
ಬಾಗಲಕೋಟೆ, (ಜುಲೈ.12): ಸುಮಲತಾ ಅಂಬರೀಶ್ ಅವರು ಮಂಡ್ಯಕ್ಕೆ ಆಹ್ವಾನ ಮಾಡಿದ ವಿಚಾರ ಪ್ರತಿಕ್ರಿಯಿಸಿದ ಸಿದ್ದರಾಮಯ್ಯ, ನನಗೆ ಸುಮಲತಾ ಅವರು ಆಹ್ವಾನ ಮಾಡಿದ್ದು ನಿಜ. ಮಂಡ್ಯಕ್ಕೆ ಹೋಗುತ್ತೇನೆ. ಯಾವಾಗ ಹೋಗುತ್ತೇನೆ ಅಂತ ಇನ್ನೂ ನಿಧಾ೯ರ ಆಗಿಲ್ಲ. ಯಾರ ಹೋರಾಟಕ್ಕೂ ನನ್ನ ಬೆಂಬಲ ಇಲ್ಲ. ನ್ಯಾಯಕ್ಕೆ ನನ್ನ ಬೆಂಬಲ ಎಂದು ತಮ್ಮ ನಿಲುವು ಪ್ರಕಟಿಸಿದರು.
ಇಂದು (ಸೋಮವಾರ) ಬಾದಾಮಿಯಲ್ಲಿ ಮಾತನಾಡಿದ ಸಿದ್ದರಾಮಯ್ಯ, ಯಾರ ತಪ್ಪಿದೆ ಅಂತ ನನಗೆ ಗೊತ್ತಿಲ್ಲ, ಸುಮಲತಾಳದ್ದು ಐತೋ, ಕುಮಾರಸ್ವಾಮಿದ್ದು ಐತೋ, ಅಥವಾ ಜೆಡಿಎಸ್ ನದ್ದು ಅಂತಲ್ಲ, ನ್ಯಾಯದ ಪರ ನನ್ನ ಬೆಂಬಲ ಎಂದರು.
KRS ಸಮರ ಮತ್ತು ಅಂಬರೀಶ್ ಅಂತಿಮ ಸಂಸ್ಕಾರ! ಮಾತಿನ ಯುದ್ಧ
ಅಕ್ರಮ ಮೈನಿಂಗ್ ನಡೆಯುತ್ತಿದ್ದರೆ ಅದನ್ನು ನಿಲ್ಲಸಬೇಕಾಗಿದ್ದು ಸಕಾ೯ರದ ಜವಾಬ್ದಾರಿ. ಓವ೯ ಲೋಕಸಭಾ ಸದಸ್ಯೆ ಅವರ ಆರೋಪವನ್ನು ಸಕಾ೯ರ ಗಂಭೀರವಾಗಿ ಪರಿಗಣಿಸಬೇಕಿತ್ತು. ಅಕ್ರಮ ಮೈನಿಂಗ್, ಕ್ರಸರ್ ಬಗ್ಗೆ ವಿಚಾರಣೆ ಮಾಡಿ ಕ್ರಮ ಕೈಗೊಳ್ಳಬೇಕಿತ್ತು ಎಂದು ಹೇಳಿದರು.
ರಾಜ್ಯದಲ್ಲಿ ಎಲ್ಲೆಡೆ ಅಕ್ರಮ ನಡೆಯುತ್ತಿದೆ. ಈ ಅಕ್ರಮ ಸಿಎಂ ಯಡಿಯೂರಪ್ಪ, ಸಚಿವ ಈಶ್ವರಪ್ಪ ಕ್ಷೇತ್ರ ಸೇರಿದಂತೆ ಎಲ್ಲೆಡೆ ನಡೆಯುತ್ತಿದೆ. ಸಕಾ೯ರ ಏನು ಹೇಳಿದ್ರೂ ಗಂಭೀರವಾಗಿ ಪರಿಗಣಿಸುತ್ತಿಲ್ಲ. ಯಡಿಯೂರಪ್ಪಗೆ ಕುಚಿ೯ ಉಳಿಸಿಕೊಳ್ಳುವುದು, ಮಗನಿಗೆ ದುಡ್ಡು ಹೊಡೆಯೋದೆ ಕೆಲಸವಾಗಿದೆ ಎಂದು ಕಿಡಿಕಾರಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.