ಕನ​ಕ​ಪುರ ಕ್ಷೇತ್ರದವರ ಬದ​ಲಾ​ವ​ಣೆ ಆಸೆ ನನ​ಸಾ​ಗ​ಲಿದೆ: ಸಚಿ​ವ ಆರ್‌.ಅಶೋಕ್‌

Published : Apr 17, 2023, 08:42 PM IST
ಕನ​ಕ​ಪುರ ಕ್ಷೇತ್ರದವರ ಬದ​ಲಾ​ವ​ಣೆ ಆಸೆ ನನ​ಸಾ​ಗ​ಲಿದೆ: ಸಚಿ​ವ ಆರ್‌.ಅಶೋಕ್‌

ಸಾರಾಂಶ

ಇದುವರೆಗೂ ಇದ್ದ ದಬ್ಬಾಳಿಕೆ, ದೌರ್ಜನ್ಯಕ್ಕೆ ಅಂತ್ಯವಾಡಿ ಬಂಡೆ ಕ್ಷೇತ್ರ ಎಂಬ ಹೆಸರು ಹೋಗಿ ಹೃದಯವಂತ ಇರುವ ಶಾಸಕ ಆರಿಸಿ ಬರಬೇಕು ಎಂಬುದು ಕನಕಪುರ ಕ್ಷೇತ್ರದ ಜನರ ಆಸೆಯಾಗಿದೆ. ಅದು ಈ ಬಾರಿಯ ಚುನಾವಣೆಯಲ್ಲಿ ಖಂಡಿತವಾಗಿಯೂ ನನಸಾಗಲಿದೆ ಎಂದು ಕನಕಪುರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಕಂದಾಯ ಸಚಿ​ವ ಆರ್‌.ಅಶೋಕ್‌ ತಿಳಿಸಿದರು.

ಕನಕಪುರ (ಏ.17): ಇದುವರೆಗೂ ಇದ್ದ ದಬ್ಬಾಳಿಕೆ, ದೌರ್ಜನ್ಯಕ್ಕೆ ಅಂತ್ಯವಾಡಿ ಬಂಡೆ ಕ್ಷೇತ್ರ ಎಂಬ ಹೆಸರು ಹೋಗಿ ಹೃದಯವಂತ ಇರುವ ಶಾಸಕ ಆರಿಸಿ ಬರಬೇಕು ಎಂಬುದು ಕನಕಪುರ ಕ್ಷೇತ್ರದ ಜನರ ಆಸೆಯಾಗಿದೆ. ಅದು ಈ ಬಾರಿಯ ಚುನಾವಣೆಯಲ್ಲಿ ಖಂಡಿತವಾಗಿಯೂ ನನಸಾಗಲಿದೆ ಎಂದು ಕನಕಪುರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಕಂದಾಯ ಸಚಿ​ವ ಆರ್‌.ಅಶೋಕ್‌ ತಿಳಿಸಿದರು. ಬೆಂಗಳೂರಿನ ರವಿಶಂಕರ್‌ ಗುರೂಜಿ ಆಶ್ರಮ ಆಫ್‌ ಲಿವಿಂಗ್‌ ಹತ್ತಿರ ಇರುವ ಕಗ್ಗಲಿಪುರ ಗ್ರಾಮದಲ್ಲಿ ನಡೆದ ಕನಕಪುರ ವಿಧಾನಸಭಾ ಕ್ಷೇತ್ರದ ಪಕ್ಷದ ಮುಖಂಡರ ಹಾಗೂ ಕಾರ್ಯಕರ್ತರ ಸಭೆಯ ನಂತರ ಸುದ್ದಿಗಾರರೊಂದಿಗೆ ಮಾತನಾಡಿದರು.

