ಸೈಲೆಂಟ್‌ ಸುನೀಲ ನಮ್ಮ ಪಕ್ಷದವನೇ ಅಲ್ಲ: ನಳೀನ್‌ ಕುಮಾರ್‌ ಕಟೀಲ್‌!

Published : Apr 15, 2023, 05:33 PM ISTUpdated : Apr 15, 2023, 05:36 PM IST
ಸೈಲೆಂಟ್‌ ಸುನೀಲ ನಮ್ಮ ಪಕ್ಷದವನೇ ಅಲ್ಲ: ನಳೀನ್‌ ಕುಮಾರ್‌ ಕಟೀಲ್‌!

ಸಾರಾಂಶ

ಚಾಮರಾಜಪೇಟೆಯಿಂದ ಟಿಕೆಟ್‌ ಸಿಗದೇ ಇದ್ದ ಕಾರಣಕ್ಕೆ ಬಿಜೆಪಿ ಕಚೇರಿಗೆ ನುಗ್ಗಿ ರೌಡಿ ಶೀಟರ್‌ ಸೈಲೆಂಟ್‌ ಸುನೀಲನ ಅಭಿಮಾನಿಗಳು ದಾಂಧಲೆ ಮಾಡಿದ್ದು ಎಲ್ಲರಿಗೂ ಗೊತ್ತಿದೆ. ಆದರೆ, ಬಿಜೆಪಿ ರಾಜ್ಯಾಧ್ಯಕ್ಷ ನಳೀನ್‌ ಕುಮಾರ್‌ ಕಟೀಲ್‌, ಸೈಲೆಂಟ್‌ ಸುನೀಲ ನಮ್ಮ ಪಕ್ಷದವನೇ ಅಲ್ಲ ಅವರಿಗೆ ಹೇಗೆ ಟಿಕೆಟ್‌ ನೀಡೋದು ಎಂದು ಉಲ್ಟಾ ಹೊಡೆದಿದ್ದಾರೆ.  

ಬೆಂಗಳೂರು (ಏ.15): ಚಾಮರಾಜಪೇಟೆ ವಿಧಾನಸಭಾ ಕ್ಷೇತ್ರದಿಂದ ಮಾಜಿ ಬೆಂಗಳೂರು ಪೊಲೀಸ್‌ ಕಮೀಷನರ್‌ ಭಾಸ್ಕರ್‌ ರಾವ್‌ ಅವರ ಹೆಸರು ಘೋಷಣೆ ಆಗುತ್ತಿದ್ದಂತೆ, ರೌಡಿ ಶೀಟರ್‌ ಸೈಲೆಂಟ್‌ ಸುನೀಲನ ಅಭಿಮಾನಿಗಳು ರೊಚ್ಚಿಗೆದ್ದಿದ್ದರು. ಬಿಜೆಪಿ ಕಚೇರಿಗೆ ನುಗ್ಗಿ ದಾಂಧಲೆಯನ್ನೂ ಮಾಡಿದ್ದರು. ಬಳಿಕ ಬಿಜೆಪಿ ರಾಜ್ಯ ಚುನಾವಣಾ ಉಸ್ತುವಾರಿ ಅಣ್ಣಾಮಲೈ, ಸೈಲೆಂಟ್‌ ಸುನೀಲ ಹಾಗೂ ಅವರ ಬೆಂಬಲಿಗರಿಗೆ ಎಚ್ಚರಿಕೆ ನೀಡಿದ್ದೂ ಆಯ್ತು. ಈ ನಡುವೆ ಬಿಜೆಪಿ ರಾಜ್ಯಾಧ್ಯಕ್ಷ ನಳೀನ್‌ ಕುಮಾರ್‌ ಕಟೀಲ್‌, ಸೈಲೆಂಟ್‌ ಸುನೀಲ ನಮ್ಮ ಪಕ್ಷದವನೇ ಅಲ್ಲ, ಅವರಿಗೆ ಟಿಕೆಟ್‌ ನೀಡೋದು ಹೇಗೆ ಎಂದು ಹೇಳಿದ್ದಾರೆ. ಸೈಲೆಂಟ್ ಸುನೀಲ್ ನಮ್ಮ ಪಾರ್ಟಿ ಸದಸ್ಯನೆ ಅಲ್ಲ. ಅವರು ಸೀಟ್ ಕೇಳೊಕೆ ಬಂದಾಗ, ಅವನು ನಮ್ಮ ಪಾರ್ಟಿ ಸದಸ್ಯನೇ ಅಲ್ಲ ಎಂದಿದ್ದೇನೆ ಎಂದು ಕಟೀಲ್‌ ಶನಿವಾರ ನಡೆದ ಸುದ್ದಿಗೋಷ್ಠಿಯ ವೇಳೆ ಹೇಳಿದ್ದಾರೆ. ಬಿಜೆಪಿಯಲ್ಲಿ‌ ಮೂರ್ನಾಲ್ಕು ಕಳಂಕಿತರಿಗೆ ಟಿಕೆಟ್ ಕೊಟ್ಟ ವಿಚಾರದಲ್ಲಿ ಪ್ರತಿಕ್ರಿಯಿಸಿದ ಅವರು, ನಮ್ಮಲ್ಲಿ ಆರೋಪ ಸಾಬೀತಾದವರಿಗೆ ಟಿಕೆಟ್ ಕೊಟ್ಟಿಲ್ಲ. ನಾವು ವಿನಯ್ ಕುಲಕರ್ಣಿ ಅಂಥವರಿಗೆ ಟಿಕೆಟ್ ಕೊಟ್ಟಿಲ್ಲ ಎಂದು ಹೇಳಿದ್ದಾರೆ. ಕಾಂಗ್ರೆಸ್ ಗೆ ಅಭ್ಯರ್ಥಿ ಗಳ ಕೊರತೆ ಕಾಡುತ್ತಿದೆ. ಸಿದ್ದರಾಮಯ್ಯ ಟೀಮ್ ಡಿಕೆ ಟೀಮ್ ಯಾರಿಗೆ ಎಷ್ಟು ಟಿಕೆಟ್ ಸಿಕ್ಕಿತು ಎನ್ನುವ ಲೆಕ್ಕಾಚಾರ ಶುರುವಾಗಿದೆ .ಕನಕಪುರ, ವರುಣಾಗೆ ನಮ್ಮ ಅಭ್ಯರ್ಥಿ ಘೋಷಣೆ ಆದಮೇಲೆ ಕಾಂಗ್ರೆಸ್ ನಾಯಕರು ಅವರ ಕ್ಷೇತ್ರಕ್ಕೆ ಸೀಮಿತ ಆಗಿದ್ದಾರೆ ಎಂದು ಹೇಳಿದ್ದಾರೆ.

