
ನವದೆಹಲಿ, [ಜ.07]: ಲೋಕಸಭಾ ಚುನಾವಣೆ ಹತ್ತಿರವಾಗುತ್ತಿದ್ದಂತೆಯೇ ಎನ್‌ಡಿಎ ಮೈತ್ರಿಕೂಟದಿಂದ ಪಕ್ಷಗಳು ಹೊರ ನಡೆಯುತ್ತಿವೆ.
ಬಿಜೆಪಿ ನೇತೃತ್ವದ ಎನ್‌ಡಿಎ ಮೈತ್ರಿಕೂಟದಿಂದ ಒಂದೊಂದೇ ಪಕ್ಷಗಳು ಹೊರ ನಡೆಯುತ್ತಿದ್ದು, ಈಗ ಅಸ್ಸಾಂ ನಲ್ಲಿ ಆಡಳಿತಾರೂಢ ಪಕ್ಷವಾಗಿರುವ ಬಿಜೆಪಿ ಮೈತ್ರಿಯಿಂದ ಅಸೋಮ್ ಗಣ ಪರಿಷತ್ (AGP) ಹೊರನಡೆದಿದೆ.
ಬಿಜೆಪಿ ನೇತೃತ್ವದ NDAಗೆ ಮತ್ತೊಂದು ಶಾಕ್
ಅಸ್ಸಾಂನಲ್ಲಿ ಪೌರತ್ವ ತಿದ್ದುಪಡಿ ಮಸೂದೆ(ಸಿಟಿಜನ್ಶಿಪ್ ತಿದ್ದುಪಡಿ ಮಸೂದೆ) ಯನ್ನು ವಿರೋಧಿಸಿ ಎಜಿಪಿ ಬಿಜೆಪಿ ಮೈತ್ರಿ ಕಡಿದುಕೊಂಡಿದ್ದು, ಈ ಬಗ್ಗೆ ಎಜಿಪಿ ಅಧ್ಯಕ್ಷ ಹಾಗೂ ಸಚಿವರೂ ಆಗಿರುವ ಅತುಲ್ ಬೋರಾ ಖಚಿತಪಡಿಸಿದ್ದಾರೆ.
ಪೌರತ್ವ ತಿದ್ದುಪಡಿ ಮಸೂದೆಯಲ್ಲಿ ಬಾಂಗ್ಲಾದೇಶ, ಪಾಕಿಸ್ತಾನ, ಅಫ್ಘಾನಿಸ್ಥಾನದ ಮುಸ್ಲಿಮೇತರ ಜನರಿಗೆ ಭಾರತದ ಪೌರತ್ವ ನೀಡಲಾಗುವ ಅಂಶವನ್ನು ಪ್ರಸ್ತಾಪಿಸಲಾಗಿದ್ದು, ಇದನ್ನು ಎಜಿಪಿ ವಿರೋಧಿಸಿದೆ.
ಈ ಬಗ್ಗೆ ಎಜಿಪಿ ನಿಯೋಗ ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ಅವರನ್ನು ಭೇಟಿ ಮಾಡಿ, ಪೌರತ್ವ ತಿದ್ದುಪಡಿ ಮಸೂದೆಯಲ್ಲಿ ತಾನು ವಿರೋಧಿಸುತ್ತಿರುವ ಅಂಶಗಳನ್ನು ಜಾರಿ ಮಾಡದಂತೆ ಮನವಿ ಮಾಡಿತ್ತು.
ಆದ್ರೆ, ಸರ್ಕಾರ ಮಸೂದೆಯನ್ನು ಜಾರಿಗೊಳಿಸುವುದಾಗಿ ಹೇಳಿದೆ. ಇದ್ರಿಂದ ಅಸ್ಸಾಂನಲ್ಲಿ ಬಿಜೆಪಿ ಜೊತೆ ಮೈತ್ರಿ ತೊರೆಯುತ್ತಿದ್ದೇವೆ ಎಂದು ಅತುಲ್ ಬೋರಾ ಸ್ಪಷ್ಟಪಡಿಸಿದ್ದಾರೆ.
ಇನ್ನು ಅಸ್ಸಾಂನಲ್ಲಿ ಬಿಜೆಪಿ ಸರ್ಕಾರದ ಗತಿ ಏನಾಗಲಿದೆ ಎನ್ನುವುದನ್ನು ನೋಡುವುದಾರೆ, 126 ಸದಸ್ಯ ಬಲದ ವಿಧಾನಸಭೆಯಲ್ಲಿ ಬಿಜೆಪಿ 61 ಸದಸ್ಯರನ್ನ ಹೊಂದಿದೆ.
ಮಿತ್ರಪಕ್ಷ ಬೋಡೋಲ್ಯಾಂಡ್ ಪೀಪಲ್ಸ್ ಫ್ರಂಟ್ 12 ಸ್ಥಾನಗಳನ್ನು ಹೊಂದಿದ್ದು, ಎಜೆಪಿ 14 ಸ್ಥಾನಗಳನ್ನ ಹೊಂದಿದೆ. ಹೀಗಾಗಿ ಬಿಜೆಪಿ ಸರ್ಕಾರಕ್ಕೆ ಯಾವುದೇ ತೊಂದರೆ ಇಲ್ಲ. ಆದ್ರೆ ಇದು ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಗೆ ಕೊಂಚ ಹಿನ್ನಡೆಯಾಗುವುದರಲ್ಲಿ ಯಾವುದೇ ಅನುಮಾನವೇ ಇಲ್ಲ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.