ನೀವು ಬಿಎಸ್‌ವೈ ಪರ ಬ್ಯಾಟ್ ಮಾಡಿ, ನಾನು ಬೆಂಬಲಿಸುವೆ: ಸಿದ್ದು| ವಿಧಾನಸಭೆಯಲ್ಲಿ ಯತ್ನಾಳ್‌ರ ಕಾಲೆಳೆದ ಮಾಜಿ ಸಿಎಂ
ವಿಧಾನಸಭೆ[ಅ.13]: ‘ಎಡಪಂಥೀಯ ನಿಲುವುಗಳನ್ನು ಹೊಂದಿರುವ ನೀವು ಬಲಪಂಥೀಯ ಪಕ್ಷದಲ್ಲಿದ್ದೀರಿ. ರೈಟ್ ಮ್ಯಾನ್ ಇನ್ ರಾಂಗ್ ಪಾರ್ಟಿ. ನೀವು ಯಡಿಯೂರಪ್ಪ ಪರ ಬ್ಯಾಟಿಂಗ್ ಮಾಡಿ, ನನ್ನ ಬೆಂಬಲವೂ ಇದೆ.’
ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅವರು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಬೆಂಬಲಿಗ ಬಿಜೆಪಿ ಸದಸ್ಯ ಬಸನಗೌಡ ಪಾಟೀಲ್ ಯತ್ನಾಳ್ ಅವರ ಕಾಲೆಳೆದ ಪರಿ ಇದು. ಶನಿವಾರ ಬಜೆಟ್ ಮೇಲಿನ ಚರ್ಚೆ ವೇಳೆ ಮಾತನಾಡಿದ ಸಿದ್ದರಾಮಯ್ಯ, ‘ಯತ್ನಾಳ್ ಸದನದ ಹಿರಿಯ ಸದಸ್ಯರು. ಅವರಿಗೆ ನಾನು ಬಹಳ ಗೌರವ ನೀಡುತ್ತೇನೆ. ಮಾತು ಮುಂದುವರಿಸಿ ಎಂದರೆ ಮುಂದುವರಿಸುತ್ತೇನೆ ಎಂದು ತಮಾಷೆ ಮಾಡಿದರು. ಆಗ ಯತ್ನಾಳ್ ಮಾತು ಮುಂದುವರಿಸುವಂತೆ ಕೋರಿದರು.
undefined
ಮೋದಿ -ಅಮಿತ್ ಶಾಗೆ ಯತ್ನಾಳ್ ಪತ್ರ, ಒಂದೊಂದು ಪಾಯಿಂಟ್ಸ್ ನೋಡ್ಲೇಬೇಕು
ನಿಮ್ಮ ಆಲೋಚನೆಗಳೆಲ್ಲಾ ಎಡಪಂಥೀಯವಾಗಿವೆ. ಆದರೆ, ನೀವು ಬಲಪಂಥೀಯ ಪಕ್ಷದಲ್ಲಿದ್ದೀರಿ. ರೈಟ್ ಮ್ಯಾನ್ ಇನ್ ರಾಂಗ್ ಪಾರ್ಟಿ. ನಿಮ್ಮ ನಿಲುವುಗಳಿಗೆ ನಾನು ಬಹಳ ಖುಷಿಪಡುತ್ತೇನೆ ಎಂದರು. ಇದಕ್ಕೆ ತಮಾಷೆಯಾಗಿಯೇ ಉತ್ತರ ನೀಡಿದ ಯತ್ನಾಳ್, ನೀವು ಈ ರೀತಿ ಹೇಳಿ ನನ್ನನ್ನು ಆದಷ್ಟು ಬೇಗ ಬಿಜೆಪಿಯಿಂದ ಹೊರಗೆ ಹಾಕಲು ಪ್ರಯತ್ನಿಸುತ್ತೀರಿ. ಹೀಗಾಗಿ ನಿಮ್ಮ ಹೊಗಳಿಕೆಗೆ ನಾನೇನೂ ಪ್ರತಿಕ್ರಿಯಿಸಲ್ಲ ಎಂದಾಗ ಸದನದಲ್ಲಿ ನಗುವಿನ ಅಲೆ ಮೂಡಿತು.
ಬಿಜೆಪಿಯಿಂದ ನನ್ನನ್ನು ಹೊರಗೆ ಹಾಕಿದರೂ ಪರವಾಗಿಲ್ಲ ಎಂದು ನೀವೇ ಬಹಿರಂಗ ಹೇಳಿಕೆ ನೀಡಿದ್ದು ಮರೆತು ಹೋಯಿತಾ? ನಾನೇನೂ ನಿಮ್ಮನ್ನು ಹೊರಗೆ ಹಾಕಲು ಪ್ರಯತ್ನಿಸುತ್ತಿಲ್ಲ. ಅದಕ್ಕೆ ಪ್ರಚೋದನೆಯನ್ನೂ ಕೊಡುವುದಿಲ್ಲ. ನೀವು ಯಡಿಯೂರಪ್ಪನವರ ಪರವಾಗಿ ಹಲವು ಬಾರಿ ಬ್ಯಾಟಿಂಗ್ ಮಾಡಿದ್ದೀರಿ. ಅದನ್ನೇ ಮುಂದುವರಿಸಿಕೊಂಡು ಹೋಗಿ. ನಾನು ಅದಕ್ಕೆ ಅಡ್ಡಿಯಾಗುವುದಿಲ್ಲ. ನಿಮ್ಮ ಬ್ಯಾಟಿಂಗ್‌ಗೆ ನನ್ನದೂ ಬೆಂಬಲ ಇದೆ ಎಂದು ಸಿದ್ದರಾಮಯ್ಯ ಹೇಳಿದರು.
ಶಾಸಕ ಯತ್ನಾಳಗೆ ಬಿಜೆಪಿ ವರಿಷ್ಠರಿಂದ ತಕ್ಕ ಪಾಠ ಎಂದ ಕೇಂದ್ರ ಸಚಿವ
ಇದಕ್ಕೆ, ಯಡಿಯೂರಪ್ಪ ಮುಖ್ಯಮಂತ್ರಿಯಾಗಿರುವ ಮುಂದಿನ ಮೂರುವರೆ ವರ್ಷಗಳ ಕಾಲವೂ ಅವರ ಪರವಾಗಿ ಬ್ಯಾಟಿಂಗ್ ಮಾಡುತ್ತೇನೆ ಎಂದು ಯತ್ನಾಳ್ ಉತ್ತರಿಸಿದರು.
ಅಕ್ಟೋಬರ್ 13ರ ಟಾಪ್ 10 ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ: