ಬಿಜೆಪಿ ವಿರುದ್ಧ ಕಾಂಗ್ರೆಸ್‌ ಮತ್ತೊಂದು ಅಸ್ತ್ರ: ಕೋವಿಡ್‌ ವರದಿ ಸಂಪುಟಕ್ಕೆ

By Kannadaprabha News  |  First Published Sep 4, 2024, 6:34 AM IST

ಮುಡಾ ಪ್ರಕರಣ ಮತ್ತು ವಾಲ್ಮೀಕಿ ನಿಗಮದ ಪ್ರಕರಣ ವಿಚಾರವಾಗಿ ರಾಜ್ಯ ಸರ್ಕಾರದ ವಿರುದ್ಧ ಮುಗಿಬಿದ್ದಿರುವ ಬಿಜೆಪಿ ನಾಯಕರನ್ನು ನಾಯಕರನ್ನು ಕಟ್ಟಿ ಹಾಕಲು ರಾಜ್ಯ ಸರ್ಕಾರ ಹೊಸ ಅಸ್ತ್ರವನ್ನು ಪ್ರಯೋಗಿಸಲು ವೇದಿಕೆ ಸಜ್ಜುಗೊಳಿಸಿದೆ. 
 


ಬೆಂಗಳೂರು(ಸೆ.04):  ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲಿ ಕೋವಿಡ್ ಸಂದರ್ಭದಲ್ಲಿ ನಡೆದಿದೆ ಎನ್ನಲಾದ ಭ್ರಷ್ಟಾಚಾರ ಆರೋಪದ ಸಲ್ಲಿಕೆಯಾಗಿರುವ ನಿವೃತ್ತ ನ್ಯಾಯಮೂರ್ತಿ ಮೈಕೆಲ್ ಡಿ. ಕುನ್ಹಾ ನೇತೃತ್ವದ ಆಯೋಗದ ತನಿಖಾ ವರದಿಯ ಕುರಿತು ಬುಧವಾರ ನಡೆಯುವ ಸಚಿವ ಸಂಪುಟ ಸಭೆಯಲ್ಲಿ ಚರ್ಚಿಸಲು ಸರ್ಕಾರ ನಿರ್ಧರಿಸಿದೆ ಹಾಗೂ ಮುಂದಿನ ಕ್ರಮದ ಬಗ್ಗೆ ನಿರ್ಧರಿಸಲಿದೆ. 

ಈ ಮೂಲಕ ಮುಡಾ ಪ್ರಕರಣ ಮತ್ತು ವಾಲ್ಮೀಕಿ ನಿಗಮದ ಪ್ರಕರಣ ವಿಚಾರವಾಗಿ ರಾಜ್ಯ ಸರ್ಕಾರದ ವಿರುದ್ಧ ಮುಗಿಬಿದ್ದಿರುವ ಬಿಜೆಪಿ ನಾಯಕರನ್ನು ನಾಯಕರನ್ನು ಕಟ್ಟಿ ಹಾಕಲು ರಾಜ್ಯ ಸರ್ಕಾರ ಹೊಸ ಅಸ್ತ್ರವನ್ನು ಪ್ರಯೋಗಿಸಲು ವೇದಿಕೆ ಸಜ್ಜುಗೊಳಿಸಿದೆ. 

Tap to resize

Latest Videos

ಕಾಂಗ್ರೆಸ್‌ನಲ್ಲಿ ಮುಖ್ಯಮಂತ್ರಿ ಪಟ್ಟಕ್ಕೆ ವೇಟಿಂಗ್ ಲಿಸ್ಟ್! ಖಾಲಿಯಿಲ್ಲದ ಕುರ್ಚಿಯ ಮೇಲೆ 'ಪಂಚ'ಪಾಂಡವರ ಕಣ್ಣು!

