ಮಾದಿಗರಿಗೆ ಒಳಮೀಸಲಾತಿ ನೀಡಿದ ಬಿಜೆಪಿಗೆ ಮತ ಹಾಕಿ, ಋುಣ ತೀರಿಸಿ: ನಾರಾಯಣಸ್ವಾಮಿ

By Kannadaprabha News  |  First Published Apr 27, 2023, 2:35 PM IST

ಮಾದಿಗ ಸಮುದಾಯಕ್ಕೆ ಒಳ ಮೀಸಲಾತಿ ಕೊಟ್ಟಂತಹ ಬಿಜೆಪಿ ಅಭ್ಯರ್ಥಿಗೆ ಮತ ಹಾಕುವ ಮೂಲಕ ದಲಿತ ಸಮುದಾಯ ಬಿಜೆಪಿ ಪಕ್ಷದ ಋುಣ ತೀರಿಸಬೇಕಿದೆ ಎಂದು ಕೇಂದ್ರ ಸಚಿವ ಎ.ನಾರಾಯಣಸ್ವಾಮಿ ಹೇಳಿದರು.


ಹೊಸದುರ್ಗ (ಏ.27) : ಮಾದಿಗ ಸಮುದಾಯಕ್ಕೆ ಒಳ ಮೀಸಲಾತಿ ಕೊಟ್ಟಂತಹ ಬಿಜೆಪಿ ಅಭ್ಯರ್ಥಿಗೆ ಮತ ಹಾಕುವ ಮೂಲಕ ದಲಿತ ಸಮುದಾಯ ಬಿಜೆಪಿ ಪಕ್ಷದ ಋುಣ ತೀರಿಸಬೇಕಿದೆ ಎಂದು ಕೇಂದ್ರ ಸಚಿವ ಎ.ನಾರಾಯಣಸ್ವಾಮಿ ಹೇಳಿದರು.

ಪಟ್ಟಣದ ಎಸ್‌ಜೆಎಂ ಕಾಲೇಜು ಆವರಣದಲ್ಲಿ ಬುಧವಾರ ಏರ್ಪಡಿಸಲಾಗಿದ್ದ ಮಾದಿಗ ಸಮುದಾಯದ ಬೃಹತ್‌ ಸಮಾವೇಶ ಉದ್ಘಾಟಿಸಿ ಮಾತನಾಡಿದರು. ಅಹಿಂದ ಸಮುದಾಯಗಳ ಸವೋಚ್ಛ ನಾಯಕೆನಿಸಿಕೊಳ್ಳುವ ಸಿದ್ದರಾಮಯ್ಯ ದಲಿತರಿಗಾಗಿ ಏನು ಮಾಡಿದ್ದಾರೆ? ಒಳ ಮೀಸಲಾತಿ ಕಲ್ಪಿಸುವಂತೆ ಹುಬ್ಬಳ್ಳಿಯಲ್ಲಿ ನಡೆದ ಸಮಾವೇಶದಲ್ಲಿ ಮನವಿ ಸಲ್ಲಿಸಿದರೆ ಅದನ್ನು ತಿರಸ್ಕರಿಸಿ ಹೋದರು. ದಲಿತ ಮಕ್ಕಳಿಗೆ 7 ಬಾರಿ ಬಜೆಟ್‌ ಮಂಡನೆ ಮಾಡಿದರೂ ನಯಾ ಪೈಸೆ ವಿದ್ಯಾರ್ಥಿ ವೇತನ ಹೆಚ್ಚಿಸಲಿಲ್ಲ. ಇಂತಹ ಸಿದ್ದರಾಮಯ್ಯ ಇರುವ ಕಾಂಗ್ರೆಸ್‌ ಪಕ್ಷಕ್ಕೆ ಮತ ಹಾಕಬೇಕಾ ಎಂದು ಪ್ರಶ್ನಿಸಿದರು.

