ಸಿಎಂ ಮುಂದೆ ಹೊಸ ಬೇಡಿಕೆ: ಈಡೇರದಿದ್ದರೇ ರಾಜಕೀಯ ನಿವೃತ್ತಿ ಎಂದ ಶ್ರೀರಾಮುಲು

By Web DeskFirst Published Oct 13, 2019, 6:23 PM IST
Highlights

ಡಿಸಿಎಂ, ಬಳ್ಳಾರಿ ಉಸ್ತುವಾರಿ ಸಿಗದಿದ್ದಕ್ಕೆ ಮೊದಲೇ ಅಸಮಾಧಾನಗೊಂಡಿರುವ ಸಚಿವ ಶ್ರೀರಾಮುಲು ಇದೀಗ ಮತ್ತೊಂದು ಬೇಡಿಕೆ ಇಟ್ಟಿದ್ದಾರೆ. ಒಂದು ವೇಳೆ ಆ ಬೇಡಿಕೆ ಈಡೇರದಿದ್ದರೇ ರಾಜಕೀಯ ನಿವೃತ್ತಿಯಾಗುವುದಾಗಿ ಪರೋಕ್ಷವಾಗಿ ಸಿಎಂಗೆ ಎಚ್ಚರಿಕೆ ಸಂದೇಶ ರವಾನಿಸಿದ್ದಾರೆ. ಹಾಗಾದ್ರೆ ರಾಮುಲು ಇಟ್ಟ ಬೇಡಿಕೆಯಾದರೂ ಏನು? ಏನೆಲ್ಲ ಮಾತನಾಡಿದ್ದಾರೆ ಎನ್ನುವುದನ್ನು ಮುಂದೆ ಓದಿ.

ಚಿತ್ರದುರ್ಗ, [ಅ.13]: ಮೀಸಲಾತಿ ಪಡೆಯಲು ಆಗದಿದ್ದರೆ ರಾಜಕೀಯ ನಿವೃತ್ತಿ ಪಡೆಯುವುದಾಗಿ ಆರೋಗ್ಯ ಸಚಿವ ಬಿ. ಶ್ರೀರಾಮುಲು ಘೋಷಿಸಿದ್ದಾರೆ.

ಇಂದು [ಭಾನುವಾರ] ಚಿತ್ರದುರ್ಗದಲ್ಲಿ ನಡೆದ ವಾಲ್ಮೀಕಿ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು. ಮುಖ್ಯಮಂತ್ರಿ ಯಡಿಯೂರಪ್ಪ ಅವರೊಂದಿಗೆ ಮೀಸಲಾತಿ ಬಗ್ಗೆ ಚರ್ಚಿಸಿದ್ದೇನೆ. ಮೀಸಲಾತಿಯನ್ನು ಪಡೆದು ಸಮುದಾಯದ ಋಣ ತೀರಿಸುತ್ತೇನೆ. ಮೀಸಲಾತಿ ಪಡೆಯಲು ಆಗದಿದ್ದರೆ ರಾಜಕೀಯ ನಿವೃತ್ತಿ ಪಡೆಯುತ್ತೇನೆ ಎಂದು ಹೇಳಿದರು.

‘ಡಿಸಿಎಂ ಹುದ್ದೆ ಕೊಡದೆ ವಾಲ್ಮೀಕಿ ಸಮುದಾಯಕ್ಕೆ ಬಿಜೆಪಿ ಮೋಸ ’

ವಾಲ್ಮೀಕಿ ಸಮುದಾಯಕ್ಕೆ ಶೇ 7.5 ಮೀಸಲಾತಿ ಕಲ್ಪಿಸುವುದು ಸಮುದಾಯದ ಬಹುದಿನಗಳ ಬೇಡಿಕೆ. ಅದನ್ನು ಕೊಡಿಸುವ ಜವಾಬ್ದಾರಿ ನನ್ನದು. ಮಿಸಲಾತಿ ಪಡೆಯುವ ಬಗ್ಗೆ ನೀವು ಹೆಚ್ಚು ತಲೆಕೆಡಿಸಿಕೊಳ್ಳಬೇಡಿ. ಮೀಸಲಾತಿ ಕೊಡಿಸುವುದು ನನ್ನಿಂದ ಸಾಧ್ಯವಾಗದಿದ್ದಲ್ಲಿ ರಾಜಕೀಯದಿಂದಲೇ ನಿವೃತ್ತಿ ಪಡೆಯುತ್ತೇನೆ ಎಂದು ನಾಯಕ ಸಮುದಾಯಕ್ಕೆ ಅಭಯ ನೀಡಿದರು.