ಕನಕಪುರದ ಜನ ಕಾಂಗ್ರೆಸ್‌ ಅಡಳಿತ ಹೋಗಬೇಕು, ಅಭಿವೃದ್ಧಿ ಪರವಾದ ನರೇಂದ್ರ ಮೋದಿಯವರ ಆಡಳಿತ ಬರಬೇಕು. ತಾಲೂಕಿನಲ್ಲಿ ಒಂದು ಒಳ್ಳೆಯ ವಾತಾವರಣ ಸೃಷ್ಟಿಯಾಗಬೇಕೆಂಬುದರ ಮೂಲಕ ಕನಕಪುರದಲ್ಲಿ ಕಾಂಗ್ರೆಸ್‌ ಆಡಳಿತ ಸರಿಯಿಲ್ಲ, ಶಿವಕುಮಾರ್‌ ಬದಲಾವಣೆ ಆಗಬೇಕೆಂಬುದನ್ನು ಕ್ಷೇತ್ರದ ಜನತೆ ಬಯಸುತ್ತಿದ್ದಾರೆ ಎಂಬುದನ್ನು ಪರೋಕ್ಷವಾಗಿ ತಿಳಿಸಿದರು. ಕನಕಪುರ ಕ್ಷೇತ್ರದಲ್ಲಿ ನಮ್ಮ ಸರ್ಕಾರದಿಂದ ಹೆಚ್ಚಿನ ಅಭಿವೃದ್ಧಿ ಕೆಲಸಗಳಾಗಿವೆ. ನಾವು ಹೆಚ್ಚಿನ ಅಭಿವೃದ್ಧಿಗೆ ಒತ್ತು ಕೊಟ್ಟು ಕೆಲಸ ಮಾಡಿದ್ದೇವೆ. ಇಲ್ಲಿ ನಾನು ಸೂಕ್ತ ಅಭ್ಯರ್ಥಿ ಎಂಬ ಕಾರಣಕ್ಕೆ ವರಿಷ್ಠರು ನನ್ನನ್ನು ಸೂಚಿಸಿದ್ದಾರೆ. 

ಬೆಲೆ ಏರಿಕೆ ಖಂಡಿಸಿ ಕಾಂಗ್ರೆಸ್‌ಗೆ ಮತ ನೀಡಿ: ಡಾ.ಜಿ.ಪರಮೇಶ್ವರ್‌

ಕ್ಷೇತ್ರದ ಜನತೆಗೆ ನನ್ನ ಪರಿಚಯವು ಚೆನ್ನಾಗಿ ಇದೆ. ಇಲ್ಲಿನ ಜನತೆ ಬದಲಾವಣೆ ಬಯಸಿರುವುದರಿಂದ ಖಂಡಿತ ಪಕ್ಷವನ್ನು ಇಲ್ಲಿ ಗೆಲ್ಲಿಸಲಿದ್ದಾರೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು. ಇಂದಿನ ಸಭೆಯಲ್ಲಿ ಇಷ್ಟೊಂದು ಕಾರ್ಯ​ಕ​ರ್ತರು ಸೇರುತ್ತಾರೆ ಎಂದು ನಾನು ಅಂದುಕೊಂಡಿರಲಿಲ್ಲ. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಸುಮಾರು 6 ಸಾವಿರದಷ್ಟುಮತಗಳನ್ನು ಮಾತ್ರ ತೆಗೆದುಕೊಂಡಿದ್ದೆವು. ಆದರೆ ಇಂದು ಇಷ್ಟೊಂದು ದೊಡ್ಡ ಸಂಖ್ಯೆಯಲ್ಲಿ ಜನರು ಸೇರಿರುವುದು ನನಗೆ ಅಚ್ಚರಿಯನ್ನುಂಟು ಮಾಡಿದೆ. ನಾವು ನಡೆಸುತ್ತಿರುವ ಮೊದಲ ಸಭೆಗೆ ಇಷ್ಟೊಂದು ಜನ ಬಂದಿರುವುದನ್ನು ನೋಡಿದಾಗ ಕ್ಷೇತ್ರದ ಜನತೆಯ ನಾಡಿ ಮಿಡಿತವೇ ಬೇರೆಯೇ ಆಗಿದೆ. 

