ವಿಧಾನಸಭಾ ಚುನಾವಣೆಯಲ್ಲಿ ಬಹುಮತದಿಂದ ಬಿಜೆಪಿಯನ್ನು ಗೆಲ್ಲಿಸಿದಲ್ಲಿ ಡಬಲ್ ಇಂಜಿನ್ ಸರ್ಕಾರದಿಂದ ದೇಶದಲ್ಲಿಯೇ ಕರ್ನಾಟಕ ರಾಜ್ಯವನ್ನು ನಂಬರ್ ಒನ್ ರಾಜ್ಯವನ್ನಾಗಿ ಮಾಡಲಾಗುವುದು.
ಬೆಳಗಾವಿ (ಜ.28): ರಾಜ್ಯದಲ್ಲಿ ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಬಹುಮತದಿಂದ ಬಿಜೆಪಿಯನ್ನು ಗೆಲ್ಲಿಸಿದಲ್ಲಿ ಡಬಲ್ ಇಂಜಿನ್ ಸರ್ಕಾರದಿಂದ ದೇಶದಲ್ಲಿಯೇ ಕರ್ನಾಟಕ ರಾಜ್ಯವನ್ನು ನಂಬರ್ ಒನ್ ರಾಜ್ಯವನ್ನಾಗಿ ಮಾಡಲಾಗುವುದು ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಭರವಸೆ ನೀಡಿದರು.
ಬೆಳಗಾವಿ ಬಳಿಯ ಎಂ.ಕೆ. ಹುಬ್ಬಳ್ಳಿಯಲ್ಲಿ ನಡೆದ ಬಿಜೆಪಿ ಜನ ಸಂಕಲ್ಪ ಯಾತ್ರೆಯಲ್ಲಿ ಭಾಗವಹಿಸಿ ಮಾತನಾಡಿದರು. ಭಾಷಣದ ಆರಂಭದಲ್ಲಿ ಸವದತ್ತಿ ಯಲ್ಲಮ್ಮನಿಗೆ ನಮಿಸುತ್ತಾ ಮಾತು ಆರಂಭಿಸಿದರು. ವೀರ ರಾಣಿ ಚನ್ನಮ್ಮ, ಹಾಗೂ ಬಸವಣ್ಣನಿಗೆ ನಮನ ಸಲ್ಲಿಸಿದರು. ಜೊತೆಗೆ, ಬೆಳಗಾವಿಯ ಸುವರ್ಣ ಸೌಧದಲ್ಲಿ ಸಾವರ್ಕರ್ ಫೋಟೊ ಹಾಕಿದ್ದಕ್ಕೆ ಅಭಿನಂದನೆ ಸಲ್ಲಿಸಿದರು. ನಂತರ ವಿಪಕ್ಷಗಳ ಕುರಿತು ವಾಗ್ದಾಳಿ ಆರಂಭಿಸಿದ ಅಮಿತ್ ಶಾ, ಕರ್ನಾಟಕದಲ್ಲಿ ಮೂರು ಪಕ್ಷಗಳಿವೆ. ಅದರಲ್ಲಿ ಕಾಂಗ್ರೆಸ್ ಪರಿವಾರ ಪಾರ್ಟಿಯಾಗಿದೆ. ಅದೇ ರೀತಿ ಜೆಡಿಎಸ್ ಕೂಡ ಪರಿವಾರ ಪಕ್ಷವಾಗಿದೆ. ಆದರೆ ಮತ್ತೊಂದು ದೇಶಭಕ್ತ ಪಾರ್ಟಿ ಬಿಜೆಪಿ ಇದೆ. ನೀವು ಯಾರಿಗೆ ಮತ ಹಾಕುತ್ತೀರಿ ತೀರ್ಮಾನಿಸಿ. ಈ ಬಾರಿ ಚುನಾವಣೆಯಲ್ಲಿ ಬಿಜೆಪಿಯನ್ನು ಬಹುಮತದಿಂದ ಗೆಲ್ಲಿಸಿ. ಕರ್ನಾಟಕವನ್ನು ದೇಶದಲ್ಲಿ ನಂಬರ್ ಒನ್ ರಾಜ್ಯ ಮಾಡಲಾಗುತ್ತದೆ ಎಂದರು.
