ಅ​ಧಿಕಾರಕ್ಕೆ ಅಂಟಿಕೊಂಡು ಕೂರುವವ ನಾನಲ್ಲ: ಸಚಿವ ಎಂಟಿಬಿ ನಾಗರಾಜ್‌

By Kannadaprabha NewsFirst Published Apr 17, 2023, 8:22 PM IST
Highlights

ತಾವರೆಕೆರೆ ಗ್ರಾಪಂ ವ್ಯಾಪ್ತಿಯಲ್ಲಿ ಸುಮಾರು 5 ಕೋಟಿಗೂ ಅ​ಕ ಅಭಿವೃದ್ಧಿ ಕಾಮಗಾರಿಗಳನ್ನು ಮಾಡಿದ್ದೇನೆ. ಆದರೆ ಸಂಸದ ಬಚ್ಚೇಗೌಡರು ಈ ಗ್ರಾಮಕ್ಕೆ ಎಷ್ಟುಅಭಿವೃದ್ಧಿ ಮಾಡಿದ್ದಾರೆ ಎಂದು ಜನಸಾಮಾನ್ಯರಿಗೆ ಮಾಹಿತಿ ನೀಡಲಿ ಎಂದು ಸಚಿವ ಎಂಟಿಬಿ ನಾಗರಾಜ್‌ ಸವಾಲ್‌ ಹಾಕಿದರು. 
 

ಹೊಸಕೋಟೆ (ಏ.17): ತಾವರೆಕೆರೆ ಗ್ರಾಪಂ ವ್ಯಾಪ್ತಿಯಲ್ಲಿ ಸುಮಾರು 5 ಕೋಟಿಗೂ ಅ​ಕ ಅಭಿವೃದ್ಧಿ ಕಾಮಗಾರಿಗಳನ್ನು ಮಾಡಿದ್ದೇನೆ. ಆದರೆ ಸಂಸದ ಬಚ್ಚೇಗೌಡರು ಈ ಗ್ರಾಮಕ್ಕೆ ಎಷ್ಟುಅಭಿವೃದ್ಧಿ ಮಾಡಿದ್ದಾರೆ ಎಂದು ಜನಸಾಮಾನ್ಯರಿಗೆ ಮಾಹಿತಿ ನೀಡಲಿ ಎಂದು ಸಚಿವ ಎಂಟಿಬಿ ನಾಗರಾಜ್‌ ಸವಾಲ್‌ ಹಾಕಿದರು. ತಾಲೂಕಿನ ತಾವರೆಕೆರೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಚುನಾವಣಾ ಪ್ರಚಾರದ ವೇಳೆ ಮಾತನಾಡಿದ ಅವರು, ನಮ್ಮ ಸರ್ಕಾರದವರು ನೀಡಿರುವ ನರೇಗಾ ಅನುದಾನ ಅಭಿವೃದ್ಧಿ ಕಾಮಗಾರಿಗಳಿಗೆ ಪೂಜೆ ಮಾಡಲು ಬರುತ್ತಾರೆ. ಈಗ ಕಾಂಗ್ರೆಸ್‌ ಸರ್ಕಾರದ ಗ್ಯಾರಂಟಿ ಕಾರ್ಡ್‌ ಕೊಡುತ್ತಿದ್ದಾರೆ. 

