ರಾಜ್ಯದಲ್ಲಿ ದಿನದಿಂದ ದಿನಕ್ಕೆ ಚುನಾವಣೆ ಕಾವು ರಂಗೇರುತ್ತಿದೆ. ಇನ್ನು ಕೆಲವೇ ತಿಂಗಳು ಚುನಾವಣೆ ಬಾಕಿಯಿವೆ. ಹೀಗಾಗಿ ಮೂರು ರಾಜಕೀಯ ಪಕ್ಷಗಳು ತಮ್ಮದೆಯಾದ ಯಾತ್ರೆಗಳನ್ನು ನಡೆಸುತ್ತಿವೆ. ಈಗ ಕಾಂಗ್ರೆಸ್ ಪ್ರಜಾಧ್ವನಿ ಬಸ್ ಯಾತ್ರೆ ಮೂಲಕ ರಾಜ್ಯದಲ್ಲಿ ಭರ್ಜರಿಯಾಗಿ ಪ್ರಚಾರ ಆರಂಭಿಸಿದೆ.
ಪರಶುರಾಮ ಐಕೂರ್, ಏಷ್ಯಾನೆಟ್ ಸುವರ್ಣ ನ್ಯೂಸ್, ಯಾದಗಿರಿ
ಯಾದಗಿರಿ (ಜ.28): ರಾಜ್ಯದಲ್ಲಿ ದಿನದಿಂದ ದಿನಕ್ಕೆ ಚುನಾವಣೆ ಕಾವು ರಂಗೇರುತ್ತಿದೆ. ಇನ್ನು ಕೆಲವೇ ತಿಂಗಳು ಚುನಾವಣೆ ಬಾಕಿಯಿವೆ. ಹೀಗಾಗಿ ಮೂರು ರಾಜಕೀಯ ಪಕ್ಷಗಳು ತಮ್ಮದೆಯಾದ ಯಾತ್ರೆಗಳನ್ನು ನಡೆಸುತ್ತಿವೆ. ಈಗ ಕಾಂಗ್ರೆಸ್ ಪ್ರಜಾಧ್ವನಿ ಬಸ್ ಯಾತ್ರೆ ಮೂಲಕ ರಾಜ್ಯದಲ್ಲಿ ಭರ್ಜರಿಯಾಗಿ ಪ್ರಚಾರ ಆರಂಭಿಸಿದೆ. ಇವತ್ತು ಕಾಂಗ್ರೆಸ್ ಯಾತ್ರೆ ಯಾದಗಿರಿ ಜಿಲ್ಲೆಗೆ ಎಂಟ್ರಿ ಕೊಟ್ಟಿತ್ತು. ಕಲಬುರ್ಗಿಯಿಂದ ಬಸ್ ನಲ್ಲಿ ಬಂದ ಮಾಜಿ ಸಿಎಂ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಕೇಸರಿ ಪಡೆ ವಿರುದ್ಧ ಕೆಂಡಕಾರಿದರು. ಕಾಂಗ್ರೆಸ್ ಈ ಬಾರಿ ಶತಾಯಗತಾಯ ಅಧಿಕಾರಕ್ಕೆ ಹಿಡಿಯಲೇಬೇಕು ಎಂಬ ಶಪಥ ಮಾಡಿದೆ.
