ಎರಡೇಟು ಹೊಡೆದ್ರೂ ನಮ್ಮೊಳಗಿನ ವಿಚಾರ; ಕಾರ್ಯಕರ್ತನ ಹಲ್ಲೆ ಪ್ರಕರಣ ಕುರಿತು ಡಿಕೆಶಿ ಮಾತು!

Published : Jul 11, 2021, 02:36 PM IST
ಎರಡೇಟು ಹೊಡೆದ್ರೂ ನಮ್ಮೊಳಗಿನ ವಿಚಾರ; ಕಾರ್ಯಕರ್ತನ ಹಲ್ಲೆ ಪ್ರಕರಣ ಕುರಿತು ಡಿಕೆಶಿ ಮಾತು!

ಸಾರಾಂಶ

ಕಾರ್ಯಕರ್ತನ ಹಲ್ಲೆ ಪ್ರಕರಣ ಕುರಿತು ಡಿಕೆಶಿ ಮಹತ್ವದ ಹೇಳಿಕೆ ಡ್ಯಾಮ್ ಬಿರುಕು ಬಿಟ್ಟಿದೆ ಎಂದು ಜನಪ್ರಿಯತೆ ಪಡೆಯಲ್ಲ ಗಣಿಗಾರಿಗೆ ಕುರಿತು ನನಗೆ ಗೊತ್ತಿಲ್ಲ, ಆದರೆ ಸುಳ್ಳು ಹೇಳಬಾರದು ಎಂದ ಡಿಕೆಶಿ

ಮದ್ದೂರು(ಜು.11): ಕೆ.ಎಂ ದೊಡ್ಡಿಯಲ್ಲಿ ಕಾರ್ಯಕರ್ತನ ಮೇಲೆ ಹಲ್ಲೆ ಪ್ರಕರಣ ಕುರಿತು ಡಿಕೆ ಶಿವಕುಮಾರ್ ಸ್ಪಷ್ಟನೆ ನೀಡಿದ್ದಾರೆ.  ಅವ್ನು ನಮ್ ಹುಡುಗ, ಇನ್ನು ಅವನಿಗೆ ಎರಡೇಟು ಹೊಡೆದರೂ ನಮ್ಮೊಳಗಿನ ವಿಚಾರ. ಇದನ್ನು ಈ ರೀತಿ ಗೂಂಡ, ರೌಡಿ ಶಿಷ್ಯ ಎಂದು ಅರ್ಥೈಸುವ ಅಗತ್ಯವಿಲ್ಲ ಎಂದು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಹೇಳಿದ್ದಾರೆ. 

ಕಾರ್ಯಕರ್ತನಿಗೆ ಹೊಡೆದ ಡಿಕೆಶಿ: ಇದೆಲ್ಲ ರೌಡಿ ಲಕ್ಷಣ ಅಲ್ಲದೆ ಮತ್ತೇನು? ಎಂದ ಬಿಜೆಪಿ

ಕಾರ್ಯಕರ್ತ ನನ್ ಸಂಬಂಧಿಕ. ಹೀಗಾಗಿ ಹೆಗಲ ಮೇಲೆ ಕೈಹಾಕಿ ಕೊಂಡು ಬರುತ್ತಿದ್ದೆ. ಈ ವೇಳೆ ಟಿವಿ, ನೋಡಿದವರು ಎನಂತಾರೆ ಎಂದಿದ್ದ. ಅದಕ್ಕೆ ಎರಡೇಟು ಹೊಡೆದೆ. ಇನ್ನು ನೀವು ಹೇಳಿದ ಹಾಗೆ ಹೆಗಲ ಮೇಲೆ ಕೈ ಹಾಕಿಲ್ಲ ಅಂತಾನೆ ಇಟ್ಕೋಳಿ, ಹೊಡೆದ ಅಂತಾನೆ ಇರಲಿ. ಅದು ನಮ್ಮೊಳಗಿನ ವಿಚಾರ ಎಂದು ಡಿಕೆಶಿ ಹೇಳಿದ್ದಾರೆ.

ಜಾತಿ ಗಣತಿ ವಿಚಾರ:
ಸರ್ಕಾರ ಜಾತಿ ಗಣತಿ ವಿಚಾರಕ್ಕೆ ಬರೋಬ್ಬರಿ 170 ಕೋಟಿ ರೂಪಾಯಿ ವೆಚ್ಚ ಮಾಡಿದೆ. ಹೀಗಿರುವಾಗ ಇದೀಗ ಜಾತಿ ಗಣತಿ ಬಿಡುಗಡೆ ಮಾಡದಿರುವುದು ತಪ್ಪು. ಕಾಂತರಾಜು ವರದಿ ಕುರಿತು ತಿಳಿದಿಲ್ಲ. ಆದರೆ ಪಕ್ಷದ ಅಧ್ಯಕ್ಷನಾಗಿ, ವಿರೋಧ ಪಕ್ಷದ ನಾಯಕರ ಜೊತೆ ಚರ್ಚೆ ಮಾಡುತ್ತೇವೆ ಎಂದು ಡಿಕೆಶಿ ಹೇಳಿದ್ದಾರೆ.

