Shiggaon Election Result 2023: ತವರಲ್ಲಿ ಗೆದ್ದರೂ, ಬಿಜೆಪಿ ಕೈ ಹಿಡಿಯದ ಹಾವೇರಿ ಮತದಾರರು

By Gowthami K  |  First Published May 13, 2023, 2:09 PM IST

2023ರ  ಕರ್ನಾಟಕ ವಿಧಾನಸಭಾ ಚುನಾವಣೆಯ ಫಲಿತಾಂಶ  ಹೊರಬಿದ್ದಿದ್ದು, ಶಿಗ್ಗಾಂವಿಯಲ್ಲಿ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರು ಗೆದ್ದು ಬೀಗಿದ್ದಾರೆ.


ಹಾವೇರಿ (ಮೇ.13): 2023ರ  ಕರ್ನಾಟಕ ವಿಧಾನಸಭಾ ಚುನಾವಣೆಯ ಫಲಿತಾಂಶ  ಹೊರಬಿದ್ದಿದ್ದು, ತವರು ಜಿಲ್ಲೆಯ  ಶಿಗ್ಗಾಂವಿಯಲ್ಲಿ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರು    35,341 ಸಾವಿರ ಮತಗಳ ಅಂತರದಿಂದ ಗೆಲುವು  ಕಂಡಿದ್ದಾರೆ.  ಬಸವರಾಜ್ ಬೊಮ್ಮಾಯಿ ಅವರಿಗೆ 99,073 ಮತಗಳು ಸಿಕ್ಕಿವೆ ಅವರ ವಿರುದ್ಧ ಸ್ಪರ್ಧಿಸಿದ್ದ ಕೈ ನಾಯಕ  ಯಾಸಿರ್ ಅಹ್ಮದ್ ಖಾನ್  63,772 ಮತ ಗಳಿಸಿ ಸೋಲು ಕಂಡಿದ್ದಾರೆ.  ಈ ಮೂಲಕ ಸತತ ನಾಲ್ಕನೇ ಬಾರಿಗೆ ಬೊಮ್ಮಾಯಿ ಗೆಲುವಿನ ನಗೆ ಬೀರಿದ್ದಾರೆ.

ಇನ್ನು ಈ ಬಾರಿಯ ಚುನಾವಣೆಯ ಫಲಿತಾಂಶದ ಬಗ್ಗೆ ಪ್ರತಿಕ್ರಿಯೆ ನೀಡಿದ ಸಿಎಂ ಬೊಮ್ಮಾಯಿ ಟ್ವೀಟ್ ಮಾಡಿ ನಾವು ಕರ್ನಾಟಕದ ಜನತೆಯ ತೀರ್ಪನ್ನು ಗೌರವದಿಂದ ಸ್ವೀಕರಿಸುತ್ತೇವೆ. ನಾವು ನಮ್ಮ ತಪ್ಪುಗಳನ್ನು ವಿಶ್ಲೇಷಿಸಿ, ಸರಿಪಡಿಸಿಕೊಂಡು, ಪಕ್ಷವನ್ನು ಪುನಃ ಸಂಘಟಿಸಿ, ಸಂಸತ್ ಚುನಾವಣೆಯ ವೇಳೆಯಲ್ಲಿ ಮತ್ತೊಮ್ಮೆ ಪುನರಾಗಮಿಸುತ್ತೇವೆ ಎಂದಿದ್ದಾರೆ.

Latest Videos

undefined

ಹಾವೇರಿ ಜಿಲ್ಲೆಯಲ್ಲಿ ಒಟ್ಟು 6 ವಿಧಾನಸಭಾ ಕ್ಷೇತ್ರಗಳಿವೆ. ಹಾವೇರಿ ಮೀಸಲು ಕ್ಷೇತ್ರ, ಹಾನಗಲ್, ರಾಣೆಬೆನ್ನೂರು, ಬ್ಯಾಡಗಿ, ಹಿರೇಕೆರೂರು ಹಾಗೂ ಶಿಗ್ಗಾಂವಿ ವಿಧಾನಸಭಾ ಕ್ಷೇತ್ರಗಳು. ಸದ್ಯ ಈ ಬಾರಿ ಕಾಂಗ್ರೆಸ್ ಮುನ್ನಡೆ ಕಾಯ್ದುಕೊಂಡಿದೆ.