ಭಾರತವನ್ನು ವಿಶ್ವದ ನಂ. 1 ದೇಶವನ್ನಾಗಿ ಮಾಡಿ: ಅಮಿತ್ ಶಾ ಕರೆ
ವಿಶೇಷ ಸ್ಥಾನಮಾನ ತೆರವಿಗೆ ಅಡ್ಡಿ: ದೇಶದ ಮುಕುಟಮಣಿ ಕಾಶ್ಮೀರ ನಮ್ಮದು ಹೌದೊ ಅಲ್ವೊ? ಅಲ್ಲಿಗೆ ನೀಡಲಾಗಿರುವ 370 ನೇ ವಿಧಿಯನ್ನು ತೆಗೆಬೇಕಿತ್ತೊ ಬೇಡವಾಗಿತ್ತೊ? ಕಾಂಗ್ರೆಸ್‌ನ ಪ್ರಧಾನಮಂತ್ರಿ ನೆಹರು ಮಾಡಿದ ತಪ್ಪಿನಿಂದಾಗಿ ಕಾಶ್ಮೀರದಲ್ಲಿ ವಿಶೇಷ ಸ್ಥಾನ ಮಾನ ಸಿಕ್ಕಿತ್ತು. ಆದರೆ, ಈಗ ಬಿಜೆಪಿ ಸರ್ಕಾರ ಕಾಶ್ಮೀರದ ವಿಶೇಷ ಕಾನೂನು ತೆಗೆಯಲು ಮುಂದಾದಾಗ ಅಲ್ಲಿ ರಕ್ತದ ಹೊಳೆ ಹರಿಯುತ್ತದೆ ಎಂದು ರಾಹುಲ್ ಬಾಬಾ (ರಾಹುಲ್ ಗಾಂಧಿ) ಹೇಳಿದ್ದರು. ಆದರೆ, ನಾವು ಧೈರ್ಯವನ್ನು ಮಾಡಿ ವಿಶೇಷ ಸ್ಥಾನಮಾನ ತೆಗೆದು ಹಾಕಿದ್ದೇವೆ. ದೇಶದ ಎಲ್ಲ ರಾಜ್ಯಗಳಂತೆ ಅಲ್ಲಿ ಜನರು ವಾಸ ಮಾಡುತ್ತಿದ್ದು, ಶಾಂತಿಯೂ ನೆಲೆಸಿದೆ ಎಂದರು.
ಸೋನಿಯಾಗಾಂಧಿ ಮಹದಾಯಿಗೆ ವಿರೋಧಿಸಿದ್ದರು: ಮಹಾದಾಯಿ ನೀರು ಕರ್ನಾಟಕದ ಭೂಮಿಯಲ್ಲಿ ಹರಿಸಲು ಬೊಮ್ಮಾಯಿ ಕೆಲಸ ಮಾಡ್ತಾ ಇದ್ದಾರೆ. ಆದರೆ ಈ ಹಿಂದೆ ಸೋನಿಯಾಗಾಂಧಿ ಗೋವಾದಲ್ಲಿ ನಿಂತು ಕರ್ನಾಟಕ್ಕೆ ಮಹಾದಾಯಿ ನೀರು ಕೊಡಲ್ಲ ಎಂದಿದ್ದರು. ಈಗ ಮಹಾದಾಯಿ ನೀರು ಕರ್ನಾಟಕದ ರೈತರಿಗೆ ಸಿಗುವಂತೆ ಮಾಡಲು ಕೆಲಸ ಮಾಡಲಾಗುತ್ತಿದೆ. ದೇಶದಲ್ಲಿ ಬಿಜೆಪಿ ಸರ್ಕಾರ ಸಾಮಾನ್ಯ ದಲಿತ ವ್ಯಕ್ತಿ ರಾಮನಾಥ್ ಕೋವಿಂದ್ ಅವರನ್ನು ಹಾಗೂ ಈಗ ಬುಡಕಟ್ಟು ಜನಾಂಗದ ದ್ರೌಪದಿ ಮುರ್ಮು ಅವರನ್ನು ರಾಷ್ಟ್ರಪತಿ ಮಾಡಿದ್ದೇವೆ. ಹೀಗೆ ಎಲ್ಲರಿಗೂ ಸಮಾನತೆ ನೀಡಲಾಗುವುದು ಎಂದರು.