ಕೋವಿಡ್ ಆರಂಭದಿಂದ 2022ರ ಡಿಸೆಂಬರ್ ಅಂತ್ಯದವರೆಗೆ ಆರೋಗ, ಇಲಾಖೆ ಮತ್ತು ವೈದ್ಯಕೀಯ ಶಿಕ್ಷಣ ಇಲಾಖೆ ಅಧೀನದ ಆಸ್ಪತ್ರೆ ಸೇರಿದಂತೆ ಎಲ್ಲಾ ಸಂಸ್ಥೆಗಳಲ್ಲಿ ಔಷಧ, ಆಮ್ಲಜನಕ ಉಪಕರಣಗಳು, ಸಾಮಗ್ರಿಗಳ ಖರೀದಿ, ವಿತರಣೆ, ನಿರ್ವಹಣೆಯಲ್ಲಿ ಅವ್ಯವ ಹಾರ ನಡೆದಿದೆ ಎಂಬ ಆರೋಪಗಳಿವೆ. 

ಕೆಟಿಟಿಪಿ ಕಾಯ್ದೆ ಮತ್ತು ನಿಯಮ ಉಲ್ಲಂಘಿಸಿ ಟೆಂಡ‌ರ್ ಅನುಮೋದನೆ ನೀಡಿರುವುದು ಸೇರಿದಂತೆ ಒಟ್ಟಾರೆ ಲೋಪದೋಷಗಳ ಬಗ್ಗೆ ತನಿಖೆ ನಡೆಸಿರುವ ನಿವೃತ್ತ ನ್ಯಾಯಮೂರ್ತಿ ಮೈಕೆಲ್ ಡಿ ಕುನ್ಹಾ ನೇತೃತ್ವದ ಆಯೋಗ ಆ.31ರಂದು ರಾಜ್ಯ ಸರ್ಕಾರಕ್ಕೆ ವರದಿ ಸಲ್ಲಿಸಿದೆ. ಕಿದ್ವಾಯಿ ಸಂಸ್ಥೆಗೆ ಸಂಬಂಧಿಸಿದ ಟೆಂಡರ್ ಗಳು, ನೇಮಕಾತಿ, ಔಷಧಿ, ಉಪಕರಣ ಇನ್ನಿತರ ಸಾಮಗ್ರಿಗಳ ಖರೀದಿಯ ಬಗ್ಗೆ ಮಹಾಲೇಖ ಪಾಲರು ತಮ್ಮ ವರದಿಯಲ್ಲಿ ವ್ಯಕ್ತಪಡಿಸಿರುವ ಆಕ್ಷೇಪಗಳು, ರೋಗಿಗಳಿಗೆ ಬೆಡ್, ಆಮ್ಲಜನಕ ಕೊರತೆ ಸೇರಿದಂತೆ ಅನೇಕ ವಿಚಾರಗಳ ಬಗ್ಗೆ 9 `ಯೂ ಆಯೋಗ ತನಿಖೆ ನಡೆಸಿದೆ.

ವರದಿಯಲ್ಲಿನ ಅಂಶಗಳ ಬಗ್ಗೆ ಸಂಪುಟ ಸಭೆಯಲ್ಲಿ ಚರ್ಚಿಸಿ ಬಿಜೆಪಿ ನಾಯಕರ ವಿರುದ್ದ ಎಫ್‌ಐಆರ್‌ ದಾಖಲಿಸುವುದು ಸೇರಿದಂತೆ ಅಗತ್ಯ ಕಾನೂನು ಕ್ರಮದ ಅವಕಾಶಗಳ ಕುರಿತಾಗಿ ಸವಿವರವಾಗಿ ಚರ್ಚೆ ನಡೆಸಲಾಗುತ್ತದೆ ಎಂದು ತಿಳಿದು ಬಂದಿದೆ. 

ತಪ್ಪು ಮಾಡಿದ್ದಕ್ಕೆ ಚಡಪಡಿಕೆ: 