ಸವದಿ ವಿಚಾರದಲ್ಲಿ ಮಾತನಾಡಿದ ಅವರು, ನಮ್ಮಲ್ಲಿ ಯಾರಿಗೂ ಆಶ್ವಾಸನೆ ನೀಡಿಲ್ಲ. ಪಾರ್ಲಿಮೆಂಟ್ ಬೋರ್ಡ್ ಯಾರಿಗೆ ಟಿಕೆಟ್‌ ಕೊಡಬೇಕು ಅನ್ನೋದನ್ನು ತೀರ್ಮಾನ ಮಾಡುತ್ತದೆ ಎಂದರು. ಆನಂದ್ ಸಿಂಗ್ ನಿವೃತ್ತಿ ಆಗಿದ್ದಾರೆ. ಹಾಗಾಗಿ ಅವರ ಮಗನಿಗೆ ಟಿಕೆಟ್‌ ನೀಡಿದ್ದೇವೆ. ಆನಂದ್ ಸಿಂಗ್ ಮಗ ಎಂದು ಟಿಕೆಟ್‌ ನೀಡಿಲ್ಲ. ಅವರು ಯುವ ಮೋರ್ಚಾ ಜವಬ್ದಾರಿ ವಹಿಸಿಕೊಂಡು ಗಮನಸೆಳೆದಿದ್ದಾರೆ ಅದಕ್ಕಾಗಿ ಟಿಕೆಟ್‌ ನೀಡಿದ್ದೇವೆ ಎಂದರು. ಇನ್ನು ಜಗದೀಶ್‌ ಶೆಟ್ಟರ್‌ ವಿಚಾರದಲ್ಲಿ ಪ್ರಲ್ಹಾದ್‌ ಜೋಶಿ ಅವರೊಂದಿಗೆ ಮಾತನಾಡುತ್ತಿದ್ದಾರೆ. ಪಾರ್ಟಿ ಬಿಟ್ಟು ಹೋಗುವವರ ಜೊತೆಯೂ ಮಾತಾಡಿದ್ದೇವೆ. ಅದನ್ನು ಮಾಧ್ಯಮ ಮುಂದೆ ಹೇಳೋಕೆ ಆಗೋದಿಲ್ಲ ಎಂದು ಹೇಳಿದರು.