ಒಳ್ಳೆಯ ಅಭ್ಯರ್ಥಿ ಬರುವಿಕೆಗಾಗಿ ಕ್ಷೇತ್ರದ ಜನತೆ ಕಾಯುತ್ತಿರುವುದುನ್ನು ಸೂಚಿಸುವುದಲ್ಲದೆ. ಕ್ಷೇತ್ರದ ಜನತೆ ಈ ಬಾರಿ ಬದಲಾವಣೆ ಬಯಸಿ ಒಳ್ಳೆಯ ಅಭ್ಯರ್ಥಿಗಾಗಿ ಕಾಯುತ್ತಿರುವುದು ಕಂಡು ಬರುತ್ತಿದೆ ಎಂದು ಹೇಳಿದರು. ಪಕ್ಷದ ಶಿಸ್ತಿನ ಸಿಪಾಯಿಯಾಗಿರುವ ನಾನು, ಪಕ್ಷದ ವರಿಷ್ಠರಾದ ನರೇಂದ್ರ ಮೋದಿ ಮತ್ತು ಅಮಿತ್‌ ಶಾ ಕನಕಪುರ ಕ್ಷೇತ್ರದಲ್ಲಿ ಸ್ಪರ್ಧಿಸುವಂತೆ ಸೂಚನೆ ನೀಡಿದ್ದ ಹಿನ್ನೆಲೆಯಲ್ಲಿ ನಾನು ಕನಕಪುರದಲ್ಲಿ ಸ್ಪರ್ಧೆ ಮಾಡುತ್ತಿದ್ದು ಏಪ್ರಿಲ್‌ 18 ರಂದು ನಾಮಪತ್ರ ಸಲ್ಲಿಸುತ್ತಿರುವುದಾಗಿ ತಿಳಿ​ಸಿ​ದ​ರು. ನೀವು ಎರಡು ಕ್ಷೇತ್ರದಲ್ಲಿ ಸ್ಪರ್ಧಿಸುತ್ತೀರ ಎಂಬ ನಿರೀಕ್ಷೆಯಿತ್ತ ಎಂದು ಕೇಳಿದಾಗ ನಾನು ನನ್ನ ರಾಜಕೀಯ ಜೀವನದಲ್ಲಿ ಎರಡು ಕ್ಷೇತ್ರದಲ್ಲಿ ಸ್ಪರ್ಧೆ ಮಾಡುತ್ತಿರುವುದು ಇದೇ ಮೊದಲು.

ಕನಕಪುರದಲ್ಲಿ ಗೆಲ್ಲುತ್ತೇನೆ ಎಂಬ ವಿಶ್ವಾಸ ಮತ್ತು ನಂಬಿಕೆಯಿದೆ ಎಂದು ಉತ್ತ​ರಿ​ಸಿ​ದ​ರು. ಅಭ್ಯರ್ಥಿಯಾಗಿ ಘೋಷಣೆ ಆದರೂ ಕನಕಪುರ ಕ್ಷೇತ್ರಕ್ಕೆ ಇದುವರೆಗೂ ಭೇಟಿ ನೀಡದಿರುವುದಕ್ಕೆ ನಮ್ಮದು ರಾಷ್ಟ್ರೀಯ ಪಕ್ಷ. ಜನರ ನಿರೀಕ್ಷೆ ಹೆಚ್ಚು ಇರುತ್ತದೆ. ನಮ್ಮ ಭೇಟಿ ಕಾರ್ಯಕರ್ತರಲ್ಲಿ ಹುಮ್ಮಸ್ಸು ಮತ್ತು ಆತ್ಮ ವಿಶ್ವಾಸವನ್ನು ಮೂಡಿಸ ಬೇಕಾಗಿದೆ. ಆ ನಿಟ್ಟಿನಲ್ಲಿ ಸಿದ್ದತೆಗಳನ್ನು ನಡೆಸಿದ್ದು ಕ್ಷೇತ್ರಕ್ಕೆ ಗ್ಯಾಂಡ್‌ ಎಂಟ್ರಿ ಕೊಡುತ್ತೇವೆ ಎಂದರು. ನೀವು ಕನಕಪುರಕ್ಕೆ ಬಂದರೆ ಮಿಲ್ಟಿ್ರ ಹೋಟೆಲ್ನಲ್ಲಿ ಒಳ್ಳೇ ಅತಿಥ್ಯ ಸಿಗಲಿದೆ ಎಂಬ ಶಿವಕುಮಾರ್‌ ಹೇಳಿಕೆ ಉತ್ತರಿಸಿ ನಮಗೆ ಶಿವಕುಮಾರ್‌ ರವರ ಆತಿಥ್ಯ ಬೇಕಿಲ್ಲ, ಹೃದಯ ಶ್ರೀಮಂತಿಕೆ ತುಂಬಿರುವ ಕನಕಪುರ ಜನತೆಯ ಆತಿಥ್ಯ ವಿದ್ದರೆ ಸಾಕು. ಜನರು ಹೃದಯವಂತಿಕೆಯಿಂದ ಈ ಬಾರಿ ನಮ್ಮ ಪಕ್ಷವನ್ನು ಆಶೀರ್ವಾದ ಮಾಡುವ ವಿಶ್ವಾಸವಿದೆ ಎಂದು ಹೇಳಿ​ದರು.

