ಡಿಕೆಶಿ ಭೇಟಿಯಾದ ಜೆಡಿಎಸ್‌ನ ಮುಖಂಡ : ಮತ್ತೊಂದು ವಿಕೆಟ್‌ ಪತನ

By Kannadaprabha News  |  First Published Oct 13, 2021, 9:33 AM IST
  • ಕಾಂಗ್ರೆಸ್‌ ಸೇರ್ಪಡೆಗೆ ಮುಂದಾಗಿರುವ ಬೆಳಗಾವಿಯ ಗೋಕಾಕ್‌ನ ಜೆಡಿಎಸ್‌ ಮುಖಂಡ 
  • ವಿಪಕ್ಷ ನಾಯಕ ಸಿದ್ದರಾಮಯ್ಯ ಬಳಿಕ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಅವರನ್ನೂ ಭೇಟಿ ಮಾಡಿ ಮಾತುಕತೆ 

ಬೆಂಗಳೂರು (ಅ.13):  ಕಾಂಗ್ರೆಸ್‌ (Congress) ಸೇರ್ಪಡೆಗೆ ಮುಂದಾಗಿರುವ ಬೆಳಗಾವಿಯ (belagavi) ಗೋಕಾಕ್‌ನ (Gokak) ಜೆಡಿಎಸ್‌ (JDS) ಮುಖಂಡ ಅಶೋಕ್‌ ಪೂಜಾರಿ (Ashok poojary) ಅವರು ವಿಪಕ್ಷ ನಾಯಕ ಸಿದ್ದರಾಮಯ್ಯ(Siddaramaiah) ಬಳಿಕ ಕೆಪಿಸಿಸಿ (KPCC) ಅಧ್ಯಕ್ಷ ಡಿ.ಕೆ.ಶಿವಕುಮಾರ್‌ (DK Shivakumar) ಅವರನ್ನೂ ಭೇಟಿ ಮಾಡಿ ಮಾತುಕತೆ ನಡೆಸಿದ್ದು, ಕುತೂಹಲ ಕೆರಳಿಸಿದೆ.

ಸೋಮವಾರವಷ್ಟೇ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿದ್ದ ಪೂಜಾರಿ ಅವರು ಮಂಗಳವಾರ ಶಿವಕುಮಾರ್‌ ಅವರ ಸದಾಶಿವನಗರದ (Sadashivanagar) ನಿವಾಸಕ್ಕೆ ಆಗಮಿಸಿ ಪಕ್ಷ ಸೇರ್ಪಡೆ ಬಗ್ಗೆ ಮಾತುಕತೆ ನಡೆಸಿದರು. ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಶಿವಕುಮಾರ್‌, ಪೂಜಾರಿ ಅವರು ವಿಪಕ್ಷ ನಾಯಕರೊಂದಿಗೆ ಮಾತುಕತೆ ನಡೆಸಿದ್ದಾರೆ. ಕಾಂಗ್ರೆಸ್‌ಗೆ (Congress) ಸೇರ್ಪಡೆ ಮಾಡಿಕೊಳ್ಳುವ ಬಗ್ಗೆ ಚರ್ಚಿಸಿ ನಿರ್ಧರಿಸಲಾಗುವುದು ಎಂದು ಸ್ಪಷ್ಟಪಡಿಸಿದರು.

Tap to resize

Latest Videos

undefined

ಪಕ್ಷ ಬಲಪಡಿಸಲು ಬಿಜೆಪಿ ಪ್ಲ್ಯಾನ್, ಡಿಕೆಶಿ ಹೈಜಾಕ್.!

