* ಪುಟಗೋಸಿ ವಿರೋಧ ಪಕ್ಷದ ನಾಯಕ ಎಂದ ಎಚ್‌ಡಿಕೆ
* ಎಚ್‌ಡಿ ಕುಮಾರಸ್ವಾಮಿ ಹೇಳಿಕೆಗೆ ಸಿದ್ದು ತಿರುಗೇಟು
* ದೇವೆಗೌಡರು ವಿರೋಧ ಪಕ್ಷದ ನಾಯಕರಾಗಿದ್ರು ಅದು ಫುಟಗೋಸಿನಾ? ಎಂದು ಪ್ರಶ್ನಿಸಿದ ಸಿದ್ದು
ಕಲಬುರಗಿ, (ಅ.13) : ಪುಟಗೋಸಿ ವಿರೋಧ ಪಕ್ಷದ ನಾಯಕ (Opposition leader) ಸ್ಥಾನಕ್ಕೆ ಸಿದ್ದರಾಮಯ್ಯ (Siddaramaiah) ಮೈತ್ರಿ ಸರ್ಕಾರವನ್ನು ಕಿತ್ತೆಸೆದರು ಎನ್ನುವ ಎಚ್.ಡಿ. ಕುಮಾರಸ್ವಾಮಿ ಆರೋಪಕ್ಕೆ ಸಿದ್ದು ತಿರುಗೇಟು ಕೊಟ್ಟಿದ್ದಾರೆ.
ಈ ಬಗ್ಗೆ ಇಂದು (ಅ.13) ಕಲಬುರಗಿಯಲ್ಲಿ (Kalaburagi) ಸುದ್ದಿಗಾರರೊಂದಿಗೆ ಮಾತನಾಡಿದ ಸಿದ್ದರಾಮಯ್ಯ,ದೇವರಾಜ ಅರಸು ಅವರು ಮುಖ್ಯಮಂತ್ರಿ ಆಗಿದ್ದಾಗ ಎಚ್.ಡಿ. ದೇವೇಗೌಡ (HD Devegowda) ಅವರು ವಿರೋಧ ಪಕ್ಷದ ನಾಯಕರಾಗಿದ್ದರು. ಹಾಗಾದರೆ ನಿಮ್ಮ ತಂದೆ ಕೂಡ ಪುಟಗೋಸಿ ಹುದ್ದೆಯಲ್ಲಿ ಇದ್ದದ್ದಾ ಎಂದು ಎಚ್.ಡಿ.ಕುಮಾರಸ್ವಾಮಿಗೆ (HD Kumaraswamy) ಪ್ರಶ್ನಿಸಿದರು.
ಪುಟಗೋಸಿ ವಿಪಕ್ಷ ನಾಯಕ ಸ್ಥಾನ ಎನ್ನುವ ಎಚ್‌ಡಿಕೆ ಹೇಳಿಕೆಗೆ ಸಿದ್ದು ಪುತ್ರ ತಿರುಗೇಟು
ದೇವೆಗೌಡರ ಸಿಎಂ ಆದ್ಮೇಲೆ ಕುಮಾರಸ್ವಾಮಿ ರಾಜಕೀಯಕ್ಕೆ ಬಂದ್ರು. ದೇವೆಗೌಡರು ವಿರೋಧ ಪಕ್ಷದ ನಾಯಕರಾಗಿದ್ರು. ಹಾಗಾದ್ರೆ ಅದು ಫುಟಗೋಷಿನಾ ?. ಸಿಎಂ ಆಗಿದ್ದವರು ಜವಬ್ದಾರಿಯಿಂದ ಮಾತಾಡಬೇಕು. ವೈಯಕ್ತಿಯವಾಗಿ ಮಾತನಾಡಬಾರದು ಎಂದು ಟಾಂಗ್ ಕೊಟ್ಟರು.