ಕಾಂಗ್ರೆಸ್‌ ಸರ್ಕಾರ ಬರುವುದೇ ಗ್ಯಾರಂಟಿ ಇಲ್ಲ. ಬಣ್ಣ ಇಲ್ಲದ ನಾಟಕ ಮಾಡಿ ಜನರನ್ನ ಮರಳು ಮಾಡುತ್ತಿದ್ದಾರೆ. ಅಪ್ಪ ಬಿಜೆಪಿ - ಮಗ ಸ್ವಾಭಿಮಾನಿ, ಈಗ ಕಾಂಗ್ರೆಸ್‌. ಒಬ್ಬರು ಬಣ್ಣ ಹಚ್ಚಿಕೊಂಡು ಡ್ರಾಮ ಮಾಡಿದರೆ, ಮತ್ತೊಬ್ಬರು ಬಣ್ಣ ಇಲ್ಲದೆ ಡ್ರಾಮ ಮಾಡುತ್ತಾರೆ. ನಾಟಕ ಮಾಡೋದರಲ್ಲಿ ಬಚ್ಚೇಗೌಡ ಅಂಡ್‌ ಡ್ರಾಮ ಕಂಪನಿ ಈ ಭಾಗದಲ್ಲಿ ಹೆಸರುವಾಸಿ. ಮುಂದಿನ ಚುನಾವಣೆಗೆ ಯಾವ ಪಕ್ಷಕ್ಕೆ ಹೋಗಬೇಕು ಎಂಬುದನ್ನು ಈಗಲೇ ತೀರ್ಮಾನಿಸಿರುತ್ತಾರೆ. ಈ ಬಾರಿ ಚುನಾವಣೆಯಲ್ಲಿ ಕೈಗೆ ಕೈಕೊಟ್ಟು ಮನೆಗೆ ಹೋಗುತ್ತಾರೆ ಎಂದು ಬಚ್ಚೇಗೌಡರ ವಿರುದ್ಧ ವಾಗ್ದಾಳಿ ಮಾಡಿದರು.

ರಾಮನಗರ ಕ್ಷೇತ್ರವನ್ನು ಕುಮಾರಸ್ವಾಮಿ ಅವರ ಮನೆ ಸ್ವತ್ತು ಮಾಡಿಕೊಂಡಿದ್ದಾರೆಯೇ? : ಇಕ್ಬಾಲ್‌ ಹುಸೇನ್‌

ಇದು ನನ್ನ ಕೊನೆ ಚುನಾವಣೆ: ಇದು ನನ್ನ ಕೊನೆಯ ಚುನಾವಣೆ. ಕೊಟ್ಟಮಾತಿಗೆ ತಪ್ಪದೆ ಶಾಸಕನಾಗಿ ನಾನು ಕರ್ತವ್ಯ ನಿರ್ವಹಿಸಿದ್ದೇನೆ. ನಾನು ಪಕ್ಷದ ವರಿಷ್ಠರಿಗೆ ಈ ಬಾರಿಯ ಚುನಾವಣೆಯಲ್ಲಿ ಸ್ಪ​ರ್ಧಿಸಲ್ಲ ಎಂದು ತಿಳಿಸಿದ್ದೆ. ಆದರು ವರಿಷ್ಠರು ಜನರಿಗೆ ತಮ್ಮ ಸೇವೆ ಇನ್ನೂ ಇದೆ ಎಂದು ಸ್ಪರ್ಧಿಸಲು ತಿಳಿಸಿದ್ದು, ಈ ಚುನಾವಣೆಯಲ್ಲಿ ಮತ ನೀಡಿ ಜಯಶೀಲರನ್ನಾಗಿ ಮಾಡಿದರೆ ಮುಂದಿನ 5 ವರ್ಷಗಳ ಕಾಲ ಮತ್ತಷ್ಟುಅಭಿವೃದ್ಧಿ ಮಾಡುತ್ತೇನೆಂದು ಹೇಳಿದರು.

