ಸಂಸತ್ ಕಲಾಪಗಳು ಸಾಮಾನ್ಯವಾಗಿ ಗಂಭೀರ ಚರ್ಚೆಗಳಿಗೆ ಪ್ರಸಿದ್ಧಿ ಆದರೂ ಕೆಲವೊಮ್ಮೆ ಇಂತಹ ಅಪರೂಪದ ಘಟನೆಗಳು ನಡೆಯುತ್ತವೆ. ಅದೇ ರೀತಿ ನಿನ್ನೆ ರಾಜ್ಯದ ಕಾಂಗ್ರೆಸ್ ನಾಯಕ, ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ಮಾತಿಗೆ ರಾಜ್ಯಸಭಾ ಅಧ್ಯಕ್ಷರು ಕೂಡ ನಕ್ಕಂತಹ ಘಟನೆ ನಡೆಯಿತು.
ನವದೆಹಲಿ: ವಿಧಾನಸಭೆ ಕಲಾಪವೇ ಆಗಲಿ ಸಂಸತ್ ಕಲಾಪವೇ ಆಗಲಿ ಬಹಳ ಗಂಭೀರ ಚರ್ಚೆಗಳ ಜೊತೆ ಕೆಲವೊಮ್ಮೆ ವಿರೋಧ ಪಕ್ಷಗಳು ಆಡಳಿತ ಪಕ್ಷಗಳು ಜೊತೆಯಾಗಿ ನಗುವಂತಹ ಹಾಸ್ಯಮಯ ಸನ್ನಿವೇಶಗಳು ಸೃಷ್ಟಿಯಾಗುತ್ತಿರುತ್ತವೆ. ಸಂಸತ್ ಕಲಾಪಗಳು ಸಾಮಾನ್ಯವಾಗಿ ಗಂಭೀರ ಚರ್ಚೆಗಳಿಗೆ ಪ್ರಸಿದ್ಧಿ ಆದರೂ ಕೆಲವೊಮ್ಮೆ ಇಂತಹ ಅಪರೂಪದ ಘಟನೆಗಳು ನಡೆಯುತ್ತವೆ. ಅದೇ ರೀತಿ ನಿನ್ನೆ ರಾಜ್ಯದ ಕಾಂಗ್ರೆಸ್ ನಾಯಕ, ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ಮಾತಿಗೆ ರಾಜ್ಯಸಭಾ ಅಧ್ಯಕ್ಷರು ಕೂಡ ನಕ್ಕಂತಹ ಘಟನೆ ನಡೆಯಿತು.
ಖರ್ಗೆ ಹೇಳಿದ್ದೇನು?
ಮಲ್ಲಿಕಾರ್ಜುನ ಖರ್ಗೆ ಅವರು, ತನಗೆ ದ್ವಿವೇದಿ, ತ್ರಿವೇದಿ, ಚತುರ್ವೇದಿ ಎಂಬ ಹೆಸರಿನಿಂದ ಗೊಂದಲ ಉಂಟಾಗಿದೆ ಎಂದಾಗ ಇಡೀ ಸಂಸತ್ ಮೇಲ್ಮನೆಯ ಸದಸ್ಯರು ನಗಲು ಶುರು ಮಾಡಿದ್ದಾರೆ. ಬಿಜೆಪಿ ಎಂಪಿ ಸುಧಾಂಶು ತ್ರಿವೇದಿ ಅವರನ್ನು ಉಲ್ಲೇಖಿಸಿ ಮಾತನಾಡುತ್ತಾ ಖರ್ಗೆ ಅವರು, ನಾನು ದಕ್ಷಿಣದಿಂದ ಬಂದಿದ್ದೇನೆ, ಈ ಹೆಸರುಗಳ ನಡುವಿನ ವಿಭಿನ್ನತೆ ಬಗ್ಗೆ ನನಗೆ ಹೆಚ್ಚಾಗಿ ಗೊತ್ತಿಲ್ಲ ಎಂದರು. ಆದರೆ ಇದಕ್ಕೆ ಪ್ರತಿಕ್ರಿಯಿಸಿದ ರಾಜ್ಯಸಭಾ ಅಧ್ಯಕ್ಷ ಜಗದೀಪ್ ಧನಕರ್ ಅವರು , ನೀವು ಬಯಸಿದರೆ ಈ ವಿಚಾರದ ಬಗ್ಗೆ ಅರ್ಧ ಗಂಟೆ ಚರ್ಚೆ ಮಾಡೋಣ ಎಂದಾಗ ಸದನ ನಗೆಗಡಲಲ್ಲಿ ತೇಲಿತ್ತು.