ಐಟಿ ರೇಡ್ ಬಗ್ಗೆ ನನ್ನ ಮೇಲೆ ಸುಳ್ಳು ಆರೋಪ ಮಾಡಿದ್ದಾರೆ. ಕುಮಾರಸ್ವಾಮಿ ಬಗ್ಗೆ ನಾನು ಮಾತಾಡಬಾರದು ಅಂದುಕೊಂಡಿದ್ದೆ. ಬಿಎಸ್ ವೈ ಬರ್ತ್ ಡೇ ಬಿಟ್ರೆ ನಾನು ಮೀಟಿಂಗ್ ನಲ್ಲಿ ಭೇಟಿ ಆಗಿದ್ದೇನೆ ಹೊರತು ಬೇರೆ ಕಡೆ ಭೇಟಿ ಮಾಡಿಲ್ಲ. ನಾನು ಅಧಿಕಾರದಲ್ಲಿರೋರನ್ನ ವೈಯಕ್ತಿಕವಾಗಿ ನಾನು ಭೇಟಿ ಮಾಡಲ್ಲ. ರಾಜಕೀಯದಲ್ಲಿ ನೀತಿ ನಿಯಮಗಳು ಇರುತ್ತವೆ ಎಂದು ಸ್ಪಷ್ಟಪಡಿಸಿದರು.
ಕುಮಾರಸ್ವಾಮಿ ಬಿಜೆಪಿ ಜೊತೆ ಸೇರಿದ್ರು ಯಾಕೆ ಸನ್ಯಾಸತ್ವ ಆಗೋದಕ್ಕಾ ?. ಪಾರ್ಟಿ ಹೆಸರು ಜೆಡಿಎಸ್ ಸೆಕ್ಯೂಲರ್, ಸರ್ಕಾರ ಮಾಡೋದು ಕಮ್ಯೂನಲ್ ಬಿಜೆಪಿ. ಇಂತವರಿಂದ ನಾವು ಪಾಠ ಕಲೀಬೇಕಾ ಎಂದು ಕಿಡಿಕಾರಿದರು.
ಒಂದು ನಾಲಿಗೆ ಇರಬೇಕು, ಎರಡು ನಾಲಿಗೆ ಇರಬಾರದು. ಯಡಿಯೂರಪ್ಪ ಆಪರೇಷನ್ ಕಮಲ ಮಾಡಿದ್ರು ಅಂತ ಹೇಳಿದ್ರು. ಈಗ ನನ್ನ ಹೆಸರು ಹೇಳ್ತಿದ್ದಾರೆ. ನನ್ನ ವಿರುದ್ದ ಜನರನ್ನ ಎತ್ತಿಕಟ್ಟೋದಕ್ಕೆ, ಮೈಸೂರು ಜನರನ್ನ ಎತ್ತಿಕಟ್ಟೊಕೆ ಈ ರೀತಿ ಮಾತಾಡ್ತಿದ್ದಾರೆ. ಆಪರೇಷನ್ ಕಮಲಕ್ಕೆ ಒಳಗಾಗ್ತಿದ್ದಾರೆ ಅಂತ ನಾನು ಫೋನ್ ಮಾಡಿದ್ರು 9 ದಿನ ಅಮೇರಿಕಾದಲ್ಲಿ ಇದ್ರು ಎಂದರು.
ಇವರು ಸಿಎಂ ಇದ್ದಾಗ ಎಲ್ಲಿದ್ರು, ವೆಸ್ಟೆಂಡ್ ಹೋಟೆಲ್‌ನಲ್ಲಿ. ಒಬ್ಬ ಮಂತ್ರಿಯನ್ನು ಭೇಟಿ ಆಗಿಲ್ಲ, ಶಾಸಕರನ್ನು ಭೇಟಿ ಆಗಿಲ್ಲ. ಈ ಕಾರಣಕ್ಕಾಗಿ ಇವರ ಸರ್ಕಾರ ಹೋಗಿದೆ ಎಂದು ಕುಮಾರಸ್ವಾಮಿಗೆ ತಿರುಗೇಟು ಕೊಟ್ಟರು.