ಕಾಂಗ್ರೆಸ್ ಮತ್ತು ಜೆಡಿಎಸ್ ಸ್ಥಿತಿ ಎಲ್ಲವನ್ನೂ ನೋಡುತ್ತಿದ್ದೇವೆ. ಹಾಸನ ಒಂದು ಕ್ಷೇತ್ರಕ್ಕೆ ಟಿಕೆಟ್ ನೀಡಲು ಜೆಡಿಎಸ್ ಎಷ್ಟು ಕಷ್ಟಪಟ್ಟಿದೆ. ಪಾರ್ಟಿ ಒಂದು ಕುಟುಂಬದ ಹಿಡಿತದಲ್ಲಿದ್ರೆ ಏನಾಗಲಿದೆ ಅನ್ನೋದಕ್ಕೆ ಉದಾಹರಣೆ ಇದೆ. ನಮ್ಮದು ಸಂಘಟನೆ ಇರುವ ಪಾರ್ಟಿ. ಕಾರ್ಯಕರ್ತರಿಗೆ ಗೌರವ ನೀಡುವ ಪಾರ್ಟಿ. ಶಕ್ತಿ ಕೇಂದ್ರ ಪ್ರಮುಖರ ಜೊತೆ ಕೂಡ ಚರ್ಚೆ ಮಾಡಿದ್ದೇವೆ. ಇಲ್ಲಿ ತನಕ 212 ಅಭ್ಯರ್ಥಿಗಳ ಘೋಷಣೆ ಆಗಿದೆ. ಅಭಿಪ್ರಾಯ ಸಂಗ್ರಹ ಮಾಡಿ ಸಮರ್ಥ ಅಭ್ಯರ್ಥಿ ಪ್ರಕಟಿಸಿದ್ದೇವೆ. 60 ಹೊಸಮುಖಗಳಿಗೆ ಅವಕಾಶ ನೀಡಲಾಗಿದೆ. ವೈದ್ಯರು, ಯುವಕರಿಗೆ ಟಿಕೆಟ್ ನೀಡಲಾಗಿದೆ. ಸಾಮಾನ್ಯರಲ್ಲಿ ಸಾಮಾನ್ಯರಿಗೆ ಟಿಕೆಟ್ ನೀಡಿದ್ದೇವೆ. ಗುರುರಾಜ್ , ಈಶ್ವರ್ ಸಿಂಗ್ ಠಾಕೂರ್ ಅಂತವರಿಗೂ ಅವಕಾಶ. ವಿದ್ಯಾವಂತರ ತಂಡ, ಕಾರ್ಯಕರ್ತರ ತಂಡ‌ ಹೀಗೆ ಅವಕಾಶ ನೀಡಲಾಗಿದೆ ಎಂದರು. ಇನ್ನು ಕಾಂಗ್ರೆಸ್‌,  ಬಹಳ ಕಷ್ಟ ಪಟ್ಟು ಪಟ್ಟಿ ಘೋಷಣೆ ಮಾಡಿದೆ. ಗಜಪ್ರಸವ ಆಗಿದೆ. ಇನ್ನು ಕೆಲವು ಕಡೆ ಟಿಕೆಟ್‌ಗಾಗಿ ಕಾಯುತ್ತಿದ್ದಾರೆ ಎಂದು ಹೇಳಿದರು. 52 ಜನ ಮೊದಲ ಬಾರಿ ಚುನಾವಣೆ ನಿಲ್ಲುತ್ತಿದ್ದಾರೆ. ಮೋದಿ, ಬಿಜೆಪಿ ಪರ ಅಲೆ ಇದೆ.  2014 ರಿಂದ ಭಾರತವನ್ನು ಎತ್ತರಕ್ಕೆ ತೆಗೆದುಕೊಂಡು ಹೋಗಿದ್ದಾರೆ. ಸಾಮಾಜಿ ಸಮತೋಲನ ಕಾಪಾಡುವ ರೀತಿ ಟಿಕೆಟ್ ನೀಡಿದ್ದೇವೆ ಎಂದರು.