ಅಶೋಕ್‌ ಪೂಜಾರಿ ಮಾತನಾಡಿ, ಲೋಕಸಭಾ ಚುನಾವಣೆ (Loksabha Election) ಸಂದರ್ಭದಲ್ಲೇ ಕಾಂಗ್ರೆಸ್‌ಗೆ ಸೇರ್ಪಡೆಯಾಗುವಂತೆ ಮಾಜಿ ಸಚಿವ ಸತೀಶ್‌ ಜಾರಕಿಹೊಳಿ (Satish jarkiholi),  ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್‌ ಅವರು ಆಹ್ವಾನಿಸಿದ್ದರು. ಬೆಂಬಲಿಗರೂ ಕಾಂಗ್ರೆಸ್‌ ಸೇರ್ಪಡೆಯಾಗುವಂತೆ ಒತ್ತಾಯಿಸುತ್ತಿದ್ದಾರೆ. ಗೋಕಾಕ್‌ನ ಸರ್ವಾಧಿಕಾರಿ ಧೋರಣೆಯ ವಿರುದ್ಧ ಈ ನಿರ್ಧಾರ ಅನಿವಾರ್ಯ ಎಂದು ಪರೋಕ್ಷವಾಗಿ ಮಾಜಿ ಸಚಿವ ರಮೇಶ್‌ ಜಾರಕಿಹೊಳಿ (Ramesh Jarkiholi) ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಮನಗೂಳಿ ಅವರನ್ನು ಡಿಕೆಶಿ ಭೇಟಿಯಾಗಿದ್ದು ಸುಳ್ಳು: ಎಚ್‌ಡಿಕೆ

ಅಧಿಕಾರ, ಹಣದ ಹಿಂದೆ ನಾನು ಎಂದೂ ಹೋದವನಲ್ಲ. ಬಿಜೆಪಿಯು ನಿಗಮ, ಮಂಡಳಿ ಅಧ್ಯಕ್ಷ ಸ್ಥಾನ ನೀಡುವುದಾಗಿ ಹೇಳಿದ್ದರೂ ಅದನ್ನು ನಿರಾಕರಿಸಿದ್ದೇನೆ. ಸತೀಶ್‌ ಜಾರಕಿಹೊಳಿ ಅವರು ಸಂಪೂರ್ಣ ಬೆಂಬಲ ನೀಡಿರುವುದರಿಂದ ಕಾಂಗ್ರೆಸ್‌ ಸೇರ್ಪಡೆಗೆ ಉತ್ಸುಕನಾಗಿದ್ದೇನೆ. ಬೆಂಬಲಿಗರೂ ಒತ್ತಾಯಿಸುತ್ತಿದ್ದಾರೆ ಎಂದು ಹೇಳಿದರು.

ಮೋಟಮ್ಮ, ಉಮಾಶ್ರೀ ಭೇಟಿ

ಮಾಜಿ ಸಚಿವರಾದ ಮೋಟಮ್ಮ (Motamma) ಮತ್ತು ಉಮಾಶ್ರೀ (Umashree) ಅವರು ಮಂಗಳವಾರ ಕೆಪಿಸಿಸಿ (KPCC) ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಅವರನ್ನು ಸದಾಶಿವ ನಗರದ ನಿವಾಸದಲ್ಲಿ ಭೇಟಿ ಮಾಡಿ ಸಮಾಲೋಚನೆ ನಡೆಸಿದರು. ಪಕ್ಷ ಸಂಘಟನೆ, ಮಹಿಳಾ ಘಟಕದ ಕಾರ್ಯ ನಿರ್ವಹಣೆ ಸೇರಿ ಹಲವು ವಿಚಾರ ಚರ್ಚಿಸಲಾಯಿತು.

ಈಗಾಗಲೆ ಹಲವರು ಪಕ್ಷ ಸೇರ್ಪಡೆ ಖಚಿತಪಡಿಸಿದ್ದು ಈ ಸಾಲಿಗೆ ಮತ್ತೋರ್ವ ಮುಖಂಡ ಸೇರಿದಂತೆ ಆಗಿದೆ. ಜಿ.ಟಿ ದೇವೇಗೌಡ, ಶ್ರೀನಿವಾಸ ಗೌಡ ಸಾಲಿಗೆ ಇದೀಗ ಶಿವರಾಜ್ ಪಾಟೀಲ್ ಸೆರುತ್ತಿದ್ದಾರೆ.

click me!