ಕಾಂಗ್ರೆಸ್‌ ಗಾಳಕ್ಕೆ ಮೀನುಗಳು ಕಚ್ಕೋತಿವೆ: ಸಾರು ಮಾಡ್ಕೊಂಡು ತಿನ್ನೋಣ!

By Sathish Kumar KH  |  First Published Apr 27, 2023, 1:58 PM IST

ಕಾಂಗ್ರೆಸ್‌ ಗಾಳಕ್ಕೆ ಮೀನುಗಳು ಕಚ್ಚಿಕೊಳ್ಳುತ್ತಿದ್ದು, ನಾವು- ನೀವು ಎಲ್ಲರೂ ಸೇರಿ ಮೀನು ಸಾರು ಮಾಡಿಕೊಂಡು ತಿನ್ನೋಣ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ಮಾರ್ಮಿಕವಾಗಿ ಹೇಳಿದ್ದಾರೆ.


ಬೆಂಗಳೂರು (ಏ.27): ರಾಜ್ಯದಲ್ಲಿ ಬಿಜೆಪಿ, ಜೆಡಿಎಸ್‌ನಿಂದ ಹಲವು ನಾಯಕರು ಕಾಂಗ್ರೆಸ್‌ಗೆ ಸೇರ್ಪಡೆ ಆಗುತ್ತಿದ್ದಾರೆ. ಕಾಂಗ್ರೆಸ್‌ ಗಾಳ ಬಿಟ್ಟಾಗಿದೆ. ಗಾಳಕ್ಕೆ ಮೀನುಗಳು ಕಚ್ಚಿಕೊಳ್ಳುತ್ತಿದ್ದು, ನಾವು- ನೀವು ಎಲ್ಲರೂ ಸೇರಿ ಮೀನು ಸಾರು ಮಾಡಿಕೊಂಡು ತಿನ್ನೋಣ ಎಂದು ಕಾಂಗ್ರೆಸ್‌ ಸೇರ್ಪಡೆಯಾದವರ ಬಗ್ಗೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ಮಾರ್ಮಿಕವಾಗಿ ಹೇಳಿದ್ದಾರೆ.

ಬೆಂಗಳೂರಿನ ಕರ್ನಾಟಕ ಪ್ರದೇಶ ಕಾಂಗ್ರೆಸ್‌ ಸಮಿತಿ (ಕೆಪಿಸಿಸಿ) ಕಚೇರಿಯಲ್ಲಿ ಜೆಡಿಎಸ್‌ ಪಕ್ಷ ಬಿಟ್ಟು ಕಾಂಗ್ರೆಸ್‌ ಸೇರ್ಪಡೆಗೊಂದ ಬೆಂಗಳೂರು ದಕ್ಷಿಣ ಕ್ಷೇತ್ರದ ಪ್ರಭಾಕರ್ ರೆಡ್ಡಿ ಹಾಗೂ ಕನಕಪುರದ ನಾರಾಯಣಗೌಡ ಅವರಿಗೆ ಕಾಂಗ್ರೆಸ್ ಭಾವುಟ ನೀಡಿ ಪಕ್ಷಕ್ಕೆ ಸೇರ್ಪಡೆ ಮಾಡಿಕೊಂಡರು. ನಂತರ ಮಾಧ್ಯಮಗಳೊಂದಿಗೆ ಮಾತನಾಡುವಾಗ, ಮಾಧ್ಯಮಗಳಿಂದ ಇನ್ನೂ ಯಾರಾರಿಗೆ ಗಾಳ ಹಾಕಿದ್ದೀರಾ ಎಂಬ ಪ್ರಶ್ನೆ ಮಾಡಲಾಯಿತು. ಇದಕ್ಕೆ ಪ್ರತಿಕಗ್ರಿಯೆ ನೀಡಿದ ಡಿಕೆಶಿ ಗಾಳ ಎನೂ ಇಲ್ಲ. ಈಗಾಗಲೇ ಕಾಂಗ್ರೆಸ್‌ ಗಾಳ ಬಿಟ್ಟಾಗಿದೆ ಮೀನುಗಳು ಕಚ್ಕೊತಾ ಇದಾವೆ. ನಾವು - ನೀವು ಮೀನು ಸಾರು ಮಾಡಿ ತಿನ್ನೋಣ. ಎಲೆಕ್ಷನ್ ಹಾಗೂ ರಾಜಕಾರಣ ಮಾಡೋರು, ಮಾಡಲಿ. ಫಲಿತಾಂಶ ಉತ್ತರ ನೀಡಲಿದೆ ಎಂದು ಹೇಳಿದರು.

