ರಾಯಚೂರು: ಜೆಡಿ​ಎಸ್‌ ಎರ​ಡನೇ ಪಟ್ಟಿಯಲ್ಲೂ ಜಿಲ್ಲೆಗಿಲ್ಲ ಸ್ಥಾನ!

Published : Apr 15, 2023, 03:39 PM ISTUpdated : Apr 15, 2023, 03:43 PM IST
ರಾಯಚೂರು: ಜೆಡಿ​ಎಸ್‌ ಎರ​ಡನೇ ಪಟ್ಟಿಯಲ್ಲೂ ಜಿಲ್ಲೆಗಿಲ್ಲ ಸ್ಥಾನ!

ಸಾರಾಂಶ

ಜೆಡಿ​ಎಸ್‌ ಪ್ರಕ​ಟಿ​ಸಿ​ರುವ 2ನೇ ಪಟ್ಟಿ​ಯಲ್ಲಿ ರಾಯ​ಚೂರು ಜಿಲ್ಲೆಗೆ ಸ್ಥಾನ​ ಸಿ​ಕ್ಕಿಲ್ಲ, 7 ಕ್ಷೇತ್ರ​ಗಳ ಪೈಕಿ ಮೊದಲ ಪಟ್ಟಿ​ಯಲ್ಲಿ ಐದು ಕಡೆ ಅಭ್ಯ​ರ್ಥಿ​ಗ​ಳನ್ನು ಆಯ್ಕೆ ಮಾಡಿದ್ದ ಪಕ್ಷದ ಮುಖಂಡರು ಎರಡು ಕಡೆ ಬಾಕಿ ಉಳಿ​ಸಿ​ಕೊಂಡಿ​ದ್ದರು. ಇದೀಗ ಎರ​ಡನೇ ಪಟ್ಟಿ​ಯ​ಲ್ಲಾ​ದರು ಆ ಎರಡೂ ಕ್ಷೇತ್ರ​ಗ​ಳಿಗೆ ಸಮ​ರ್ಥ​ರನ್ನು ಆಯ್ಕೆ ಮಾಡು​ತ್ತಾರೆ ಎನ್ನುವ ನಿರೀ​ಕ್ಷೆ​ ಹೊಂದಿದ್ದ ಪಕ್ಷದ ಕಾರ್ಯ​ಕ​ರ್ತರು ಇದೀಗ ನಿರಾ​ಸೆ​ಪ​ಟ್ಟಿ​ದ್ದಾ​ರೆ.

ರಾಯ​ಚೂರು (ಏ.15) : ಜೆಡಿ​ಎಸ್‌ ಪ್ರಕ​ಟಿ​ಸಿ​ರುವ 2ನೇ ಪಟ್ಟಿ​ಯಲ್ಲಿ ರಾಯ​ಚೂರು ಜಿಲ್ಲೆಗೆ ಸ್ಥಾನ​ ಸಿ​ಕ್ಕಿಲ್ಲ, 7 ಕ್ಷೇತ್ರ​ಗಳ ಪೈಕಿ ಮೊದಲ ಪಟ್ಟಿ​ಯಲ್ಲಿ ಐದು ಕಡೆ ಅಭ್ಯ​ರ್ಥಿ​ಗ​ಳನ್ನು ಆಯ್ಕೆ ಮಾಡಿದ್ದ ಪಕ್ಷದ ಮುಖಂಡರು ಎರಡು ಕಡೆ ಬಾಕಿ ಉಳಿ​ಸಿ​ಕೊಂಡಿ​ದ್ದರು. ಇದೀಗ ಎರ​ಡನೇ ಪಟ್ಟಿ​ಯ​ಲ್ಲಾ​ದರು ಆ ಎರಡೂ ಕ್ಷೇತ್ರ​ಗ​ಳಿಗೆ ಸಮ​ರ್ಥ​ರನ್ನು ಆಯ್ಕೆ ಮಾಡು​ತ್ತಾರೆ ಎನ್ನುವ ನಿರೀ​ಕ್ಷೆ​ ಹೊಂದಿದ್ದ ಪಕ್ಷದ ಕಾರ್ಯ​ಕ​ರ್ತರು ಇದೀಗ ನಿರಾ​ಸೆ​ಪ​ಟ್ಟಿ​ದ್ದಾ​ರೆ.