ವಾಲ್ಮೀಕಿ ಸಮುದಾಯಕ್ಕೆ ಜನಸಂಖ್ಯೆ ಆಧಾರದಲ್ಲಿ ಮೀಸಲಾತಿ ನೀಡಬೇಕು. ಈಗಾಗಲೇ ಸರ್ಕಾರ ಕ್ರಮಕೈಗೊಂಡಿದ್ದು, ಯಡಿಯೂರಪ್ಪನವರೊಂದಿಗೆ ಚರ್ಚೆ ನಡೆಸಿದ್ದೇನೆ. ಎರಡೂವರೆ ತಿಂಗಳು ಸಮಯ ಕೊಡಿ. ಮೀಸಲಾತಿ ಸಿಗಲಿದೆ ಎಂದು ಅವರು ಭರವಸೆ ನೀಡಿದ್ದಾರೆ ಎನ್ನುವುದನ್ನು ರಾಮುಲು ತಿಳಿಸಿದರು. 

ಬಿಗ್ ಬಾಸ್ ಮನೆಯಲ್ಲಿ ಬೆಳಗೆರೆ, ಪ್ರತಾಪ, ಸರಣಿ ಗೆದ್ದ ಭಾರತ; ಇಲ್ಲಿವೆ ಅ.13ರ ಟಾಪ್ 10 ಸುದ್ದಿ!

ಉಪಮುಖ್ಯಮಂತ್ರಿ ಹುದ್ದೆ ಸಿಗದಿದ್ದಕ್ಕೆ ಮೊದಲೇ ಅಸಮಾಧಾನಗೊಂಡಿರುವ ಆರೋಗ್ಯ ಸಚಿವ ಬಿ. ಶ್ರೀರಾಮು ಅವರು ಬಳ್ಳಾರಿ ಉಸ್ತುವಾರಿಯಾದರೂ ನೀಡಿ ಎಂದು ಸಿಎಂ ಬಿಎಸ್ ಯಡಿಯೂರಪ್ಪಗೆ ಮನವಿ ಮಾಡಿದ್ದರು. 

ರಾಮನ ಮೇಲಿಲ್ಲದ ಪ್ರೀತಿ ಲಕ್ಷ್ಮಣನ ಮೇಲೇಕೆ? ಇದಕ್ಕಿಂತ ಬೇರೆ ಕಾರಣ ಬೇಕೆ?

ಆದ್ರೆ ಡಿಸಿಎಂ ಲಕ್ಷ್ಮಣ ಸವದಿ ಅವರಿಗೆ ಬಳ್ಳಾರಿ ಉಸ್ತುವಾರಿ ಕೊಟ್ಟು ರಾಮುಲುಗೆ ರಾಯಚೂರು ಇಂಚಾರ್ಜ್ ಮಿನಿಸ್ಟರ್ ಆಗಿ ಮಾಡಲಾಗಿದೆ. ಇದ್ರಿಂದ ರಾಮುಲು ಮತ್ತಷ್ಟು ಅಸಮಾಧಾನಗೊಂಡಿದ್ದಾರೆ. 

ಇದೀಗ ಮೀಸಲಾತಿ ಮತ್ತೊಂದು ಬೇಡಿಕೆ ಇಟ್ಟಿದ್ದು, ಅದನ್ನು ಈಡೇರಿಸದಿದ್ದರೇ ರಾಜಕೀಯ ನಿವೃತ್ತಿಯಾಗುವುದಾಗಿ ಪರೋಕ್ಷವಾಗಿ ಯಡಿಯೂರಪ್ಪಗೆ ಎಚ್ಚರಿಕೆ ನೀಡಿದಂತಿದೆ.
 

click me!