೌಲ್ಯದ ಕೃಷಿ ಭೂಮಿ ಸೇರಿ ಒಟ್ಟು 1538.56 ಕೋಟಿ ರು. ಸ್ಥಿರಾಸ್ತಿ ಹೊಂದಿರುವುದಾಗಿ ಚುನಾವಣಾ ಆಯೋಗಕ್ಕೆ ಮಾಹಿತಿ ಸಲ್ಲಿಸಿದ್ದಾರೆ. ಜತೆಗೆ ವಿವಿಧ ಬ್ಯಾಂಕುಗಳು, ಇತರೆ ವ್ಯಕ್ತಿಗಳ ಬಳಿ 65.32 ಕೋಟಿ ರು. ಸಾಲ ಇದೆ ಎಂದು ಘೋಷಿಸಿದ್ದಾರೆ.
ಸಚಿವ ಸೋಮಶೇಖರ್ ಬಳಿ 28 ಕೋಟಿ ಆಸ್ತಿ
ಬೆಂಗಳೂರು: ರಾಜ್ಯ ವಿಧಾನಸಭಾ ಚುನಾವಣೆಗೆ ಯಶವಂತಪುರ ವಿಧಾನಸಭಾ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕಿಳಿದಿರುವ ಸಹಕಾರ ಸಚಿವ ಎಸ್.ಟಿ.ಸೋಮಶೇಖರ್ ಒಟ್ಟು 27.88 ಕೋಟಿ ರು. ಮೊತ್ತದ ಆಸ್ತಿಯನ್ನು ಹೊಂದಿದ್ದಾರೆ.
ಚುನಾವಣಾ ಆಯೋಗಕ್ಕೆ ಸಲ್ಲಿಕೆ ಮಾಡಿರುವ ಆಸ್ತಿ ವಿವರ ಪ್ರಮಾಣಪತ್ರದಲ್ಲಿ ಈ ಮಾಹಿತಿ ನೀಡಿದ್ದಾರೆ. ಸೋಮಶೇಖರ್ ಹೆಸರಲ್ಲಿ 5.46 ಕೋಟಿ ರು. ಮೌಲ್ಯದ ಚರಾಸ್ತಿ, 8.91 ಕೋಟಿ ರು. ಮೌಲ್ಯದ ಸ್ಥಿರಾಸ್ತಿ ಹೊಂದಿದ್ದಾರೆ. ಪತ್ನಿ ರಾಧಾ ಹೆಸರಲ್ಲಿ 53.86 ಲಕ್ಷ ರು. ಮೌಲ್ಯದ ಚರಾಸ್ತಿ, 8.72 ಕೋಟಿ ರು. ಮೌಲ್ಯದ ಸ್ಥಿರಾಸ್ತಿ ಇದೆ. ಪುತ್ರ ನಿಶಾಂತ್ ಹೆಸರಲ್ಲಿ 48.18 ಲಕ್ಷ ರು. ಚರಾಸ್ತಿ, 3.75 ಕೋಟಿ ರು. ಮೌಲ್ಯದ ಸ್ಥಿರಾಸ್ತಿ ಇದೆ ಎಂದು ಆಸ್ತಿ ಪ್ರಮಾಣ ಪತ್ರದಲ್ಲಿ ಉಲ್ಲೇಖಿಸಲಾಗಿದೆ.
1.22 ಕೋಟಿ ರು. ಸಾಲವನ್ನು ಹೊಂದಿರುವ ಸೋಮಶೇಖರ್ ಅವರು ತಮ್ಮ ಕುಟುಂಬದ ಸದಸ್ಯರಿಗೆ 2.46 ಕೋಟಿ ರು. ಸಾಲ ನೀಡಿದ್ದಾರೆ. ಇದರಲ್ಲಿ ಪುತ್ರನಿಗೆ ಅಧಿಕವಾಗಿ ಸಾಲ ನೀಡಿದ್ದು, 1.23 ಕೋಟಿ ರು. ಸಾಲ ನೀಡಲಾಗಿದೆ. ಪತ್ನಿಗೆ 16 ಲಕ್ಷ ರು., ತಾಯಿ ಸೀತಮ್ಮ ಅವರಿಗೆ ಒಂದು ಕೋಟಿ ರು. ಸಾಲ ನೀಡಿದರೆ, ಸಹೋದರ ಎಸ್.ಟಿ.ಶ್ರೀನಿವಾಸ್‌ಗೆ 6.50 ಲಕ್ಷ ರು. ಸಾಲ ನೀಡಿರುವ ಬಗ್ಗೆ ಮಾಹಿತಿ ಒದಗಿಸಲಾಗಿದೆ.
ನಿರಾಣಿ ಬಳಿ 27 ಕೋಟಿ ಆಸ್ತಿ
ಬಾಗಲಕೋಟೆ: ಸಚಿವ ಮುರುಗೇಶ್ ನಿರಾಣಿ ಅವರು ಒಟ್ಟು .27.22 ಕೋಟಿಗಳ ಚರಾಸ್ತಿ ಹೊಂದಿದ್ದಾರೆಂದು ತಮ್ಮ ಚುನಾವಣಾ ಅಫಿಡವಿಟ್‌ನಲ್ಲಿ ಆಸ್ತಿ ವಿವರ ಘೋಷಿಸಿದ್ದಾರೆ. 8.60 ಕೋಟಿಗಳ ಸ್ಥಿರಾಸ್ತಿ ಹೊಂದಿದ್ದು, .22.62 ಕೋಟಿಗಳ ಸಾಲ ಇದೆ. ಅಂದಾಜು .17 ಕೋಟಿಗೂ ಹೆಚ್ಚು ಹಣವನ್ನು ಶೇರು ರೂಪದಲ್ಲಿ ತೊಡಗಿಸಿದ್ದಾರೆ.