ರಾಮನಗರ ಕ್ಷೇತ್ರವನ್ನು ಕುಮಾರಸ್ವಾಮಿ ಅವರ ಮನೆ ಸ್ವತ್ತು ಮಾಡಿಕೊಂಡಿದ್ದಾರೆಯೇ? : ಇಕ್ಬಾಲ್‌ ಹುಸೇನ್‌

ನಮ್ಮ ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರು ಯಾರಿಗೂ ಹೆದರದೇ ಕೇಂದ್ರ ಹಾಗೂ ರಾಜ್ಯ ಸರ್ಕಾರದ ಸಾಧನೆ ಹಾಗೂ ಜನಪರ ಯೋಜನೆಗಳನ್ನು ತಾಲೂಕಿನ ಪ್ರತಿ ಯೊಂದು ಮನೆಗೂ ತಲುಪಿಸುವಂತಹ ಕೆಲಸ ಮಾಡುವ ಮೂಲಕ ಈ ಬಾರಿ ಕ್ಷೇತ್ರದಲ್ಲಿ ಬಿಜೆಪಿ ಪಕ್ಷದ ಬಾವುಟ ಹಾರಿಸುವಂತೆ ಅಶೋಕ್‌ ಕರೆ ನೀಡಿದರು. ಬಿಜೆಪಿ ರಾಜ್ಯ ಪ್ರಧಾನ ಕಾರ್ಯ​ದರ್ಶಿ ಅಶ್ವತ್ಥ ನಾರಾ​ಯ​ಣ​ಗೌಡ, ರಾಜ್ಯಒಕ್ಕಲಿಗ ಸಂಘದ ಮಾಜಿ ಅಧ್ಯಕ್ಷ ಅಪ್ಪಾಜಿಗೌಡ, ಪಕ್ಷದ ತಾಲೂಕು ಅಧ್ಯಕ್ಷ ವೆಂಕಟೇಶ್‌, ತಾಲೂಕು ಭೂ ಮಂಜೂರಾತಿ ಸದಸ್ಯ ರವಿಕುಮಾರ್‌ , ನಗರ ಅಧ್ಯಕ್ಷ ವೆಂಕಟೇಶ್‌, ಮಾಜಿ ಅಧ್ಯಕ್ಷ ನಾಗಾನಂದ್‌ ಮ​ತ್ತಿ​ತ​ರರು ಹಾಜ​ರಿ​ದ್ದರು. ಇನ್ನು ಕರ್ನಾಟಕದಲ್ಲಿ ಒಂದೇ ಹಂತದಲ್ಲಿ ಮೇ 10ರಂದು ಮತದಾನ ನಡೆಯಲಿದ್ದು, ಮೇ 13ಕ್ಕೆ ಮತ ಎಣಿಕೆ ನಡೆಯಲಿದೆ. ಏಪ್ರಿಲ್ 13ಕ್ಕೆ ಚುನಾವಣೆ ಅಧಿಸೂಚನೆ ಹೊರಡಿಸಲಿದ್ದು, ಏಪ್ರಿಲ್ 13ರಿಂದ ನಾಮಪತ್ರ ಸಲ್ಲಿಕೆ ಆರಂಭವಾಗಲಿದೆ. ನಾಮಪತ್ರ ಹಿಂಪಡೆಯಲು ಏಪ್ರಿಲ್ 24 ಕಡೆಯ ದಿನಾಂಕ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಸದನದಲ್ಲಿ ಆಡಳಿತ, ವಿಪಕ್ಷ ಭಾರೀ ಕದನ ಸಂಭವ!
₹500 ಕೋಟಿ ಕೊಟ್ರೆ ಕಾಂಗ್ರೆಸ್‌ನಲ್ಲಿ ಸಿಎಂ ಕುರ್ಚಿ : ಸಿಧು ಪತ್ನಿ ಆರೋಪ