ಬಳ್ಳಾರಿ (ಅ.28): ಮುಖ್ಯಮಂತ್ರಿಗಳ (CM) ವಿರುದ್ಧ ಏಕವಚನದಲ್ಲಿ ಮಾತನಾಡುವ ಸಿದ್ಧರಾಮಯ್ಯ (Siddaramaiah) ಅದ್ಯಾವ ಜಾತ್ಯತೀತ ನಾಯಕ ಎಂದು ಸಚಿವ ಬಿ. ಶ್ರೀರಾಮುಲು (B sriramulu) ಕಿಡಿಕಾರಿದರು.
ಸಿದ್ದರಾಮಯ್ಯ ಮೊದಲು ಜಾತಿ (Caste) ರಾಜಕಾರಣ ಬಿಟ್ಟು ಮಾತನಾಡುವುದು ಕಲಿಯಿಲಿ. ಚುನಾವಣೆ (Election) ವೇಳೆ ಕಂಬಳಿ, ಡೀಲಿಂಗ್, ಗಿರಾಕಿ, ದಲಿತ ಈ ರೀತಿಯ ಭಾಷೆಗಳನ್ನು ಬಳಸುತ್ತಾರೆಯೇ? ಜಾತ್ಯತೀತ ಎನ್ನುವವರ ಬಾಯಲ್ಲಿ ಇಂತಹ ಮಾತುಗಳು ಬರಬೇಕೇ ಎಂದು ಪ್ರಶ್ನಿಸಿದರಲ್ಲದೆ, ಯಾರಿಗಿವರು ಆದರ್ಶ ಎನಿಸಿಕೊಳ್ಳುತ್ತಾರೆ ಎಂದು ಕೇಳಿದರು.
undefined
'ಶ್ರೀರಾಮು'ಲು ಹೆಗಲೇರಿದ ಹನುಮ: ವಾನರ ಸೈನ್ಯದೊಂದಿಗೆ ಸಚಿವರು
ತಮ್ಮನ್ನು ಭೇಟಿ ಮಾಡಿದ ಸುದ್ದಿಗಾರರ ಜತೆ ಮಾತನಾಡಿದ ಶ್ರೀರಾಮುಲು (Ramulu), ಸಿದ್ದರಾಮಯ್ಯ ಅವರಿಗೆ ತಾಕತ್ತಿದ್ದರೆ ಮುಸ್ಲಿಂ (Muslim) ಸಮುದಾಯದ ವ್ಯಕ್ತಿಯನ್ನು ಪಕ್ಷದ ರಾಜ್ಯಾಧ್ಯಕ್ಷನನ್ನಾಗಿ, ದಲಿತ ವ್ಯಕ್ತಿಯನ್ನು ಮುಂದಿನ ಸಿಎಂ ಎಂದು ಘೋಷಣೆ ಮಾಡಲಿ. ಆಗ ಇವರ ಜಾತ್ಯತೀತತೆ ಎಂತಹದ್ದು ಎಂದು ಗೊತ್ತಾಗುತ್ತದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಸಿಎಂ ಚಾಟಿ
‘ನೀವು ಕುರಿ ಕಾದಿದ್ದಿರಾ? ಆ ಜಾತಿಯಲ್ಲಿ ಹುಟ್ಟಿದ್ದಿರಾ ಅಂದ್ರೆ ಏನ್ರಿ ಇದು ಭಾಷೆ? ನಾನು ನಿಮಗೆ ಗೌರವ ಕೊಡ್ತಿದ್ದೀನಿ. ನಿಮಗೆ ಗೌರವ ತಗೊಳ್ಳೋದು ಗೊತ್ತಿಲ್ಲ’ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (Basavaraja bommai) ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಮೈಗೆ ಕಂಬಳಿ ಹೊದ್ದುಕೊಂಡೇ ಪ್ರಚಾರ ನಡೆಸಿದ ಅವರು ಪ್ರತಿಪಕ್ಷ ಕಾಂಗ್ರೆಸ್ (congress) ಮತ್ತು ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಅವರ ವಿರುದ್ಧ ತೀವ್ರ ಹರಿಹಾಯ್ದಿದ್ದಾರೆ.