2 ವಾಹನಗಳು ಹಾಗೂ ನಿರಾಣಿ ಹೆಸರಿನಲ್ಲಿ 350 ಗ್ರಾಂ ಬಂಗಾರವಿದ್ದು, ಯಾವುದೇ ತೆರಿಗೆಯನ್ನು ಉಳಿಸಿಕೊಂಡಿಲ್ಲ. ಕೈಯಲ್ಲಿ ಸದ್ಯ .140,765ಗಳು ಮಾತ್ರ ಇದೆ ಎಂದು ಅಫಿಡವಿಟ್‌ನಲ್ಲಿ ತಿಳಿಸಿದ್ದಾರೆ. ನಿರಾಣಿ ಪತ್ನಿ ಕಮಲಾ ನಿರಾಣಿ 38.55 ಕೋಟಿಗಳ ಚರಾಸ್ತಿ ಹಾಗೂ .47.56 ಕೋಟಿ ಸಾಲವನ್ನು ಹೊಂದಿದ್ದಾರೆ. ಈ ಮೂಲಕ ಸಚಿವ ಮುರುಗೇಶ ನಿರಾಣಿ ಅವರಿಗಿಂತಲೂ ಆಸ್ತಿ ಗಳಿಕೆ ಹಾಗೂ ಸಾಲದ ವಿಚಾರದಲ್ಲಿ ಪತ್ನಿ ಕಮಲಾ ನಿರಾಣಿ ಅವರೇ ಮುಂದಿದ್ದಾರೆ.
ಸುಧಾಕರ್ ಬಳಿ 2.79 ಕೋಟಿಯ ಚರಾಸ್ತಿ
ಚಿಕ್ಕಬಳ್ಳಾಪುರ: ಚಿಕ್ಕಬಳ್ಳಾಪುರ ಬಿಜೆಪಿ ಅಭ್ಯರ್ಥಿಯಾಗಿ ಸಚಿವ ಕೆ.ಸುಧಾಕರ್ ಅವರು ಗುರುವಾರ ನಾಮಪತ್ರ ಸಲ್ಲಿಸಿದ್ದು, ಈ ವೇಳೆ, ಅವರು ತಮ್ಮ ಆಸ್ತಿ ವಿವರ ಸಲ್ಲಿಸಿದ್ದಾರೆ. ಸುಧಾಕರ್ ಅವರು 97 ಲಕ್ಷ ಮೌಲ್ಯದ ಕೃಷಿ ಭೂಮಿ, 52 ಲಕ್ಷ ಮೌಲ್ಯದ ಕೃಷಿಯೇತರ ಭೂಮಿ ಹೊಂದಿದ್ದಾರೆ. ಅವರು 2.79 ಕೋಟಿ ಮೌಲ್ಯದ ಚರಾಸ್ತಿ ಹೊಂದಿದ್ದಾರೆ. ಅವರ ಪತ್ನಿ, ಪ್ರೀತಿ ಹೆಸರಲ್ಲಿ 16.10 ಕೋಟಿ ರೂ.ಸ್ಥಿರಾಸ್ತಿ, 6.59 ಕೋಟಿ ಚರಾಸ್ತಿ ಇದೆ. ಸುಧಾಕರ್‌ಗೆ 1.6 ಕೋಟಿ ರೂ. ಸಾಲವಿದೆ. ಪತ್ನಿ ಹೆಸರಲ್ಲಿ 19.06 ಕೋಟಿ ರೂ. ಸಾಲವಿದೆ.
ಟೆಂಪಲ್ ರನ್ ಮುಗಿಸಿ ಬೆಂಗಳೂರಿಗೆ ಬೊಮ್ಮಾಯಿ ವಾಪಸ್, ಏ.15ಕ್ಕೆ ನಾಮಪತ್ರ ಸಲ್ಲಿಕೆ!
ಅವರ ಪತ್ನಿ ಬಳಿ 1 ಕೆ.ಜಿ. ಚಿನ್ನ, 21 ಕೆ.ಜಿ. ಬೆಳ್ಳಿ, 56 ಲಕ್ಷ ಮೌಲ್ಯದ ವಜ್ರದ ಆಭರಣವಿದೆ. ಸುಧಾಕರ್, ತಮ್ಮ ಬಳಿ 160 ಗ್ರಾಂ ಚಿನ್ನ, 9 ಕೆ.ಜಿ.ಯ ಆಭರಣ ಹೊಂದಿದ್ದಾರೆ.
ಕರ್ನಾಟಕದಲ್ಲಿ ಒಂದೇ ಹಂತದಲ್ಲಿ ಮೇ 10ರಂದು ಮತದಾನ ನಡೆಯಲಿದ್ದು, ಮೇ 13ಕ್ಕೆ ಮತ ಎಣಿಕೆ ನಡೆಯಲಿದೆ. ಏಪ್ರಿಲ್ 13ಕ್ಕೆ ಚುನಾವಣೆ ಅಧಿಸೂಚನೆ ಹೊರಡಿಸಲಿದ್ದು, ಏಪ್ರಿಲ್ 13ರಿಂದ ನಾಮಪತ್ರ ಸಲ್ಲಿಕೆ ಆರಂಭವಾಗಲಿದೆ. ನಾಮಪತ್ರ ಹಿಂಪಡೆಯಲು ಏಪ್ರಿಲ್ 24 ಕಡೆಯ ದಿನಾಂಕ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.