ಬಿಎಸ್‌ವೈ ವಿರುದ್ಧ ಒಂದಕ್ಷರ ಮಾತಾಡಿದರೂ ಸಹಿಸಲ್ಲ: ಯತ್ನಾಳ್‌ಗೆ ಅಮಿತ್ ಶಾ ವಾರ್ನಿಂಗ್
ಸೈನಿಕ ಶಾಲೆಯ ನಿರ್ಮಾಣ ಕಾರ್ಯ ಪೂರ್ಣ: ಬೆಳಗಾವಿಯಲ್ಲಿ ಸಂಗೊಳ್ಳಿ ರಾಯಣ್ಣ ಹೆಸರಿನ ಸೈನಿಕ ಶಾಲೆಯ ನಿರ್ಮಾಣ ಕಾರ್ಯವನ್ನು ಪೂರ್ಣಗೊಳಿಸಲಾಗುತ್ತಿದೆ. ಖಾನಾಪುರದ ಪ್ರತ್ಯೇಕ ಕುಡಿಯುವ ನೀರಿನ ಘಟಕ ಆರಂಭಿಸಲಾಗಿದೆ. ಇದಕ್ಕಾಗಿ ಐದು ಸಾವಿರ ಕೋಟಿ ಖರ್ಚು ಮಾಡಲಾಗಿದೆ. ಆದರೆ, ಈ ಹಿಂದೆ ದೇಶದಲ್ಲಿ ಕಾಂಗ್ರೆಸ್ ಪಾರ್ಟಿ ಕರ್ನಾಟಕವನ್ನು ಎಟಿಎಂ ಆಗಿ ಮಾಡಿಕೊಂಡಿತ್ತು. ಇಲ್ಲಿಂದ ಹಣವನ್ನು ದೆಹಲಿಗೆ ಕಳುಹಿಸಲಾಗುತ್ತಿತ್ತು ಎಂದು ಆರೋಪಿಸಿದರು.
ಪಿಎಫ್‌ಐ ಬಾಲ ಬಿಟ್ಟಿದರೆ ಹುಟ್ಟಡಗಿಸಲು ಅಮಿತ್ ಶಾ ಇದ್ದಾರೆ: ಮುಖ್ಯಮಂತ್ರಿ ಸಬವರಾಜ ಬೊಮ್ಮಾಯಿ ಮಾತನಾಡಿ, ಅಂದು ಕಣ್ಣಿಗೆ ಕಾಣುವ ಬ್ರಿಟಿಷ್ ಇದ್ದರು. ಇಂದು ದೇಶ ಒಡೆಯುವ ಸಂಚುರೂಪಿಸಿರುವ ಪಿಎಫ್ಐ ಮತ್ತು ಎಸ್‌ಡಿಪಿಐ ಇದೆ. ಆದರೆ, ಅಮಿತ್ ಶಾ ಅವರು PFI ಬ್ಯಾನ್ ಮಾಡಿದ್ದಾರೆ. ಬೇರೆ ಹೆಸರಿನಲ್ಲಿ ಅವರು ತಲೆ ಎತ್ತಬಹುದು. ಆದರೆ ಅವರ ಹುಟ್ಟಡಿಗಸಿಲು ಅಮಿತ್ ಶಾ ಇದ್ದಾರೆ. ಕಾಂಗ್ರೆಸ್ ಅಧಿಕಾರದಲ್ಲಿ ಇದ್ದಾಗ ಏನೂ ಅಭಿವೃದ್ಧಿ ಮಾಡಲಿಲ್ಲ./ ಕಾಂಗ್ರೆಸ್ ಗೆ ಈಗ ಪ್ರಜಾಧ್ವನಿ ನೆನೆಪಾಗಿದೆ. ಅನೇಕ ಭಾಗ್ಯ ಘೋಷಣೆ ಮಾಡಿದ್ದರು. ಆದರೆ, ಅವು ಜನರಿಗೆ ತಲುಪಿಸಿಲ್ಲ. ಸಮಾಜಿಕ ನ್ಯಾಯ ಎನ್ನುತ್ತೀರಿ. ಆದರೆ, ಸಮಾಜಿಕ ನ್ಯಾಯದ ಹೆಸರಲ್ಲಿ ನೀವು ಮುಂದೆ ಹೋಗಿದ್ದೀರಿ. ಸಮಾಜದಲ್ಲಿ ಇದ್ದವರು ಹಿಂದೆ ಉಳಿದರು ಎಂದರು.