Karnataka Politics: ಮೊಸರಲ್ಲಿ ಕಲ್ಲು ಹುಡುಕುವ ಕಾಂಗ್ರೆಸ್‌ ಮುಖಂಡರು: ತೇಲ್ಕೂರ್‌

By Kannadaprabha News  |  First Published Sep 20, 2022, 9:45 PM IST

ಸೆ.17 ಸ್ವಾತಂತ್ರ್ಯ ಕಲ್ಯಾಣ ಕರ್ನಾಟಕ ವಿಮೋಚನಾ ದಿನ ಎಂದು ನೀವು ನಂಬೋದಿಲ್ವಾ? ಕಾಂಗ್ರೆಸ್‌ ಪಕ್ಷದವರೇ ಎಂದು ಪ್ರಶ್ನಿಸಿದ ಶಾಸಕ ತೇಲ್ಕೂರ್‌


ಕಲಬುರಗಿ(ಸೆ.20): ಕಾಂಗ್ರೆಸ್‌ ಪಕ್ಷದವರು ಇಂದಿಗೂ ನಿಜಾಮನ ಗುಲಾಮಗಿರಿ, ನಿಜಾಮನ ಗುಂಗಿನಲ್ಲಿ ಇದ್ದಾರೆ, ಮೊಸರಲ್ಲಿ ಕಲ್ಲು ಹುಡುಕುವ ಪ್ರವೃತ್ತಿಯವರೆಂದು ಸೇಡಂ ಶಾಸಕ ರಾಜಕುಮಾರ್‌ ಪಾಟೀಲ್‌ ತೇಲ್ಕೂರ್‌ ಹೇಳಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಲ್ಯಾಣ ಕರ್ನಾಟಕ ಅಮೃತ ಮಹೋತ್ಸವದಲ್ಲಿ ಸಿಎಂ, ಅನುದಾನ ಘೋಷಣೆ ಮಾಡಿರುವ ಬಗ್ಗೆ ಶಾಸಕ ಪ್ರಿಯಾಂಕ್‌ ಖರ್ಗೆ ಮಾಡಿರುವ ಟೀಕೆಗೆ ತಿರುಗೇಟು ನೀಡುತ್ತ ಕಾಂಗ್ರೆಸ್‌ ಮೊದಲು ವಿಮೋಚನೆ ದಿನ ಒಪ್ತದೋ, ಇಲ್ಲೋ ಎಂಬುದನ್ನು ಸ್ಪಷ್ಟಪಡಿಸಲಿ, ಜನತೆಗೆ ಈ ಕುರಿತು ಗೊತ್ತಾಗಬೇಕು ಎಂದರು.

ಸಿಎಂ ಹಿಂದುಳಿದ ನೆಲಕ್ಕೆ 5 ಸಾವಿರ ಕೋಟಿ ರು. ಕೊಟ್ಟರೂ ಕಾಂಗ್ರೆಸ್ಸಿಗರಿಗೆ ಸಹಿಸೋದು ಆಗೋದಿಲ್ಲ. ಕಾಂಗ್ರೆಸ್ಸಿನ ಕೆಲವರು ನಾಯಕರು ಮೊಸರಲ್ಲಿ ಕಲ್ಲು ಹುಡುಕಲಿಕ್ಕೆ ಇದ್ದಾರೆ. ಪ್ರಿಯಾಂಕ್‌ ಖರ್ಗೆ ಸೇರಿದಂತೆ ಹಲವರು ಅದನ್ನೇ ಮಾಡುತ್ತಿದ್ದಾರೆಂದು ದೂರಿದರು.

Tap to resize

Latest Videos

undefined

ಸಾವರ್ಕರ್‌ ಬಗ್ಗೆ ಕೆಟ್ಟದಾಗಿ ಮಾತನಾಡಿರೋ ಸಿದ್ದು ಗೋಮೂತ್ರ ಕುಡಿದು ಪ್ರಾಯಶ್ಚಿತ್ತ ಮಾಡಿಕೊಳ್ಳಲಿ: ಚಕ್ರವರ್ತಿ ಸೂಲಿಬೆಲೆ

ಕಾಂಗ್ರೆಸ್‌ ಪಕ್ಷದವರು ಇಂದಿಗೂ ನಿಜಾಮನ ಗುಲಾಮಗಿರಿ, ನಿಜಾಮನ ಗುಂಗಿನಲ್ಲಿ ಇದ್ದಾರೆ ಅನಿಸ್ತಿದೆ. ಕಾಂಗ್ರೆಸ್‌ ಪಕ್ಷದವರು ವಿಮೋಚನಾ ದಿನಾಚರಣೆಗೆ ತಮ್ಮ ಪಾರ್ಟಿ ಕಚೇರಿಯಲ್ಲಿ ಧ್ವಜಾರೋಹಣ ಕೂಡಾ ಮಾಡಲಿಲ್ಲ. ಸೆ.17ರಂದು ಕಲ್ಯಾಣ ಕರ್ನಾಟಕ ಸ್ವಾತಂತ್ರ್ಯ ದಿನ ಕಾಂಗ್ರೆಸ್‌ ಪಕ್ಷದವರು ಆಚರಿಸಿಲ್ಲ ಎಂದು ಟೀಕಿಸಿದರು.