ವಿಧಾ​ನ​ಸಭಾ ಸಾರ್ವ​ತ್ರಿಕ ಚುನಾ​ವಣೆ ಸಮೀ​ಪಿ​ಸು​ತ್ತಿ​ರುವ ವೇಳೆ ಎಲ್ಲೆಡೆ ರಾಜ​ಕೀಯ ಕಾವು ಜೋರು ಪಡೆ​ಯು​ತ್ತಿದ್ದು, ಅಭ್ಯ​ರ್ಥಿ​ಗ​ಳಿಗೆ ಟಿಕೆಟ್‌ ಆಯ್ಕೆ​ಯಲ್ಲಿ ರಾಜ​ಕೀಯ ಪಕ್ಷ​ಗಳು ಸೃಷ್ಟಿಸಿ​ಕೊಂಡಿ​ರುವ ಗೊಂದ​ಲವು ರಾಯ​ಚೂರು ಜಿಲ್ಲೆಯ ಚುನಾ​ವಣಾ ವಾತಾ​ವ​ರ​ಣದ ಮೇಲೂ ಪರಿ​ಣಾ​ಮ​ವ​ನ್ನುಂಟು ಮಾಡು​ತ್ತಿದೆ.

ರಾಯಚೂರು: ಚುನಾವಣೆ ಪ್ರಚಾರದ ವೇಳೆ ಡಾಬಾಕ್ಕೆ ಹೋಗುವ ಮದ್ಯ ಪ್ರಿಯರೇ ಎಚ್ಚರ..!

ಕಳೆದ ಜ.11ರಂದು ಬಿಡು​ಗಡೆ ಮಾಡಿ​ದ್ದ ಜೆಡಿ​ಎಸ್‌ ಮೊದಲ ಪಟ್ಟಿ(JDS Candidate list)ಯಲ್ಲಿ ಜಿಲ್ಲೆ 7 ಕ್ಷೇತ್ರ​ಗಳ ಪೈಕಿ ರಾಯ​ಚೂರು ಗ್ರಾಮೀಣ ಕ್ಷೇತ್ರ​(Raichur rural assembly constituency)ದಿಂದ ಸಣ್ಣ ನರ​ಸಿಂಹ ನಾಯಕ, ಮಾನ್ವಿ ಹಾಲಿ ಶಾಸ​ಕ ರಾಜಾ ವೆಂಕ​ಟಪ್ಪ ನಾಯಕ(Rajavenkatappa nayak), ಸಿಂಧ​ನೂ​ರಿನ ಹಾಲಿ ಶಾಸಕ ವೆಂಕ​ಟ​ರಾವ ನಾಡ​ಗೌಡ(Venkatarao nadagowda), ದೇವ​ದು​ರ್ಗ​ದಿಂದ ಕರೆಮ್ಮ ಜಿ.ನಾ​ಯಕ ಮತ್ತು ಲಿಂಗ​ಸು​ಗೂ​ರಿ​ನಿಂದ ಸಿದ್ದು ವೈ.ಬಂಡಿ ಅವ​ರಿಗೆ ಟಿಕೆಟ್‌ ಘೋಷಣೆ ಮಾಡಿ​ದ್ದರು. ರಾಯ​ಚೂರು ನಗರ ಮತ್ತು ಮಸ್ಕಿ ಕ್ಷೇತ್ರ​ಗ​ಳಿಗೆ ಅಭ್ಯ​ರ್ಥಿ​ಗಳ ಆಯ್ಕೆ​ಯನ್ನು ಘೊಷಿ​ಸದೇ ಬಾಕಿ ಇಟ್ಟಿದ್ದರು.

ಇದೀಗ ಶುಕ್ರ​ವಾರ ಘೋಷ​ಣೆ​ಯಾ​ಗಿ​ರುವ 2ನೇ ಪಟ್ಟಿ​ಯಲ್ಲಿ ಎರಡೂ ಕ್ಷೇತ್ರ​ಗ​ಳಿಗೆ ಟಿಕೆಟ್‌ ಖಚಿ​ತ​ವಾ​ಗು​ತ್ತವೆ ಎನ್ನುವ ವಿಶ್ವಾಸ ಹೊಂದಿದ ಪಕ್ಷದ ಮುಖಂಡರು ಗೊಂದ​ಲ​ದಲ್ಲಿ ಮುಳು​ಗಿ​ದ್ದಾರೆ.

