ಮಾಜಿ ರಾಜ್ಯಪಾಲರ ಪುತ್ರನಿಗೆ ಕಾಂಗ್ರೆಸ್‌ ಟಿಕೆಟ್‌ ಕೊಡಬೇಡಿ: ಮುಸ್ಲಿಂ ಸಘಟನೆಯಿಂದ AICCಗೆ ಪತ್ರ

By Sathish Kumar KH  |  First Published Apr 8, 2023, 1:49 PM IST

ಮಾಜಿ ರಾಜ್ಯಪಾಲೆ ಮಾರ್ಗರೇಟ್‌ ಆಳ್ವಾ ಅವರ ಪುತ್ರ ನಿವೇದಿತ್‌ ಆಳ್ವಾ ಅವರಿಗೆ ಕುಮಟಾ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್‌ ಟಿಕೆಟ್‌ ನೀಡಬೇಡಿ AICCಗೆ ಪತ್ರ ಮುಸ್ಲಿಂ ಸಂಘಟನೆ ಪತ್ರ ಬರೆದಿದೆ. 


ಉತ್ತರಕನ್ನಡ (ಏ.08): ರಾಜ್ಯ ಮಾಜಿ ರಾಜ್ಯಪಾಲೆ ಮಾರ್ಗರೇಟ್‌ ಆಳ್ವಾ ಅವರ ಪುತ್ರ ನಿವೇದಿತ್‌ ಆಳ್ವಾ ಅವರಿಗೆ ಕುಮಟಾ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸಲು ಕಾಂಗ್ರೆಸ್‌ ಟಿಕೆಟ್‌ ನೀಡಬೇಡಿ ಎಂದು ಆಲ್‌ ಇಂಡಿಯಾ ಕಾಂಗ್ರೆಸ್‌ ಕಮಿಟಿಗೆ (AICC) ಮುಸ್ಲಿಂ ಸಂಘಟನೆಯೊಂದು ಪತ್ರವನ್ನು ಸಲ್ಲಿಕೆ ಮಾಡಿದೆ. 

ರಾಜ್ಯ ವಿಧಾನಸಭಾ ಚುನಾವಣೆಯ ಕಾವು ತೀವ್ರ ಜೋರಾಗಿದ್ದು, ಇನ್ನೇನು ನಾಮಪತ್ರ ಸಲ್ಲಿಕೆಗೆ ಇನ್ನು ಕೆಲವೇ ದಿನಗಳು ಬಾಕಿಯಿವೆ. ಆದರೆ, ರಾಜ್ಯದಲ್ಲಿ ಅಧಿಕಾರ ಹಿಡಿಯುವ ಭರವಸೆಯಲ್ಲಿರುವ ಬಿಜೆಪಿ, ಕಾಂಗ್ರೆಸ್‌ ಹಾಗೂ ಜೆಡಿಎಸ್‌ ಮೂರೂ ಪಕ್ಷಗಳಲ್ಲಿ ಅಭ್ಯರ್ಥಿಗಳ ಆಯ್ಕೆಯನ್ನು ಅಂತಿಮಗೊಳಿಸಿಲ್ಲ. ಆದರೆ, ರಾಜ್ಯದ 224 ಕ್ಷೇತ್ರಗಳಲ್ಲಿ ಕಾಂಗ್ರೆಸ್‌ ಈಗಾಗಲೇ 166 ವಿಧಾನಸಭಾ ಕ್ಷೇತ್ರಗಳ ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಆದರೆ, ಬಾಕಿ 54 ಕ್ಷೇತ್ರಗಳಲ್ಲಿನ ಟಿಕೆಟ್‌ ನಲ್ಲಿ ಕುಮುಟಾ ವಿಧಾನಸಭಾ ಕ್ಷೇತ್ರದಿಂದ ಮಾಜಿ ರಾಜ್ಯಪಾಲರಾದ ಮಾರ್ಗರೇಟ್‌ ಆಳ್ವಾ ಅವರ ಪುತ್ರ ನಿವೇದಿತ್‌ ಆಳ್ವಾ ಅವರಿಗೆ ಕಾಂಗ್ರೆಸ್‌ನಿಂದ ಟಿಕೆಟ್‌ ಕೊಡಬೇಡಿ. ಒಂದು ವೇಳೆ ನಿವೇದಿತ್‌ ಆಳ್ವಾಗೆ ಟಿಕೆಟ್‌ ಕೊಟ್ಟರೆ ನಾವು ನಮ್ಮ ಬೆಂಬಲವನ್ನು ಜೆಡಿಎಸ್‌ಗೆ ನೀಡುವುದಾಗಿ ಎಚ್ಚರಿಕೆಯನ್ನು ನೀಡಿದ್ದಾರೆ.

Latest Videos

undefined

ಕಾಂಗ್ರೆಸ್‌ 2ನೇ ಪಟ್ಟಿ ಬಿಡುಗಡೆ: 42 ಕ್ಷೇತ್ರಗಳ ಅಭ್ಯರ್ಥಿಗಳು ಇಲ್ಲಿದ್ದಾರೆ ನೋಡಿ..