ಕೇಂದ್ರ ಹಾಗೂ ರಾಜ್ಯ ನಾಯಕರು ರಾಜ್ಯದ ಮೂಲೆ ಮೂಲೆಯನ್ನು ಸುತ್ತುತ್ತಿದ್ದಾರೆ. ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹಾಗೂ ಮಾಜಿ ಸಿಎಂ ಸಿದ್ದರಾಮಯ್ಯ ಜಂಟಿ ನೇತೃತ್ವದಲ್ಲಿ ರಾಜ್ಯದ ಎಲ್ಲಾ ಜಿಲ್ಲಾ ಕೇಂದ್ರದಲ್ಲಿ ಭರ್ಜರಿಯಾಗಿ ಪ್ರಜಾಧ್ವನಿ ಬಸ್ ಯಾತ್ರೆ ನಡೆಸುತ್ತಿದ್ದಾರೆ. ಇದೆ ಬಸ್ ಯಾತ್ರೆ ಇವತ್ತು ಗಿರಿನಾಡು ಯಾದಗಿರಿ ಜಿಲ್ಲೆಗೆ ಎಂಟ್ರಿ ಕೊಟ್ಟಿತ್ತು. ಕಲಬುರ್ಗಿಗೆಗೆ ಬಂದಿದ್ದ ಮಾಜಿ ಸಿಎಂ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಕಲಬುರ್ಗಿಯಿಂದ್ಲೇ ಬಸ್ ಯಾತ್ರೆ ಆರಂಭಿಸಿದ್ರು. ಇವರಿಬ್ಬರ ಜೋಡಿ ಎಂಟ್ರಿ ಕಾಂಗ್ರೇಸ್ ಗ ಬೂಸ್ಟ್ ನೀಡಿದಂತಿತ್ತು.
ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ನಮ್ಮ ಸರ್ಕಾರ ಬರೋದು ಖಚಿತ: ಸಿದ್ದರಾಮಯ್ಯ
ಜೊತೆಗೆ ಬಸ್ ನಲ್ಲಿ ಒಂದೇ ಸೀಟಿನಲ್ಲಿ ಅಕ್ಕಪಕ್ಕ ಕುತುಕೊಂಡೆ ಕಲಬುರ್ಗಿಯಿಂದ ಯಾದಗಿರಿ ಬಂದಿದ್ದ ಸಿದ್ದು, ಡಿಕೆಶಿ ಯಾದಗಿರಿ ಜಿಲ್ಲಾ ಕೇಂದ್ರಕ್ಕೆ ಯಾತ್ರೆ ಎಂಟ್ರಿ ಕೊಡ್ತಾಯಿದ್ದ ಕಾಂಗ್ರೆಸ್ ಕಾರ್ಯಕರ್ತರು ಕ್ರೇನ್ ಮೂಲಕ ಬೃಹತ್ ಪುದಿನಾ ಹಾರವನ್ನ ಬಸ್‌ಗೆ ಹಾಕಿ ಪಟಾಕಿ ಸಿಡಿಸಿ ಸಂಭ್ರಮಿಸಿದ್ರು. ಯಾದಗಿರಿ ನಗರದ ವನಕೇರಿ ಲೇಔಟ್‌ನಲ್ಲಿ ನಿರ್ಮಾಣವಾಗಿದ್ದ ವೇದಿಕೆ ಕಡೆ ಬಸ್ ಯಾತ್ರೆ ಬರ್ತಾಯಿದ್ದ ಹಾಗೆ ಕ್ರೇನ್ ಮೂಲಕ ಮತ್ತೊಂದು ಬೃಹತಾದ ಹೂವಿನ ಹಾರ ಹಾಕುವ ಮೂಲಕ ಯಾತ್ರೆಗೆ ಗ್ರ್ಯಾಂಡ್ ವೆಲ್‌ಕಮ್ ಮಾಡಿಕೊಂಡ್ರು. ಜಿಲ್ಲೆಯ ನಾಲ್ಕು ವಿಧಾನಸಭ ಕ್ಷೇತ್ರದಿಂದ 20 ಸಾವಿರಕ್ಕೂ ಅಧಿಕ ಜನ ಕಾರ್ಯಕರ್ತರು ನಾಯಕರನ್ನ ನೋಡಿ ಸಿಳ್ಳೆ ಹಾಗೂ ಕೇಕೆ ಹಾಕಿ ಸಂಭ್ರಮಿಸಿದರು.