ಬಿಜೆಪಿ ಕುಟುಂಬ ರಾಜಕಾರಣದ ಪಟ್ಟಿ ಹರಿಬಿಟ್ಟ ಹೆಚ್.ಡಿ. ಕುಮಾರಸ್ವಾಮಿ: ಮೋದಿ, ಅಮಿತ್‌ ಶಾಗೆ ಟಾಂಗ್

ಡಿಕೆಶಿಗೆ ಭಯ ಕಾಡುತ್ತಿದೆ: ಕನಕಪುರದಲ್ಲಿ ಅಶೋಕ್‌ ಸ್ಪರ್ಧೆ ಬಗ್ಗೆ ಡಿಕೆ ಶಿವಕುಮಾರ್ ಲೇವಡಿ ಮಾಡುತ್ತಿದ್ದಾರೆ. ಆದರೆ ಅವರಿಗೆ ಹಿಂದೆ ತುಂಬಾ ಭಯ ಕಾಡುತ್ತಿದೆ ಅನ್ನೋದು ಅದರಲ್ಲೇ ಗೊತ್ತಾಗುತ್ತಿದೆ. ಯಾವ ರೀತಿ ಭಯ ಅಂತಾ ಚುನಾವಣೆಯಲ್ಲಿ ಗೊತ್ತಾಗಲಿದೆ. ಅಶೋಕ್ ಇವಾಗ ಪದ್ಮನಾಭ ನಗರದಲ್ಲಿ ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ. ಶೀಘ್ರವೇ ಅವ್ರು ಕನಕಪುರಕ್ಕೆ ಭೇಟಿ ಕೊಡಲಿದ್ದಾರೆ. ನಾಮಪತ್ರ ಸಲ್ಲಿಕೆ ದಿನಾಂಕ ಯಾವಾಗ ಅಂತಾ ಶೀಘ್ರವೇ ತಿಳಿಸುತ್ತೇವೆ ಎಂದು ಹೇಳಿದರು.

ಮಲ್ಲಿಕಾರ್ಜುನ್ ಖರ್ಗೆ ಒಂದು ಕ್ಷೇತ್ರದಲ್ಲಿ ನಿಂತು ಗೆದ್ದು ತೋರಿಸಲಿ, ಆಮೇಲೆ ಸಿಎಂ ಆಗಲಿ ನೋಡೋಣ: ಕಟೀಲ್ ಚಾಲೆಂಜ್

ಬಂಡಾಯದ ಕಿಚ್ಚು ಆರಿಸುವಲ್ಲಿ ಕಟೀಲ್ ವಿಫಲ ಆಗಿದ್ದಾರೆಂಬ ಆರೋಪದ ಬಗ್ಗೆ ಪ್ರತಿಕ್ರಿಯಿಸಿದ ಅವರು,  ಯಾರ ಬಗ್ಗೆ ಮಾತಾಡಬೇಕೋ ಅವರ ಬಳಿ ಮಾತಾಡಿದ್ದೇನೆ. ಅದನ್ನು ಮಾಧ್ಯಮದ ಬಳಿ ಹೇಳುವ ಅಗತ್ಯ ಇಲ್ಲ. ಪಕ್ಷ ಬಿಟ್ಟು ಹೋಗುವವರ ಬಳಿ ಮಾತಾಡಿದ್ದೇನೆ. ರಾಜ್ಯಾಧ್ಯಕ್ಷ ಆಗಿ ಇದರಲ್ಲಿ ನಾನು ವಿಫಲ ಆಗಿಲ್ಲ. ಅಸಾಮಾಧನ ಇದ್ದವರ ಜತೆ ಮಾತಾಡಿದೀನಿ. ಇದು ಒಂದೇ ದಿನ ಆಗೋದಿಲ್ಲ. ಬೇರೆ ಪಕ್ಷಕ್ಕೆ ಒಂದಿಬ್ಬರು ಹೋಗಿರಬಹುದು. ಉಳಿದವರನ್ನು ಉಳಿಸಿ ಕೆಲಸದಲ್ಲಿ ಜೋಡಿಸುವ ಕೆಲಸ ಮಾಡಿದ್ದೇನೆ ಎಂದಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಸಿಎಂ ಬದಲಾವಣೆ ಚರ್ಚೆ ತೀವ್ರ: ಹೈಕಮಾಂಡ್‌ ಜೊತೆ ಡಿ.ಕೆ.ಶಿವಕುಮಾರ್‌ ಮಾತುಕತೆ
ಕಾಂಗ್ರೆಸ್‌ನ ಕಟ್ಟಾಳು ಶಾಮನೂರು ಶಿವಶಂಕರಪ್ಪ: ದಾವಣಗೆರೆಯ ಅಜೇಯ ರಾಜಕೀಯ ದಂತಕಥೆ