Tap to resize

Latest Videos

 

ಕಾಂಗ್ರೆಸ್‌ನವರು ಮೂಗಿಗೆ ತುಪ್ಪ ಸವರುತ್ತಾರೆ : ನಾರಾಯಣಸ್ವಾಮಿ

ಸೋರುವ ಮನೆಯಲ್ಲಿ ಹುಟ್ಟಿದ ಚಮ್ಮಾರನ ಮಗನಿಗೆ ಬಿಜೆಪಿ ರಾಜಕೀಯ ಸ್ಥಾನಮಾನ ನೀಡಿ ರಾಜ್ಯ ಹಾಗೂ ಕೇಂದ್ರದಲ್ಲಿ ಮಂತ್ರಿ ಮಾಡಿದೆ. ನನಗೆ ಪಕ್ಷ ನೀಡಿದ ಅಧಿಕಾರವನ್ನು ಸಮುದಾಯ ಹಾಗೂ ಸಮಾಜದ ಅಭಿವೃದ್ಧಿಗೆ ಪ್ರಾಮಾಣಿಕವಾಗಿ ಕೆಲಸ ಮಾಡಿದ್ದೇನೆ. ಹಟ್ಟಿ, ತಾಂಡಾಗಳನ್ನು ಕಂದಾಯ ಗ್ರಾಮಗಳನ್ನಾಗಿ ಮಾಡಿಸುವ ಮೂಲಕ ಭೂಮಿಯ ಹಕ್ಕನ್ನು ಕೊಡಿಸಿದ್ದೇನೆ. ಬಿಜೆಪಿ ದಲಿತರು, ಸಾಮಾಜಿಕ ನ್ಯಾಯದ ಪರವಾಗಿರುವ ಪಕ್ಷವಾಗಿದ್ದು, ಇಲ್ಲಿ ವ್ಯಕ್ತಿ ಮುಖ್ಯವಾಗಬಾರದು ಪಕ್ಷ ಮುಖ್ಯವಾಗಬೇಕು. ಈ ರಾಜ್ಯದಲ್ಲಿ ಮತ್ತೆ ಸಮೃದ್ಧಿಯಾದ ಮಳೆ ಬೆಳೆಯಾಗಿ ಜನ ನೆಮ್ಮದಿಯಿಂದ ಬದುಕುವಂತಾಗಬೇಕಾದರೆ ಮತ್ತೊಮ್ಮೆ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬರಬೇಕು ಎಂದರು.

ಅಭ್ಯರ್ಥಿ ಲಿಂಗಮೂರ್ತಿ ಮಾತನಾಡಿ ನಾನು 2 ಬಾರಿ ಚುನಾವಣೆಯಲ್ಲಿ ನಿಂತು ಸೋತು ನೋವು ಅನುಭವಿಸಿದ್ದೇನೆ. ಮತ್ತೆ ಪಕ್ಷ ನನ್ನನ್ನು ಗುರುತಿಸಿ ಟಿಕೆಟ್‌ ನೀಡಿದೆ. ನನ್ನನ್ನು ನೀವು ಬೆಂಬಲಿಸಿ, ನೀವು ಹಾಕಿದ ಮತಕ್ಕೆ ಗೌರವ ಬರುವಂತೆ ಕೆಲಸ ಮಾಡುತ್ತೇನೆ. ತಾಲೂಕಿನ ಸರ್ಕಾರಿ ಇಲಾಖೆಗಳಲ್ಲಿ ತಾಂಡವವಾಡುತ್ತಿರುವ ಲಂಚಗುಳಿತನಕ್ಕೆ ಬ್ರೇಕ್‌ ಹಾಕುವ ಕೆಲಸವನ್ನು ಗೆದ್ದಕೂಡಲೇ ಮಾಡುತ್ತೇನೆ ಎಂದರು.