ಜನಪ್ರಜಾ ಧ್ವನಿ ಯಾತ್ರೆ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದ ಮಾಜಿ ಸಿಎಂ ಸಿದ್ದರಾಮಯ್ಯ ಕೇಸರಿ ಪಡೆ ವಿರುದ್ಧ ಕೆಂಡ ಕಾರಿದ್ರು. ನಮ್ಮ ಪಕ್ಷದಿಂದ ಚಾರ್ಜ್ ಶೀಟ್ ರೆಡಿ ಮಾಡಿದ್ದೆವೆ ಬಿಜೆಪಿ ಪಾಪದ ಕೊಡ ತುಂಬಿದ್ದ ಹಾಗಾಗಿ ಜನರ ಮುಂದೆ ಇಡ್ತಾಯಿದ್ದೆವೆ ಅದಕ್ಕೆ 'ಪಾಪದ ಪುರಾಣ' ಅಂತ ಹೆಸರು ಇಡ್ತಾಯಿದ್ದೆವೆ ಎಂದ ಸಿದ್ದರಾಮಯ್ಯ ಈ ಚಾರ್ಜ್ ಶಿಟ್ ನ್ನ ಜನರ ಮನೆ ಬಾಗಲಿಗೆ ತಲುಪಿಸುವ ಕೆಲಸ ಮಾಡ್ತೆವೆ. ನಾವು ಅಡುಗೆ ಮಾಡಿದವರು ಆದ್ರೆ ನರೇಂದ್ರ ಮೋದಿಯವರನ್ನು ಕರೆಸಿ ಊಡ ಬಡಿಸಿದ್ದಾರೆ. ತಾಂಡಾಗಳಲ್ಲಿ ವಾಸ ಮಾಡುವ ಜನರಿಗೆ ಯಾವುದೇ ದಾಖಲಾತಿಗಳು ಇರಲಿಲ್ಲ.
ನಾವು 2013 ರಲ್ಲಿ ಅಧಿಕಾರಕ್ಕೆ ಬಂದಾಗ ಕಂದಾಯ ಗ್ರಾಮ ಮಾಡಬೇಕು ಅಂತ ತೀರ್ಮಾನ ಮಾಡಿದ್ವಿ. ಹಿಂದೆ ಮಲ್ಲಿಕಾರ್ಜುನ ಖರ್ಗೆ ಅವರು ಆರಂಭಸಿದ್ರು, ಆಗ ಕಂದಾಯ ಗ್ರಾಮ ಮಾಡಲು ಏನೇನು ಕ್ರಮ ತೆಗೆದುಕೊಳ್ಳಬೇಕು ತೆಗೆದುಕೊಂಡಿದ್ವಿ. ಕಾಗೋಡು ತಿಪ್ಪಮ್ಮ ಕಂದಾಯ ಸಚಿವರಾಗಿದ್ರು ವಾಸಿಸುವವನೆ ಮನೆಯ ಒಡೆಯ ಎಂದು ನಾವು ಹೊಸ ಸೆಕ್ಷನ್ ಸೇರಿಸುವ ಕೆಲಸ ಮಾಡಿದ್ವಿ. ನಾರಾಯಣಪುರ ಸ್ಕಾಡಾ ಗೇಟ್ ಗಳು ನಾವು ಪ್ರಾರಂಭಸಿದ್ವಿ 2014 ರಲ್ಲಿ ನಾವು ಈ ಯೋಜನೆಯನ್ನ ಜನರಿಗೆ ತಂದಿದ್ವಿ ಇದ್ದಕ್ಕಾಗಿ 3500 ಸಾವಿರ ಕೋಟಿ ನಾವು ಇದ್ದಕ್ಕೆ ಖರ್ಚು ಮಾಡಿದ್ವಿ ಆದ್ರೆ ಈ ಗೇಟ್ ಗಳನ್ನ ಮೋದಿ ಕೈಯಿಂದ ಉದ್ಘಾಟನೆ ಮಾಡಿಸಿದ್ದಾರೆ.