ರಾಹುಲ್ ಗಾಂಧಿ ಟೀಕೆಗಳಿಗೆ ಆ ಕ್ಷಣವೇ ಫಟಾಫಟ್ ಉತ್ತರ: ಲೋಕಸಭೆಯಲ್ಲಿ ಅಪರೂಪದ ಕ್ಷಣ
ಸಂಸತ್ ಕಲಾಪ ಆರಂಭವಾದಂದೇ ಪ್ರತಿಭಟನೆ ನಡೆಸುವುದಕ್ಕಾಗಿ ಕಾಂಗ್ರೆಸ್ ಮುಖ್ಯಸ್ಥ ಸದನದ ಬಾವಿಗಿಳಿದಿದ್ದು, ನೋಡಿ ನನಗೆ ಬೇಸರವಾಯ್ತು ಎಂದು ರಾಜ್ಯಸಭಾ ಅಧ್ಯಕ್ಷ ಜಗದೀಪ್ ಧನಕರ್ ಹೇಳಿದ್ದರು. ಇದಾದ ನಂತರವೂ ಇಬ್ಬರು ನಾಯಕರ ಮಧ್ಯೆ ಸಣ್ಣಪುಟ್ಟ ವಾಕ್ಸಮರಗಳು ನಡೆದಿದ್ದವು. ಆದರೆ ನಿನ್ನೆ ಈ ಇಬ್ಬರೂ ನಾಯಕರ ಮಧ್ಯೆ ಬಹಳ ಸಾಮರಸ್ಯದ ವಾತಾವರಣ ಕಂಡು ಬಂತು.
81 ವರ್ಷದ ಖರ್ಗೆಯವರಿಗೆ ಮೊಣಕಾಲು ನೋವು
ರಾಷ್ಟ್ರಪತಿಗಳ ಭಾಷಣದ ವೇಳೆ ವಂದನಾ ನಿರ್ಣಯದ ಬಗ್ಗೆ ಚರ್ಚೆಯ ವೇಳೆ ಎದ್ದು ನಿಂತ 81 ವರ್ಷ ಪ್ರಾಯದ ಖರ್ಗೆಯವರು ನನಗೆ ಮೊಣಕಾಲು ನೋವು ಇರುವುದರಿಂದ ಹೆಚ್ಚು ಹೊತ್ತು ನಿಂತು ಮಾತನಾಡಲು ಕಷ್ಟವಾಗುತ್ತಿದೆ ಸಭಾಧ್ಯಕ್ಷರು ಒಪ್ಪಿದಲ್ಲಿ ಕುಳಿತುಕೊಂಡು ಸದನದಲ್ಲಿ ಮಾತನಾಡುವೆ ಎಂದರು. ಇದಕ್ಕೆ ಪ್ರತಿಕ್ರಿಯಿಸಿದ ಸಭಾಧ್ಯಕ್ಷ ಧನಕರ್ ಅವರು ನೀವು ಕುಳಿತುಕೊಂಡೆ ಮಾತನಾಡಿ, ಸದನವನ್ನು ಉದ್ದೇಶಿಸಿ ಮಾತನಾಡುವಾಗ ನೀವು ಆರಾಮವಾಗಿರುವುದನ್ನು ನಾವು ಖಚಿತಪಡಿಸಿಕೊಳ್ಳಬೇಕು. ಆದ್ದರಿಂದ ದೈಹಿಕ ಅಸಾಮರ್ಥ್ಯ ಅಥವಾ ನೋವು ಇದ್ದಲ್ಲಿ ಇಲ್ಲಿ ಮತ್ತು ಹೊರಗೆ ನಿಲ್ಲಲು ಸಾಧ್ಯವಾಗದ ಸ್ಥಿತಿ ಇದ್ದರೆ, ನೀವು ನಿಮ್ಮ ಸ್ವಂತ ನಿರ್ಧಾರ ತೆಗೆದುಕೊಳ್ಳಬಹುದು ಎಂದು ಹೇಳಿದರು.
ಕುಳಿತಲ್ಲಿಯೇ ಮಾಡುವ ಭಾಷಣವು ನಿಂತುಲ್ಲಿ ಮಾಡುವಷ್ಟು ಉದ್ವೇಗದಿಂದ ಕೂಡಿರುವುದಿಲ್ಲ ಎಂದು ಖರ್ಗೆ ನಗುತ್ತಾ ಹೇಳಿದರು. ಇದಕ್ಕೆ ನಗುತ್ತಾ ಪ್ರತಿಕ್ರಿಯಿಸಿದ ಧನಕರ್ ಈ ಸಂದರ್ಭದಲ್ಲಿ ನಾನು ನಿಮಗೆ ಸಹಾಯ ಮಾಡಿದ್ದೇನೆ ಎಂದರು. ಇದಕ್ಕೆ ಉತ್ತರಿಸಿದ ಖರ್ಗೆ, ಕೆಲವೊಮ್ಮೆ ನೀವು ನಮಗೆ ಸಹಾಯ ಮಾಡುತ್ತೀರಿ ಮತ್ತು ನಮಗೂ ನೆನಪಿದೆ' ಎಂದರು. ಇದು ಸಭಾಪತಿಯವರಲ್ಲಿ ನಗು ತರಿಸಿತು.
ಪ್ರಧಾನಿಗೆ ತಲೆಬಾಗಿದ್ದೀರಿ ನನಗಿಲ್ಲ ಎಂದ ರಾಹುಲ್‌ಗೆ ಸ್ಪೀಕರ್ ಕೊಟ್ಟ ಉತ್ತರ ಹೇಗಿದೆ ನೋಡಿ?