ರಾಯ​ಚೂರು ನಗ​ರ ಕ್ಷೇತ್ರ​ದಿಂದ ಕಾಂಗ್ರೆಸ್‌ ಯಾರಿಗೆ ಟಿಕೆಟ್‌ ಕೊಡು​ತ್ತದೆ ಎನ್ನುವ ಕಾದು ನೋಡುವ ತಂತ್ರಕ್ಕೆ ಮೊರೆ​ಹೋ​ಗಿ​ರುವ ಕಾರ​ಣಕ್ಕೆ ಜೆಡಿ​ಎಸ್‌ ಅಭ್ಯ​ರ್ಥಿಯ ಅಧಿ​ಕೃತ ಘೊಷ​ಣೆ​ಯನ್ನು ಪಕ್ಷದ ಮುಖಂಡರು ಮಾಡು​ತ್ತಿಲ್ಲ ಎಂದು ಹೇಳ​ಲಾ​ಗು​ತ್ತಿದೆ. ಇದೀಗ ಕಾಂಗ್ರೆಸ್ ಪಟ್ಟಿ ಬಿಡುಗಡೆಯಾಗಿದೆ.

ರಾಯ​ಚೂರು ಕದನ: ಬಿಜೆ​ಪಿ ಹ್ಯಾಟ್ರಿ​ಕ್‌ ಗೆಲುವಿಗೆ ಬ್ರೇಕ್‌ ಹಾಕು​ತ್ತಾ ಕಾಂಗ್ರೆಸ್‌?

ಮಸ್ಕಿ ಕ್ಷೇತ್ರ​ದಲ್ಲಿ ಕಾಂಗ್ರೆ​ಸ್‌​ನಿಂದ ಹಾಲಿ ಶಾಸಕ ಆರ್‌.​ಬ​ಸ​ನಗೌಡ ತುರ್ವಿ​ಹಾಳ, ಬಿಜೆ​ಪಿ​ಯಿಂದ ಮಾಜಿ ಶಾಸಕ ಪ್ರತಾ​ಪ​ಗೌಡ ಪಾಟೀಲ್‌ ಅವರು ಸ್ಪರ್ಧೆ ಖಚಿ​ತ​ಗೊಂಡ ಹಿನ್ನೆ​ಲೆ​ಯಲ್ಲಿ ಜೆಡಿ​ಎ​ಸ್‌​ನಿಂದ ಸಮರ್ಥ ಅಭ್ಯ​ರ್ಥಿಯ ಹುಡು​ಕಾ​ಟ ನಡೆ​ದಿದ್ದು, ಕೆಲವೇ ದಿನ​ಗ​ಳಲ್ಲಿ ಬಾಕಿ ಉಳಿದ ರಾಯ​ಚೂರು ನಗರ ಮತ್ತು ಮಸ್ಕಿ ಕ್ಷೇತ್ರಕ್ಕೆ ಸಮ​ರ್ಥ​ರನ್ನು ಪಕ್ಷದ ವರಿ​ಷ್ಠರು ಘೋಷಣೆ ಮಾಡ​ಲಿ​ದ್ದಾರೆ ಎಂದು ಜೆಡಿ​ಎ​ಸ್‌ನ ಪ್ರಮುಖ ಮುಖಂಡ​ರೊ​ಬ್ಬರು ತಿಳಿ​ಸಿ​ದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಮುಖ್ಯಮಂತ್ರಿ, ಉಪಮುಖ್ಯಮಂತ್ರಿ ಮಧ್ಯೆ ಖುರ್ಚಿ ಕಾದಾಟ ಇಲ್ಲ: ಬಸವರಾಜ ರಾಯರೆಡ್ಡಿ
ಸಿಎಂ, ಡಿಸಿಎಂ ನಡುವೆ ಬೂದಿ ಮುಚ್ಚಿದ ಕೆಂಡದ ಪರಿಸ್ಥಿತಿ: ಸಂಸದ ಜಗದೀಶ್ ಶೆಟ್ಟರ್