ಹಾಗಾಗಿ ಈ ಬಿಜೆಪಿಯವರ ಬಂಡವಾಳವೇ ಮೋದಿ ರಾಜ್ಯ ಬಿಜೆಪಿ ನಾಯಕರ ಮುಖ ನೋಡಿ ಜನ ಓಟ್ ಹಾಕಲ್ಲ ಇವರ ಮುಖ ಅಳಸಿದೆ ಹೀಗಾಗಿ ಮೋದಿ, ಶಾ ಹಾಗೂ ನಡ್ಡಾಗೆ ಕರೆದುಕೊಂಡು ಬರ್ತಾಯಿದ್ದಾರೆ. ಈ ಬಿಜೆಪಿ ಸಿಎಂ ಹಾಗೂ ಸಚಿವರು ಅಲಿ ಬಾಬಾ ಚಾಲಿಸ್ ಚೋರ್ ಇದ್ದ ಹಾಗೆ ಎಂದು ಸಿದ್ದು ವ್ಯಂಗ್ಯ ಮಾಡಿದರು. ಇನ್ನು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಮಾತನಾಡಿ, ಬಿಜೆಪಿ ಕಲ್ಯಾಣ ಕರ್ನಾಟಕಕ್ಕೆ ಏನು ಮಾಡಿದೆ ಅಂತ ಒಂದು ಸಾಕ್ಷಿ ತೋರಿಸಿ ಎಂದು ಪ್ರಶ್ನೆ ಮಾಡಿದ್ರು. ಮಲ್ಲಿಕಾರ್ಜುನ ಖರ್ಗೆ ಹಾಗೂ ದಿವಂಗತ ಧರಂಸಿಂಗ್ ರನ್ನ ನೆನೆದ ಡಿಕೆ ಈ ಭಾಗಕ್ಕೆ ಇಬ್ಬರು ನಾಯಕರು ಸಾಕಷ್ಟು ಅಭಿವೃದ್ಧಿ ಮಾಡಿದ್ದಾರೆ ಎಂದ್ರು. 371 ಜೆ ತಿದ್ದುಪಡಿ ಮಾಡಿದ್ದೆ ಖರ್ಗೆ ಮಾತ್ತು ಧರಂಸಿಂಗ್ ಎಂದ ಡಿಕೆಶಿ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದರು.
ರಾಜಕಾರಣದಲ್ಲಿ ನಿಯತ್ತು ಮತ್ತು ನೀತಿ ಒಂದೇ ಇರಬೇಕು: ಸಿದ್ದುಗೆ ಟಾಂಗ್ ಕೊಟ್ಟ ಸಿ.ಟಿ.ರವಿ
ಈ ಭಾಗಕ್ಕೆ ನಮ್ಮ ಸರ್ಕಾರ ಸಾಕಷ್ಟು ಕೊಡುಗೆ ಕೊಟ್ಟಿದೆ ಆದ್ರಡ ಬಿಜೆಪಿ ಏನ್ ಮಾಡಿದೆ ಯಾವುದೇ ಅಣೆಕಟ್ಟಯನ್ನ ಕಟ್ಟಿದ್ದಾರಾ ನೀರಾವರಿ ಮಾಡಿದ್ದಾರಾ, ಕುಡಿಯೋ ನೀರಿನ ವ್ಯವಸ್ಥೆ ಮಾಡಿದ್ದಾರಾ ನಾವು ಸಾಕಷ್ಟು ಅಭಿವೃದ್ಧಿ ಮಾಡಿದ್ದೆವೆ ಎಂದರು. ಇನ್ನು ನಮ್ಮ ಸರ್ಕಾರ ಬಂದ ಮೇಲೆ 200 ಯೂನಿಟ್ ವಿದ್ಯುತ್ ಉಚಿತ 2 ಸಾವಿರ ರೂ.ಖಚಿತ ಎಂದ ಡಿಕೆಶಿ ಹೇಳ್ತಾಯಿದ್ದಂತೆ ಕಾರ್ಯಕರ್ತರು ಕೂಗಿ ಸಂಭ್ರಮಪಟ್ಟರು. ಒಟ್ಟಿನಲ್ಲಿ ಯಾದಗಿರಿ ಜಿಲ್ಲೆಯಲ್ಲಿ ಕಳೆಗುಂದಿದ್ದ ಕಾಂಗ್ರೆಸ್ ವರ್ಚಸ್ಸು ಹೈ ಪ್ರೊಪೈಲ್ ನಾಯಕೆ ಎಂಟ್ರಿಯಿಂದ ಜೋಶ್ ಬಂದಂತಾಗಿದೆ. ಜೊತೆಗೆ ಇದರಿಂದ ಸಿದ್ದು, ಡಿಕೆಶಿ ಕಾರ್ಯಕರ್ತರಿಗೆ ಬೂಸ್ಟ್ ನೀಡಿದಂತಾಗಿದೆ.