ಒಟ್ಟು 6 ಕ್ಷೇತ್ರಗಳ ಪೈಕಿ 2018ರ ಚುನಾವಣೆಯಲ್ಲಿ 4 ಕ್ಷೇತ್ರಗಳನ್ನು ಬಿಜೆಪಿ ಗೆದ್ದಿತ್ತು. ನಂತರ 2019ರಲ್ಲಿ ನಡೆದ ಆಪರೇಷನ್ ಕಮಲದ ಬಳಿಕ ಹಿರೇಕೆರೂರು, ರಾಣೆಬೆನ್ನೂರು ಕ್ಷೇತ್ರಗಳು ಬಿಜೆಪಿ ಕೈವಶವಾಗಿ ಹಾವೇರಿ ಜಿಲ್ಲೆ ಬಿಜೆಪಿ ಪಾಲಾಯ್ತು. ಈ ಬಾರಿ ಹೊಡೆತ ಬೀಳುತ್ತಿದೆ. 2018ರ ಚುನಾವಣೆಯಲ್ಲಿ 4 ಕ್ಷೇತ್ರಗಳನ್ನು ಗೆದ್ದಿದ್ದ ಬಿಜೆಪಿ, 2019ರಲ್ಲಿ ಹಿರೇಕೆರೂರು ಮತ್ತು ರಾಣಿಬೆನ್ನೂರಿಗೆ ನಡೆದ ಉಪಚುನಾವಣೆಯಲ್ಲಿ ಎರಡೂ ಕ್ಷೇತ್ರ ಗೆದ್ದು ಇಡೀ ಜಿಲ್ಲೆ ಕಮಲಮಯವಾಗಿ ಕಾಂಗ್ರೆಸ್‌ ಮುಕ್ತ ಜಿಲ್ಲೆ ಎನಿಸಿತ್ತು.  ಆ ಮೂಲಕ ಹಾವೇರಿ ಜಿಲ್ಲೆ ಬಿಜೆಪಿಯ ಭದ್ರಕೋಟೆ ಎನಿಸಿತ್ತು. ಹಾನಗಲ್ಲ ಶಾಸಕರಾಗಿದ್ದ ಸಿ.ಎಂ. ಉದಾಸಿ ನಿಧನದಿಂದ ತೆರವಾದ ಸ್ಥಾನಕ್ಕೆ 2021ರಲ್ಲಿ ನಡೆದ ಉಪಚುನಾವಣೆಯಲ್ಲಿ ಬಿಜೆಪಿ ಸರ್ಕಾರಕ್ಕೆ ಸಡ್ಡು ಹೊಡೆದ ಕಾಂಗ್ರೆಸ್‌ ಗೆದ್ದು ಬೀಗಿತ್ತು. ಆ ಮೂಲಕ ಜಿಲ್ಲೆಯ ಒಂದು ಕ್ಷೇತ್ರ ಕಾಂಗ್ರೆಸ್‌ ವಶದಲ್ಲಿತ್ತು.

KARNATAKA ELECTION RESULT 2023 ಕನಕಪುರದಲ್ಲಿ ಬಂಡೆ ಪ್ರಚಂಡ, ಸಮ್ರಾಟ ಸಾಷ್ಟಾಂಗ!

ರಾಜ್ಯದಾದ್ಯಂತ ಕಾಂಗ್ರೆಸ್‌ ಅಭ್ಯರ್ಥಿಗಳು  ಮುನ್ನಡೆ ಕಾಯ್ದುಕೊಂಡಿದ್ದರೆ, ಬಿಜೆಪಿ ಅಭ್ಯರ್ಥಿಗಳು ಸತತವಾಗಿ ಹಿನ್ನಡೆ ಅನುಭವಿಸುತ್ತಿದ್ದಾರೆ.  ಈ ಮೂಲಕ ಈ ಬಾರಿ ಕಾಂಗ್ರೆಸ್ ಸರಕಾರ ಅಸ್ತಿತ್ವದಲ್ಲಿ ಇದೆ ಎಂಬುದು ಸ್ಪಷ್ಟವಾಗಿದೆ.

Karnataka Election 2023 Live: ಬಹುಮತದ ಸರಕಾರಕ್ಕೆ ಮತ ಹಾಕಿದ ಕನ್ನಡಿಗರು

16ನೇ ವಿಧಾನಸಭಾ ಚುನಾವಣೆಯು ಮೇ 10ರಂದು ಒಂದೇ ಹಂತದಲ್ಲಿ ನಡೆದಿತ್ತು. ರಾಜ್ಯದ ಎಲ್ಲೆಡೆ ಸ್ಥಾಪನೆಯಾದ 58,545 ಮತಗಟ್ಟೆಗಳಲ್ಲಿ 2615 ಅಭ್ಯರ್ಥಿಗಳ ಭವಿಷ್ಯವನ್ನು 3.8 ಕೋಟಿ ಮತದಾರರು ಬರೆದಿದ್ದು, ಒಟ್ಟಾರೆ ದಾಖಲೆಯುತ ಶೇ.73.19ರಷ್ಟು ಮತದಾನವಾಗಿತ್ತು. 224 ಅಭ್ಯರ್ಥಿಗಳು ರಾಜ್ಯ ವಿಧಾನಸಭೆಗೆ ಆಯ್ಕೆಯಾಗಲಿದ್ದು, ಸರಕಾರ ರಚಿಸಲು ಪಕ್ಷವೊಂದಕ್ಕೆ 113 ಬಲಾಬಲ ಪ್ರದರ್ಶಿಸಬೇಕು.

 

ನಾವು ಕರ್ನಾಟಕದ ಜನತೆಯ ತೀರ್ಪನ್ನು ಗೌರವದಿಂದ ಸ್ವೀಕರಿಸುತ್ತೇವೆ. ನಾವು ನಮ್ಮ ತಪ್ಪುಗಳನ್ನು ವಿಶ್ಲೇಷಿಸಿ, ಸರಿಪಡಿಸಿಕೊಂಡು, ಪಕ್ಷವನ್ನು ಪುನಃ ಸಂಘಟಿಸಿ, ಸಂಸತ್ ಚುನಾವಣೆಯ ವೇಳೆಯಲ್ಲಿ ಮತ್ತೊಮ್ಮೆ ಪುನರಾಗಮಿಸುತ್ತೇವೆ.

We accept the verdict of people of Karnataka with due respect, we will take this verdict in our…

— Basavaraj S Bommai (@BSBommai)
click me!