ನಿಜಾಮ ಒಬ್ಬ ಮತಾಂಧ ಆಗಿದ್ದ. ಈ ದೇಶದ ಸ್ವಾತಂತ್ರ್ಯ ಒಪ್ಪಿಕೊಳ್ಳದ ಒಬ್ಬ ಹೇಡಿಯಾಗಿದ್ದ. ಸೆ.17 ಸ್ವಾತಂತ್ರ್ಯ ಕಲ್ಯಾಣ ಕರ್ನಾಟಕ ವಿಮೋಚನಾ ದಿನ ಎಂದು ನೀವು ನಂಬೋದಿಲ್ವಾ? ಕಾಂಗ್ರೆಸ್‌ ಪಕ್ಷದವರೇ ಎಂದು ಶಾಸಕ ತೇಲ್ಕೂರ್‌ ಪ್ರಶ್ನಿಸಿದರು.

ಕಲ್ಯಾಣ ಕರ್ನಾಟಕಕ್ಕೆ 5000 ಕೋಟಿ ಅನುದಾನ: ಸಿಎಂ ಬೊಮ್ಮಾಯಿ ಘೋಷಣೆ

ಕಾಂಗ್ರೆಸ್‌ ವಿರುದ್ಧ ಶಾಸಕ ರಾಜಕುಮಾರ್‌ ಪಾಟೀಲ್‌ ತೇಲ್ಕೂರು ಕಿಡಿ ಕಾರಿದರು. ಪ್ರಚಾರಕ್ಕಾಗಿ ಕಾಂಗ್ರೆಸ್‌ನವರು ಮಾತಾಡ್ತಿದ್ದಾರೆಂದು ಜರಿದರು. ಸಿಎಂ ಕೆಕೆಆರ್‌ಡಿಬಿಗೆ 5 ಸಾವಿರ ಕೋಟಿ ಕೊಡುವುದಾಗಿ ಘೋಷಣೆ ಮಾಡಿದ್ದಾರೆ. ಈ ಬಗ್ಗೆ ಕಾಂಗ್ರೆಸ್‌ನ ಕೆಲವರು ಟೀಕೆ ಮಾಡ್ತಿದ್ದಾರೆ. ಕಲ್ಯಾಣ ಕರ್ನಾಟಕ ಹಿಂದುಳಿಯಲು ಕಾಂಗ್ರೆಸ್‌ ಕಾರಣ. ಮಾತೆತ್ತಿದ್ರೆ 40% ಅಂತಾ ಕಾಂಗ್ರೆಸ್‌ ಪಕ್ಷದವರು ಹೇಳ್ತಾರೆ. ತಮ್ಮ ಭ್ರಷ್ಟಾಚಾರ ಮುಚ್ಚಿಕೊಳ್ಳಲು ಎಸಿಬಿ ತಂದ್ರು. ಕೇವಲ ಪ್ರಚಾರಕ್ಕಾಗಿ ಕಾಂಗ್ರೆಸ್‌ನವರು ಮಾತಾಡ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದರು.

ಈ ಭಾಗದಲ್ಲಿ ಸ್ಯಾಂಡ್‌ ಮಾಫಿಯಾ ಕಾಂಗ್ರೆಸ್‌ ಕೈವಾಡದಿಂದ ನಡೆಯುತ್ತಿತ್ತು. ಚುನಾವಣೆಗೆ ಸ್ಪರ್ಧಿಸಿದಾಗ ನಿಮ್ಮ ಆಸ್ತಿ ಎಷ್ಟಿತ್ತು?. ಈಗ ನಿಮ್ಮ ಆಸ್ತಿ ಎಷ್ಟಿದೆ. ಕಾಂಗ್ರೆಸ್‌ ಪಕ್ಷದವರೇ ನಿಮ್ಮ ಮನೆಯನ್ನು ನೀವು ನೋಡಿಕೊಳ್ಳಿ. ಸಮಾಜ, ಧರ್ಮಗಳನ್ನು ಕಾಂಗ್ರೆಸ…ನವರು ಒಡೆದ್ರು. 40% ಅಂತಾ ಹೇಳಿದ್ದು ಯಾರು ?. ಕಾಂಗ್ರೆಸ…ನವರ ಕೈಗೊಂಬೆ ಸಿದ್ದರಾಮಯ್ಯ ಅವರ ಮನೆಗೆ ಭೇಟಿ ನೀಡಿ ಹೊರಬಂದು 40% ಅಂತಾ ಹೇಳಿದ್ದಾರೆ ಎಂದು ಹೆಸರು ಹೇಳದೆ ಶಾಸಕ ಪ್ರಿಯಾಂಕ್‌ ಖರ್ಗೆ ವಿರುದ್ಧ ಹರಿಹಾಯ್ದರು.
 

click me!