Karnataka Election: ಶಿವಮೊಗ್ಗ ಸಮಾವೇಶದಲ್ಲಿ ತಮಿಳು ನಾಡಗೀತೆ ಪ್ರಸಾರ!

By Sathish Kumar KH  |  First Published Apr 27, 2023, 2:54 PM IST

ಶಿವಮೊಗ್ಗದ ಬಿಜೆಪಿ ತಮಿಳು ಸಮಾಜದವರ ಸಮಾವೇಶದಲ್ಲಿ ತಮಿಳು ನಾಡಗೀತೆ ಪ್ರಸಾರ ಮಾಡುವ ಮೂಲಕ ಬಿಜೆಪಿ ನಾಯಕರು ಎಡವಟ್ಟು ಮಾಡಿಕೊಂಡಿದ್ದಾರೆ.


ಶಿವಮೊಗ್ಗ (ಏ.27): ಶಿವಮೊಗ್ಗದಲ್ಲಿ ಗುರುವಾರ ಆಯೋಜನೆ ಮಾಡಲಾಗಿದ್ದ ಬಿಜೆಪಿಯ ತಮಿಳು ಸಮಾಜದವರ ಸಮಾವೇಶದಲ್ಲಿ ತಮಿಳು ನಾಡಗೀತೆಯನ್ನು ಪ್ರಸಾರ ಮಾಡುವ ಮೂಲಕ ಕಾರ್ಯಕ್ರಮ ಆಯೋಜಕರು ಎಡವಟ್ಟು ಮಾಡಿಕೊಂಡಿದ್ದಾರೆ. ತಕ್ಷಣವೇ ಎಚ್ಚೆತ್ತ ಕೆ.ಎಸ್. ಈಶ್ವರಪ್ಪ ತಮಿಳು ನಾಡಗೀತೆಯನ್ನು ಅರ್ಧಕ್ಕೆ ಸ್ಥಗಿತಗೊಳಿಸಿದ್ದಾರೆ.

ಕರ್ನಾಟಕ ವಿಧಾನಸಭೆ ಚುನಾವಣೆ (Karnataka Assembly Election 2023) ರಂಗೇರಿದ್ದು, ಎಲ್ಲ ಪಕ್ಷಗಳು ಭರ್ಜರಿ ಪ್ರಚಾರ ಕಾರ್ಯವನ್ನು ನಡೆಸುತ್ತಿದ್ದಾರೆ. ಯಾಔಉದೇ ಒಂದು ಸಣ್ಣ ಸಮುದಾಯವನ್ನೂ ಬಿಡದೇ ಎಲ್ಲ ಸಮಾಜದವರ ಸಮಾವೇಶ ಮಾಡುತ್ತಾ, ಮತಗಳನ್ನು ಪಡೆಯುವ ಗಿಮಿಕ್‌ ಮಾಡತ್ತಿದ್ದಾರೆ. ಇಂದು ಶಿವಮೊಗ್ಗದಲ್ಲಿ ಬಿಜೆಪಿ ವತಿಯಿಂದ ತಮಿಳು ಸಮುದಾಯದವರ ಸಮಾವೇಶವನ್ನು ಆಯೋಜನೆ ಮಾಡಲಾಗಿತ್ತು. ಈ ಕಾರ್ಯಕ್ರಮಕ್ಕೆ ಬತಮಿಳುನಾಡು ಬಿಜೆಪಿ ರಾಜ್ಯಾಧ್ಯಕ್ಷ ಅಣ್ಣಾಮಲೈ ಅವರನ್ನು ಮುಖ್ಯ ಅತಿಥಿಯಾಗಿ ಕರೆಸಲಾಗಿತ್ತು. ಆದರೆ, ಕಾರ್ಯಕ್ರಮ ಆರಂಭಕ್ಕೂ ಮುನ್ನ ಕರ್ನಾಟಕದ ನಾಡಗೀತೆ ಬದಲು ತಮಿಳು ನಾಡಗೀತೆಯನ್ನು ಪ್ರಸಾರ ಮಾಡುವ ಮೂಲಕ ಎಡವಟ್ಟು ಮಾಡಿಕೊಂಡಿದ್ದಾರೆ.