ಜಮಾತ್-ಉಲ್-ಮುಸ್ಲಿಮೀನ್ ಸಂಘಟನೆಯಿಂದ ಪತ್ರ: ಹೊನ್ನಾವರದ ಜಮಾತ್-ಉಲ್-ಮುಸ್ಲಿಮೀನ್ ಅಧ್ಯಕ್ಷ ಆಜಾದ್ ಅನ್ನಿಗೇರಿ ಅವರಿಂದ ರಾಜ್ಯ ಚುನಾವಣಾ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲಗೆ ಪತ್ರ ಬರೆಯಲಾಗಿದೆ. ಕುಮಟಾ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್‌ ಟಿಕೆಟ್ ಆಕಾಂಕ್ಷಿ ನಿವೇದಿತ್ ಆಳ್ವ ಸ್ಥಳೀಯರಲ್ಲ. ಜೊತೆಗೆ, ಅವರು ಕಾಂಗ್ರೆಸ್‌ನಿಂದ ಸ್ರ್ಪರ್ಧೆ ಮಾಡುವಂತಹ ಪ್ರಬಲ‌ ಅಭ್ಯರ್ಥಿಯೂ ಅಲ್ಲ. ಒಂದು ವೇಳೆ ಅವರ ರಾಜಕೀಯ ಒಳಸಂಚಿನಿಂದ ನಿವೇದಿತ್ ಆಳ್ವಾಗೆ ಟಿಕೆಟ್ ನೀಡಿದರೆ ಕುಮಟಾದಲ್ಲಿ ಕಾಂಗ್ರೆಸ್ ಸೋಲನ್ನು ಅನುಭವಿಸಲಿದೆ ಎಂದು ಹೇಳಿದ್ದಾರೆ. 

ಕ್ಷೇತ್ರದ ಹೊರಗಿನವರಿಗೆ ಟಿಕೆಟ್‌ ಕೊಡಬೇಡಿ: ನಿವೇದಿತ್ ಆಳ್ವಗೆ ಟಿಕೆಟ್ ನೀಡದಂತೆ ಮುಸ್ಲಿಂ ಸಂಘಟನೆಯಿಂದ AICC ಗೆ ಪತ್ರ ಬರೆಯಲಾಗಿದೆ. ಮಾಜಿ ರಾಜ್ಯಪಾಲೆ ಮಾರ್ಗರೇಟ್ ಆಳ್ವ ಪುತ್ರ ನಿವೇದಿತ್ ಆಳ್ವಗೆ "ಬಿ" ಫಾರ್ಮ್ ನೀಡಿದಲ್ಲಿ ನಾವು ಜೆಡಿಎಸ್ ಗೆ ಸಪೋರ್ಟ್  ಮಾಡುತ್ತೇವೆ. ಕುಮಟಾ ವಿಧಾನಸಭಾ ಕ್ಷೇತ್ರದ ಸ್ಥಳೀಯರಿಗೆ ಟಿಕೆಟ್ ನೀಡುವಂತೆ ಆಗ್ರಹಿಸಿದ್ದಾರೆ. ನೀವು ಈ ಬಾರಿ ಕಾಂಗ್ರೆಸ್‌ ಟಿಕೆಟ್‌ ಅನ್ನು ಕುಮಟಾದ ಶಿವಾನಂದ ಹೆಗಡೆ ಕಡತೋಕ ಅವರಿಗೆ ನೀಡಿದಲ್ಲಿ ಅವರಿಗೆ ಸಂಪೂರ್ಣ ಬೆಂಬಲ ನೀಡಿ ಗೆಲ್ಲಿಸುತ್ತೇವೆ. ಶಿವಾನಂದ ಹೆಗಡೆ ಕಡತೋಕಗೆ ಟಿಕೆಟ್ ನೀಡುವಂತೆ ಪತ್ರದಲ್ಲಿ ಉಲ್ಲೇಖ ಮಾಡಲಾಗಿದೆ. ಕ್ಷೇತ್ರದ ಬಗ್ಗೆ ಅರಿವಿಲ್ಲದೇ ಹೊರಗಿನಿಂದ ಬಂದವರಿಗೆ ಟಿಕೆಟ್ ನೀಡದಂತೆ ಮುಸ್ಲಿಂ ಸಂಘಟನೆ ಮನವಿ ಮಾಡಿದೆ.

ವಿಧಾನಸಭೆ ಚುನಾವಣೆಗೆ ಕಾಂಗ್ರೆಸ್‌ ಮೊದಲ ಪಟ್ಟಿ ರಿಲೀಸ್‌: 124 ವಿಧಾನಸಭಾ ಕ್ಷೇತ್ರಗಳ ಲಿಸ್ಟ್‌ ಹೀಗಿದೆ ನೋಡಿ..

ಕರ್ನಾಟಕದಲ್ಲಿ ಒಂದೇ ಹಂತದಲ್ಲಿ ಮೇ 10ರಂದು ಮತದಾನ ನಡೆಯಲಿದ್ದು, ಮೇ 13ಕ್ಕೆ ಮತ ಎಣಿಕೆ ನಡೆಯಲಿದೆ. ಏಪ್ರಿಲ್ 13ಕ್ಕೆ ಚುನಾವಣೆ ಅಧಿಸೂಚನೆ ಹೊರಡಿಸಲಿದ್ದು, ಏಪ್ರಿಲ್ 13ರಿಂದ ನಾಮಪತ್ರ ಸಲ್ಲಿಕೆ ಆರಂಭವಾಗಲಿದೆ. ನಾಮಪತ್ರ ಹಿಂಪಡೆಯಲು ಏಪ್ರಿಲ್ 24 ಕಡೆಯ ದಿನಾಂಕ.

click me!