ಹೊಸಕೋಟೆ ತಾಲೂಕಾದ್ಯಂತ ಈಗಾಗಲೇ ಬಡವರಿಗೆ ಉಚಿತ ನಿವೇಶನಗಳನ್ನು ನೀಡಲು ಸ್ಥಳ ಮೀಸಲಿಡಲಾಗಿದೆ. ಚುನಾವಣೆ ಮುಂದಿನ 3 ತಿಂಗಳ ನಂತರ ಎಲ್ಲಾ ಗ್ರಾಮಗಳಲ್ಲಿ ಅರ್ಹ ಫಲಾನುಭವಿಗಳಿಗೆ ನಮ್ಮ ಸರಕಾರದ ವತಿಯಿಂದ ಉಚಿತ ನಿವೇಶನಗಳನ್ನು ನೀಡಲಾಗುವುದು. ಕಾಂಗ್ರೆಸ್‌ ಸರ್ಕಾರದವರ ರೀತಿ ಸುಳ್ಳು ಭರವಸೆಗಳನ್ನು ನೀಡುವುದಾಗಲಿ. ಗ್ಯಾರಂಟಿ ಕಾರ್ಡ್‌ ನೀಡುವುದಾಗಲಿ ಮಾಡುವುದಿಲ್ಲ. ಅಭಿವೃದ್ಧಿ ಮಾಡುವ ಉದ್ದೇಶದಿಂದ ರಾಜಕೀಯಕ್ಕೆ ಬಂದವರು ನಾವು. ಈಗಾಗಲೇ ಹೊಸಕೋಟೆಗೆ ಕಾವೇರಿ ನೀರು, ಮೆಟ್ರೋ ರೈಲು ಸೇರಿದಂತೆ ಏತ ನೀರಾವರಿ ಯೋಜನೆ ಅನುಷ್ಠಾನ ಪಡೆದು ಕ್ಷೇತ್ರದ ಸರ್ವಾಂಗೀಣ ಅಭಿವೃದ್ಧಿಗೆ ಒತ್ತು ನೀಡಬೇಕು ಎಂದು ಸರ್ಕಾರಕ್ಕೆ ಒತ್ತಡ ಹೇರಿ ಅಭಿವೃದ್ಧಿ ನಡೆಸುವ ನಾಯಕ ನಾನು. ಅ​ಧಿಕಾರದ ಆಸೆಗೆ ಅಂಟಿಕೊಂಡು ಕೂರುವ ವ್ಯಕ್ತಿ ನಾನಲ್ಲ ಎಂದು ತಿಳಿಸಿದರು.

ಮಾಗ​ಡಿ​ಯನ್ನು ಮಾದರಿ ಕ್ಷೇತ್ರ ಮಾಡುವೆ: ಎಚ್‌.ಸಿ.ಬಾಲಕೃಷ್ಣ

ಇದೇ ಸಂದರ್ಭದಲ್ಲಿ ಬಿಎಂಆರ್‌ಡಿಎ ಮಾಜಿ ಅಧ್ಯಕ್ಷ ಚನ್ನಸಂದ್ರ ಸಿ.ನಾಗರಾಜ್‌, ಬಿಜೆಪಿ ಅಧ್ಯಕ್ಷ ಕೆ.ಸತೀಶ್‌, ಎಸ್ಸಿ ಮೋರ್ಚಾ ಅಧ್ಯಕ್ಷ ನಾಗೇಶ್‌, ಮಹಿಳಾ ಮೋರ್ಚಾ ಅಧ್ಯಕ್ಷೆ ಸುಜಾತ ನಾಗರಾಜ್‌, ಮುಖಂಡರಾದ ಶ್ರೀಕಾಂತ್‌, ಚಿಕ್ಕಣ್ಣ, ಭದ್ರಿ, ಗಂಗಾಪುರ ರಾಜಣ್ಣ, ಗೌರಮ್ಮಮುನಿರಾಜು, ಪ್ರಭೇಶ್‌, ಕಾಳಪ್ಪನಹಳ್ಳಿ ನಾಗರಾಜಶಾಸ್ತಿ್ರಗಳು, ನಾರಾಯಣಸ್ವಾಮಿ, ಮಂಚಪ್ಪನಹಳ್ಳಿ ನಂಜಮರಿ, ಬಾಲು ಪ್ರಕಾಶ್‌, ಲಿಂಗಾಪುರ ಮಂಜುನಾಥ್‌ ಉಪಸ್ಥಿತರಿದ್ದರು. ಇನ್ನು ಕರ್ನಾಟಕದಲ್ಲಿ ಒಂದೇ ಹಂತದಲ್ಲಿ ಮೇ 10ರಂದು ಮತದಾನ ನಡೆಯಲಿದ್ದು, ಮೇ 13ಕ್ಕೆ ಮತ ಎಣಿಕೆ ನಡೆಯಲಿದೆ. ಏಪ್ರಿಲ್ 13ಕ್ಕೆ ಚುನಾವಣೆ ಅಧಿಸೂಚನೆ ಹೊರಡಿಸಲಿದ್ದು, ಏಪ್ರಿಲ್ 13ರಿಂದ ನಾಮಪತ್ರ ಸಲ್ಲಿಕೆ ಆರಂಭವಾಗಲಿದೆ. ನಾಮಪತ್ರ ಹಿಂಪಡೆಯಲು ಏಪ್ರಿಲ್ 24 ಕಡೆಯ ದಿನಾಂಕ.

click me!