'ಕುಂಬಳ ಕಾಯಿ ಕಳ್ಳ ಎಂದರೆ ಅಂದಿನ ಆರೋಗ್ಯ ಸಚಿವ ಡಾ.ಕೆ. ಸುಧಾಕರ್‌ ಅವರೇಕೆ ಹೆಗಲು ಮುಟ್ಟಿ ನೋಡಿಕೊಳ್ಳುತ್ತಾರೆ? ವರದಿಯಲ್ಲಿ ಏನಿದೆ ಎಂದು ನನಗೆ ತಿಳಿದಿಲ್ಲ. ತಪ್ಪು ಮಾಡಿರುವುದರಿಂದ ವರದಿ ಬಹಿರಂಗವಾಗುವ ಮೊದಲೇ ಚಡಪಡಿಸುತ್ತಿದ್ದಾರೆ. ಸುಳ್ಳು ವರದಿ ತರಿಸಿಕೊಂಡಿದ್ದಾರೆ ಎಂದು ಹೇಳಿಕೆ ನೀಡಲು ವರದಿಯೇ ಬಹಿರಂಗವಾಗಿಲ್ಲ. ಆದರೂ, ಈ ರೀತಿ ಹೇಳಿಕೆ ನೀಡುತ್ತಾರೆ ಎಂದರೆ ಅವರ ಮನಸ್ಥಿತಿಗೆ ಏನಾಗಿದೆ ಎಂದು ಇದರಲ್ಲೇ ತಿಳಿಯುತ್ತದೆ' ಎಂದು ಸುಧಾಕರ್ ವಿರುದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ ಟೀಕಿಸಿದ್ದಾರೆ.

ಸಿದ್ದರಾಮಯ್ಯ ಬಳಿ ನಾಲ್ಕ್‌ ಜೊತೆ ಬಟ್ಟೆನೂ ಇಲ್ಲ, ಅವರ ಮೇಲೆ ಆರೋಪ ಮಾಡೋದು ಎಷ್ಟು ಸರಿ: ಕೆಜಿಎಫ್‌ ಬಾಬು

ಸುಧಾಕರ್ ಏಕೆ ಹೆಗಲು ಮುಟ್ಟಿ ನೋಡಿಕೊಳ್ತಾರೆ? ಕೋವಿಡ್ ವರದಿ ಯಲ್ಲಿ ಏನಿದೆ ಎಂದು ನನಗೆ ತಿಳಿ ದಿಲ್ಲ. ಆದಾಗ್ಯೂ ಕುಂಬಳಕಾಯಿ ಕಳ್ಳ ಎಂದರೆ ಅಂದಿನ ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ಅವರೇಕೆ ಹೆಗಲು ಮುಟ್ಟಿ ನೋಡಿಕೊಳ್ಳುತ್ತಾರೆ? ತಪ್ಪು ಮಾಡಿರುವುದರಿಂದ ವರದಿ ಬಹಿರಂಗವಾಗುವ ಮೊದಲೇ ಚಡಪಡಿಸುತ್ತಿದ್ದಾರೆ. ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ. 

* ಕೋವಿಡ್ ಆರಂಭದಿಂದ 2022ರ ಡಿಸೆಂಬರ್‌ವರೆಗೆ ಕೋವಿಡ್ ಅವ್ಯವಹಾರ ನಡೆದಿರುವ ಆರೋಪ 
* ಔಷಧ, ಆಮ್ಲಜನಕ ಉಪಕರಣ, ಸಾಮಗ್ರಿ ಖರೀದಿ, ವಿತರಣೆ, ನಿರ್ವಹಣೆಯಲ್ಲಿ ಅಕ್ರಮ ಬಗ್ಗೆ ದೂರು
* ನಿಯಮ ಉಲ್ಲಂಘಿಸಿ ಟೆಂಡ‌ರ್ ನೀಡಿಕೆ ಬಗ್ಗೆಯೂ ಆರೋಪ. ಈ ಬಗ್ಗೆ ತನಿಖೆಗೆ ಆದೇಶಿಸಿದ್ದ ಕಾಂಗ್ರೆಸ್‌ ಸರ್ಕಾರ 
* ತನಿಖೆ ನಡೆಸಿ ಆ.31ರಂದು ರಾಜ್ಯ ಸರ್ಕಾರಕ್ಕೆ ವರದಿ ಸಲ್ಲಿಸಿರುವ ನ್ಯಾ| ಮೈಕೆಲ್ ಡಿ ಕುನ್ಹಾ ಆಯೋಗ 
* ಈ ವರದಿಯ ಬಗ್ಗೆ ಸಂಪುಟದಲ್ಲಿ ಇಂದು ಸಮಾಲೋಚನೆ. ಮುಂದೆ ಕೈಗೊಳ್ಳಬೇಕಿರುವ ಕ್ರಮ ಬಗ್ಗೆ ಚರ್ಚೆ

click me!