Tap to resize

Latest Videos

ಕಾಂಗ್ರೆಸ್‌ ಗಾಳಕ್ಕೆ ಮೀನುಗಳು ಕಚ್ಕೋತಿವೆ: ಸಾರು ಮಾಡ್ಕೊಂಡು ತಿನ್ನೋಣ!

ಅರ್ಧಕ್ಕೆ ಸ್ಥಗಿತಗೊಳಿಸಿದ ಈಶ್ವರಪ್ಪ: ಕರ್ನಾಟಕದಲ್ಲಿ ಕನ್ನಡವೇ ಸಾರ್ವಭೌಮ ಎಂದು ಹೇಳುತ್ತೇವೆ. ಆದರೆ, ಶಿವಮೊಗ್ಗದಲ್ಲಿ ತಮಿಳು ಸಮಾಜದವರ ಸಮಾವೇಶದಲ್ಲಿ ತಮಿಳು ನಾಡಗೀತೆ ಪ್ರಸಾರ ಮಾಡಿದ ತಕ್ಷಣ ಎಚ್ಚೆತ್ತ ಮಾಜಿ ಸಚಿವ ಕೆ.ಎಸ್. ಈಶ್ವರಪ್ಪ ಅವರು, ಕಾರ್ಯಕ್ರಮ ಆಯೋಜಕರಿಗೆ ಕೂಡಲೇ ಗೀತೆಯನ್ನು ನಿಲ್ಲಿಸುವಂತೆ ಹೇಳಿದ್ದಾರೆ. ಈಶ್ವರಪ್ಪ ಸೂಚನೆ ಮೇರೆಗೆ ತಮಿಳುನಾಡಿನ ನಾಡಗೀತೆಯನ್ನು ಅರ್ಧಕ್ಕೆ ಸ್ಥಗಿತಗೊಳಿಸಲಾಯಿತು. 

ಅರ್ಜುನನಾಗಿದ್ದ ಈಶ್ವರಪ್ಪ ಈಗ ಭೀಷ್ಮರಾಗಿದ್ದಾರೆ: ಬಿಜೆಪಿ ತಮಿಳು ಭಾಷಿಗರ ಸಮಾವೇಶದಲ್ಲಿ ತಮಿಳುನಾಡು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಅಣ್ಣಾಮಲೈ ಮಾತನಾಡಿ, ಮಾಜಿ ಸಿಎಂ ಯಡಿಯೂರಪ್ಪ, ಮಾಜಿ ಸಚಿವ ಈಶ್ವರಪ್ಪ ಅವರು ರಾಜ್ಯದಲ್ಲಿ ಏನು ಕೆಲಸ ಮಾಡಿದ್ದಾರೋ ಆ ಕೆಲಸವನ್ನು ನಾನು ತಮಿಳುನಾಡಿನಲ್ಲಿ ಮಾಡುತ್ತಿದ್ದೇನೆ. ಪಕ್ಷ ನನಗೆ ಅಂತಹ ಜವಾಬ್ದಾರಿ ನೀಡಿದೆ.  ಈಶ್ವರಪ್ಪ ಅರ್ಜುನನ ರೀತಿ ಕೆಲಸ ಮಾಡಿದ್ದಾರೆ. ಇದೀಗ ಭೀಷ್ಮ ಪೀತಮಹಾನಾಗಿ ಕೆಲಸ ಮಾಡ್ತಿದ್ದಾರೆ. ಬಿಜೆಪಿ ಕಾರ್ಯಕರ್ತರಿಗೆ ಈಶ್ವರಪ್ಪ ಮಾದರಿ ಎಂದು ಹೇಳಿದರು.