ಮಂಡ್ಯ: ಹೆಗಲ ಮೇಲೆ ಕೈ ಹಾಕಿದ್ದಕ್ಕೆ ಬೆಂಬಲಿಗನಿಗೆ ಡಿಕೆಶಿ ಏಟು

ಅಕ್ರಮ ಗಣಿಗಾರಿಕೆ:
ರಾಜ್ಯದಲ್ಲಿ ಕೆಲ ದಿನಗಳಿಂದ ಅಕ್ರಮ ಗಣಿಗಾರಿಕೆ, ಕೆಆರ್‌ಎಸ್ ಡ್ಯಾಮ್ ಬಿರುಕು ಬಿಟ್ಟಿರುವ ಮಾತು ಭಾರಿ ಸದ್ದು ಮಾಡಿದೆ. ಮಾಜಿ ಸಿಎಂ ಹೆಚ್‌ಡಿ ಕುಮಾರಸ್ವಾಮಿ ಹಾಗೂ ಸಂಸದೆ ಸುಮಲತಾ ನಡುವಿನ ವಾಕ್ಸಮರ ಕುರಿತು ಪ್ರತಿಕ್ರಿಯೆ ನೀಡಲು ಡಿಕೆಶಿ ನಿರಾಕರಿಸಿದ್ದಾರೆ. ಆದರೆ ಅಕ್ರಮ ಗಣಿಕಾರಿಗೆ ನನಗೆ ತಿಳಿದಿಲ್ಲ. ನೀರಾವರಿ ಮಂತ್ರಿ, ಜಿಲ್ಲಾ ಮಂತ್ರಿಯಾಗಿ ಕಾರ್ಯನಿರ್ವಹಿಸಿದ್ದೇನೆ. ಆದರೆ ಅಕ್ರಮ ಗಣಿಕಾರಿಕೆ ಕುರಿತು ಅಧಿಕಾರಿಗಳು, ಎಂಜಿನೀಯರ್ ಮಾತಾಡಿಲ್ಲ. ಇದೆಲ್ಲಾ ಜನಪ್ರಿಯತೆ ತೆವಲಿಗೆ ಮಾಡುತ್ತಿರುವ ಯುದ್ದ ಎಂದು ಡಿಕೆಶಿ ಹೇಳಿದ್ದಾರೆ.

10 ಕಿ.ಮೀ ಅಥವಾ 15 ಕಿ.ಮೀ ವ್ಯಾಪ್ತಿಯಲ್ಲಿ ನಡೆಯುತ್ತಿರುವ ಜಲ್ಲಿ ಕಲ್ಲಿನಿಂದ ಡ್ಯಾಮ್ ಬಿರುಕು ಬಿಡಲು ಸಾಧ್ಯವಿಲ್ಲ. ಇದಕ್ಕೆ ಸಮಿತಿ ಇದೆ, ಎಂಜಿನೀಯರ್ ಇದ್ದಾರೆ. ಅವರು ನೋಡಿಕೊಳ್ಳುತ್ತಾರೆ. ಆದರೆ ಸುಮ್ಮನೆ ಬಿರುಕು ಬಿಟ್ಟಿದೆ ಎಂದು ಜನರಲ್ಲಿ ಆತಂಕ ಮೂಡಿಸುವ ಕೆಲಸ ನಾನು ಮಾಡುಲ್ಲ. ಈ ರೀತಿಯ ಜನಪ್ರಿಯತೆ ಬೇಕಿಲ್ಲ ಎಂದು ಡಿಕೆ ಶಿವಕುಮಾರ್ ಹೇಳಿದ್ದಾರೆ.

ಕೆಆರ್‌ಎಸ್ ಡ್ಯಾನ್ ಈ ರಾಜ್ಯದ ಹಾಗೂ ದೇಶದ ಆಸ್ತಿಯಾಗಿದೆ. ಹೀಗಾಗಿ ಜವಾಬ್ದಾರಿಯುತ ಸ್ಥಾನದಲ್ಲಿದ್ದು, ಮಾಹಿತಿ ಪಡೆದು ಮಾತನಾಡಬೇಕು. ಸುಮ್ಮನೆ ಜನರನ್ನು ಗಾಬರಿಗೊಳಿಸಬಾರದು. ಇನ್ನು ಗಣಿಗಾರಿಕೆಯಿಂದ ಡ್ಯಾಮ್‌ಗೆ ಧಕ್ಕೆಯಾಗಿದೆ ಅನ್ನೋ ವಿಚಾರ ನನಗೆ ಗೊತ್ತಿಲ್ಲ ಎಂದು ಡಿಕೆ ಶಿವಕುಮಾರ್ ಹೇಳಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಗ್ಯಾರಂಟಿ ಹೆಸರಿನಲ್ಲಿ ಕಾಲಹರಣ ಮಾಡುವ ಕೆಲಸ ಆಗುತ್ತಿದೆ: ಛಲವಾದಿ ನಾರಾಯಣಸ್ವಾಮಿ
ಕೇಂದ್ರ ಯೋಜನೆಗಳ ಅನುಷ್ಠಾನಕ್ಕೆ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ನಿರ್ದೇಶನ: ಸಂಸದ ಯದುವೀರ್