ಹಾನಗಲ್‌ನ (Hanagal) ಆಡೂರಿಗೆ ಅವರು ಆಗಮಿಸಿದ ವೇಳೆ ಅಲ್ಲಿ ಅವರನ್ನು ಕಂಬಳಿ ಹೊದ್ದು ಸ್ವಾಗತಿಸಲಾಯಿತು. ಇದಕ್ಕೆ ಕೃತಜ್ಞತೆ ಸಲ್ಲಿಸಿದ ಮುಖ್ಯಮಂತ್ರಿ ಬೊಮ್ಮಾಯಿ, ಕಂಬಳಿ ಅಂದರೆ ನನಗೆ ಬಹಳ ಪ್ರೀತಿ. ಇಲ್ಲಿ ಕಂಬಳಿ ಹೊದಿಸಿದ್ದೀರಿ. ಸಿಂದಗಿಯಲ್ಲೂ ಹೀಗೇ ಕಂಬಳಿ ಹೊದಿಸಿದ್ದರು ಎಂದು ಹೇಳಿದರು. ಇದೇ ವೇಳೆ ಸಿದ್ದರಾಮಯ್ಯ ಅವರ ಹೇಳಿಕೆಗಳಿಗೆ ಆಕ್ಷೇಪ ವ್ಯಕ್ತಪಡಿಸಿದ ಅವರು, ನಾನು ಏನು ಹೇಳಿದೆ? ಉಣ್ಣೆ ತೆಗೆದು ಕಂಬಳಿ ಮಾಡಿರುತ್ತಾರೆ. ಇದರ ಹಿಂದೆ ಶ್ರಮ ಇರುತ್ತದೆ. ಇದಕ್ಕೆ ಗೌರವ ಇದೆ. ಈ ಕಂಬಳಿ ಹಾಕಿಕೊಂಡವರಿಗೆ ಗೌರವ ಇರಬೇಕು ಎಂದು ಹೇಳಿದ್ದೆ. ಕಂಬಳಿಗೆ ಗೌರವ ಇದೆ ಎಂದು ಹೇಳುವುದು ತಪ್ಪಾ? ಈ ಸಮುದಾಯದ ಶ್ರಮ ಇದೆ ಎಂದು ಹೇಳುವುದೇ ತಪ್ಪಾ ಎಂದು ಪ್ರಶ್ನಿಸಿದರು. ಕನಕದಾಸರ ವಿಚಾರದಾರೆಗಳನ್ನು ಮೈಗೂಡಿಸಿಕೊಂಡು ನಾನು ನಡೆಯುತ್ತಿದ್ದೇನೆ. ಕಂಬಳಿ ತಯಾರಿಸುವ ಜನಾಂಗಕ್ಕೆ ನನ್ನ ಗೌರವ ಶಾಶ್ವತ ವಾಗಿರುತ್ತದೆ. ಕಂಬಳಿ ನೇಯ್ದವರು, ಕುರಿ ಕಾದವರು ನನ್ನ ಸಮುದಾಯದವರು ಎಂದು ಹೇಳಿದರು.
‘ಸಿದ್ದರಾಮಯ್ಯ ಅವರೇ ಸಿ.ಎಂ. ಉದಾಸಿಯವರು (CM Udasi) ಏನ್ ಮಾಡಿದ್ದಾರೆ ಅಂತಾ ಕೇಳ್ತೀರಾ, ಈಗ ನೀನೇ ಹಾನಗಲ್ಲಗೆ ಬಂದು ಓಡಾಡಿಯಲ್ಲಪಾ. ಆ ರಸ್ತೆಗಳನ್ನಾ ಮಾಡಿಸಿದೋರು ಉದಾಸಿ ಅಣ್ಣಾರು’ ಎಂದು ಸಿದ್ದರಾಮಯ್ಯ ವಿರುದ್ಧ ಏಕವಚನದಲ್ಲೇ ಹರಿಹಾಯ್ದರು.