Tap to resize

Latest Videos

ಬಿಜೆಪಿ ಪಕ್ಷದ ಬೆನ್ನಿಗೆ ಚೂರಿ ಹಾಕಿದ ಶೆಟ್ಟರ್‌, ಸವದಿ: ಯಡಿಯೂರಪ್ಪ

ಕನಕಪುರ,ಬೆಂಗಳೂರು ದಕ್ಷಿಣ ಕ್ಷೇತ್ರದಲ್ಲಿ ಹೊಸ ಬದಲಾವಣೆ ಆಗ್ತಾ ಇದ್ದೇವೆ. ಪಿಜಿಆರ್ ಸಿಂಧ್ಯಾ ಅವರು ಬಸವಕಲ್ಯಾಣದಲ್ಲಿ ಕಾಂಗ್ರೆಸ್ ಸೇರಿದ್ದಾರೆ. ಕನಕಪುರದಲ್ಲಿ ನಾರಯನಗೌಡ ಚುನಾವಣೆಯಲ್ಲಿ ನನ್ನ ವಿರುದ್ಧ ಸ್ಫರ್ಧೆ ಮಾಡಿದ್ದರು.ಸಹಕಾರ ರಂಗದಲ್ಲಿ ಒಳ್ಳೆಯ ಹೆಸರು ಮಾಡಿದ್ದರು. ನನಗೆ ಒಳ್ಳೆಯದಾಗಲಿ ಅಂತ ಕಾಂಗ್ರೆಸ್ ಸೇರುತ್ತಿದ್ದಾರೆ. ಪ್ರಭಾಕರ್ ರೆಡ್ಡಿ ಬಹಳ ಹೋರಾಟ ಮಾಡಿ, ಜೆಡಿಎಸ್‌ ಟಿಕೆಟ್‌ ಪಡೆದಿದ್ದರು. ಆದರೆ, ಕೊನೇ ಕ್ಷಣದಲ್ಲಿ ಟಿಕೆಟ್‌ ತಪ್ಪಿದ ಹಿನ್ನೆಲೆಯಲ್ಲಿ ಕಾಂಗ್ರೆಸ್‌ ಸೇರಿದ್ದಾರೆ. ಬಿಜೆಪಿ ಕಾರ್ಯಕರ್ತರು ಕೂಡ ಕಾಂಗ್ರೆಸ್ ಸೇರುತ್ತಿದ್ದಾರೆ. ಈಗಾಗಲೇ ಮಾಧ್ಯಮ ಸಮೀಕ್ಷೆಯಲ್ಲಿ ಕಾಂಗ್ರೆಸ್‌ ಪರವಾಗಿ ಅಲೆಯಿದೆ. ದಕ್ಷಿಣ ಭಾರತದಲ್ಲಿ ಕಾಂಗ್ರೆಸ್‌ನ ಹೆಬ್ಬಾಗಿಲು ತೆರೆದುಕೊಳ್ಳುತ್ತದೆ. ಯಾರ ಸಹಾಯವನ್ನೂ ಪಡೆದುಕೊಳ್ಳದೆ ಸ್ವತಂತ್ರವಾಗಿ ಕಾಂಗ್ರೆಸ್‌ ಅಧಿಕಾರಕ್ಕೆ ಬರುತ್ತದೆ ಎಂದು ಹೇಳಿದರು.

25 ಸಾವಿರ ಪೌರ ಕಾರ್ಮಿಕರ ನೇಮಕಾತಿ ಪ್ರಣಾಳಿಕೆಯಲ್ಲಿ ಸೇರ್ಪಡೆ: ರಾಜ್ಯದಲ್ಲಿ ಪೌರ ಕಾರ್ಮಿಕರು 25 ಸಾವಿರ ಜನ ಇದ್ದಾರೆ. ಅವರನ್ನು ಖಾಯಂ ಮಾಡುವುದನ್ನು ನಮ್ಮ ಪ್ರಣಾಳಿಕೆಯಲ್ಲಿ ಸೇರಿಸುತ್ತೇವೆ. ರಾಹುಲ್ ಗಾಂಧಿ ಅವರು ಘೋಷಣೆ ಮಾಡಿದ್ದಾರೆ. ಪೌರ ಕಾರ್ಮಿಕರ ಖಾಯಂ ಮಾಡುವ ಕಾಂಗ್ರೆಸ್ ಭರವಸೆ ಹಿನ್ನೆಲೆಯಲ್ಲಿ ಡಿ ಕೆ ಶಿವಕುಮಾರ್ ಅವರಿಗೆ ಪೌರಕಾರ್ಮಿಕರು ಅಭಿನಂದಿಸಿದರು. 

ಕಾಂಗ್ರೆಸ್‌ ಆಡಳಿತವಿರುವ ರಾಜ್ಯಗಳಲ್ಲಿ ಗ್ಯಾರಂಟಿ ಕಾರ್ಡ್‌ ಏಕೆ ಜಾರಿಯಾಗಿಲ್ಲ?