ಚುನಾವಣಾ ರಾಜಕಾರಣ ಬಿಟ್ಟು ದೇಶ ಕಟ್ಟುವ ಕಾರ್ಯ ಮಾಡ್ತಾರೆ: ಈಶ್ವರಪ್ಪ ಅವರು  ಚುನಾವಣಾ ರಾಜಕಾರಣದಿಂದ ನಿವೃತ್ತಿ ಆಗಿದ್ದಾರೆ. ಮುಂದೆ ಅವರಿಗೆ ಉನ್ನತ ಸ್ಥಾನ ಕಾಯುತ್ತಿದೆ. ದೇಶ ಕಟ್ಟುವ ಕೆಲಸಕ್ಕೆ ಅವರು ಸಿದ್ದರಾಗುತ್ತಾರೆ.  ಪ್ರಧಾನಿ ಮೋದಿ ಯಾರಿಗೂ ಕಾಲ್ ಮಾಡಲ್ಲ. ಮೋದಿ ಅವರು ಕಾಲ್ ಮಾಡಿ ಮಾತನಾಡ್ತಾರೆ ಅಂದ್ರೆ ಸಾಧಾರಣ ಮಾತಲ್ಲ. ತಮಿಳುನಾಡು ಹಾಗೂ ಶಿವಮೊಗ್ಗಕ್ಕೆ ಈ ಹಿಂದಿನಿಂದ ಸಂಬಂಧ ಇದೆ. ಈ ಹಿಂದೆ ನಾನು ಶಿವಮೊಗ್ಗದಲ್ಲಿ ಎಎಸ್‌ಪಿ ಆಗಿ ಕೆಲಸ ಮಾಡಿದ್ದೆ. ತಮಿಳುನಾಡು ಕರ್ನಾಟಕ ಎರಡು ರಾಜ್ಯಗಳು ರಾಮಸೇತುವೆ ರೀತಿ ಇದೆ ಎಂದು ಹೇಳಿದರು. 

ಗೋ ಹತ್ಯೆ ಜಾರಿ ಮಾಡ್ತಿವಿ ಅನ್ನೋ ಪಕ್ಷ ಅಧಿಕಾರಕ್ಕೆ ಬರಬೇಕಾ?: ಈಶ್ವರಪ್ಪ

ಕಾಂಗ್ರೆಸ್‌ ರಿವರ್ಸ್‌ ಇಂಜಿನ್‌ ಸರ್ಕಾರ: ಬಿಜೆಪಿ ಡಬಲ್ ಇಂಜಿನ್ ಸರ್ಕಾರ. ಕಾಂಗ್ರೆಸ್ ರಿವರ್ಸ್ ಇಂಜಿನ್ ಸರ್ಕಾರವಾಗಿದೆ. ಬಿಜೆಪಿ ಸರ್ಕಾರ ಮಾಡಿದ ಯೋಜನೆಯನ್ನು ಹಿಂಪಡೆಯುತ್ತೇವೆ ಎಂದು ಕಾಂಗ್ರೆಸ್ ಹೇಳುತ್ತಿದೆ/. ಕಾಂಗ್ರೆಸ್ ನವರು ಜಾತಿ ಆಧಾರದ ಮೇಲೆ ರಾಜಕಾರಣ ಮಾಡುತ್ತಿದ್ದಾರೆ. 1950 ರಲ್ಲಿ ಮಾಡಿದ ರಾಜಕಾರಣವನ್ನು ಕಾಂಗ್ರೆಸ್ ಮಾಡ್ತಿದೆ.‌ ಕಾಂಗ್ರೆಸ್ ಉಚಿತವಾಗಿ ಕೊಡ್ತೇವೆ ಅಂತಾರೆ. ಆದರೆ ಕಾಂಗ್ರೆಸ್ ಸರ್ಕಾರ ಇರುವ ರಾಜ್ಯದಲ್ಲಿ ಯಾವುದನ್ನು ಉಚಿತವಾಗಿ ಕೊಡಲು ಸಾಧ್ಯವಾಗಿಲ್ಲ. ಜನರಿಗೆ ಕೇವಲ ಭರವಸೆಗಳನ್ನಷ್ಟೆ ನೀಡಿ ವಂಚಿಸುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ‌‌ರು.

click me!