ಶಿವಸೇನೆ, ಎನ್‌ಸಿಪಿ ಬಳಿಕ ಕಾಂಗ್ರೆಸ್‌ ಹೋಳು? ಬಿಜೆಪಿ ಸಂಪರ್ಕದಲ್ಲಿ 'ಕೈ' ನಾಯಕರು!

By Kannadaprabha News  |  First Published Jul 5, 2023, 9:36 AM IST

ಕಾಂಗ್ರೆಸ್‌ನ ಕೆಲ ನಾಯಕರು ಕೆಲ ಸಮಯದಿಂದ ಬಿಜೆಪಿ ಸಂಪರ್ಕದಲ್ಲಿದ್ದಾರೆ. ಮಾತುಕತೆ ಇದೀಗ ಬಹುತೇಕ ಅಂತಿಮ ಹಂತಕ್ಕೆ ಬಂದಿದೆ. ಅವರು ಯಾವುದೇ ಕ್ಷಣದಲ್ಲಿ ಬಿಜೆಪಿ ಸೇರುವ ಅಥವಾ ಪ್ರತ್ಯೇಕ ಬಣವಾಗಿ ಹೊರಹೊಮ್ಮುವ ಸಾಧ್ಯತೆ ಇದೆ ಎಂದು ವರದಿಗಳು ತಿಳಿಸಿವೆ.


ಮುಂಬೈ (ಜುಲೈ 5, 2023): ಕಳೆದ ಒಂದು ವರ್ಷದ ಅವಧಿಯಲ್ಲಿ ಹಿಂದಿನ ಮಹಾ ಅಘಾಡಿ ಮೈತ್ರಿಕೂಟದ ಪಕ್ಷಗಳಾದ ಶಿವಸೇನೆ ಮತ್ತು ಎನ್‌ಸಿಪಿ ಇಬ್ಭಾಗಕ್ಕೆ ಸಾಕ್ಷಿಯಾಗಿದ್ದ ಮಹಾರಾಷ್ಟ್ರದಲ್ಲಿ ಮುಂದಿನ ಸರದಿ ಕಾಂಗ್ರೆಸ್‌ನದ್ದಿರಬಹುದು ಎಂದು ವರದಿಗಳು ಹೇಳಿವೆ.

ಈ ಬಗ್ಗೆ ಕೆಲ ಬಿಜೆಪಿ ನಾಯಕರು ಕೂಡಾ ಸುಳಿವು ನೀಡಿದ್ದಾರೆ. ಕಾಂಗ್ರೆಸ್‌ನ ಕೆಲ ನಾಯಕರು ಕೆಲ ಸಮಯದಿಂದ ಬಿಜೆಪಿ ಸಂಪರ್ಕದಲ್ಲಿದ್ದಾರೆ. ಮಾತುಕತೆ ಇದೀಗ ಬಹುತೇಕ ಅಂತಿಮ ಹಂತಕ್ಕೆ ಬಂದಿದೆ. ಅವರು ಯಾವುದೇ ಕ್ಷಣದಲ್ಲಿ ಬಿಜೆಪಿ ಸೇರುವ ಅಥವಾ ಪ್ರತ್ಯೇಕ ಬಣವಾಗಿ ಹೊರಹೊಮ್ಮುವ ಸಾಧ್ಯತೆ ಇದೆ ಎಂದು ವರದಿಗಳು ತಿಳಿಸಿವೆ.

Tap to resize

Latest Videos

ಇದನ್ನು ಓದಿ: ಇಂದು ಪವಾರ್‌ ಬಣಗಳ ಶಕ್ತಿ ಪ್ರದರ್ಶನ: ಶರದ್‌, ಅಜಿತ್‌ ಬಣದಿಂದ ಪ್ರತ್ಯೇಕ ಸಭೆ ಆಯೋಜನೆ; ಶಾಸಕರ ಮೇಲೆ ಎಲ್ಲರ ಚಿತ್ತ

ಈ ಬಗ್ಗೆ ಮಾತನಾಡಿರುವ ಮಹಾರಾಷ್ಟ್ರದ ಅರಣ್ಯ ಸಚಿವ ಸುಧೀರ್‌ ಮುಂಗಂಟಿವಾರ್‌, ‘ಕೇವಲ ಕಾಂಗ್ರೆಸ್‌ ಮಾತ್ರವಲ್ಲ, ಇತರೆ ಕೆಲ ಪಕ್ಷಗಳ ನಾಯಕರು ಕೂಡಾ ತಮ್ಮ ಪಕ್ಷಗಳ ನಾಯಕರ ಸ್ವಾರ್ಥದಿಂದ ಬೇಸತ್ತು ಇತರೆ ಪಕ್ಷಗಳತ್ತ ಮನಸ್ಸು ಮಾಡಿದ್ದಾರೆ ಎನ್ನುವ ಮೂಲಕ ಕಾಂಗ್ರೆಸ್‌ ನಾಯಕರ ಪಕ್ಷಾಂತರದ ಸುಳಿವು ನೀಡಿದ್ದಾರೆ.