ನಾನು ಯಾರನ್ನೂ ದೂರುವುದಕ್ಕೆ ಹೋಗುವುದಿಲ್ಲ. ಈ ಬಾರಿ ಎಲ್ಲಾ ಸಮುದಾಯದ ಜನ ಒಗ್ಗಟ್ಟಿನಿಂದ ಕೆಲಸ ಮಾಡುತ್ತಿದ್ದಾರೆ. ಕೇಂದ್ರ ಹಾಗೂ ರಾಜ್ಯದಲ್ಲಿ ಮೋದಿ, ಯಡಿಯೂರಪ್ಪ ಹಾಗೂ ಬೊಮ್ಮಾಯಿಯವರು ಮಾಡಿರುವ ಅಭಿವೃದ್ಧಿ ಕೆಲಸಗಳನ್ನು ಗುರುತಿಸಿ ನನಗೆ ಮತ ನೀಡಿ ಎಂದರು.

ಸಭೆಯಲ್ಲಿ ಮಂಡಲದ ಅಧ್ಯಕ್ಷ ಗೂಳಿಹಟ್ಟಿಜಗದೀಶ್‌, ಜಿಲ್ಲಾಧ್ಯಕ್ಷ ಮುರುಳಿ, ಜಿಲ್ಲಾ ಉಪಾಧ್ಯಕ್ಷ ಕಲ್ಮಠ್‌, ಜಿಲ್ಲಾ ಪ್ರಧಾನ ಕಾರ್ಯದರ್ಶಿ ರಾಜೇಶ್‌ ಬುರುಡೇಕಟ್ಟೆ, ಜಿಪಂ ಮಾಜಿ ಸದಸ್ಯರಾದ ಹನುಮಂತಪ್ಪ, ದೊಡ್ಡಘಟ್ಟದ ಲಕ್ಷ್ಮಣ್‌, ಮಾವಿನಕಟ್ಟೆಗುರುಸ್ವಾಮಿ, ಹೆಬ್ಬಳ್ಳಿ ಮಲ್ಲಿಕಾರ್ಜುನ್‌, ಕಲ್ಲೇಶಪ್ಪ, ತುಂಬಿನಕೆರೆ ಬಸವರಾಜ್‌ ಮತ್ತಿತರರು ಹಾಜರಿದ್ದರು.

ಕೋಲಾರದಲ್ಲಿ ಬಿಜೆಪಿ ಅಭ್ಯರ್ಥಿ ಗೆಲುವು ಖಚಿತ: ಡಾ.ನಾರಾಯಣಸ್ವಾಮಿ

ಚಿತ್ರದುರ್ಗ ಜಿಲ್ಲೆಯ ಸಂಸದನಾಗಿ ನಾಲ್ಕು ವರ್ಷದಲ್ಲಿ ಭದ್ರಾ ಮೇಲ್ದಂಡೆ ಯೋಜನೆಯಲ್ಲಿ ನೀರು ಹರಿಸಿದ್ದೇನೆ. ಅಲ್ಲದೆ ಯೋಜನೆ ಪೂರ್ಣಗೊಳ್ಳಲು ಕೇಂದ್ರದಿಂದ 5 ಸಾವಿರ ಕೋಟಿ ರು. ಅನುದಾನ ಕೊಡಿಸಿದ್ದೇನೆ. ಅಲ್ಲದೆ ದಾವಣಗೆರೆ-ತುಮಕೂರು ನೇರ ರೈಲು ಮಾರ್ಗಕ್ಕೆ ಇದ್ದ ಅಡೆತಡೆಗಳನ್ನು ನಿವಾರಣೆ ಮಾಡಿಸಿದ್ದೇನೆ. ಚಿತ್ರದುರ್ಗ ಜಿಲ್ಲೆಯಲ್ಲಿ ಮೆಡಿಕಲ್‌ ಕಾಲೇಜು ಹಾಗೂ ಕೇಂದ್ರೀಯ ವಿದ್ಯಾಲಯ ಸ್ಥಾಪನೆಗೆ ಕ್ರಮ ಕೈಗೊಳ್ಳಲಾಗಿದೆ.

- ಎ ನಾರಾಯಣಸ್ವಾಮಿ, ಕೇಂದ್ರ ಸಚಿವ

click me!