ಕಾಂಗ್ರೆಸ್ ಗ್ಯಾರಂಟಿಗಳ ಬಗ್ಗೆ ಪ್ರಧಾನಿ ಮೋದಿ ವ್ಯಂಗ್ಯ ಮಾಡಿದ್ದಾರೆ. ಮೋದಿಗೆ ಬಿಜೆಪಿ ಗ್ಯಾರಂಟಿ ಗೊತ್ತಿಲ್ಲ ಅನಿಸುತ್ತದೆ. ನಾವು ಯಾರಿಗೂ 15 ಲಕ್ಷ ರೂ. ಕೊಡ್ತೇವೆ ಅಂತ ಹೇಳಿಲ್ಲ. ರೈತರ ಸಾಲ ಮನ್ನಾ ಮಾಡ್ತೀವಿ ಅಂತ ಬಿಜೆಪಿ ಪ್ರಣಾಳಿಕೆಯಲ್ಲಿ ಹೇಳಿತ್ತು. ಈಗ 7-10 ಗಂಟೆ ವಿದ್ಯುತ್ ನೀಡ್ತೇವೆ ಅಂತ ಹೇಳಿದ್ದಾರೆ. ಗ್ಯಾಸ್ ಬೆಲೆ ಏರಿಕೆಯಾಗಿದೆ. ಬಾಯಿ ಔರ್ ಬೆಹನೋ ಅಂದ್ರು, ಈಗ ಗ್ಯಾಸ್ ಸಿಲಿಂಡರ್ ಗೆ ಕೈ ಮುಗಿಯುತ್ತಿದ್ದಾರೆ. ನಾವು ನಾಲ್ಕು ಗ್ಯಾರಂಟಿ ಘೋಷಣೆ ಮಾಡಿದ್ದೇವೆ. ಅಧಿಕಾರಕ್ಕೆ ಬಂದ ಮೊದಲ ಕ್ಯಾಬಿನೆಟ್‌ನಲ್ಲಿ ಜಾರಿಗೆ ತರ್ತೇವೆ. ಜನರಿಗೆ ನಮ್ಮ ಗ್ಯಾರಂಟಿ ತಲುಪಿದೆ. ಪಾಪ ಅದಕ್ಕಾಗಿ ಅವರಿಗೆ ತೊಂದರೆ ಆಗಿದ್ದು, ಮೋದಿ ಹತಾಶೆಗೊಂಡಿದ್ದಾರೆ. ಕಾಂಗ್ರೆಸ್‌ ಅಧಿಕಾರಕ್ಕೆ ಬಂದರೆ ಕರ್ನಾಟಕದಲ್ಲಿ ಗಭೆಯಾಗುತ್ತವೆ ಎಂದು ಹೇಳಿದ ಅಮಿತ್ ಶಾ ವಿರುದ್ಧ ಕೂಡ ದೂರು ಕೊಟ್ಟಿದ್ದೇವೆ ಎಂದು ತಿಳಿಸಿದರು.

ದೇವೇಗೌಡರ ಮುಂದೆ ಸ್ಪರ್ಧೆ ಮಾಡೊಲ್ಲ: ತುಮಕೂರಿನಲ್ಲಿ ತಮಗೆ ಕಣ್ಣೀರು ಹಾಕಿಸಿದವರನ್ನು ಸೋಲಿಸಿ ಎಂದು ಹೆಚ್.ಡಿ. ದೇವೇಗೌಡರು ಹೇಳಿರುವುದು ಅವರ ಭಾವನೆ. ಅವರ ಅನುಭವ, ಹಿರಿತನಕ್ಕೆ ನಾವು ಸ್ಪರ್ಧೆ ಮಾಡೋಕೆ ಆಗುತ್ತಾ..? ನಮ್ಮ ಕೈಯಲ್ಲಿ ಸ್ಪರ್ಧೆ ಮಾಡೋಕೆ ಆಗಲ್ಲಪ್ಪ. ಅವರಿಗೆ ಒಳ್ಳೆಯದಾಗಲಿ. ಇಷ್ಟು ವಯಸ್ಸು ಆದ್ರು, ಇಷ್ಟು ದೊಡ್ಡ ಚುನಾವಣಾ ಪ್ರಚಾರ ಮಾಡ್ತಾ ಇದ್ದಾರೆ. ಅವರಿಂದ ಕಲಿಯಬೇಕಾಗಿರುವುದು ಬಹಳಷ್ಟು ಇದೆ. ಅವರ ಛಲ ಹೋರಾಟ, ಆರೋಗ್ಯ ಚನ್ನಾಗಿ ಇರಲಿ ಒಳ್ಳೆಯದಾಗಲಿ ಎಂದು ಹೇಳಿದರು.

click me!