ತಡೆಹಿಡಿದಿದ್ದ ನಿಗಮ ಮಂಡಳಿಗೆ ಕೊನೆಗೂ ಕುಮಾರಸ್ವಾಮಿ ಅಸ್ತು..!

Published : Jan 09, 2019, 06:28 PM IST
ತಡೆಹಿಡಿದಿದ್ದ ನಿಗಮ ಮಂಡಳಿಗೆ ಕೊನೆಗೂ ಕುಮಾರಸ್ವಾಮಿ ಅಸ್ತು..!

ಸಾರಾಂಶ

ನಿಗಮ ಮಂಡಳಿಗಳಿಗೆ ಮತ್ತೊಂದು ಸುತ್ತಿನ ನೇಮಕಾತಿ ನಡೆದಿದ್ದು, ಕಾಂಗ್ರೆಸ್-ಜೆಡಿಎಸ್ ಕಿತ್ತಾಟದ ನಡುವೆಯೂ ಸಿಎಂ ಎಚ್.ಡಿ. ಕುಮಾರಸ್ವಾಮಿ 3 ನಿಗಮ ಮಂಡಳಿಗೆ ಅಧ್ಯಕ್ಷರನ್ನು ನೇಮಿಸಿ ಆದೇಶ ಹೊರಡಿಸಿದ್ದಾರೆ. 

ಬೆಂಗಳೂರು, [ಜ.09]: ರಾಜ್ಯ ಕಾಂಗ್ರೆಸ್-ಜೆಡಿಎಸ್ ಸಮ್ಮಿಶ್ರ ಸರ್ಕಾರದಲ್ಲಿ ನಿಗಮ ಮಂಡಳಿಗಳಿಗೆ ಮತ್ತೊಂದು ಸುತ್ತಿನ ನೇಮಕಾತಿ ನಡೆದಿದೆ. 

ಕಾಂಗ್ರೆಸ್ ವತಿಯಿಂದ ಕೆ. ಎನ್.​ ಸುಬ್ಬಾರೆಡ್ಡಿ, ಎನ್.​ ಎ. ಹ್ಯಾರಿಸ್​ ಮತ್ತು ಎಸ್​​ಟಿ ಸೋಮಶೇಖರ್​ ಅವರನ್ನು ನೇಮಕ ಮಾಡಿ ಮುಖ್ಯಮಂತ್ರಿ ಎಚ್​​ ಡಿ ಕುಮಾರಸ್ವಾಮಿ ಆದೇಶ ಹೊರಡಿಸಿದ್ದಾರೆ. 

ಕೊನೆಗೂ ನಿಗಮ ಮಂಡಳಿಗೆ ಕುಮಾರಸ್ವಾಮಿ ಅಂಕಿತ: ಯಾರಿಗೆಲ್ಲ ಚಾನ್ಸ್?

ಬೆಂಗಳೂರು ನಗರ ಸಾರಿಗೆ ಸಂಸ್ಥೆ ಅಧ್ಯಕ್ಷರಾಗಿ ಶಾಂತಿ ನಗರ ಶಾಸಕ ಎನ್.ಎ. ಹ್ಯಾರೀಶ್, ಹಾಗೂ ಎಸ್ ಎನ್. ಸುಬ್ಬಾರಡ್ಡಿ  ಅವರನ್ನು ಕರ್ನಾಟಕ ರೇಷ್ಮೇ ಕೈಗಾರಿಕೆ ಅಧ್ಯಕ್ಷರಾಗಿ ನೇಮಕ ಮಾಡಲಾಗಿದೆ.

ಇನ್ನು ಬೆಂಗಳೂರು ನಗಾರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾಗಿ ಎಸ್.ಟಿ ಸೋಮಶೇಖರ ಆಯ್ಕೆಯಾಗಿದ್ದಾರೆ. ಆದ್ರೆ, ನಿಗಮ- ಮಂಡಳಿಗಳ ಅಧ್ಯಕ್ಷ ಸ್ಥಾನಕ್ಕೆ ನೇಮಕದ ವಿಚಾರವಾಗಿ ದೋಸ್ತಿ ಸರ್ಕಾರದಲ್ಲಿನ ಗೊಂದಲ ಇನ್ನೂ ಬಗೆ ಹರಿಯುವ ಲಕ್ಷಣಗಳು ಕಾಣಿಸುತ್ತಿಲ್ಲ. 

ನಿಗಮ ಮಂಡಳಿ:ಐದು ಕೈ ಶಾಸಕರಿಗಿಲ್ಲ 'ಕುಮಾರ' ಕೃಪೆ, ಮತ್ತೆ ಭುಗಿಲೆದ್ದ ಅಸಮಧಾನ

ಏಕೆಂದರೆ, ಇನ್ನೂ ಕೆಲವೊಂದು ನಿಗಮಕ್ಕೆ ಅಧ್ಯಕ್ಷರನ್ನು ನೇಮಿಸಲು ಕಾಂಗ್ರೆಸ್​​ ಕಳಿಸಿರುವ ಪಟ್ಟಿಗೆ ಸಿಎಂ ಕುಮಾರಸ್ವಾಮಿ ಅಸ್ತು ಅಂದಿಲ್ಲ. 

 ಅದ್ರಲ್ಲೂ ಮಾಲಿನ್ಯ ನಿಯಂತ್ರಣ ಮಂಡಳಿ, ಯೋಜನಾ ಆಯೋಗದ ಉಪಾಧ್ಯಕ್ಷ ಮತ್ತು ದೆಹಲಿ ವಿಶೇಷ ಪ್ರತಿನಿಧಿ ಸ್ಥಾನಕ್ಕೆ ಸಿಎಂ ಕುಮಾರಸ್ವಾಮಿ ಇನ್ನೂ ಗ್ರೀನ್ ಸಿಗ್ನಲ್ ನೀಡಿಲ್ಲ.

ಇದ್ರಿಂದ ದೋಸ್ತಿಗಳ ಮಧ್ಯೆ ಮತ್ತೊಂದು ಸುತ್ತಿನ ಮುಸುಕಿನ ಗುದ್ದಾಟ ನಡೆಯುವ ಸೂಚನೆ ನೀಡಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಕುಮಾರಸ್ವಾಮಿ ಮೇಲೆಯೂ ಸ್ಟಿಂಗ್? 'ಸಂಚಿಗೆ ಬಲಿಯಾಗಲು ನಾನು ರೇವಣ್ಣ ಅಲ್ಲ' ಅಂದಿದ್ದೇಕೆ ಹೆಚ್‌ಡಿಕೆ?
ವಿಕಸಿತ ಭಾರತ ಪ್ರಬಂಧ ಸ್ಪರ್ಧೆಯಲ್ಲಿ ಪಾಲ್ಗೊಳ್ಳಿ: ಬಂಪರ್​ ಬಹುಮಾನ ಪಡೆಯಿರಿ- ಪ್ರಧಾನಿ ಭೇಟಿ ಅವಕಾಶ