ಈ ಚುನಾವಣೆಯಲ್ಲಿ ಬಿಜೆಪಿ ಗೆಲ್ಲುವ ಮೂಲಕ ಕಾಂಗ್ರೆಸ್ ಧೂಳಿಪಟವಾಗುತ್ತದೆ. ನೀವೂ ಐದು ವರ್ಷದಲ್ಲಿ ಏನ್ ಮಾಡಿರಿ ಐದು ವರ್ಷ ಸರ್ಕಾರ ಇದ್ದಾಗ ಏನಾದರೂ ಮಾಡಬೇಕು. ಆದರೆ ನಿಮಗೆ ಏನು ಮಾಡಬೇಕು ಅನ್ನಿಸಲಿಲ್ವಾ ಎಂದು ಪ್ರಶ್ನಿಸಿದರು.
ಜಮೀರ್ ಜಾತಿ ಓಲೈಕೆ ಮಾಡಲು ಬಂದಿರಾ?
ಇದೇವೇಳೆ ಕ್ಷೇತ್ರಕ್ಕೆ ಪ್ರಚಾರಕ್ಕೆ ಆಗಮಿಸಿರುವ ಶಾಸಕ ಜಮೀರ್ ಅಹ್ಮದ್ ಖಾನ್ ಅವರ ಕಾಲೆಳೆದ ಬಸವರಾಜ ಬೊಮ್ಮಾಯಿ, ‘ಜಮೀರಣ್ಣ ಹಾನಗಲ್ಲಗೆ ಬಂದಾನ. ಬನ್ನಿ ಜಮೀರ್ ಭಾಯ್ ನಿಮಗೆ ವೆಲ್‌ಕಮ್, ಎಲ್ಲೆಲ್ಲಿ ತಿರುಗಾಡ್ತೀರಿ ತಿರುಗಾಡಿ. ನಮಗೇನು ತೊಂದ್ರೆ ಇಲ್ಲ. ಜಾತ್ಯತೀತ ಪಕ್ಷ ಎಂದು ಈಗ ಜಾತಿ ಹಿಡಿದು ಓಲೈಕೆ ಮಾಡೋಕೆ ಹೊರಟಿದ್ದೀರಾ ಅಲ್ವಾ...?’ ಎಂದು ಪ್ರಶ್ನಿಸಿದರು.
ಕಾಂಗ್ರೆಸ್ ಪಕ್ಷ ಹತಾಶಗೊಂಡಿದೆ. ಚುನಾವಣೆ ಸಂದರ್ಭದಲ್ಲಿ ಮನಸ್ಸಿಗೆ ಬಂದಂತೆ ಮಾತನಾಡುತ್ತಿದ್ದಾರೆ. ದಾರಿ ತಪ್ಪಿಸುವ, ಸಮಾಜಗಳಿಗೆ ಅನ್ಯಾಯ ಮಾಡುವ ಕೆಲಸವನ್ನು ಮಾಡಿದ್ದಾರೆ. ಕಾಂಗ್ರೆಸ್ ಎಲ್ಲ ರಾಜ್ಯಗಳಲ್ಲಿ ನೆಲಕಚ್ಚಿದ್ದು, ಹಾನಗಲ್ಲಿನಲ್ಲಿಯೂ ಅವರನ್ನು ಮನೆಗೆ ಕಳಿಸಿದರೆ, ಆ ಪಕ್ಷದ ನಾಯಕರು ಕಾಯಂ ಆಗಿ ಮನೆಯಲ್ಲಿ ಇರುತ್ತಾರೆ. ಇಲ್ಲಿ ಕಣ್ಣನ್ ದೇವನ್ ಟೀ ಪುಡಿಯಂತೆ ಕಾಂಗ್ರೆಸ್ ಪಾರ್ಟಿ ಪುಡಿಪುಡಿಯಾಗಲಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ವ್ಯಂಗ್ಯವಾಡಿದರು.