288 ಸದಸ್ಯರ ವಿಧಾನಸಭೆಯಲ್ಲಿ ಕಾಂಗ್ರೆಸ್‌ 45 ಶಾಸಕರನ್ನು ಹೊಂದಿದೆ. ಕಳೆದ ವರ್ಷ ಶಿವಸೇನೆ ತೊರೆದು 39 ಶಾಸಕರ ಜೊತೆ ಏಕನಾಥ ಶಿಂಧೆ ಬಿಜೆಪಿ ಮೈತ್ರಿಕೂಟ ಸೇರಿದ್ದರು. ಇದೀಗ ಎನ್‌ಸಿಪಿ ತೊರೆದಿರುವ ಅಜಿತ್‌ ಪವಾರ್‌, 8 ಮಂದಿ ಶಾಸಕರೊಂದಿಗೆ ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದ್ದಲ್ಲದೇ, ತಮಗೆ 40 ಶಾಸಕರ ಬೆಂಬಲವಿದೆ ಎಂದು ಹೇಳಿದ್ದಾರೆ.

ಇದನ್ನೂ ಓದಿ: ಪವಾರ್‌ ಕದನ: ಅಜಿತ್‌ ಅನರ್ಹತೆಗೆ ಶರದ್‌ ಅಸ್ತ್ರ: ಶರದ್‌ ಬಣದ ಪ್ರಮುಖರ ಅನರ್ಹತೆಗೆ ಅಜಿತ್ ಮೊರೆ; ಯಾರ ಪಾಲಾಗುತ್ತೆ ಪಕ್ಷ?

ಶಿಂಧೆ ಬಣದ ಅನರ್ಹತೆ ಬಗ್ಗೆ ಸ್ಪೀಕರ್‌ ಮೌನ: ಉದ್ಧವ್‌ ಮತ್ತೆ ಸುಪ್ರೀಂಗೆ
ನವದೆಹಲಿ: ಶಿವಸೇನೆಯಿಂದ ಬಂಡೆದ್ದು ಬಿಜೆಪಿ ಜತೆ ಮೈತ್ರಿ ಸರ್ಕಾರ ರಚಿಸಿದ್ದ ಮುಖ್ಯಮಂತ್ರಿ ಏಕನಾಥ್‌ ಶಿಂಧೆ ಸೇರಿದಂತೆ 16 ಬಂಡಾಯ ಶಾಸಕರ ವಿರುದ್ಧದ ಅನರ್ಹತೆ ಅರ್ಜಿಗಳ ಬಗ್ಗೆ ತ್ವರಿತವಾಗಿ ತೀರ್ಪು ನೀಡುವಂತೆ ರಾಜ್ಯ ಸ್ಪೀಕರ್‌ಗೆ ನಿರ್ದೇಶನ ನೀಡುವಂತೆ ಕೋರಿ ಉದ್ಧವ್‌ ಠಾಕ್ರೆ ನೇತೃತ್ವದ ಶಿವಸೇನೆ ಬಣ ಮತ್ತೊಮ್ಮೆ ಸುಪ್ರೀಂ ಮೆಟ್ಟಿಲೇರಿದೆ. ಅಲ್ಲದೇ ಸ್ಪೀಕರ್‌ ರಾಹುಲ್‌ ನಾರ್ವೇಕರ್‌ ಉದ್ದೇಶಪೂರ್ವಕವಾಗಿಯೇ ತೀರ್ಪು ನೀಡುವಲ್ಲಿ ವಿಳಂಬ ಮಾಡುತ್ತಿದ್ದಾರೆ ಎಂದು ಆರೋಪಿಸಿದೆ. ಶಿಂಧೆ ಮತ್ತು ಇತರ ಶಾಸಕರ ವಿರುದ್ಧ ಉದ್ಧವ್‌ ಬಣವು ಸ್ಪೀಕರ್‌ಗೆ ಅನರ್ಹತೆ ಅರ್ಜಿ ಸಲ್ಲಿಸಿದ್ದು ಅದರ ಯಾವುದೇ ಪ್ರಕ್ರಿಯೆ ಇನ್ನೂ ಆರಂಭವಾಗದಿರುವುದನ್ನು ವಿರೋಧಿಸಿ ಅರ್ಜಿ ಸಲ್ಲಿಕೆಯಾಗಿದೆ.

ಇದನ್ನೂ ಓದಿ: ಶರದ್‌ ಪವಾರ್‌ ‘ಪುತ್ರಿ ಪ್ರೇಮ’ ಅಜಿತ್ ಬಂಡಾಯಕ್ಕೆ ಕಾರಣ: 2 ವರ್ಷದಲ್ಲಿ 2ನೇ ಮಹಾ ವಿಪಕ್ಷ ಹೋಳು; ವಿಭಜನೆಯ ಲಾಭ ಬಿಜೆಪಿಗೆ

click me!